divorce petition Archives - Law Guide Kannada https://www.lawguidekannada.com/tag/divorce-petition/ Online Guide Tue, 04 Nov 2025 14:07:12 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg divorce petition Archives - Law Guide Kannada https://www.lawguidekannada.com/tag/divorce-petition/ 32 32 ಪತಿಯ ವಿಪರೀತ ಕುಡಿತದ ಚಟವೂ ‘ಕ್ರೌರ್ಯ: ಪತ್ನಿಗೆ ವಿಚ್ಚೇದನ, ಜೀವನಾಂಶಕ್ಕೆ ಹೈಕೋರ್ಟ್ ಆದೇಶ https://www.lawguidekannada.com/husbands-excessive-drinking-is-also-cruelty-high-court-orders-divorce-maintenance-for-wife/ Tue, 04 Nov 2025 14:07:12 +0000 http://www.lawguidekannada.com/?p=2668 ಛತ್ತೀಸ್ ಗಢ: ತನ್ನ ಕುಟುಂಬದ ಜವಾಬ್ದಾರಿಯನ್ನ ತೆಗೆದುಕೊಳ್ಳದೆ ಪತಿಯು ವಿಪರೀತ ಕುಡಿತದ ಚಟಕ್ಕೆ ದಾಸನಾದರೆ ಅದೂ ಕೂಡ ‘ಕ್ರೌರ್ಯ ಎಂದು...

The post ಪತಿಯ ವಿಪರೀತ ಕುಡಿತದ ಚಟವೂ ‘ಕ್ರೌರ್ಯ: ಪತ್ನಿಗೆ ವಿಚ್ಚೇದನ, ಜೀವನಾಂಶಕ್ಕೆ ಹೈಕೋರ್ಟ್ ಆದೇಶ appeared first on Law Guide Kannada.

]]>
ಛತ್ತೀಸ್ ಗಢ: ತನ್ನ ಕುಟುಂಬದ ಜವಾಬ್ದಾರಿಯನ್ನ ತೆಗೆದುಕೊಳ್ಳದೆ ಪತಿಯು ವಿಪರೀತ ಕುಡಿತದ ಚಟಕ್ಕೆ ದಾಸನಾದರೆ ಅದೂ ಕೂಡ ‘ಕ್ರೌರ್ಯ ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ ಗಢದ ಹೈಕೋರ್ಟ್, ಪತ್ನಿಗೆ ವಿಚ್ಚೇದನ ನೀಡಿದ್ದು ಪತಿಯು ಜೀವನಾಂಶ ಪಾವತಿಸುವಂತೆ ಆದೇಶಿಸಿದೆ.

ವಿಚ್ಚೇದನ ಕೋರಿ ಪತ್ನಿ ಸಲ್ಲಿಸಿದ್ದ ಮನವಿ ಪುರಸ್ಕರಿಸಿರುವ ಛತ್ತೀಸ್ ಗಢದ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಗೌತಮ್ ಭಾಧುರಿ ಹಾಗೂ ಸಂಜಯ್ ಎಸ್ ಅಗರ್ವಾಲ್ ಅವರಿದ್ದ ವಿಭಾಗೀಯ ಪೀಠವು, ವಿಚ್ಚೇದನ ಮಂಜೂರು ಮಾಡಿ ಜೊತೆಗೆ ವಿಚ್ಛೇದಿತ ಪತ್ನಿಗೆ ಮಾಸಿಕ 15 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿದೆ.

ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸದೆ ವಿಪರೀತ ಕುಡಿತದ ಚಟಕ್ಕೆ ದಾಸನಾದ ಪತಿಯ ನಡವಳಿಕೆ ಕೂಡ ಹಿಂದೂ ವಿವಾಹ ಕಾಯ್ದೆಯ ಅಡಿ ವಿಚ್ಛೇದನಕ್ಕೆ ಕಾರಣವಾಗುವ ‘ಕ್ರೌರ್ಯ’ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಡುತ್ತದೆ. ಅತಿಯಾದ ಮದ್ಯಪಾನ ಮಾಡುವ ಪತಿ ಮನೆಯ ಸ್ಥಿತಿಯನ್ನು ಹದಗೆಡಿಸುತ್ತಾನೆ. ಪತಿಯ ಈ ನಡವಳಿಕೆಯು ಸಹಜವಾಗಿಯೇ ಪತ್ನಿ ಹಾಗೂ ಮಕ್ಕಳನ್ನು ಹಿಂಸೆಗೊಳಪಡಿಸುತ್ತದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ದಾಂಪತ್ಯದಿಂದ ಮಕ್ಕಳು ಜನಿಸಿದಾಗ ಪತಿಯ ಹೊಣೆಗಾರಿಕೆ ಹೆಚ್ಚಾಗುತ್ತದೆ. ಅದರಲ್ಲೂ ಪತ್ನಿಯು ಗೃಹಿಣಿಯಾಗಿದ್ದರೆ ಪತಿಯು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ವಿವರ: ದಂಪತಿಗಳು 2006 ರಲ್ಲಿ ವಿವಾಹವಾಗಿದ್ದು, 13 ವರ್ಷದ ಮಗಳು ಹಾಗೂ 10 ವರ್ಷದ ಮಗನಿದ್ದಾರೆ. ಈ ಮಧ್ಯೆ ಪತಿ ಮದ್ಯ ವ್ಯಸನಿಯಾಗಿದ್ದು, ಪತಿಯ ವಿಪರೀತ ಮದ್ಯ ವ್ಯಸನಕ್ಕೆ ಬೇಸತ್ತ ಪತ್ನಿ ಮಾನಸಿಕ ಕ್ರೌರ್ಯದ ಅಡಿಯಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ, ಪತಿ ಕುಡಿತಕ್ಕೆ ದಾಸನಾಗಿದ್ದು ಮದ್ಯಪಾನಕ್ಕಾಗಿ ಮನೆಯ ವಸ್ತುಗಳನ್ನು ಮಾರಾಟ ಮಾಡಿದ್ದಾನೆ. ಮನೆ ಖರ್ಚಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಹಣ ನೀಡುತ್ತಿಲ್ಲ. ಪಾನಮತ್ತನಾಗಿ ಬಂದು ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಕ್ಕಳ ಜೊತೆ ತವರು ಮನೆಗೆ ಹೋಗುವಂತೆ ಬಲವಂತ ಮಾಡಿದ್ದಾನೆ, ಹೀಗಾಗಿ ವಿಚ್ಛೇದನ ಕೊಡಿಸಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಕೇವಲ ಮದ್ಯಪಾನದಿಂದ ಮಾನಸಿಕ ಕ್ರೌರ್ಯ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಮನವಿ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಛತ್ತೀಸ್ ಘಡದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ಆಲಿಸಿದ ಹೈಕೋರ್ಟ್, ಪತಿಯ ಮದ್ಯ ವ್ಯಸನದಿಂದ ಮನನೊಂದು ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದಾಗ ಮದ್ಯಪಾನ ಬಿಡುವುದಾಗಿಯೂ ಹಾಗೂ ತನ್ನ ನಡವಳಿಕೆ ಸರಿಪಡಿಸಿಕೊಳ್ಳುವುದಾಗಿಯೂ ಹೇಳಿ ಅರ್ಜಿ ಹಿಂಪಡೆಯುವಂತೆ ಮಾಡಿದ್ದಾನೆ. ನಂತರವೂ ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ. ಎರಡನೇ ಬಾರಿ ಅರ್ಜಿ ಸಲ್ಲಿಸಿದಾಗ ವಿಚಾರಣೆಗೆ ಪತಿ ಹಾಜರಾಗಿಲ್ಲ. ಪತ್ನಿಯ ಆರೋಪಗಳನ್ನು ಪಾಟಿ ಸವಾಲಿಗೆ ಒಳಪಡಿಸಿಲ್ಲ. ಬದಲಿಗೆ ಪತ್ನಿಯಿಂದ ತನಗೂ ಬೆದರಿಕೆ ಇದೆಯೆಂದು, ತನ್ನ ಮೇಲೆ ಸಹ ಕೌರ್ಯ ನಡೆದಿದೆಯೆಂದು ತಿಳಿಸಿದ್ಧಾನೆ. ಪತ್ನಿಯ ಆರೋಪಗಳನ್ನು ಪಾಟಿಸವಾಲಿಗೆ ಒಳಪಡಿಸದೇ ಇರುವುದರಿಂದ ಆಕೆ ಮಾಡಿರುವ ಆರೋಪಗಳನ್ನು ನಿಜವಾಗಿ ಪರಿಗಣಿಸಬೇಕಾಗುತ್ತದೆ. ಪ್ರಕರಣದ ವಾಸ್ತವಾಂಶಗಳು ಸಹ ಇದನ್ನು ಸ್ಪಷ್ಟಪಡಿಸುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ವಿಚ್ಚೇದನ ನೀಡಿ ಆದೇಶಿಸಿದೆ.

ಇದೇ ವೇಳೆ ಮಕ್ಕಳ ಶೈಕ್ಷಣಿಕ ವೆಚ್ಚ ಮತ್ತು ಪಾಲನೆ ಪೋಷಣೆಗಳನ್ನು ಪರಿಗಣಿಸಿ ಪತ್ನಿಗೆ ಮಾಸಿಕ 15,000 ನೀಡಬೇಕೆಂದು ಪತಿಗೆ ಹೈಕೋರ್ಟ್ ನ್ಯಾಯಪೀಠವು ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಪತಿಯ ವಿಪರೀತ ಕುಡಿತದ ಚಟವೂ ‘ಕ್ರೌರ್ಯ: ಪತ್ನಿಗೆ ವಿಚ್ಚೇದನ, ಜೀವನಾಂಶಕ್ಕೆ ಹೈಕೋರ್ಟ್ ಆದೇಶ appeared first on Law Guide Kannada.

]]>
ಆತನಿಗೆ ಹೆಂಡತಿಯಲ್ಲ, ಬೇಕಾಗಿರುವುದು ಸೇವಕಿ: ಪತಿ ಸಲ್ಲಿಸಿದ ವಿಚ್ಚೇದನ ಅರ್ಜಿ ತಿರಸ್ಕರಿಸಿ ಹೈಕೋರ್ಟ್ ತರಾಟೆ https://www.lawguidekannada.com/he-doesnt-need-a-wife-he-needs-a-maid-karnataka-high-court-slams-husbands-divorce-petition/ Sun, 26 Oct 2025 15:52:12 +0000 http://www.lawguidekannada.com/?p=2622 ಬೆಂಗಳೂರು: ಸಾಂಸಾರಿಕ ಜೀವನದಲ್ಲಿ ಕೋಪ, ಜಗಳ ಬರುವುದು ಸಹಜ, ಪತಿ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಾಮಾನ್ಯ. ಆದರೆ...

The post ಆತನಿಗೆ ಹೆಂಡತಿಯಲ್ಲ, ಬೇಕಾಗಿರುವುದು ಸೇವಕಿ: ಪತಿ ಸಲ್ಲಿಸಿದ ವಿಚ್ಚೇದನ ಅರ್ಜಿ ತಿರಸ್ಕರಿಸಿ ಹೈಕೋರ್ಟ್ ತರಾಟೆ appeared first on Law Guide Kannada.

]]>
ಬೆಂಗಳೂರು: ಸಾಂಸಾರಿಕ ಜೀವನದಲ್ಲಿ ಕೋಪ, ಜಗಳ ಬರುವುದು ಸಹಜ, ಪತಿ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಾಮಾನ್ಯ. ಆದರೆ ಅದನ್ನು ಸುಧಾರಿಸಿಕೊಂಡು ಹೋಗುವುದು ಪ್ರತಿಯೊಬ್ಬ ದಂಪತಿಗಳ ಕರ್ತವ್ಯ,. ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿಗಳು ಸಣ್ಣ ಸಣ್ಣ ಸಮಸ್ಯೆಗಳಿಗೆಯೇ ಜಗಳವಾಡಿ ವಿಚ್ಚೇದನಕ್ಕೆ ಮುಂದಾಗುವ ಪರಿಸ್ಥಿತಿ ಇದೆ. ಅಂತೆಯೇ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ.

ಅಮೆರಿಕಾಗೆ ಬರಲು ಒಲ್ಲೆ ಎಂದ ಪತ್ನಿಗೆ ಡೈವರ್ಸ್ ನೀಡಲು ಮುಂದಾದ ಪತಿಗೆ ಕರ್ನಾಟಕ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು ಆತನಿಗೆ ಹೆಂಡತಿಯಲ್ಲ, ಬೇಕಾಗಿರುವುದು ಸೇವಕಿ ಎಂದು ಕಿಡಿಕಾರಿದೆ. ಅಲ್ಲದೆ ಆತ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

ಇದು ದೊಡ್ಡ ಸಮಸ್ಯೆಯೇ ಅಲ್ಲ. ಈ ವಿಚಾರವನ್ನು ಇಬ್ಬರು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು. ಇನ್ನು ಈ ವಿಚ್ಛೇದನ ಕೇಳುತ್ತಿರುವ ವ್ಯಕ್ತಿಗೆ ಪತ್ನಿ ಅಲ್ಲ ಬೇಕಿರುವುದು ಪ್ರಾಮಾಣಿಕ ಸೇವಕಿ ಎಂದು ಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ.

ಇನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಅಡಿಗ ಅವರನ್ನೊಳಗೊಂಡ ವಿಭಾಗೀಯ ಪೀಠ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಇನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ತೀರ್ಪಿನಲ್ಲಿ, ಮಹಿಳೆಯು ತಾನು ಮತ್ತು ತನ್ನ ತಾಯಿ ಸಾಕಷ್ಟು ವರದಕ್ಷಿಣೆ ಅಥವಾ ಆಸ್ತಿಯನ್ನು ನೀಡದ ಕಾರಣ ನನ್ನ ಗಂಡ ಅತೃಪ್ತರಾಗಿದ್ದಾರೆ. ಆ ಕಾರಣಕ್ಕೆ ವಿಚ್ಛೇದನ ಕೇಳುತ್ತಿದ್ದಾರೆ ಎಂದು ಕೋರ್ಟ್ ಮುಂದೆ ಹೇಳಿದ್ದಾರೆ. ಈ ಬಗ್ಗೆ ಮನವರಿಕೆ ಮಾಡಿಕೊಂಡ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಮಹಿಳೆಯ ಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಅರ್ಜಿಯ ಪ್ರಕಾರ ಈ ಇಬ್ಬರು ದಂಪತಿಗಳಿಗೆ 2015 ರಲ್ಲಿ ವಿವಾಹವಾಗಿತ್ತು. ಕೇವಲ 5 ದಿನಗಳು ಮಾತ್ರ ಇಬ್ಬರು ಸಂಸಾರ ಮಾಡಿದ್ದಾರೆ. ಇನ್ನು ಪತ್ನಿಗೆ ಸಿಂಗಾಪುರದಲ್ಲಿ ಕೆಲಸ, ಆಕೆ ತಾಯಿ ಜತೆಗೆ ವಾಸಿಸುತ್ತಿದ್ದರು. ಗಂಡ ಅಮೆರಿಕದಲ್ಲಿದ್ದ ಕಾರಣ, ಅಮೆರಿಕಕ್ಕೆ ಬರುವಂತೆ ಹಾಗೂ ಕೆಲಸವನ್ನು ಇಲ್ಲಿಗೆ ವರ್ಗಾವಣೆ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಪತ್ನಿ ಒಪ್ಪಿಲ್ಲ, ಆ ಕಾರಣಕ್ಕೆ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ತನ್ನ ಪತ್ನಿ ಅಮೆರಿಕಕ್ಕೆ ಬರದಿರಲು ಆಕೆಯ ತಾಯಿ ಕಾರಣ, ಅವರೇ ಅವಳನ್ನು ಇಲ್ಲಿಗೆ ಬರಲು ಬೀಡುತ್ತಿಲ್ಲ ಎಂದು ಪತಿ ಅರ್ಜಿಯಲ್ಲಿ ದೂರಿದ್ದಾರೆ. ಅಮೆರಿಕಕ್ಕೆ ಬರಲು ಅನುಕೂಲವಾಗುವಂತೆ ಯಾವುದೇ ವೀಸಾ ವ್ಯವಸ್ಥೆಗಳನ್ನು ಮಾಡಿಲ್ಲ, ಎಲ್ಲದಕ್ಕೂ ಅವಳ ತಾಯಿ ಅಡ್ಡ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು, ಆತನಿಗೆ ಹೆಂಡತಿಗಿಂತ ಸೇವಕಿ ಬೇಕಾಗಿದೆ. ಅವನು ತನ್ನ ಜೀವನ ಸಂಗಾತಿಯಿಂದ ತುಂಬಾ ನಿರೀಕ್ಷಿಸುತ್ತಿರುವಂತೆ ಕಾಣುತ್ತದೆ. ತಾನು ಹೇಳಿದಂತೆ ಕೇಳಬೇಕು, ತನ್ನ ಇಚ್ಛೆಯಂತೆ ವರ್ತಿಸಬೇಕು ಎಂಬ ಹಂಬಲ ಆತನಿಗಿದೆ ಎಂದು ಕೋರ್ಟ್ ಹೇಳಿದೆ. ಈ ಕ್ಷುಲ್ಲಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವಂತೆ ಹೇಳಿದೆ.

ಈ ಹಿಂದೆ ಅಂದರೆ ಸೆಪ್ಟೆಂಬರ್ 15 ರಂದು ಇದೇ ಪೀಠ ಸಾರ್ವಜನಿಕವಾಗಿ ಒಂದು ವಿಷಯವನ್ನು ಪ್ರಸ್ತಾಪ ಮಾಡಿತ್ತು. ಮದುವೆ ಎಂಬುದು ಮಕ್ಕಳಾಟ ಅಲ್ಲ, ಕೇಳಿದಾಗ ನಿಮಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಗಂಡ ಮತ್ತು ಹೆಂಡತಿ ಇಬ್ಬರೂ ಸಾಮಾನ್ಯ ವೈವಾಹಿಕ ಜೀವನವನ್ನು ನಡೆಸಲು ಪರಸ್ಪರ ರಾಜಿ ಮಾಡಿಕೊಳ್ಳಬೇಕು ಮತ್ತು ಹೊಂದಿಕೊಳ್ಳಬೇಕು ಎಂದು ಹೇಳಿತ್ತು. ಇದೀಗ ಈ ಪ್ರಕರಣದಲ್ಲೂ ಕೋರ್ಟ್ ಅದನ್ನೇ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಆತನಿಗೆ ಹೆಂಡತಿಯಲ್ಲ, ಬೇಕಾಗಿರುವುದು ಸೇವಕಿ: ಪತಿ ಸಲ್ಲಿಸಿದ ವಿಚ್ಚೇದನ ಅರ್ಜಿ ತಿರಸ್ಕರಿಸಿ ಹೈಕೋರ್ಟ್ ತರಾಟೆ appeared first on Law Guide Kannada.

]]>