06/03/2026

Law Guide Kannada

Online Guide

ಪಕ್ಷಕಾರರ ಪರವಾಗಿ ವಕೀಲರು ಸಹಿ ವಂಚನೆಗೆ ಸಮ: FIR ರದ್ದಿಗೆ ಹೈಕೋರ್ಟ್ ನಕಾರ

ಜೈಪುರ: ಅಫಿಡವಿಟ್ ಗೆ ಪಕ್ಷಕಾರರ ಪರವಾಗಿ ವಕೀಲರು ಸಹಿ ಮಾಡಿದರೇ ಅದು ಫೋರ್ಜರಿಗೆ ಸಮ ಎಂದು ಅಭಿಪ್ರಾಯಪಟ್ಟ ರಾಜಸ್ತಾನ ಹೈಕೋರ್ಟ್ ವಕೀಲರ ವಿರುದ್ಧ ದಾಖಲಾಗಿದೆ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ನ್ನು ರದ್ದುಪಡಿಸುವಂತೆ ಕೋರಿ ವಕೀಲರಾದ ರಾಕೇಶ್ ಜೈನ್ ಸಲ್ಲಿಸಿದ್ದ ಪ್ರಕರಣದಲ್ಲಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ರಾಜಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಅವರಿದ್ದ ನ್ಯಾಯಪೀಠವು ತಿರಸ್ಕರಿಸಿದೆ.

ಪಕ್ಷಕಾರರ ಪರವಾಗಿ ವಕೀಲರೇ ಅಥವಾ ಅವರ ಗುಮಾಸ್ತರೇ ಸಹಿ ಹಾಕುವುದು ಫೋರ್ಜರಿಗೆ ಸಮ ಎಂದು ಪರಿಗಣಿಸಲಾಗುವುದು. ಪಕ್ಷಕಾರರ ಪರವಾಗಿ ವಕೀಲರು ಅಥವಾ ಕಿರಿಯ ವಕೀಲರು, ಗುಮಾಸ್ತರು ಸಹಿ ಹಾಕುವುದು ಗಂಭೀರ ವೃತ್ತಿ ದುರ್ನಡತೆಯಾಗಿದ್ದು, ಇದನ್ನು ವಂಚನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.