08/03/2026

Law Guide Kannada

Online Guide

ಕರ್ನಾಟಕ ಬ್ಯಾಂಕ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ: ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಜಿ ಸಲ್ಲಿಸಲು ಇಂದೇ ಕೊನೇ ದಿನಾಂಕವಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-03-2025
ಖಾಲಿ ಇರುವ ಹುದ್ದೆಗಳ ವಿವರ
ಚಾರ್ಟರ್ಡ್ ಅಕೌಂಟೆಂಟ್- 25
ಕಾನೂನು ಅಧಿಕಾರಿ -10 ಹುದ್ದೆಗಳು
ಸ್ಪೆಷಲಿಸ್ಟ್ ಆಫೀಸರ್ 10 ಹುದ್ದೆಗಳು
ಐ.ಟಿ. ಸ್ಪೆಷಲಿಸ್ಟ್ -30 ಹುದ್ದೆಗಳು
ಒಟ್ಟು ಖಾಲಿ ಇರುವ ಹುದ್ದೆಗಳು 75

ಶೈಕ್ಷಣಿಕ ವಿದ್ಯಾರ್ಹತೆ:
ಚಾರ್ಟರ್ಡ್ ಅಕೌಂಟೆಂಟ್ – ಮೊದಲ ಮೂರು ಪ್ರಯತ್ನಕ್ಕಿಂತ ಕಡಿಮೆಯಲ್ಲಿ ಸಿಎ ಪಾಸ್ ಆಗಿರಬೇಕು, 2024, 2025ರ ಬ್ಯಾಚ್ ನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ

ಕಾನೂನು ಅಧಿಕಾರಿ – ಟೈರ್ -1- ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿರಬೇಕು. 2024, 2025ರ ಬ್ಯಾಚ್ ನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ

ಐ.ಟಿ. ಸ್ಪೆಷಲಿಸ್ಟ್ -ಬಿ.ಇ.,, ಎಂಸಿಎ, ಎಂಟೆಕ್ ಪದವಿಗಳನ್ನು ಟೈರ್ -1- ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. 2024, 2025ರ ಬ್ಯಾಚ್ನ ಅಭ್ಯರ್ಥಿಗಳಿಗೆ ಆದ್ಯತೆ. ಶೇಕಡಾ 70ರ ಅಂಕದೊಂದಿಗೆ ಪಾಸ್ ಆಗಿರಬೇಕು.

ಸ್ಪೆಷಲಿಸ್ಟ್ ಆಫೀಸರ್-ಎಂಬಿಎ ಪದವಿಯನ್ನು ಟೈರ್-1- ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. 2024, 2025ರ ಬ್ಯಾಚ್ ನ ಅಭ್ಯರ್ಥಿಗಳಿಗೆ ಆದ್ಯತೆ. ಶೇಕಡಾ 70ರ ಅಂಕದೊಂದಿಗೆ ಪಾಸ್ ಆಗಿರಬೇಕು.

ಹೆಚ್ಚಿನ ವಿವರಗಳಿಗೆ ಕರ್ನಾಟಕ ಬ್ಯಾಂಕಿನ ಅಧಿಕೃತ ವೆಬ್ಸೈಟ್ www.karnatakabank.com/careerss ಗೆ ಭೇಟಿ ನೀಡಿ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.