acquisition of land Archives - Law Guide Kannada https://www.lawguidekannada.com/tag/acquisition-of-land/ Online Guide Thu, 29 Aug 2024 09:14:33 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg acquisition of land Archives - Law Guide Kannada https://www.lawguidekannada.com/tag/acquisition-of-land/ 32 32 ರಸ್ತೆ ವಿಸ್ತರಣೆಗೆ ಜಮೀನು ಬೇಕಿದ್ದರೇ ಪರಿಹಾರ ಕೊಟ್ಟು ಸ್ವಾಧೀನಪಡಿಸಿಕೊಳ್ಳಿ- ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ https://www.lawguidekannada.com/if-land-is-needed-for-road-expansion-give-compensation-and-acquire-it-high-court-direction-to-the-government/ Thu, 29 Aug 2024 08:36:34 +0000 https://www.lawguidekannada.com/?p=694 ಬೆಂಗಳೂರು: ಏಕ ನಿವೇಶನವನ್ನು ಮಂಜೂರು ಮಾಡುವಾಗ ರಸ್ತೆ ವಿಸ್ತರಣೆಗಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಾದರೆ ಅದಕ್ಕೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡಿದ...

The post ರಸ್ತೆ ವಿಸ್ತರಣೆಗೆ ಜಮೀನು ಬೇಕಿದ್ದರೇ ಪರಿಹಾರ ಕೊಟ್ಟು ಸ್ವಾಧೀನಪಡಿಸಿಕೊಳ್ಳಿ- ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ appeared first on Law Guide Kannada.

]]>
ಬೆಂಗಳೂರು: ಏಕ ನಿವೇಶನವನ್ನು ಮಂಜೂರು ಮಾಡುವಾಗ ರಸ್ತೆ ವಿಸ್ತರಣೆಗಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಾದರೆ ಅದಕ್ಕೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡಿದ ನಂತರವೇ ಜಮೀನು ಪಡೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಬಂಧ ಅರ್ಜಿದಾರರಾದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನಿವಾಸಿ ಅಜಿತ್ ಕುಮಾರ್ ಶೆಟ್ಟಿ ಮತ್ತು ಅವರ ಪುತ್ರ ಕಾಮರಾಜ್ ಶೆಟ್ಟಿ ಅವರು ಉಡುಪಿ ಜಿಲ್ಲಾಧಿಕಾರಿ, ಉಡುಪಿ ನಗರ ಯೋಜನಾ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ರಸ್ತೆ ವಿಸ್ತರಣೆಗೆ ಜಮೀನು ಪಡೆದುಕೊಳ್ಳುವ ಕುರಿತು ಹೊರಡಿಸಿದ್ದ ಆದೇಶದ ವಿರುದ್ಧ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು

ಈ ಕುರಿತು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಏಕ ನಿವೇಶನವನ್ನು ಮಂಜೂರು ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಗಳು ರಸ್ತೆ, ವಿಸ್ತರಣೆಗೆ ಉಚಿತವಾಗಿ ಜಮೀನು ಕೊಡಬೇಕು ಎಂದು ಆದೇಶ ನೀಡುವುದು ಸಮರ್ಪಕವಲ್ಲ. ರಸ್ತೆ ವಿಸ್ತರಣೆಗಾಗಿ ನಿಗದಿಪಡಿಸಿದ ಜಮೀನನ್ನು ಸೂಕ್ತ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಬೇಕು ಎಂದು ನಗರ ಯೋಜನೆ ಇಲಾಖೆ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ನಿರ್ದೇಶನ ನೀಡಿ ಮಹತ್ವದ ತೀರ್ಪು ಪ್ರಕಟಿಸಿದೆ.

ಹಾಗೆಯೇ ಇದೇ ವೇಳೆ ಡಾ. ಅರುಣ್ ಕುಮಾರ್ ಬಿ.ಸಿ. ಗಿs ಕರ್ನಾಟಕ ಸರ್ಕಾರ (WP 9408/2020) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಏಕಪಕ್ಷೀಯವಾಗಿ ಜಮೀನಿನ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನದ ಆರ್ಟಿಕಲ್ 300ಂ ಅಡಿ ಸಮ್ಮತವಲ್ಲ. ರಸ್ತೆ ವಿಸ್ತರಣೆ ಆಗಬೇಕಿದ್ದರೆ ಅದಕ್ಕೆ ಪ್ರತಿವಾದಿಗಳು (ಸರ್ಕಾರ) ಸೂಕ್ತ ಪ್ರಕ್ರಿಯೆ ನಡೆಸಿ ಪರಿಹಾರ ನೀಡಿದ ನಂತರವೇ ಜಮೀನು ಪಡೆದುಕೊಳ್ಳಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ರಸ್ತೆ ವಿಸ್ತರಣೆಗೆ ಜಮೀನು ಬೇಕಿದ್ದರೇ ಪರಿಹಾರ ಕೊಟ್ಟು ಸ್ವಾಧೀನಪಡಿಸಿಕೊಳ್ಳಿ- ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ appeared first on Law Guide Kannada.

]]>