06/03/2026

Law Guide Kannada

Online Guide

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕಾಮರಡ್ಡಿ ವೆಂಕರಡ್ಡಿ ದೇವರಡ್ಡಿ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನೂತನ ಅಧ್ಯಕ್ಷರನ್ನಾಗಿ ಕಾಮರಡ್ಡಿ ವೆಂಕರಡ್ಡಿ ದೇವರಡ್ಡಿ ಅವರನ್ನು ನೇಮಕ ಮಾಡಿ ಭಾರತೀಯ ವಕೀಲರ ಪರಿಷತ್ತು ಆದೇಶ ಹೊರಡಿಸಿದೆ.

ಕಾಮರಡ್ಡಿ ವೆಂಕರಡ್ಡಿ ದೇವರಡ್ಡಿ ಅವರು ಧಾರವಾಡ ಹೈಕೋರ್ಟ್ ಹಿರಿಯ ವಕೀಲರಾಗಿದ್ದು ಇದೀಗ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಭಾರತೀಯ ವಕೀಲರ ಪರಿಷತ್ತಿನ ಶ್ರೀಮಂತೋ ಸೆನ್ ಅವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಎಸ್.ಎಸ್. ಮಿಟ್ಟಲಕೋಡ ಅವರು ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಚುನಾವಣೆ ಘೋಷಣೆ ಆದ ಹಿನ್ನೆಲೆಯಲ್ಲಿ ಈ ನಾಮನಿರ್ದೇಶನ ಮಾಡಲಾಗಿದೆ. ನಿಕಟಪೂರ್ವ ಅಧ್ಯಕ್ಷಎಸ್.ಎಸ್. ಮಿಟ್ಟಲಕೋಡ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧೆ ನಡೆಸಲು ತೀರ್ಮಾನಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ
Copyright © All rights reserved. | Newsphere by AF themes.