19/05/2025

Law Guide Kannada

Online Guide

AIBE ಪರೀಕ್ಷೆ ಪಾಸ್ ಮಾಡದ ಕಾನೂನು ಪದವೀಧರರು ಕರಿಕೋಟು ಧರಿಸುವಂತಿಲ್ಲ.

ಬೆಂಗಳೂರು: ಕಾನೂನು ಪದವಿ ಪಡೆದ ಪ್ರತಿಯೊಬ್ಬರಿಗೂ ಕರಿ ಕೋಟು ಧರಿಸಿ ವಕೀಲಿಕೆ ಮಾಡಲು ಹುಮ್ಮಸ್ಸಿರುತ್ತದೆ. ಆದರೆ ಕಾನೂನು ಪದವಿ ಪಡೆದ ತಕ್ಷಣ ಆ ಆಸೆ ನೆರವೇರುವುದಿಲ್ಲ ಬದಲಾಗಿ ಕರಿ ಕೋಟ್ ಧರಿಸಲು ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸ್ ಮಾಡಿರಲೇಬೇಕು.

ಹೌದು, ವಕೀಲರಾಗಿ ನೋಂದಣಿಯಾಗಿರುವ ಕಾನೂನು ಪದವೀಧರರು ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸ್ ಮಾಡದೇ ಕರಿ ಕೋಟು ಧರಿಸಬಾರದು ಎಂದು ರಾಜ್ಯ ವಕೀಲರ ಪರಿಷತ್ ಎಚ್ಚರಿಕೆ ನೀಡಿದೆ.

ಎಐಬಿಇ ಪರೀಕ್ಷೆ ಪಾಸ್ ಆಗದವರು ಕೋರ್ಟ್ ಕಲಾಪದಲ್ಲಿ ವಕೀಲರ ಉಡುಪು (ಕರಿಕೋಟು) ಧರಿಸುವಂತಿಲ್ಲ. ವಕಾಲತ್ ಗೆ ಸಹಿ ಹಾಕುವಂತಿಲ್ಲ ಎಂದು ಕೆಎಸ್ಬಿಸಿ ಎಚ್ಚರಿಸಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಕೆಲವು ಯುವ ಕಾನೂನು ಪದವೀಧರರು ಎಐಬಿಇ ಪರೀಕ್ಷೆ ಬರೆದು ಪಾಸ್ ಆಗುವುದಕ್ಕೆ ಮುಂಚೆಯೇ ಕರಿ ಕೋಟು ಧರಿಸಿ ವಕಾಲತ್ತಿಗೆ ಸಹಿ ಮಾಡಿ ನಿಯಮ ಬಾಹಿರವಾಗಿ ವಕೀಲಿಕೆ ನಡೆಸುತ್ತಿರುವುದು ಪರಿಷತ್ ಗಮನಕ್ಕೆ ಬಂದಿದೆ ಎಂದು ಕೆಎಸ್ ಬಿಸಿ ಹೇಳಿದೆ.

ಎಐಬಿಇ ಪರೀಕ್ಷೆ ಪಾಸ್ ಆಗದವರು ಅಥವಾ ವೃತ್ತಿ ಪ್ರಮಾಣ ಪತ್ರ ಸರ್ಟಿಫಿಕೇಟ್ ಆಫ್ ಪ್ರಾಸಿಂಗ್ ಪ್ರಮಾಣವನ್ನು ಹೋಂದಿರದ ವಕೀಲರಿಗೆ ಜಿಲ್ಲಾ, ತಾಲೂಕು ವಕೀಲರ ಸಂಘಗಳು ಸದಸ್ಯತ್ವ ನೀಡಬೇಕು. ಆದರೆ, ಅವರಿಗೆ ಯಾವುದೇ ಮತದಾನದ ಹಕ್ಕು ಇರುವುದಿಲ್ಲ ಎಂದು ಕೆಎಸ್ಬಿಸಿ ಹೇಳಿದೆ.

ಈ ನಿಯಮ ಉಲ್ಲಂಘಿಸಿದ ಅಂತಹ ವಕೀಲರ ವಿರುದ್ಧ ವಕೀಲರ ಕಾಯ್ದೆ ಮತ್ತು ಸಿಒಪಿ ನಿಯಮಗಳ ಪ್ರಕಾರ ಅಮಾನತು ಮಾಡಲಾಗುವುದು ಎಂದು ಕೆಎಸ್ಬಿಸಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.