Rajasthan Government Order – Upheld by Supreme Court

ರಾಜಸ್ಥಾನ ಸರಕಾರದ ಆದೇಶ – ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ರಾಜಸ್ಥಾನ ಸರಕಾರವು ತನ್ನ ರಾಜ್ಯದಲ್ಲಿ ರಾಜ್ಯ ಸರಕಾರಿ ನೌಕರಿಯನ್ನು ಪಡೆಯಬೇಕಿದ್ದರೆ ಗರಿಷ್ಠ ಎರಡು ಮಕ್ಕಳ ಮಿತಿಯನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ರಾಜ್ಯ ಸರಕಾರದ ಈ ಆದೇಶವು ತಾರತಮ್ಯವಲ್ಲ. ಸಂವಿಧಾನದ ಉಲ್ಲಂಘನೆಯೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜಸ್ಥಾನ ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ರಾಜಸ್ಥಾನ ಸರಕಾರದ ಆದೇಶವನ್ನು ಮಾಜಿ ಯೋಧ ರಾಮ್ ಜೀ ಲಾಲ್ ಜಾಟ್ ಎಂಬುವರು ಪ್ರಶ್ನಿಸಿದ್ದರು. ರಾಜಸ್ಥಾನದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಅವರು ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ