Familly Court Archives - Law Guide Kannada https://www.lawguidekannada.com/tag/familly-court/ Online Guide Fri, 12 Dec 2025 02:11:17 +0000 en-US hourly 1 https://wordpress.org/?v=7.0.2 https://www.lawguidekannada.com/wp-content/uploads/2022/09/cropped-Logo_512-32x32.jpg Familly Court Archives - Law Guide Kannada https://www.lawguidekannada.com/tag/familly-court/ 32 32 ವಿಚಾರಣಾ ನ್ಯಾಯಾಲಯಕ್ಕೆ LOC ಹೊರಡಿಸುವ ಅಧಿಕಾರ ಇಲ್ಲ- ಹೈಕೋರ್ಟ್ https://www.lawguidekannada.com/trial-court-has-no-power-to-issue-loc-high-court/ Fri, 12 Dec 2025 02:11:05 +0000 https://www.lawguidekannada.com/?p=3036 ಬೆಂಗಳೂರು: ಜೀವನಾಂಶ ನೀಡಬೇಕು ಎಂಬ ಆದೇಶ ಪಾಲನೆ ಮಾಡದ ವ್ಯಕ್ತಿಯ ವಿರುದ್ಧ ಮಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಲುಕ್...

The post ವಿಚಾರಣಾ ನ್ಯಾಯಾಲಯಕ್ಕೆ LOC ಹೊರಡಿಸುವ ಅಧಿಕಾರ ಇಲ್ಲ- ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಜೀವನಾಂಶ ನೀಡಬೇಕು ಎಂಬ ಆದೇಶ ಪಾಲನೆ ಮಾಡದ ವ್ಯಕ್ತಿಯ ವಿರುದ್ಧ ಮಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಲುಕ್ ಔಟ್ ಸರ್ಕ್ಯೂಲರ್ (ಎಲ್ಸಿ)ನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಲಲಿತಾ ಕನ್ನೆ ಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠವು, ವಿಚಾರಣಾ ನ್ಯಾಯಲಯಗಳಿಗೆ ಎಲ್ ಒಸಿ ಹೊರಡಿಸುವ ಅಧಿಕಾರವಿಲ್ಲ ಎಂದು ಕರ್ನಾಟಕ ಸ್ಪಷ್ಟವಾಗಿ ತಿಳಿಸಿ ಮಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಎಲ್ ಒಸಿ ರದ್ದುಗೊಳಿಸಿ ತೀರ್ಪು ನೀಡಿದೆ.

ಮಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕುವೈಟ್ ನಲ್ಲಿದ್ದ ಅರ್ಜಿದಾರ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ಎರಡು ಲಕ್ಷ ರೂ.ಗಳ ಠೇವಣಿ ಇಡಬೇಕು ಎಂಬ ಷರತ್ತು ವಿಧಿಸಿ ಎಲ್ಸಿ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿತು.

‘ದಂಡ ಪ್ರಕ್ರಿಯಾ ಸಂಹಿತೆ 1973ರ (ಸಿಆರ್ಪಿಸಿ) ಕಲಂ 125ರಡಿ ಕೌಟುಂಬಿಕ ನ್ಯಾಯಾಲಯಕ್ಕೆ ಎಲ್ ಹೊರಡಿಸಿರುವ ಯಾವುದೇ ಅಧಿಕಾರವಿಲ್ಲ. ಜೀವನಾಂಶ ನೀಡುವ ಕುರಿತಾದ ಕಲಂ 125 ಅನ್ನು ನ್ಯಾಯಾಲಯ ಇತರೆ ಆದೇಶಗಳ ಮೂಲಕ ಜಾರಿಗೊಳಿಸಬಹುದು. ಒಂದು ವೇಳೆ ಪತಿ ಜೀವನಾಂಶ ನೀಡಲು ವಿಫಲವಾದರೆ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಬಂಧನಕ್ಕೆ ಆದೇಶ ಹೊರಡಿಸಬಹುದು. ಆದರೆ, ಜೀವನಾಂಶ ವಸೂಲು ಮಾಡುವುದಕ್ಕಾಗಿ ಎಲ್ಸಿ ಹೊರಡಿಸಲು ಆಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಸಿಆರ್ಪಿಸಿ ಕಲಂ 125ರ ಆದೇಶಗಳನ್ನು ಜಾರಿ ಮಾಡುವಾಗ ಈ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ಸುತ್ತೋಲೆ ಹೊರಡಿಸಬೇಕು’ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಯಾವುದೇ ಪ್ರಕರಣಗಳಲ್ಲಿ ನ್ಯಾಯಾಲಯ ಎಲ್ ಒಸಿ ರದ್ದುಗೊಳಿಸಿದರೆ ಅಂತಹ ಸಂದರ್ಭಗಳಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅದರ ಬಗ್ಗೆ ಬ್ಯೂರೊ ಆಫ್ ಇಮಿಗ್ರೇಷನ್ಗೆ ಮಾಹಿತಿ ನೀಡಬೇಕು ಮತ್ತು ಯಾವ ಅಧಿಕಾರಿ ಎಲ್ ಒಸಿ ಜಾರಿಗೊಳಿಸುತ್ತಾರೋ ಅಂತಹವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ನ್ಯಾಯಪೀಠ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ತಾಕೀತು ಮಾಡಿತು. ಒಂದು ವೇಳೆ ಆ ಅಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿದ್ದರೆ ಅಂತಹ ಅಧಿಕಾರಿಯ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು ಎಂದೂ ಅದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ವಿಚಾರಣಾ ನ್ಯಾಯಾಲಯಕ್ಕೆ LOC ಹೊರಡಿಸುವ ಅಧಿಕಾರ ಇಲ್ಲ- ಹೈಕೋರ್ಟ್ appeared first on Law Guide Kannada.

]]>