Article 21 of the Constitution Archives - Law Guide Kannada https://www.lawguidekannada.com/tag/article-21-of-the-constitution/ Online Guide Tue, 09 Dec 2025 16:48:46 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Article 21 of the Constitution Archives - Law Guide Kannada https://www.lawguidekannada.com/tag/article-21-of-the-constitution/ 32 32 ಸಹಜೀವನ ಸಂಬಂಧ ಹೊಂದಲು ಮದುವೆ ವಯಸ್ಸಿಗೆ ಬಾರದ ಪ್ರಾಪ್ತ ವಯಸ್ಕರೂ ಅರ್ಹರು – ಹೈಕೋರ್ಟ್ https://www.lawguidekannada.com/adults-who-have-not-reached-the-age-of-marriage-are-also-eligible-to-have-a-cohabitation-relationship-high-court/ Tue, 09 Dec 2025 16:48:46 +0000 https://www.lawguidekannada.com/?p=3016 ಜೈಪುರ: ವಯಸ್ಕರ ಸಹಜೀವನ ಅಕ್ರಮವಲ್ಲ. ಸಹಜೀವನ ಸಂಬಂಧ ಹೊಂದಲು ಮದುವೆ ವಯಸ್ಸಿಗೆ ಬಾರದ ಪ್ರಾಪ್ತ ವಯಸ್ಕರೂ ಅರ್ಹರು. ಅಪ್ರಾಪ್ತರಿಗೂ ಜೀವಿಸುವ...

The post ಸಹಜೀವನ ಸಂಬಂಧ ಹೊಂದಲು ಮದುವೆ ವಯಸ್ಸಿಗೆ ಬಾರದ ಪ್ರಾಪ್ತ ವಯಸ್ಕರೂ ಅರ್ಹರು – ಹೈಕೋರ್ಟ್ appeared first on Law Guide Kannada.

]]>
ಜೈಪುರ: ವಯಸ್ಕರ ಸಹಜೀವನ ಅಕ್ರಮವಲ್ಲ. ಸಹಜೀವನ ಸಂಬಂಧ ಹೊಂದಲು ಮದುವೆ ವಯಸ್ಸಿಗೆ ಬಾರದ ಪ್ರಾಪ್ತ ವಯಸ್ಕರೂ ಅರ್ಹರು. ಅಪ್ರಾಪ್ತರಿಗೂ ಜೀವಿಸುವ ಹಕ್ಕಿದೆ ಎಂದು ರಾಜಸ್ತಾನ ಹೈಕೋರ್ಟ್ ತೀರ್ಪು ನೀಡಿದೆ.

ರಾಜಸ್ತಾನದ ಕೋಟಾ ಜಿಲ್ಲೆಯ 18 ವರ್ಷ ವಯಸ್ಸಿನ ಯುವತಿ ಮತ್ತು 19ರ ವಯಸ್ಸಿನ ಯುವಕ ರಕ್ಷಣೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಅನೂಪ್ ದಂಡ್ ಅವರಿದ್ದ ನ್ಯಾಯಪೀಠವು, ಪ್ರಾಪ್ತ ವಯಸ್ಕರು ಪರಸ್ಪರ ಸಹಜೀವನ ನಡೆಸುವ ಹಕ್ಕು ಇದ್ದು, ಪ್ರಾಪ್ತ ವಯಸ್ಕರ ಸಹಜೀವನ ಅಕ್ರಮವಲ್ಲ. ಅದೇ ರೀತಿ, ಅಪ್ರಾಪ್ತರಿಗೂ ಜೀವಿಸುವ ಹಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ತಾವು 2025ರ ಅಕ್ಟೋಬರ್ 27ರಂದು ಸಹಜೀವನ ಕುರಿತು ಒಪ್ಪಂದ ಮಾಡಿಕೊಂಡಿದ್ದೇವೆ. ‘ನಮ್ಮ ಸಹಜೀವನದ ಸಂಬಂಧವನ್ನು ವಿರೋಧಿಸುತ್ತಿರುವ ಯುವತಿಯ ಕುಟುಂಬದವರು, ನಮ್ಮನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೋರಿ ಕೋಟಾ ಪೊಲೀಸರಿಗೆ ನೀಡಿದ ದೂರನ್ನು ಅವರು ಪರಿಗಣಿಸಿಲ್ಲ’ ಎಂದು ಆರೋಪಿಸಿದರು.

ಈ ಅಂಶ ಪರಿಗಣಿಸಿದ ನ್ಯಾಯಪೀಠವು, ‘ಕಾನೂನಿನಡಿ ಸಹಜೀವನದ ಸಂಬಂಧಗಳನ್ನು ನಿಷೇಧಿಸಲಾಗಿಲ್ಲ ಅಥವಾ ಅಪರಾಧ ಎಂದೂ ಪರಿಗಣಿಸಿಲ್ಲ. ಹೀಗಾಗಿ ಪ್ರತಿಯೊಬ್ಬರ ಜೀವನ ಮತ್ತು ಸ್ವಾತಂತ್ರವನ್ನು ಕಾಪಾಡುವುದು ರಾಜ್ಯದ ಕರ್ತವ್ಯ ಎಂದು ತಿಳಿಸಿತು. ಹಾಗೆಯೇ ಅರ್ಜಿದಾರರ ರಕ್ಷಣೆಯನ್ನು ಖಚಿತಪಡಿಸಿ ಕೊಳ್ಳುವಂತೆ ಜೋನ್ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿತು.

ಪ್ರಾಸಿಕ್ಯೂಷನ್ ಪರ ವಾದಿಸಿದ ವಕೀಲರು, ‘ಯುವಕನಿಗೆ ಇನ್ನೂ 21 ವರ್ಷ ವಯಸ್ಸಾಗಿಲ್ಲ. ಅಂದರೆ ವಿವಾಹವಾಗುವ ಕಾನೂನುಬದ್ಧ ವಯಸ್ಸಾಗಿಲ್ಲ. ಹೀಗಾಗಿ ಅವರಿಗೆ ಸಹಜೀವನ ವ್ಯವಸ್ಥೆಯಲ್ಲಿ ಇರಲು ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.

ಈ ವೇಳೆ ನ್ಯಾಯಪೀಠ, “ಅರ್ಜಿದಾರರು ವಿವಾಹವಾಗುವ ವಯಸ್ಸಿಗೆ ಬಂದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರವನ್ನು ನಿರಾಕರಿಸಲು ಆಗುವುದಿಲ್ಲ. ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿರುವ ಜೋಡಿಗೆ ವಿವಾಹವಾಗಲು ಕಾನೂನು ಬದ್ಧ ವಯಸ್ಸು ಆಗದಿದ್ದರೂ ಇಬ್ಬರು ವಯಸ್ಕರು ಸಹಜೀವನದ ಸಂಬಂಧ ಹೊಂದಲು ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಸಹಜೀವನ ಸಂಬಂಧ ಹೊಂದಲು ಮದುವೆ ವಯಸ್ಸಿಗೆ ಬಾರದ ಪ್ರಾಪ್ತ ವಯಸ್ಕರೂ ಅರ್ಹರು – ಹೈಕೋರ್ಟ್ appeared first on Law Guide Kannada.

]]>
ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ https://www.lawguidekannada.com/free-legal-aid-is-a-fundamental-right-of-everyone-supreme-court/ Thu, 24 Oct 2024 06:48:21 +0000 http://www.lawguidekannada.com/?p=921 ನವದೆಹಲಿ: ಸಂವಿಧಾನದ ವಿಧಿ 21ರ ಅನ್ವಯ ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರಿಗೆ ಒದಗಿಸುವ ಕಾನೂನು...

The post ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ appeared first on Law Guide Kannada.

]]>
ನವದೆಹಲಿ: ಸಂವಿಧಾನದ ವಿಧಿ 21ರ ಅನ್ವಯ ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರಿಗೆ ಒದಗಿಸುವ ಕಾನೂನು ನೆರವು ಕಳಪೆ ಕಾನೂನು ನೆರವಾಗಿರಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕೈದಿಗೂ ಕೂಡ ಕಾನೂನು ನೆರವು ಪಡೆಯುವ ಮೂಲಭೂತ ಹಕ್ಕಿದೆ. ಬಡವರು ಎಂಬ ಕಾರಣಕ್ಕೆ, ಅವರಿಗೆ ಒದಗಿಸುವ ಕಾನೂನು ನೆರವು ಕಡಿಮೆ ಗುಣಮಟ್ಟದ್ದಾಗಿ ಇರಕೂಡದು. ಈ ಅಂಶವನ್ನು ಸಂವಿಧಾನದ 21ನೇ ವಿಧಿಯಡಿ ಗುರುತಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ಸುಹಾಸ್ ಚಕ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಪೀಠ, ವಿಚಾರಣಾ ಕೈದಿಗಳು ಅಥವಾ ಅಪರಾಧಿಗಳು ಇರಲಿ ಎಲ್ಲ ಕೈದಿಗಳಿಗೆ ಉಚಿತ ಕಾನೂನು ನೆರವು ಸಿಗುವಂತಾಗಬೇಕು ಎಂದ ನ್ಯಾಯಪೀಠ, ವಿಚಾರಣಾಧೀನ ಕೈದಿಗಳು ಅಥವಾ ಅಪರಾಧಿಗಳು ಕಾನೂನು ಸೇವಾ ಪ್ರಾಧಿಕಾರಗಳ ಕಾಯ್ದೆ, 1987ರ ಅಡಿ ಉಚಿತ ಕಾನೂನು ನೆರವು ಪಡೆಯುವುದನ್ನು ಮತ್ತಷ್ಟು ಸಬಲಗೊಳಿಸಲು ತನ್ನ ತೀರ್ಪಿನಲ್ಲಿ ಸರಣಿ ನಿರ್ದೇಶನಗಳನ್ನು ನೀಡಿತು.

ಈ ಕುರಿತಂತೆ ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳು ಪ್ರಾಯೋಜಿಸುವ ಫಲಾನುಭವಿ ಯೋಜನೆಗಳು ದೇಶದ ಪ್ರತಿ ಮೂಲೆಯನ್ನೂ ತಲುಪುವಂತೆ ಮಾಡಬೇಕು. ನಿರ್ದಿಷ್ಟವಾಗಿ ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸಬೇಕು” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸೂಚಿಸಿದೆ.

ವಿವಿಧ ಹಂತಗಳಲ್ಲಿ ಕಾನೂನು ನೆರವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಮುಂದುವರಿಸಬೇಕು. ಪೊಲೀಸ್ ಠಾಣೆಗಳು ಅಂಚೆ ಕಚೇರಿಗಳು ಬಸ್ ಮತ್ತು ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹತ್ತಿರದ ಕಾನೂನು ನೆರವು ಘಟಕ/ಕಚೇರಿಗಳ ವಿಳಾಸ ಸಂಪರ್ಕ ಸಂಖ್ಯೆ ಪ್ರದರ್ಶಿಸಬೇಕು. ಮಾಹಿತಿಯು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ನಲ್ಲಿ ಇರಬೇಕು ಹಾಗೆಯೇ ಕಾನೂನು ನೆರವು ಕುರಿತ ಮಾಹಿತಿ ಒಳಗೊಂಡ ಕಿರುಪುಸ್ತಕಗಳನ್ನು ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ವ್ಯಾಪಕ ಪ್ರಚಾರ ಮಾಡಬೇಕು. ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಸಿಗುವ ಪ್ರಯೋಜನ ಕುರಿತು ದೇಶದಾದ್ಯಂತ ಪ್ರಚಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ appeared first on Law Guide Kannada.

]]>