ಭೂ ಮಾಲೀಕರಿಗೆ ನೋಟೀಸ್ ನೀಡದೆ ಭೂ ಸ್ವಾಧೀನ ಮಾಡುವುದು ಕಾನೂನು ಬಾಹಿರ – ಹೈಕೋರ್ಟ್
ಬೆಂಗಳೂರು: ಭೂಮಾಲೀಕರಿಗೆ ನೋಟೀಸ್ ನೀಡದೆ ಖಾಸಗಿ ಭೂಮಿಯನ್ನು ಸರ್ಕಾರಿ ಆಸ್ತಿಯನ್ನಾಗಿ ಘೋಷಿಸುವುದು ಕಾನೂನುಬಾಹಿರವಾಗಿದ್ದು ನೋಟೀಸ್ ನೀಡದೇ ಭೂಸ್ವಾಧೀನ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, ಸಾರ್ವಜನಿಕ ಬಳಕೆಗಾಗಿ ಸರ್ಕಾರಕ್ಕೆ ಭೂಮಿ ಅಗತ್ಯವಿದ್ದರೆ ಸರಿಯಾದ ಸ್ವಾಧೀನ ಕಾರ್ಯವಿಧಾನಗಳನ್ನು ಅನುಸರಿಸಬೇಕು ಹಾಗೂ ಭೂ ಮಾಲೀಕರಿಗೆ ಪರಿಹಾರ ನೀಡಿದ ನಂತರವೇ ಭೂಸ್ವಾದೀನ ಮಾಡಬೇಕು ಎಂದು ಸೂಚಿಸಿದೆ. ಅಲ್ಲದೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ತಾಕೀತು ಮಾಡಿದೆ.
ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಭೂಮಾಲೀಕರಿಗೆ ನೋಟೀಸ್ ನೀಡದೆ ಖಾಸಗಿ ಭೂಮಿಯನ್ನು ಸರ್ಕಾರಿ ಆಸ್ತಿಯನ್ನಾಗಿ ಸೆಕ್ಷನ್ 30A ಅಡಿಯಲ್ಲಿ ಘೋಷಿಸುವುದು ಸರಿಯಾದ ಕಾನೂನು ಕ್ರಮವಲ್ಲ. ಭೂ ಮಾಲೀಕರಿಗೆ ಪರಿಹಾರ ನೀಡಿದ ನಂತರವೇ ಭೂಸ್ವಾದೀನ ಮಾಡಬೇಕು. ಇಲ್ಲದಿದ್ದರೇ ಇದು ಕಾನೂನು ಬಾಹಿರವಾಗುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
