06/03/2026

Law Guide Kannada

Online Guide

ಬಡ ಕಕ್ಷಿದಾರರಿಗಾಗಿ ಮಧ್ಯರಾತ್ರಿವರೆಗೂ ಕೋರ್ಟ್ ನಲ್ಲೇ ಸೇವೆ ಸಲ್ಲಿಸಲು ಸಿದ್ಧ- CJI ಸೂರ್ಯಕಾಂತ್

ನವದೆಹಲಿ: ಇತ್ತೀಚೆಗಷ್ಟೆ ಭಾರತದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡು ಪ್ರಮಾಣವಚನ ಸ್ವೀಕರಿಸಿರುವ ಸೂರ್ಯಕಾಂತ್ ಅವರು, ಬಡ ಕಕ್ಷಿದಾರರಿಗಾಗಿ ರಾತ್ರಿವರೆಗೂ ಕೋರ್ಟ್ ನಲ್ಲೇ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂದು ನುಡಿದಿದ್ದಾರೆ.

ಕೇಂದ್ರ ಸರಕಾರ ಹಾಗೂ ಮತ್ತಿತರರ ವಿರುದ್ಧ ತಿಲಕ್ ಸಿಂಗ್ ಡಾಂಗಿ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಾಗ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ನ್ಯಾಯಾಲಯದಲ್ಲಿ ಯಾವುದೇ ಐಷಾರಾಮಿ ಮೊಕದ್ದಮೆಗಳಿಲ್ಲ. ಅಂತಹ ಪ್ರಕರಣಗಳನ್ನು ಶ್ರೀಮಂತ ಕಕ್ಷಿದಾರರು ಮುಂದುವರಿಸುತ್ತಾರೆ. ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ದುರ್ಬಲ ಜನರಿಗಾಗಿ ನಾನು ಇಲ್ಲಿದ್ದೇನೆ. ಬಡ ಕಕ್ಷಿದಾರರಿಗಾಗಿ ಇಲ್ಲಿದ್ದೇನೆ” ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಬಡ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ನನ್ನ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ಅವರಿಗಾಗಿ ಮಧ್ಯರಾತ್ರಿಯವರೆಗೆ ಕೋರ್ಟ್ ನಲ್ಲಿಯೇ ಇರಲು ಸಿದ್ದ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ಹರಿಯಾಣದ ಹಿಸ್ಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದವರಾದ ಸಿಜೆಐ ಸೂರ್ಯಕಾಂತ್ ಅವರು ಹಿಂದಿನ ಸಿಜೆಐ ಬಿ.ಆರ್ ಗವಾಯಿ ನಿವೃತ್ತಿ ನಂತರ ನವೆಂಬರ್ 24 ರಂದು ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.