abuse of girl child Archives - Law Guide Kannada https://www.lawguidekannada.com/tag/abuse-of-girl-child/ Online Guide Tue, 14 Oct 2025 09:49:31 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg abuse of girl child Archives - Law Guide Kannada https://www.lawguidekannada.com/tag/abuse-of-girl-child/ 32 32 ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ರೂಪಿಸುವುದು ಅವಶ್ಯಕ – CJI  ಬಿ.ಆರ್ ಗವಾಯಿ https://www.lawguidekannada.com/special-law-needed-to-protect-girls-cji-b-r-gavai/ Tue, 14 Oct 2025 09:49:31 +0000 http://www.lawguidekannada.com/?p=2558 ನವದೆಹಲಿ: ‘ಆನ್ ಲೈನ್ ವೇದಿಕೆಗಳ ಮೂಲಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ವೈಯಕ್ತಿಕ ದತ್ತಾಂಶಗಳ ದುರ್ಬಳಕೆ ಹಾಗೂ ಡೀಪ್...

The post ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ರೂಪಿಸುವುದು ಅವಶ್ಯಕ – CJI  ಬಿ.ಆರ್ ಗವಾಯಿ appeared first on Law Guide Kannada.

]]>
ನವದೆಹಲಿ: ‘ಆನ್ ಲೈನ್ ವೇದಿಕೆಗಳ ಮೂಲಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ವೈಯಕ್ತಿಕ ದತ್ತಾಂಶಗಳ ದುರ್ಬಳಕೆ ಹಾಗೂ ಡೀಪ್ ಫೇಕ್ ಚಿತ್ರಗಳನ್ನು ಬಳಸಿ ಹೆಣ್ಣು ಮಗುವಿನ ಮೇಲೆ ದೌರ್ಜನ್ಯ ಘಟನೆಗಳು ನಡೆಯುತ್ತಿದೆ. ಇದನ್ನು ತಡೆಗಟ್ಟುವುದು ಮುಖ್ಯ. ಹೀಗಾಗಿ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ರೂಪಿಸುವುದು ಅಗತ್ಯ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ನ ಬಾಲ ನ್ಯಾಯ ಸಮಿತಿಯು (ಜೆಜೆಸಿ) ಯುನಿಸೆಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಲ್ಲ ಭಾಗೀದಾರರ ವಾರ್ಷಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಿಜೆಐ ಬಿ.ಆರ್ ಗವಾಯಿ, ಈಗಿನ ಡಿಜಿಟಲ್ ದಿನಗಳಲ್ಲಿ ಬಾಲಕಿಯರು ಸುಲಭವಾಗಿ ದಾಳಿಗೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ. ಇಂತಹ ದೌರ್ಜನ್ಯಗಳಿಂದ ಬಾಲಕಿಯರನ್ನು ರಕ್ಷಿಸುವ ಸಂಬಂಧ ವಿಶೇಷ ಕಾನೂನು ರೂಪಿಸಬೇಕು ಹಾಗೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತರಬೇತಿಯ ಅಗತ್ಯವಿದೆ ಎಂದರು.

ಬಾಲಕಿಯರು ಕೇವಲ ದೈಹಿಕ ಬೆದರಿಕೆಗಳನ್ನು ಎದುರಿಸುತ್ತಿಲ್ಲ. ನಿಯಂತ್ರಣವೇ ಇಲ್ಲದಿರುವ ಡಿಜಿಟಲ್ ವೇದಿಕೆಗಳಿಂದಲೂ ಅವರು ಅಪಾಯ ಎದುರಿಸುತ್ತಿದ್ದಾರೆ. ‘ಬಾಲಕಿಯರ ರಕ್ಷಣೆಗೆ ಸಾಂವಿಧಾನಿಕ ಮತ್ತು ಕಾನೂನಿನ ಖಾತರಿ ಇದ್ದರೂ, ದೇಶದಾದ್ಯಂತ ಅವರಿಗೆ ಮೂಲಭೂತ ಹಕ್ಕುಗಳು ಹಾಗೂ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ. ಹೆಣ್ಣುಮಗು ಸುಲಭವಾಗಿ ದಾಳಿಗೆ ಒಳಗಾಗುವ ಕಾರಣ, ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯ ಹೆಚ್ಚು. ಗುಪ್ತಾಂಗ ವಿರೂಪಗೊಳಿಸುವಿಕೆ, ಅಪೌಷ್ಟಿಕತೆ, ಭ್ರೂಣದ ಲಿಂಗ ಪತ್ತೆ ಬಳಿಕ ಗರ್ಭಪಾತ ಮಾಡಿಸುವುದು, ಮಾನವ ಕಳ್ಳಸಾಗಣೆ, ಬಾಲ್ಯವಿವಾಹದಂತಹ ಅಪಾಯಗಳನ್ನು ಕೂಡ ಅವರು ಎದುರಿಸುತ್ತಾರೆ. ಹೀಗಾಇ ಹೆಣ್ಣು ಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ರೂಪಿಸಬೇಕು ಎಂದು ಸಿಜೆಐ ಬಿ.ಆರ್ ಗವಾಯಿ ತಿಳಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣಾದೇವಿ, ಯುನಿಸೆಫ್-ಇಂಡಿಯಾ ಪ್ರತಿನಿಧಿ ಸಿಂಥಿಯಾ ಮ್ಯಾಕ್ಕ್ಯಾಪ್ರಿ, ನ್ಯಾಯಮೂರ್ತಿ ಹಾಗೂ ಜೆಜೆಸಿ ಅಧ್ಯಕ್ಷೆ ಬಿ.ವಿ.ನಾಗರತ್ನ, ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಉಪಸ್ಥಿತರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ರೂಪಿಸುವುದು ಅವಶ್ಯಕ – CJI  ಬಿ.ಆರ್ ಗವಾಯಿ appeared first on Law Guide Kannada.

]]>