ಸುದೀರ್ಘ ಕೆಲಸದ ಅವಧಿ, ಒತ್ತಡ : ನ್ಯಾಯಾಧೀಶರು ಮನೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ – ಸಿಜೆಐ ಸೂರ್ಯಕಾಂತ್
ನವದೆಹಲಿ: ನ್ಯಾಯಾಧೀಶರಿಗೆ ಸುದೀರ್ಘ ಕೆಲಸದ ಅವಧಿ, ಕೆಲಸದ ಒತ್ತಡ ಇರಲಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರೆಲ್ಲರೂ ಮನೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ ನೀಡಿದರು.
ಅಖಿಲ ಭಾರತ ನ್ಯಾಯಾಧೀಶರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್, ಒತ್ತಡದಲ್ಲಿ ಕೆಲಸ ನಿರ್ವಹಿಸುವ ನ್ಯಾಯಾಧೀಶರು ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಳ್ಳಲು ಮನೋಲ್ಲಾಸದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ವಯೋಮಾನಕ್ಕೆ ಹೊಂದುವಂತಹ ಮನೋಲ್ಲಾಸ ಚಟುವಟಿಕೆಗಳಲ್ಲಿ ಭಾಗವಹಿಸಲಿ ಎಂದು ಕಿವಿಮಾತು ಹೇಳಿದರು.
ನ್ಯಾಯಾಧೀಶರಿಗೆ ವಿಚಾರಣಾ ಕಲಾಪಗಳ ಅವಧಿಯೂ ದೀರ್ಘವಾಗಿರುತ್ತದೆ. ಹೀಗಾಗಿ ಎಲ್ಲ ನ್ಯಾಯಾಧೀಶರೂ ಮನೋಲ್ಲಾಸದ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಮ್ಮ ಅಭ್ಯಾಸವನ್ನಾಗಿಸಿಕೊಳ್ಳಬೇಕು. ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಳ್ಳಹಲು ಮನೋಲ್ಲಾಸ ಅವರಿಗೆಲ್ಲ ಅತ್ಯಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಹೈಕೋರ್ಟ್ ನ್ಯಾಯಾಧೀಶರು ಈ ಕ್ರೀಡಾಕೂಟದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದಾರೆ. ಇದು ಅವರೆಲ್ಲ ತಮ್ಮ ಆರೋಗ್ಯ ಹಾಗೂ ಸ್ವಾಸ್ಥದ ಬಗ್ಗೆ ಜಾಗರೂಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ” ಎಂದು ಸಿಜೆಐ ಸೂರ್ಯಕಾಂತ್ ನುಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾಲ್, ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಉಪಸ್ಥಿತರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
