Mutual Divorce: ಸಮ್ಮತಿಯ ವಿಚ್ಚೇದನಕ್ಕೆ 6 ತಿಂಗಳ ಅವಧಿ ಅನಗತ್ಯ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಪರಸ್ಪರ
ಒಟ್ಟಾಗಿ ಬಾಳಲು ಸಾಧ್ಯವೇ ಇಲ್ಲ.. ಹಾಗೂ ಮದುವೆ ಮುರಿದುಬೀಳದೆ ಅನ್ಯ ವಿಧಿ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನ್ಯಾಯಾಲಯವು ಸಂವಿಧಾನದ 142ನೇ ವಿಧಿ ಬಳಸಿ ತಕ್ಷಣವೇ ದಾಂಪತ್ಯಕ್ಕೆ ಅಂತ್ಯ ಹಾಕಿ ವಿಚ್ಚೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.
ಅನ್ಯ ಧರ್ಮೀಯರನ್ನು ಮದುವೆಯಾದರೆ ಆಸ್ತಿ ಹಕ್ಕು ಹೋಗುತ್ತದೆಯೇ. ವಕೀಲರ ಕಚೇರಿಯಲ್ಲಿ ಮದುವೆ ನಡೆದರೂ ಹಿಂದೂ ವಿವಾಹ ಕಾಯ್ದೆಯಡಿ ಮನ್ನಣೆ: ಸುಪ್ರೀಂ ಕೋರ್ಟ್< ಶುಗರ್ ಇದೆ ಎಂಬ ಕಾರಣಕ್ಕೆ ಜೀವನಾಂಶದಿಂದ ತಪ್ಪಿಸಲಾಗದು: ಕರ್ನಾಟಕ ಹೈಕೋರ್ಟ್ ವಿಕ್ರಮ್ನಾಥ್ ಮತ್ತು ನ್ಯಾ. ಜೆ.ಕೆ. ಮಾಹೇಶ್ವರಿ ಅವರನ್ನೊಳಗೊಂಡ ಸಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.
ವಿವಾಹ ಕಾಯ್ದೆಯಡಿ ವಿಚ್ಚೇದನಕ್ಕಾಗಿ ನಿಗದಿಪಡಿಸಿದ ಆರು ತಿಂಗಳ ಅವಧಿಯನ್ನು ಈ ಮೇಲೆ ಹೇಳಿದಂತಹ ಪರಿಸ್ಥಿತಿಯಲ್ಲಿ ಸ್ಥಗಿತಗೊಳಿಸಬಹುದು. ಇದಕ್ಕೆ ನ್ಯಾಯಾಲಯ ತನ್ನ ಪೂರ್ಣ ಅಧಿಕಾರವನ್ನು ಚಲಾಯಿಸಿ ವಿಚ್ಚೇದನವನ್ನು ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.
ಹಿಂದೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(b) ಅಡಿಯಲ್ಲಿ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸುವ ದಂಪತಿಗೆ ವಿಚ್ಚೇದನ ನೀಡಲು ಆರು ತಿಂಗಳ ಕಡ್ಡಾಯ ಅವಧಿ(ಅooಟiಟಿg ಯನ್ನು ನ್ಯಾಯಾಲಯ ನೀಡುತ್ತಿತ್ತು. ಈ ಅವಧಿಯನ್ನು ಪ್ರಶ್ನಿಸಿ ಸಂವಿಧಾನ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯಗಳ ಮೆಟ್ಟಿಲೇರದೆ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಚೇದನ ಪಡೆಯಲು ಸುಪ್ರೀಂ ಕೋರ್ಟ್ಗೆ ಇರುವ ಸಂಪೂರ್ಣ ಅಧಿಕಾರ ಬಳಕೆ ಮಾಡಿ ಸೂಕ್ತ ತೀರ್ಪು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ


