ಎಐ ಮೇಲೆ ಅತೀ ಅವಲಂಬನೆ ಕಾನೂನು ವೃತ್ತಿಗೆ ಕಂಟಕ – ಹೈಕೋರ್ಟ್
ಬೆಂಗಳೂರು: ಕೃತಕ ಬುದ್ಧಿಮತ್ತೆ ಮೇಲೆ ಅತಿಯಾದ ಅವಲಂಬನೆ ಕಾನೂನು ವೃತ್ತಿಗೆ ಕಂಟಕ ವಾಗಬಹುದು. ಕೃತಕ ಬುದ್ದಿಮತ್ತೆ ಅವಲಂಬಿಸುವುದು ಬುದ್ಧಿಮತ್ತೆಯನ್ನೇ ಕೃತಕಗೊಳಿಸುವಂತಾಗಬಾರದು ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರವು ಸಹಯೋಗ್ ಪೋರ್ಟಲ್ ಆರಂಭಿಸಿರುವುದು ಮತ್ತು ಅದನ್ನು ಬಳಸಿರುವುದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ)ಯನ್ನು ಅತಿಯಾಗಿ ಅವಲಂಬಿಸುವುದು ಅತ್ಯಂತ ಅಪಾಯಕಾರಿ. ಅದು ವೃತ್ತಿಯನ್ನೇ ನಾಶಪಡಿಸುತ್ತದೆ ಎಂದು ಹೇಳಿದೆ.
ಕೃತಕ ಬುದ್ಧಿಮತ್ತೆಯು ತನ್ನ ಕಕ್ಷಿದಾರನ ಹೆಸರಿನಲ್ಲಿ ತೀರ್ಪೊಂದನ್ನೇ ತಿರುಚಿತ್ತು ಎಂಬುದನ್ನು ವಕೀಲರೊಬ್ಬರು ಒಪ್ಪಬೇಕಾಯಿತು. ನಕಲಿ ಸೈಟೇಶನ್ನನಿಂದಾಗಿ ದಂಡವೂ ವಿಧಿಸಲ್ಪಟ್ಟಿದೆ ಎಂಬುದನ್ನು ನ್ಯಾಯಪೀಠ ನೆನಪಿಸಿತು.
ಕಾನೂನು ಕ್ಷೇತ್ರದಲ್ಲಿ ಎಐ ಮೇಲೆ ಹೆಚ್ಚುತ್ತಿರುವ ಅವಲಂಬನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ನ್ಯಾಯಪೀಠ, ಎಐ ಮೇಲೆ ಹೆಚ್ಚು ಅವಲಂಬನೆ ಅಪಾಯಕಾರಿ ಅದು ವೃತ್ತಿಯನ್ನೇ ನಾಶಪಡಿಸುತ್ತದೆ ಕೃತಕ ಬುದ್ದಿಮತ್ತೆ ಮೇಲೆ ಅವಲಂಬನೆ ನಿಮ್ಮ ಬುದ್ದಿಮತ್ತೆಯನ್ನು ಕೃತಕವಾಗಿಸಬಾರದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
