Delhi High Court Archives - Law Guide Kannada https://www.lawguidekannada.com/tag/delhi-high-court/ Online Guide Wed, 11 Feb 2026 15:10:46 +0000 en-US hourly 1 https://wordpress.org/?v=7.0.2 https://www.lawguidekannada.com/wp-content/uploads/2022/09/cropped-Logo_512-32x32.jpg Delhi High Court Archives - Law Guide Kannada https://www.lawguidekannada.com/tag/delhi-high-court/ 32 32 ಜಡ್ಜ್ ಸೇವೆ ರದ್ದುಪಡಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ https://www.lawguidekannada.com/high-court-upholds-judges-service-termination-order/ Wed, 11 Feb 2026 15:10:46 +0000 https://www.lawguidekannada.com/?p=3403 ನವದೆಹಲಿ: ಪರೀಕ್ಷಾರ್ಥ ಅವಧಿಯಲ್ಲಿರುವ (ಪ್ರೊಬೇಶನರಿ) ಅಧಿಕಾರಿಯು ಸೇವೆಯಲ್ಲಿ ಮುಂದುವರಿಯಲು ಅನರ್ಹನೆಂದು ಕಂಡುಬಂದಾಗ, ಅವನ ಸೇವೆಯನ್ನು ನಿಲ್ಲಿಸುವುದು ನಿಯಮಗಳ ಪ್ರಕಾರ ಕಾನೂನುಬದ್ಧ...

The post ಜಡ್ಜ್ ಸೇವೆ ರದ್ದುಪಡಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ appeared first on Law Guide Kannada.

]]>
ನವದೆಹಲಿ: ಪರೀಕ್ಷಾರ್ಥ ಅವಧಿಯಲ್ಲಿರುವ (ಪ್ರೊಬೇಶನರಿ) ಅಧಿಕಾರಿಯು ಸೇವೆಯಲ್ಲಿ ಮುಂದುವರಿಯಲು ಅನರ್ಹನೆಂದು ಕಂಡುಬಂದಾಗ, ಅವನ ಸೇವೆಯನ್ನು ನಿಲ್ಲಿಸುವುದು ನಿಯಮಗಳ ಪ್ರಕಾರ ಕಾನೂನುಬದ್ಧ ಕ್ರಮವೆಂದು ಅಭಿಪ್ರಾಯಿಸಿದ ದೆಹಲಿ ನ್ಯಾಯಾಲಯವು ವೈರಲ್ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಬೇಷನರಿ ಅವಧಿಯಲ್ಲಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಸೇವೆ ರದ್ದು ಪಡಿಸುವ ಕ್ರಮವನ್ನು ಎತ್ತಿ ಹಿಡಿದಿದೆ.

ವೈರಲ್ ನ್ಯಾಯಾಲಯದ ವೀಡಿಯೊ ಪ್ರಸರಣದ ಹಿನ್ನೆಲೆಯಲ್ಲಿ ಸೇವೆ ರದ್ದು ಪಡಿಸಿದ ಕ್ರಮವನ್ನು ಪ್ರಶ್ನಿಸಿ, ದೆಹಲಿ ಹೈಯರ್ ಜುಡಿಷಿಯಲ್ ಸರ್ವೀಸ್ (DHJS)ನ ಪ್ರೊಬೇಷನರಿ ಅವಧಿಯಲ್ಲಿದ್ದ ನ್ಯಾಯಾಂಗ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಅನಿಲ್ ಕ್ಷೇತರ್ಪಾಲ್ ಮತ್ತು ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರ ವಿಭಾಗೀಯ ಪೀಠವು, ಸೇವೆ ರದ್ದು ಪಡಿಸಿದ ಕ್ರಮವು ಒಟ್ಟಾರೆ ಅಸಮರ್ಥತೆ ಆಧಾರಿತ ಸರಳ ಸೇವಾ ರದ್ದು ಪಡಿಸುವ ಕ್ರಮವಾಗಿದೆ. ಅದು ದಂಡನಾತ್ಮಕವೂ ಅಲ್ಲ. ಕಳಂಕಿತವೂ ಅಲ್ಲ ಎಂದು ಸ್ಪಷ್ಟಪಡಿಸಿತು.

10 ಅಕ್ಟೋಬರ್ 2024ರ ಅಧಿಸೂಚನೆ ಹಾಗೂ 14 ಅಕ್ಟೋಬರ್ 2024ರ ಅನುಸಾರ ಆದೇಶವನ್ನು ಮಾನ್ಯಗೊಳಿಸಿತು. ಆ ಆದೇಶದ ಮೂಲಕ, ಪರೀಕ್ಷಾರ್ಥ ಅವಧಿಯಲ್ಲಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಸೇವೆಯನ್ನು 1970ರ ದೆಹಲಿ ಹೈಯರ್ ಜುಡಿಷಿಯಲ್ ಸರ್ವೀಸ್ ನಿಯಮಗಳ ನಿಯಮ 14ರ ಅಡಿಯಲ್ಲಿ ರದ್ದುಪಡಿಸಲಾಗಿತ್ತು. ನ್ಯಾಯಾಧೀಶರ ಕಾರ್ಯಕ್ಷಮತೆ, ವರ್ತನೆ ಮತ್ತು ಸೇವಾ ದಾಖಲೆಯ ಒಟ್ಟಾರೆ ಮೌಲ್ಯಮಾಪನದ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠವು ತಿಳಿಸಿದೆ.

ಅರ್ಜಿದಾರರನ್ನು ಏಪ್ರಿಲ್ 2023ರಲ್ಲಿ ಎರಡು ವರ್ಷದ ಪ್ರೊಬೇಷನರಿ ಅವಧಿಗೆ ದೆಹಲಿಯ ದ್ವಾರಕಾ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಜಿಲ್ಲಾ, ನ್ಯಾಯಾಧೀಶರಾಗಿ ನಿಯೋಜಿಸಲಾಗಿತ್ತು. 2024ರ ಸೆಪ್ಟೆಂಬರ್ 6ರಂದು, ನ್ಯಾಯಾಲಯದ ವಿಚಾರಣೆಯ ವೇಳೆ ಅರ್ಜಿದಾರ ಮತ್ತು ವಾದಿಯ ನಡುವೆ ನಡೆದ ವಾಗ್ವಾದದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ನ್ಯಾಯಾಧೀಶರು ಮದ್ಯಪಾನದ ಪ್ರಭಾವದಲ್ಲಿರುವಂತೆ ತೋರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ವೀಡಿಯೊ ಕಾನ್ಸರೆನ್ಸಿಂಗ್ ನಿಯಮಗಳನ್ನು ಉಲ್ಲಂಘಿಸಿ ಆಯ್ದ ಭಾಗ ಮಾತ್ರ ದಾಖಲಾಗಿದ್ದು, ನಂತರ ನಡೆದ ನ್ಯಾಯಾಲಯ ಕೊಠಡಿಯ ಪರಿಶೀಲನೆಯಲ್ಲಿ ಯಾವುದೇ ಅಪರಾಧಕಾರಿ ವಸ್ತು ಪತ್ತೆಯಾಗಿಲ್ಲ ಎಂದು ನ್ಯಾಯಾಧೀಶರು ವಾದಿಸಿದರು.

ಸೇವಾ ರದ್ದು ಪಡಿಸುವ ಕ್ರಮ ಈ ಘಟನೆಯ ಮೇಲೆ ಮಾತ್ರ ಆಧಾರಿತವಾಗಿದೆ ಎಂದು ಅವರು ತಿಳಿಸಿದರು. ಶಿಸ್ತು, ತನಿಖೆ ನಡೆಸದೇ ಅಥವಾ ಅರ್ಜಿದಾರರ ಅಹವಾಲನ್ನು ಕೇಳುವ ಅವಕಾಶ ನೀಡದೇ ಕ್ರಮ ಕೈಗೊಂಡಿರುವುದು ಸಂವಿಧಾನದ ವಿಧಿಗಳು 14, 21 ಮತ್ತು 311(2)ಗಳನ್ನು ಉಲ್ಲಂಘಿಸಿದೆ ಎಂದು ಅವರು ವಾದಿಸಿದರು.

ಅರ್ಜಿದಾರರು ಪರೀಕ್ಷಾರ್ಥ ಅವಧಿಯಲ್ಲಿದ್ದ ಅಧಿಕಾರಿಯಾಗಿದ್ದು ಸೇವೆಯಲ್ಲಿ ಮುಂದುವರಿಯಲು ಯಾವುದೇ ಸ್ಥಿರ ಹಕ್ಕು, ಇಲ್ಲ ಎಂದು ಗಮನಿಸಿದ ನ್ಯಾಯಪೀಠವು, ವೈರಲ್ ವೀಡಿಯೊ ಘಟನೆಗಿಂತ ಮೊದಲು, 29 ಆಗಸ್ಟ್ 2024ರಂದು ಪ್ರತಿಕೂಲ ವಾರ್ಷಿಕ ಗುಪ್ತ ವರದಿ ದಾಖಲಾಗಿತ್ತು ಎಂದು ಹೇಳಿದೆ.

ಎಸಿಆರ್ ವರದಿಯಲ್ಲಿ ನ್ಯಾಯಾಧೀಶರು ನ್ಯಾಯಾಲಯದಲ್ಲಿ ತಮ್ಮ ವರ್ತನೆಯನ್ನು ಸುಧಾರಿಸಬೇಕೆಂದು ಸೂಚಿಸಲಾಗಿದ್ದು ಅವರು ಹಲವು ಸಂದರ್ಭಗಳಲ್ಲಿ ವಕೀಲರಿಗೆ “ಅತಿಯಾಗಿ ಒರಟು” ವರ್ತನೆ ತೋರಿದ್ದಾರೆ ಎಂದು ವರದಿಯಾಗಿತ್ತು. ಅವರ ತೀರ್ಪುಗಳನ್ನು “ಸರಾಸರಿಗಿಂತ ಕಡಿಮೆ” ಎಂದು ಶ್ರೇಣೀಕರಿಸಲಾಗಿತ್ತು “ಈ ಎಸಿಆರ್ ಟಿಪ್ಪಣಿಗಳು ನ್ಯಾಯಾಂಗ ಸ್ವಭಾವ ಮತ್ತು ನ್ಯಾಯನಿರ್ಣಯದ ಗುಣಮಟ್ಟ ಎಂಬ ಮೂಲ ಗುಣಲಕ್ಷಣಗಳಿಗೆ ಸಂಬಂಧಿಸಿದವು. ಮತ್ತು ದೆಹಲಿ ಹೈಯರ್ ಜುಡಿಷಿಯಲ್ ಸರ್ವಿಸ್ (ಡಿಎಚ್ಜೆಎಸ್)ನಲ್ಲಿ ಮುಂದುವರಿಯಲು ಯೋಗ್ಯತೆ ಮೌಲ್ಯಮಾಪನಕ್ಕೆ ಅವು ಅತ್ಯಂತ ಮಹತ್ವದ್ದಾಗಿವೆ,” ಎಂದು ನ್ಯಾಯಪೀಠ ತಿಳಿಸಿದೆ.

ಮತ್ತಷ್ಟು, ಸೇವಾ ರದ್ದುಪಡಿಸುವ ಕ್ರಮವು ಯಾವುದೇ ಸ್ಥಾಪಿತ ತಪ್ಪು ಆಚಾರಗಳ ಮೇಲೆ ಆಧಾರಿತವಲ್ಲ ಎಂದು ನ್ಯಾಯಪೀಠವು ಗಮನಿಸಿದೆ. ಆದೇಶದಲ್ಲಿ ಯಾವುದೇ ಕಳಂಕಿತ ಭಾಷೆ ಅಥವಾ ಅಪರಾಧ ಸಾಬೀತಾದ ಉಲ್ಲೇಖ ಇಲ್ಲ, ಮತ್ತು ಇದನ್ನು ಸ್ಪಷ್ಟವಾಗಿ ಪರೀಕ್ಷಾರ್ಥ ಅವಧಿಯ ಸೇವಾ ರದ್ದು ಪಡಿಸುವ ಕ್ರಮವೆಂದು ಹೇಳಲಾಗಿದೆ.

“ದಾಖಲೆಗಳಲ್ಲಿ ಕಾಣಿಸುವ ವಾಸ್ತವಾಂಶಗಳ ಆಧಾರದ ಮೇಲೆ, ಅರ್ಜಿದಾರರ ಸೇವೆ ರದ್ದು ಪಡಿಸುವುದು 1970ರ ನಿಯಮಗಳ ನಿಯಮ 14ರ ಅಡಿಯಲ್ಲಿ ಹೈಕೋರ್ಟ್ ಅಧಿಕಾರದ ನ್ಯಾಯಸಮ್ಮತ ಬಳಕೆ ಆಗಿದೆ. ಇದು ಪ್ರತಿಕೂಲ ಎಸಿಆರ್, ಯೋಗ್ಯತೆ ಕುರಿತ ದೂರುಗಳು ಮತ್ತು ಫುಲ್ ಕೋರ್ಟ್ ಪರಿಗಣಿತ ಮೌಲ್ಯಮಾಪನದ ಮೇಲೆ ಆಧಾರಿತವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಜಡ್ಜ್ ಸೇವೆ ರದ್ದುಪಡಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ appeared first on Law Guide Kannada.

]]>