ವಿಮಾ ಪಾಲಿಸಿಯಲ್ಲಿ ನಾಮನಿರ್ದೇಶಿತ ವ್ಯಕ್ತಿಗೆ ವಿಮೆಯ ಹಣದ ಮೇಲೆ ಅಧಿಕಾರ ಇಲ್ಲ – ಹೈಕೋರ್ಟ್

ಬೆಂಗಳೂರು: ವಿಮಾ ಪಾಲಿಸಿಯ ನಾಮಿನಿಗೆ ವಿಮಾ ಹಣದ ಮೇಲೆ ಅಧಿಕಾರ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ವಿಮಾ ಪಾಲಿಸಿಯಲ್ಲಿ ನಾಮನಿರ್ದೇಶಿತ ವ್ಯಕ್ತಿಗೆ ವಿಮೆಯ ಹಣದ ಮೇಲೆ ಅಧಿಕಾರ ಇಲ್ಲ. ಮೃತ ವ್ಯಕ್ತಿಯ ನ್ಯಾಯಯುತ ವಾರಿಸುದಾರರು ಸದರಿ ವಿಮೆಯ ಹಣದ ನೈಜ ಒಡೆಯರಾಗಿರುತ್ತಾರೆ.
ವಿಮಾ ಪಾಲಿಸಿದಾರರು ಪಾಲಿಸಿಯಲ್ಲಿ ನಾಮನಿರ್ದೇಶನ ಮಾಡಿದ ವ್ಯಕ್ತಿಗೆ ಹಣ ಪಡೆಯುವ ಜವಾಬ್ದಾರಿಯನ್ನು ಮಾತ್ರ ನೀಡಿರುತ್ತಾರೆ. ಅದರರ್ಥ, ನಾಮ ನಿರ್ದೇಶಿತ ವ್ಯಕ್ತಿಯು ವಿಮಾ ಪಾಲಿಸಿ ಹಣದ ಮೇಲೆ ಸಂಪೂರ್ಣ ಅಧಿಕಾರ ಇದೆ ಎಂದಲ್ಲ, ಬದಲಾಗಿ, ಆ ಹಣವನ್ನು ಮೃತರ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸುವ ಜವಾಬ್ದಾರಿ ಈ ನಾಮನಿರ್ದೇಶಿತ ವ್ಯಕ್ತಿಗೆ ಇದೆ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ