07/03/2026

Law Guide Kannada

Online Guide

ಸೇಲ್ಸ್ ಡೀಡ್ ಮಾಡಿಕೊಂಡ ನಂತರ ಮಾಲೀಕರಿಗೆ ಜಾಗದ ಹಕ್ಕಿಲ್ಲ – ಹೈಕೋರ್ಟ್

ಬೆಂಗಳೂರು: ಸೇಲ್ಸ್ ಡೀಡ್ ಮಾಡಿಕೊಂಡ ನಂತರ ಮಾಲೀಕರಿಗೆ ಜಾಗದ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಒಂದು ಭೂಮಿಯನ್ನು ವಸತಿ ಸಂಕೀರ್ಣ ನಿರ್ಮಾಣಕ್ಕಾಗಿ ಮಾರಾಟ ಮಾಡಿದ ನಂತರ, ಭೂಮಾಲೀಕರು ಅದರ ಯಾವುದೇ ಭಾಗವನ್ನು ತಮ್ಮ ಹೆಸರಿನಲ್ಲಿ ಉಳಿಸಿಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ಮನೆ, ಅಪಾರ್ಟ್ಮೆಂಟ್ ಅಥವಾ ಯಾವುದೇ ವಸತಿ ಸಂಕೀರ್ಣ ನಿರ್ಮಾಣದ ಕಾರಣಕ್ಕೆ ಒಮ್ಮೆ ಇಡೀ ಪ್ರದೇಶದ ಮಾರಾಟದ ಕುರಿತು ಕ್ರಯಪತ್ರ (Sales deed) ಮಾಡಿಕೊಂಡ ನಂತರ ಭೂ ಮಾಲೀಕರು ಅದರಲ್ಲಿ ಅಲ್ಪ ಭಾಗವನ್ನು ಉಳಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಈ ಕುರಿತು ಕೀರ್ತಿ ಹಾರ್ಮೋನಿ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ನವರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಇದೀಗ ವಿಚಾರಣೆಯ ನಂತರ ಈ ಅರ್ಜಿಯನ್ನು ನ್ಯಾಯಾಲಯ ಮಾನ್ಯಗೊಳಿಸಿದ್ದು, ವಸತಿ ಸಂಕೀರ್ಣ ನಿರ್ಮಾಣಕ್ಕೆ ಹನುಮಂತರೆಡ್ಡಿ ಎಂಬುವರಿಗೆ ಬಿಬಿಎಂಪಿ ಮಂಜೂರು ಮಾಡಿದ್ದ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ.

ಈ ತೀರ್ಪು ಕೀರ್ತಿ ಹಾರ್ಮೋನಿ ಅಪಾರ್ಟೆಂಟ್ ಮಾಲೀಕರ ಸಂಘದ ಅರ್ಜಿಯನ್ನು ಪರಿಗಣಿಸಿ ನೀಡಲಾಗಿದೆ. ಹೈಕೋರ್ಟ್, ಬಿಬಿಎಂಪಿ (ಬ್ರುಹತ್ ಬೆಂಗಳೂರು ಮಹಾನಗರ ಪಾಲಿಕೆ) ನೀಡಿದ್ದ ನಿರ್ಮಾಣ ಪರವಾನಗಿಯನ್ನು ರದ್ದುಗೊಳಿಸಿದೆ. ಕರ್ನಾಟಕ ಫ್ಲ್ಯಾಟ್ ಮಾಲೀಕತ್ವ ಕಾಯ್ದೆ 1972 ರಡಿ ಫ್ಲ್ಯಾಟ್ ಖರೀದಿದಾರರ ಸಮ್ಮತಿ ಇಲ್ಲದೆ ಯಾವುದೇ ನಿರ್ಮಾಣ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಓನರ್ ಶಿಪ್ ಫ್ಲಾಟ್ಸ್ (ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ಹಸ್ತಾಂತರ ನಿಯಂತ್ರಣ) ಕಾಯಿದೆ- 1972ರ ಪ್ರಕಾರ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಖರೀದಿಗೆ ಒಪ್ಪಿರುವ ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ.

ಬಿಡಿಎ ಅನುಮೋದನೆ 2007ರ ಅನ್ವಯ, ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ಮಳೆ ನೀರು ಕೊಯ್ಲು ಹಾಗೂ ಎಸ್ಟಿಪಿ ನಿರ್ಮಾಣ ಮಾಡಬೇಕು.ಆದರೆ, ಬಿಲ್ಡರ್ ಅದನ್ನು ಬದಲಾವಣೆ ಮಾಡಲಾಗದು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ಕರ್ನಾಟಕ ಓನರ್ಶಿಪ್ ಫ್ಲಾಟ್ಸ್ (ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ಹಸ್ತಾಂತರ ನಿಯಂತ್ರಣ) ಕಾಯಿದೆ- 1972ರ ಪ್ರಕಾರ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಖರೀದಿಗೆ ಒಪ್ಪಿರುವ ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ.

ಬಿಡಿಎ ಅನುಮೋದನೆ 2007ರ ಅನ್ವಯ, ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ಮಳೆ ನೀರು ಕೊಯ್ಲು ಹಾಗೂ ಎಸ್ಟಿಪಿ ನಿರ್ಮಾಣ ಮಾಡಬೇಕು.ಆದರೆ, ಬಿಲ್ಡರ್ ಅದನ್ನು ಬದಲಾವಣೆ ಮಾಡಲಾಗದು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:
2005ರಲ್ಲಿ ಮೆಸರ್ಸ್ ಕೀರ್ತಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಭೂಮಾಲೀಕರ ನಡುವೆ ಜಂಟಿ ಅಭಿವೃದ್ಧಿ ಒಪ್ಪಂದ (JDA) ಮಾಡಿಕೊಳ್ಳಲಾಗಿತ್ತು. ಇದರಡಿ, 5 ಎಕರೆ 16 ಗುಂಟೆ (2,35,224 ಚದರ ಅಡಿ) ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಿಸಿ, ಲಾಭವನ್ನು ಹಂಚಿಕೊಳ್ಳಲು ನಿರ್ಧರಿಸಲಾಗಿತ್ತು. ಬಿಡಿಎ (BDA) ಯೋಜನೆಯಡಿ ಎರಡು ರಸ್ತೆಗಳಿಗೆ ಜಾಗ ಮೀಸಲಿಡಲಾಗಿತ್ತು ಮತ್ತು 1,104.40 ಚದರ ಅಡಿ ಪ್ರದೇಶದಲ್ಲಿ ಮಳೆನೀರು ಸಂಗ್ರಹಣೆ (ರೈನ್ವಾಟರ್ ಹಾರ್ವೆಸ್ಟಿಂಗ್) ಮತ್ತು ತ್ಯಾಜ್ಯ ನೀರು ಶುದ್ದೀಕರಣ ಘಟಕ (STP) ನಿರ್ಮಿಸಲು ಯೋಜಿಸಲಾಗಿತ್ತು.

ಆದರೆ, 2018ರಲ್ಲಿ ಭೂಮಾಲೀಕರು ಬಿಬಿಎಂಪಿಗೆ ಅರ್ಜಿ ಸಲ್ಲಿಸಿ, 1,104.04 ಚದರ ಅಡಿ ಜಾಗವನ್ನು ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದರು. ಇದರ ಪ್ರಕಾರ, ಬಿಬಿಎಂಪಿ ಲೈಸೆನ್ಸ್ ನೀಡಿತ್ತು. ಆದರೆ, ಈ ನಿರ್ಧಾರವು ಕರ್ನಾಟಕ ಫ್ಲ್ಯಾಟ್ ಮಾಲೀಕತ್ವ ಕಾಯ್ದೆ 1972 ರ ನಿಯಮಗಳಿಗೆ ವಿರುದ್ಧವಾಗಿತ್ತು. ಹೀಗಾಗಿ, ಫ್ಲ್ಯಾಟ್ ಮಾಲೀಕರ ಸಂಘ ನ್ಯಾಯಾಲಯ ಮೊರೆ ಹೋಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.