fights between families Archives - Law Guide Kannada https://www.lawguidekannada.com/tag/fights-between-families/ Online Guide Sat, 31 Jan 2026 07:42:37 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg fights between families Archives - Law Guide Kannada https://www.lawguidekannada.com/tag/fights-between-families/ 32 32 ಆಸ್ತಿ ವಿವಾದ: ತಂದೆ ಬರೆದ ವಿಲ್ ನೋಂದಣಿ ಆಗದಿದ್ರೂ ಅದು ಕಾನೂನುಬದ್ಧವೇ..? https://www.lawguidekannada.com/property-dispute-is-the-will-written-by-the-father-legal-even-if-it-is-not-registered/ Sat, 31 Jan 2026 07:42:37 +0000 https://www.lawguidekannada.com/?p=3323 ಬೆಂಗಳೂರು: ದೇಶದಲ್ಲಿ ಆಸ್ತಿ ವಿವಾದ, ವ್ಯಾಜ್ಯಗಳು ಸಹಜ. ಕುಟುಂಬಗಳ ಮಧ್ಯೆ ಆಸ್ತಿಗೆ ಸಂಬಂಧಿಸಿದಂತೆ ಮನಸ್ತಾಪ, ಹೊಡೆದಾಟಗಳು ಇತ್ತೀಚಿನ ದಿನಗಳಲ್ಲಿ ಸರ್ವೇ...

The post ಆಸ್ತಿ ವಿವಾದ: ತಂದೆ ಬರೆದ ವಿಲ್ ನೋಂದಣಿ ಆಗದಿದ್ರೂ ಅದು ಕಾನೂನುಬದ್ಧವೇ..? appeared first on Law Guide Kannada.

]]>
ಬೆಂಗಳೂರು: ದೇಶದಲ್ಲಿ ಆಸ್ತಿ ವಿವಾದ, ವ್ಯಾಜ್ಯಗಳು ಸಹಜ. ಕುಟುಂಬಗಳ ಮಧ್ಯೆ ಆಸ್ತಿಗೆ ಸಂಬಂಧಿಸಿದಂತೆ ಮನಸ್ತಾಪ, ಹೊಡೆದಾಟಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಒಂದು ಗುಂಟೆ ಜಾಗಕ್ಕೋಸ್ಕರ ಹೆತ್ತ ತಂದೆ ತಾಯಿಯನ್ನ ಅಥವಾ ಒಡಹುಟ್ಟಿದ್ದ ಅಣ್ಣ ತಮ್ಮಂದಿರನ್ನ ದೂರ ಮಾಡುವ ಅಥವಾ ಕೊಲೆ ಮಾಡುವ ಹಂತಕ್ಕೂ ಹೋಗುವ ಪರಿಸ್ಥಿತಿ ತಲೆದೂರಿದೆ. ತಂದೆ ತೀರಿಕೊಂಡ ನಂತರ ಆಸ್ತಿ ಹಂಚಿಕೆಯಲ್ಲಿ ಒಡಹುಟ್ಟಿದವರ ನಡುವೆ ಕಿರಿಕಿರಿ ಶುರುವಾಗಬಹುದು. ತಂದೆ ಬರೆದ ಮರಣಶಾಸನ ರಿಜಿಸ್ಟರ್ ಆಗಿಲ್ಲ ಎಂಬ ಕಾರಣಕ್ಕೆ ಕುಟುಂಬದಲ್ಲಿ ಜಗಳ ನಡೆಯಲೂಬಹುದು. ಹೀಗಾಗಿ ಆಸ್ತಿ ಹಕ್ಕುಗಳ ವಿಷಯ ಬಂದಾಗ ಕಾನೂನು ಏನೆಂದು ತಿಳಿಯುವುದು ಅತಿ ಮುಖ್ಯ. ಹಾಗಾದರೇ ತಂದೆ ಬರೆದ ವಿಲ್ ನೋಂದಣಿ ಆಗದಿದ್ದರೂ ಅದು ಕಾನೂನುಬದ್ಧವೇ? ಈ ಬಗ್ಗೆ ಸುಪ್ರೀಂ ಕೋರ್ಟ್ ರೂಲ್ಸ್ ಏನು ಹೇಳುತ್ತೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

ಸಾಮಾನ್ಯವಾಗಿ ತಂದೆ ತೀರಿಕೊಂಡ ನಂತರ ಅಣ್ಣ-ತಮ್ಮ, ಅಕ್ಕ-ತಂಗಿಯರು ನ್ಯಾಯಾಲಯದ ಮೆಟ್ಟಿಲೇರುವುದು ಸಹಜ. ಆದರೆ, ತಂದೆ ತನ್ನ ಆಸ್ತಿಯ ಬಗ್ಗೆ ಒಂದು ಚೀಟಿಯಲ್ಲಿ ಬರೆದಿಟ್ಟಿದ್ದರೂ ಅದಕ್ಕೆ ಕಾನೂನಿನ ಬಲವಿದೆ ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ? ಹೌದು ಆಸ್ತಿ ಹಂಚಿಕೆಯ ಈ ಸೂಕ್ಷ್ಮ ನಿಯಮಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…
ಸ್ವಯಾರ್ಜಿತ ಆಸ್ತಿ ವರ್ಸಸ್ ಪೂರ್ವಜರ ಆಸ್ತಿ

ತಂದೆ ತನ್ನ ದುಡಿಮೆಯಿಂದ ಕೊಂಡ ಆಸ್ತಿಯನ್ನು ‘ವೈಯಕ್ತಿಕ ಆಸ್ತಿ’ ಎನ್ನಲಾಗುತ್ತದೆ. ಈ ಆಸ್ತಿಯನ್ನು ಅವರು ತಮಗೆ ಇಷ್ಟ ಬಂದವರಿಗೆ ನೀಡಬಹುದು. ಅವರು ವಿಲ್ ನಲ್ಲಿ ಯಾರ ಹೆಸರು ಬರೆದಿರುತ್ತಾರೋ ಅವರಿಗೆ ಮಾತ್ರ ಆಸ್ತಿ ಸೇರುತ್ತದೆ. ಆದರೆ, ತಂದೆಗೆ ಅಜ್ಜ-ಮುತ್ತಜ್ಜರಿಂದ ಬಂದ ಆಸ್ತಿಯಾಗಿದ್ದರೆ ಅದರಲ್ಲಿ ಎಲ್ಲಾ ಮಕ್ಕಳಿಗೆ ಹುಟ್ಟಿನಿಂದಲೇ ಸಮಾನ ಹಕ್ಕಿರುತ್ತದೆ.

ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವ ಸಂದರ್ಭದಲ್ಲಿ ಸಿಗುತ್ತೆ?
2005ರ ತಿದ್ದುಪಡಿ ಕಾಯ್ದೆಯಂತೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕಿದೆ. ಆದರೆ, ತಂದೆ ತನ್ನ ಸ್ವಂತ ಆಸ್ತಿಯನ್ನು ವಿಲ್ ಮೂಲಕ ಕೇವಲ ಗಂಡು ಮಕ್ಕಳಿಗೆ ಅಥವಾ ಬೇರೆಯವರಿಗೆ ಬರೆದುಕೊಟ್ಟಿದ್ದರೆ, ಹೆಣ್ಣುಮಕ್ಕಳು ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಒಂದು ವೇಳೆ ತಂದೆ ಯಾವುದೇ ವಿಲ್ ಬರೆಯದೆ ನಿಧನರಾದರೆ ಮಾತ್ರ ಎಲ್ಲಾ ಮಕ್ಕಳಿಗೆ (ಗಂಡು ಮತ್ತು ಹೆಣ್ಣು) ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತದೆ.

ವಿಲ್ ನೋಂದಣಿ ಮಾಡಿಸುವುದು ಕಡ್ಡಾಯವಲ್ಲ

ಅನೇಕರು “ವಿಲ್ ರಿಜಿಸ್ಟರ್ ಆಗಿಲ್ಲ, ಹಾಗಾಗಿ ಅದಕ್ಕೆ ಬೆಲೆಯಿಲ್ಲ” ಎಂದು ವಾದಿಸುತ್ತಾರೆ. ಆದರೆ ಭಾರತೀಯ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ವಿಲ್ ನೋಂದಣಿ ಮಾಡಿಸುವುದು ಕಡ್ಡಾಯವಲ್ಲ. ಮರಣಶಾಸನವು ನಕಲಿ ಅಲ್ಲ ಅಥವಾ ಬಲವಂತವಾಗಿ ಬರೆಸಿದ್ದಲ್ಲ ಎಂದು ಸಾಬೀತಾದರೆ, ನೋಂದಾಯಿಸದ ವಿಲ್ ಕೂಡ ನ್ಯಾಯಾಲಯದಲ್ಲಿ ಪೂರ್ಣವಾಗಿ ಮಾನ್ಯವಾಗುತ್ತದೆ.

  1. ವಿಲ್ ನೋಂದಣಿ ಮಾಡಿಸದಿದ್ದರೆ ಅದು ನ್ಯಾಯಾಲಯದಲ್ಲಿ ಚಲಿಸುತ್ತದೆಯೇ?
    ಮರಣಶಾಸನವನ್ನು ಬರೆಯುವಾಗ ತಂದೆಯು ಮಾನಸಿಕವಾಗಿ ಸದೃಢರಾಗಿದ್ದರು ಮತ್ತು ಸ್ವಇಚ್ಛೆಯಿಂದ ಬರೆದಿದ್ದಾರೆ ಎಂದು ಇಬ್ಬರು ಸಾಕ್ಷಿಗಳು ಸಾಬೀತುಪಡಿಸಿದರೆ ಸಾಕು. ವಿಲ್ ನೋಂದಣಿ ಮಾಡಿಸದಿದ್ದರೂ ಅದು ನ್ಯಾಯಾಲಯದಲ್ಲಿ ಚಲಿಸುತ್ತದೆ
  2. ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕಿಲ್ಲ ಎಂದು ಹೇಳಲು ಸಾಧ್ಯವೆ..?
    ತಂದೆ ವಿಲ್ ಬರೆಯದೆ ಹೋದರೆ ಹೆಣ್ಣುಮಕ್ಕಳಿಗೆ ಪೂರ್ಣ ಹಕ್ಕಿದೆ. ಆದರೆ ತಂದೆ ತನ್ನ ಸ್ವಂತ ಆಸ್ತಿಯನ್ನು ಯಾರಿಗಾದರೂ ವಿಲ್ ಮಾಡಿಕೊಟ್ಟಿದ್ದರೆ, ಆ ವಿಲ್ ಪ್ರಕಾರವೇ ಆಸ್ತಿ ಹಂಚಿಕೆಯಾಗುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಆಸ್ತಿ ವಿವಾದ: ತಂದೆ ಬರೆದ ವಿಲ್ ನೋಂದಣಿ ಆಗದಿದ್ರೂ ಅದು ಕಾನೂನುಬದ್ಧವೇ..? appeared first on Law Guide Kannada.

]]>