Corruption Archives - Law Guide Kannada https://www.lawguidekannada.com/tag/corruption/ Online Guide Mon, 12 Aug 2024 14:58:23 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Corruption Archives - Law Guide Kannada https://www.lawguidekannada.com/tag/corruption/ 32 32 ಭ್ರಷ್ಟಾಚಾರ, ಹಗರಣದಲ್ಲಿ ಇನ್ಮುಂದೆ ಗ್ರಾ.ಪಂ ಅಧ್ಯಕ್ಷರು ಸದಸ್ಯರಿಗೂ ಶಿಕ್ಷೆ, ದಂಡನೆ https://www.lawguidekannada.com/the-government-has-come-forward-to-curb-the-scams-and-corruptions-of-gram-panchayats/ Mon, 12 Aug 2024 14:58:23 +0000 https://www.lawguidekannada.com/?p=616 ಬೆಂಗಳೂರು: ಎಲ್ಲೆಡೆ ಹೋದರೂ ಭ್ರಷ್ಟಾಚಾರ, ಅವ್ಯವಹಾರ,ಹಗರಣಗಳೆ ಜಾಸ್ತಿ. ಭ್ರಷ್ಟಾಚಾರವೆಂಬುದು ಎಲ್ಲಡೆ ಕ್ಯಾನ್ಸರ್ ಗಿಡದಂತೆ ಹಬ್ಬಿದೆ. ಇದೀಗ ಕೇವಲ ಸರ್ಕಾರದ ಇಲಾಖೆಗಳು,...

The post ಭ್ರಷ್ಟಾಚಾರ, ಹಗರಣದಲ್ಲಿ ಇನ್ಮುಂದೆ ಗ್ರಾ.ಪಂ ಅಧ್ಯಕ್ಷರು ಸದಸ್ಯರಿಗೂ ಶಿಕ್ಷೆ, ದಂಡನೆ appeared first on Law Guide Kannada.

]]>
ಬೆಂಗಳೂರು: ಎಲ್ಲೆಡೆ ಹೋದರೂ ಭ್ರಷ್ಟಾಚಾರ, ಅವ್ಯವಹಾರ,ಹಗರಣಗಳೆ ಜಾಸ್ತಿ. ಭ್ರಷ್ಟಾಚಾರವೆಂಬುದು ಎಲ್ಲಡೆ ಕ್ಯಾನ್ಸರ್ ಗಿಡದಂತೆ ಹಬ್ಬಿದೆ. ಇದೀಗ ಕೇವಲ ಸರ್ಕಾರದ ಇಲಾಖೆಗಳು, ನಿಗಮ ಮಂಡಳಿಗಳಲ್ಲಲ್ಲದೆ ಇತ್ತೀಚೆಗೆ ರಾಜ್ಯದ ಗ್ರಾಮೀಣ ಭಾಗದ ಆಡಳಿತ ಕೇಂದ್ರವಾಗಿರುವ ಗ್ರಾಮ ಪಂಚಾಯತಿಗಳಲ್ಲೂ ಭ್ರಷ್ಟಾಚಾರ, ಹಗರಣಗಳು ಹೆಚ್ಚಾಗಿದ್ದು, ಈ ಬಗ್ಗೆ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಗ್ರಾಮ ಪಂಚಾಯತಿಗಳ ಹಗರಣ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಬಹುತೇಕ ಹಣ ದುರುಪಯೋಗ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲು ಮಾಡುತ್ತಿಲ್ಲ. ಪಿಡಿಒ, ಕಾರ್ಯದರ್ಶಿಳನ್ನು ಮಾತ್ರ ಶಿಕ್ಷೆ ವಿಧಿಸಲಾಗುತ್ತಿದೆ ಹೀಗಾಗಿ ಇನ್ಮುಂದೆ ಭ್ರಷ್ಟಾಚಾರ, ಹಗರಣದಲ್ಲಿ ಇನ್ಮುಂದೆ ಗ್ರಾಮಪಂಚಾಯತಿ ಅಧ್ಯಕ್ಷರು ಸದಸ್ಯರಿಗೂ ಶಿಕ್ಷೆ, ದಂಡನೆಗೆ ಗುರಿಪಡಿಸಲು ಸರ್ಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.

ರಾಜ್ಯದಲ್ಲಿ ಒಟ್ಟು 5,963 ಗ್ರಾಮ ಪಂಚಾಯತಿಗಳಿದ್ದು, ಇನ್ನೂ ಗ್ರಾ.ಪಂಗಳಿಗೆ ಅನ್ವಯವಾಗುವಂತೆ ಈ ಹೊಸ ನಿಯಮ ಜಾರಿಗೆ ತರಲು ಗ್ರಾಮೀಣಾಭಿವೃದ್ಧಿ ಇಲಾಖೆ ಸನ್ನದ್ಧವಾಗಿದೆ. ಹೌದು, ಇನ್ನುಂದೆ ಗ್ರಾಮ ಪಂಚಾಯತಿಗಳಲ್ಲಿ ಏನೇ ಅವ್ಯವಹಾರ ನಡೆದರೂ ಅದಕ್ಕೆ ಪಿಡಿಒ ಜೊತೆಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೂ ಹೊಣೆಗಾರರಾಗಿ ಮಾಡಲಾಗುತ್ತದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (ನಡಾವಳಿ ರೂಪಿಸಿದ್ದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಂದ ವರದಿ ಕೇಳಲಾಗಿದೆ.

ಈ ಹೊಸ ನಿಯಮ ಜಾರಿಗೆ ಕಾರಣವೇನು..?
ಗ್ರಾಮ ಪಂಚಾಯತಿಯಲ್ಲಿ ನಡೆಯುವ ಬಹಳಷ್ಟು ಹಣಕಾಸು ಅಪರಾಧಗಳು ಅಧ್ಯಕ್ಷರು, ಸದಸ್ಯರ ಒತ್ತಡದಿಂದಲೇ ನಡೆಯುತ್ತವೆ. ಹೀಗಾಗಿ ಅವರನ್ನೂ ಇವುಗಳ ಹೊಣೆಗಾರರನ್ನಾಗಿ ಮಾಡಬೇಕು ಎಂದು ಕಳೆದ ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯದ ಅಷ್ಟೂ ಜಿಲ್ಲಾ ಪಂಚಾಯತಿ ಸಿಇಒ ಗಳಿಗೆ ‘ನಿಮ್ಮ ಜಿಲ್ಲಾ ವ್ಯಾಪ್ತಿಯ ಪಂಚಾಯತಿಗಳಲ್ಲಿ ಈ ಹಿಂದೆ ನಡೆದ ಹಣ ದುರ್ಬಳಕೆ ಪ್ರಕರಣಗಳು, ಅದರಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಪಾತ್ರ ಹಾಗೂ ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ರಾಜ್ಯದಲ್ಲಿ ಒಟ್ಟು 5,963 ಗ್ರಾಮ ಪಂಚಾಯತಿಗಳಿದ್ದು, 91,437 ಜನ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. 5,226 ಪಿಡಿಒಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದರಲ್ಲಿ 756 ಜನ ಕಳೆದ ಎರಡು ವರ್ಷಗಳಲ್ಲಿ ಹಗರಣ, ಭ್ರಷ್ಟಾಚಾರ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ್ದಾರೆ. ದುರಂತವೆಂದರೆ ಈ ಪೈಕಿ 125 ಜನ ಪಿಡಿಒಗಳು ಆತ್ಮಹತ್ಯೆ ಅನಾರೋಗ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಇದನ್ನು ಪಿಡಿಒ ಕ್ಷೇಮಾಭಿವೃದ್ಧಿ ಸಂಘ ಗಂಭಿರವಾಗಿ ಪರಿಗಣಿಸಿದೆ.

‘ಗ್ರಾಮ ಪಂಚಾಯಿತಿ ಅಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006ರ ತಿದ್ದುಪಡಿಯಂತೆ ಪಂಚಾಯತಿಯ ಎಲ್ಲ ಹಣಕಾಸು ವ್ಯವಹಾರಗಳಿಗೂ ಪಿಡಿಒ ಹಾಗೂ ಅಧ್ಯಕ್ಷರ ಜಂಟಿ ಸಹಿ ಕಡ್ಡಾಯ ಮಾಡಲಾಗಿದೆ. ಕಾಮಗಾರಿ, ಪಂಚಾಯತಿ ತೆರಿಗೆ, ಉದ್ಯೋಗ ಖಾತ್ರಿ, ಹಣಕಾಸು ನಿಧಿ ಎಲ್ಲದಕ್ಕೂ ಇಬ್ಬರ ಸಹಿ ಬೇಕು. ಹೀಗಾಗಿ ಬಹುತೇಕ ಭ್ರಷ್ಟಾಚಾರಗಳು ಇಬ್ಬರ ಪಾಲುದಾರಿಕೆಯಲ್ಲಿಯೇ ನಡೆಯುವುದುಂಟು. ಆದರೆ, ಇಂತಹ ಪ್ರಕರಣಗಳು ಬಯಲಾದಾಗ ಮಾತ್ರ ಪಿಡಿಒ ಕಾರ್ಯದರ್ಶಿಗಳನ್ನಷ್ಟೇ ಹೊಣೆಗಾರರನ್ನಾಗಿ ಮಾಡಿ, ಅಯಾ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡುವ ಮೂಲಕ ವಿಚಾರಣೆಗೆ ಆದೇಶಿಸಲಾಗುತ್ತದೆ. ಆರೋಪ ಸಾಬೀತಾದರೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇದರಿಂದ ಪಿಡಿಒಗಳು ಅಭದ್ರತೆಗೆ ಒಳಗಾಗಿದ್ದಾರೆ. ಇಲ್ಲಿ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಬಚಾಲ್ ಆಗುತ್ತಾರೆ
ಗ್ರಾಮ ಪಂಚಾಯತಿ ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿರುವುದರಿಂದ ಇದುವರೆಗೂ ಇಂತಹ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ಅವಕಾಶ ಇರಲಿಲ್ಲ. ಇದೀಗ ಚುನಾಯಿತ ಪ್ರತಿನಿಧಿಗಳನ್ನೂ ಹೊಣೆಗಾರರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಮನವಿ ಸಲ್ಲಿದ್ದು, ಈ ಮನವಿಗೆ ಸರ್ಕಾರ ಸ್ಪಂದಿಸಿದೆ
ಹೀಗಾಗಿ ಇನ್ಮುಂದೆ ಗ್ರಾಮ ಪಂಚಾಯತಿಯ ಯಾವುದೇ ಹಣಕಾಸು ಅವ್ಯವಹಾರ, ಭ್ರಷ್ಟಾಚಾರ ನಡೆದರೇ ಚುನಾಯಿತ ಸದಸ್ಯರು, ಅಧ್ಯಕ್ಷರೂ ಕೂಡ ಹೊಣೆಗಾರರಾಗಲಿದ್ದಾರೆ. ಇವರ ವಿರುದ್ಧವೂ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಆರೋಪ ಸಾಭೀತಾದರೆ ಅಧಿಕಾರಿಗಳ ಜೊತೆಗೆ ಚುನಾಯಿತ ಪ್ರತಿನಿಧಿಗಳಿಗೂ ಶಿಕ್ಷೆ ಜಾರಿಯಾಗಲಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಭ್ರಷ್ಟಾಚಾರ, ಹಗರಣದಲ್ಲಿ ಇನ್ಮುಂದೆ ಗ್ರಾ.ಪಂ ಅಧ್ಯಕ್ಷರು ಸದಸ್ಯರಿಗೂ ಶಿಕ್ಷೆ, ದಂಡನೆ appeared first on Law Guide Kannada.

]]>