ಕಾರ್ಪೊರೇಟ್ ಉದ್ಯೋಗ ಮೋಹಕ್ಕೆ ಕಾನೂನು ಪದವೀಧರರು: ಸಿಜೆಐ ಸೂರ್ಯಕಾಂತ್ ಆತಂಕ
ಅಹಮದಾಬಾದ್: ‘ಶೇ 93ರಷ್ಟು ಕಾನೂನು ಪದವೀಧರರನ್ನು ಕಾರ್ಪೊರೇಟ್ ಸಂಸ್ಥೆಗಳು ವಿಶ್ವವಿದ್ಯಾಲಯದ ಹೊರಗೆ ಉದ್ಯೋಗದ ಆಮಿಷವೊಡ್ಡಿ ಹೈಜಾಕ್ ಮಾಡುತ್ತಿದ್ದು ಇದರಿಂದ ಕಾರ್ಪೋರೇಟ್ ಉದ್ಯೋಗ ಮೋಹಕ್ಕೆ ಕಾನೂನು ಪದವೀಧರರು ಬಲಿಯಾಗುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್, ಕಾನೂನು ಪದವೀಧರರು ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ಬದಲು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗವನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಚಿಂತಾಜನಕವಾಗಲಿದೆ. ಪ್ರಾಯೋಗಿಕ ಅನುಭವದಲ್ಲಿ ಕಲಿಯಬಹುದಾದ ಪಾಠವನ್ನು ತರಗತಿಯಲ್ಲಿ ಕಲಿಸಲು ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಪೊರೇಟ್ ಸಂಸ್ಥೆಗಳು ವಿಶ್ವವಿದ್ಯಾಲಯದ ಹೊರಗೆ ಕಾನೂನು ಪದವೀಧರರಿಗೆ ಉದ್ಯೋಗದ ಆಮಿಷವೊಡ್ಡಿ ಹೈಜಾಕ್ ಮಾಡುತ್ತಿವೆ. ಇದು ನನ್ನನ್ನು ಚಿಂತೆಗೀಡುಮಾಡಿದೆ. ಏಕೆಂದರೆ ರಾಷ್ಟ್ರೀಯ ಕಾನೂನು ವಿದ್ಯಾಕೇಂದ್ರಗಳು, ಬಾರ್ ಮತ್ತು ಬೆಂಚ್ಗೆ ಅಗತ್ಯವಿರುವ ಸದಸ್ಯರನ್ನು ಅಣಿಗೊಳಿಸುತ್ತವೆ’ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
