FIR Archives - Law Guide Kannada https://www.lawguidekannada.com/tag/fir/ Online Guide Thu, 06 Nov 2025 16:13:08 +0000 en-US hourly 1 https://wordpress.org/?v=6.9.4 https://www.lawguidekannada.com/wp-content/uploads/2022/09/cropped-Logo_512-32x32.jpg FIR Archives - Law Guide Kannada https://www.lawguidekannada.com/tag/fir/ 32 32 ಸರ್ಕಾರಿ ಅಭಿಯೋಜಕರ ವಿರುದ್ದವೇ ಈIಖ ದಾಖಲಿಸಿದ ಆರೋಪಿಗಳು: ಕಾರಣ…? https://www.lawguidekannada.com/accused-filed-fir-against-government-prosecutor-reason/ Thu, 06 Nov 2025 16:13:08 +0000 http://www.lawguidekannada.com/?p=2688 ನವದೆಹಲಿ: ಸರ್ಕಾರಿ ಅಭಿಯೋಜಕರ ವಿರುದ್ಧವೇ ಆರೋಪಿಗಳು ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ. ಸರ್ಕಾರಿ ಅಭಿಯೋಜಕ ವಕೀಲ ಶೇಖರ್ ಕಾಕಾಸಾಹೇಬ್...

The post ಸರ್ಕಾರಿ ಅಭಿಯೋಜಕರ ವಿರುದ್ದವೇ ಈIಖ ದಾಖಲಿಸಿದ ಆರೋಪಿಗಳು: ಕಾರಣ…? appeared first on Law Guide Kannada.

]]>
ನವದೆಹಲಿ: ಸರ್ಕಾರಿ ಅಭಿಯೋಜಕರ ವಿರುದ್ಧವೇ ಆರೋಪಿಗಳು ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.

ಸರ್ಕಾರಿ ಅಭಿಯೋಜಕ ವಕೀಲ ಶೇಖರ್ ಕಾಕಾಸಾಹೇಬ್ ಜಗತಾಪ್ ತನ್ನ ವಿರುದ್ಧ ಆರೋಪಿಗಳು ದಾಖಲಿಸಿರುವ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಮುಂಬೈ ಹೈಕೋರ್ಟ್ ಗೆ ಸೂಚಿಸಿದೆ.

ವಕೀಲ ಶೇಖರ್ ಕಾಕಾಸಾಹೇಬ್ ಜಗತಾಪ್ ಅವರ ಪರ ಹಾಜರಾಗಿ ವಾದಿಸಿದ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ಸಿಜೆಐ ಬಿಆರ್.ಗವಾಯಿ ಮತ್ತು ನ್ಯಾಯಮೂತಿ ಕೆ.ವಿನೋದ್ ಚಂದ್ರನ್ ಅವರಿರುವ ಪೀಠದ ಮುಂದೆ ವಿವರ ನೀಡಿದರು.

ಅರ್ಜಿದಾರ ಅಭಿಯೋಜಕರಾದ ಜಗತಾಪ್ ಅವರು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹಾಗೂ ಉದ್ಯಮಿ ಸಂಜಯ್ ಪುನಮಿಯಾ ವಿರುದ್ಧ ಸುಂದರ್ ಅಗರ್ವಾಲ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಅಭಿಯೋಜಕರಾಗಿದ್ದಾರೆ ಎಂದು ತಿಳಿಸಿದರು.

ಇದರ ರದ್ದತಿಗೆ ಜಗತಾಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಮತ್ತೊಬ್ಬರು ನ್ಯಾಯಮೂರ್ತಿಗಳಿಗೆ ಪ್ರಕರಣ ನಿಯೋಜಿಸಲಾಗಿದ್ದು, ಒಂದು ವರ್ಷದಿಂದ ಪ್ರಕರಣ ಬಾಕಿ ಇದೆ ಎಂದು ಪೀಠದ ಗಮನಕ್ಕೆ ತಂದರು. ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿರುವ ಪೀಠದಿಂದ ಪ್ರಕರಣವನ್ನು ವಾಪಾಸ್ ಮಾಡಿ ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಸೂಚಿಸಿತು.

ಪರಮ್ ಬೀರ್ ಸಿಂಗ್ ವಿರುದ್ಧದ ಪ್ರಕರಣದ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಿರುವ ದಾಖಲೆಗಳು ನಕಲಿ ಎಂದು ಜಗತಾಪ್ ವಿರುದ್ಧದ ಎಫ್ಐಆರ್ ನಲ್ಲಿ ಆರೋಪಿಗಳು ವಾದಿಸಿದ್ದಾರೆ.

ತಮ್ಮ ವಿರುದ್ಧ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದಲ್ಲಿಯೂ ಹಲವು ದೂರುಗಳನ್ನು ಪುನಾಮಿಯಾ ದಾಖಲಿಸಿದ್ದು, ಇವು ತಿರಸ್ಕೃತವಾಗಿದೆ. ಎಂದು ಜಗತಾಪ್ ವಿವರಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸದೇ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಕಳೆದ 23 ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿರುವ ತಮ್ಮನ್ನು ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಅಭಿಯೋಜಕರ ಪಟ್ಟಿಗೆ ಸೇರಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಸರ್ಕಾರಿ ಅಭಿಯೋಜಕರ ವಿರುದ್ದವೇ ಈIಖ ದಾಖಲಿಸಿದ ಆರೋಪಿಗಳು: ಕಾರಣ…? appeared first on Law Guide Kannada.

]]>
ಇನ್ಮುಂದೆ ಎಫ್ ಐಆರ್ ದಾಖಲಿಸಲು ಮೇಲಾಧಿಕಾರಿಯ ಅನುಮತಿ ಕಡ್ಡಾಯ https://www.lawguidekannada.com/permission-of-superior-officer-mandatory-for-filing-firs-from-now-on/ Fri, 25 Jul 2025 17:26:59 +0000 http://www.lawguidekannada.com/?p=2093 ಬೆಂಗಳೂರು: ರಾಜ್ಯದ ಪೊಲೀಸ್ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಎಫ್ ಐಆರ್ ದಾಖಲಿಸುವಾಗ ಇನ್ಮುಂದೆ ಮೇಲಾಧಿಕಾರಿಯ ಅನುಮತಿ ಪಡೆಯುವುದು ಕಡ್ಡಾಯ ಎಂದು...

The post ಇನ್ಮುಂದೆ ಎಫ್ ಐಆರ್ ದಾಖಲಿಸಲು ಮೇಲಾಧಿಕಾರಿಯ ಅನುಮತಿ ಕಡ್ಡಾಯ appeared first on Law Guide Kannada.

]]>
ಬೆಂಗಳೂರು: ರಾಜ್ಯದ ಪೊಲೀಸ್ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಎಫ್ ಐಆರ್ ದಾಖಲಿಸುವಾಗ ಇನ್ಮುಂದೆ ಮೇಲಾಧಿಕಾರಿಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಡಿಜಿ&ಐಜಿಪಿ ಡಾ.ಎಂ.ಎ ಸಲೀಂ ಆದೇಶ ಹೊರಡಿಸಿದ್ದಾರೆ.

ಹೌದು, ಇನ್ಮುಂದೆ ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಪರಾಧಿಕ ಕಲಂಗಳಾದ 304, 103(2), 111 ಮತ್ತು 113(ಬಿ)ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಡಿಜಿ-ಐಜಿಪಿ ಡಾ.ಎಂ.ಎ ಸಲೀಂ ಆದೇಶಿಸಿದ್ದಾರೆ.

ಈ ಕುರಿತು ಎಲ್ಲಾ ಘಟಕಾಧಿಕಾರಿಗಳಿಗೆ ಡಿಜಿ-ಐಜಿಪಿ ಡಾ.ಎಂ.ಎ ಸಲೀಂ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತ ನ್ಯಾಯ ಸಂಹಿತೆಯ 304, 103(2), 111 & 113(ಬಿ) ಗಳನ್ನು ಅಳವಡಿಸಿಕೊಳ್ಳುವ ಮೊದಲು, ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆದುಕೊಳ್ಳುವುದು. ಈ ಸುತ್ತೋಲೆಯಾನುಸಾರ ಕರ್ನಾಟಕ ರಾಜ್ಯದ ಠಾಣಾಧಿಕಾರಿಗಳಿಗೆ ಹಾಗೂ ತನಿಖಾಧಿಕಾರಿಗಳಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ

ದೂರುದಾರರು ಸಲ್ಲಿಸುವ ದೂರನ್ನು ಸ್ವೀಕರಿಸಿದಾಗ, ಅದರಲ್ಲಿ ಭಾರತ ನ್ಯಾಯ ಸಂಹಿತೆ-2023 ರ ಅಪರಾಧಿಕ ಕಲಂ ಗಳಾದ 304, 103(2), 111 & 113(ಬಿ) ಗಳ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತವೆಯೇ ಎಂಬುದನ್ನು ಪರಿಶೀಲಿಸುವುದು. ಸದರಿ ದೂರಿನಲ್ಲಿ ಮೇಲ್ಕಾಣಿಸಿದ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ಠಾಣಾಧಿಕಾರಿಗೆ ಅಥವಾ ತನಿಖಾಧಿಕಾರಿಗಳಿಗೆ ಕಂಡುಬಂದಾಗ ತನ್ನ ಅಭಿಪ್ರಾಯ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ, ಸದರಿ ಅನ್ವಯವಾಗುವ ಕಲಂಗಳನ್ನು ಪ್ರಥಮ ವರ್ತಮಾನ ವರದಿಯಲ್ಲಿ ಅಥವಾ ತನಿಖೆಯಲ್ಲಿ ಅಳವಡಿಸಿಕೊಳ್ಳಲು ಅನುಮೋದಿಸುವಂತೆ ಕೋರಬೇಕು.

ಸದರಿ ಅಭಿಪ್ರಾಯ ವರದಿ ಹಾಗೂ ಕೋರಿಕೆಯನ್ನು ಸ್ವೀಕರಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಮೇಲ್ನೋಟಕ್ಕೆ ದೂರಿನಲ್ಲಿ ಹಾಗೂ ತನಿಖೆಯಲ್ಲಿ ಸದರಿ ಅಪರಾಧಗಳ ಅಂಶಗಳು ಮೇಲ್ನೋಟಕ್ಕೆ ಕಂಡುಬಂದರೆ ಅಂತಹ ಕಲಂಗಳನ್ನು ಅಳವಡಿಸಿಕೊಳ್ಳಲು ಅನುಮೋದನೆಯನ್ನು ನೀಡುವುದು. ಸದರಿ ಅನುಮೋದನೆಯ ನಂತರ ಠಾಣಾಧಿಕಾರಿ | ತನಿಖಾಧಿಕಾರಿಯು ಅನುಮೋದಿತ ಅಪರಾಧಿಕ ಕಲಂಗಳನ್ನು ಪ್ರಥಮ ವರ್ತಮಾನ ವರದಿ | ತನಿಖೆಯಲ್ಲಿ ಅಳವಡಿಸಿಕೊಂಡು, ತನಿಖೆಯನ್ನು ಕೈಗೊಳ್ಳುವುದು.

ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮೇಲ್ಪಟ್ಟು ಹಾಗೂ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಬಂಧಿಸಿದ ವಿಭಾಗದ ಉಪ ಪೊಲೀಸ್ ಆಯುಕ್ತರನ್ನೊಳಗೊಂಡಂತೆ ಮೇಲಾಧಿಕಾರಿಗಳು 304, 103(2) & 111 ಅನುಮೋದನೆಯನ್ನು ನೀಡುವಂತ ಅಧಿಕಾರಿಗಳಾಗಿರುತ್ತಾರೆ.

ಕಲಂ, 113(ಬಿ) ಗೆ ಸಂಬಂಧಿಸಿದಂತೆ ಅನುಮೋದನೆ ನೀಡುವ ಅಧಿಕಾರಿಯು, ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧೀಕ್ಷಕರು ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಉಪ ಪೊಲೀಸ್ ಆಯುಕ್ತರು ಒಳಗೊಂಡಂತೆ ಮೇಲಾಧಿಕಾರಿಗಳು ಆಗಿರುತ್ತಾರೆ.

ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಅಥವಾ ಸಾರ್ವಜನಿಕ ಸುರಕ್ಷತೆಯ ತುರ್ತು ಸಂದರ್ಭಗಳಲ್ಲಿ ಲಿಖಿತವಾಗಿ ಕೋರಿಕೆಯನ್ನು ಸಲ್ಲಿಸಲು ಮತ್ತು ಅನುಮೋದನೆಯನ್ನು ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಆಗ ಸಂಬಂಧಿಸಿದ ಠಾಣಾಧಿಕಾರಿ, ತನಿಖಾಧಿಕಾರಿಗಳು ಮೌಖಿಕವಾಗಿ ತಮ್ಮ ಕೋರಿಕೆಯನ್ನು ಸಲ್ಲಿಸಿ, ಅನುಮೋದಿಸುವ ಹಿರಿಯ ಅಧಿಕಾರಿಯಿಂದ ಮೌಖಿಕವಾಗಿ ಅನುಮೋದನೆಯ ಆದೇಶವನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು. ತದನಂತರ 24 ಘಂಟೆಯೊಳಗಾಗಿ ಲಿಖಿತ ರೂಪದಲ್ಲಿ ಘಟನೋತ್ತರ ಅನುಮೋದನೆಯನ್ನು ಘಟಕದ ಮುಖ್ಯಸ್ಥರು ಮೇಲ್ಕಂಡ ಎಲ್ಲಾ ಕ್ರಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಪ್ರತಿ ಅಪರಾಧ ವಿಶ್ಲೇಷಣಾ ಸಭೆಗಳಲ್ಲಿ ಈ ಈ ಕ್ರಮಗಳು ಪಾಲನೆಯಾಗುತ್ತಿರುವುದನ್ನು ಪರಿಶೀಲಿಸಿಕೊಳ್ಳುವುದು.

ಘಟಕಾಧಿಕಾರಿಗಳು ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕೂಡಲೇ ಅನುಷ್ಠಾನಗೊಳಿಸಿ, ಅನುಸರಿಸಲು ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳು, ವಿಶೇಷ ಘಟಕಗಳು ಮತ್ತು ತನಿಖಾ ತಂಡಗಳಿಗೆ ಸೂಚಿಸುವಂತೆ ಡಿಜಿ&ಐಜಿಪಿ ಸಲೀಂ ಸೂಚಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಇನ್ಮುಂದೆ ಎಫ್ ಐಆರ್ ದಾಖಲಿಸಲು ಮೇಲಾಧಿಕಾರಿಯ ಅನುಮತಿ ಕಡ್ಡಾಯ appeared first on Law Guide Kannada.

]]>
FAKE CASE: 50 ಸಾವಿರ ರೂ. ಪರಿಹಾರ ಹಿಂದಿರುಗಿಸಿ ಮುಚ್ಚಳಿಕೆ ಬರೆದುಕೊಟ್ಟ RTI ಕಾರ್ಯಕರ್ತ… https://www.lawguidekannada.com/fake-case-rs-50000-rti-worker-who-returned-the-compensation-and-wrote-a-cover-letter/ Sun, 17 Nov 2024 05:00:45 +0000 http://www.lawguidekannada.com/?p=1037 ಕೊಳ್ಳೇಗಾಲ: ಆರ್ ಟಿಐ ಕಾರ್ಯಕರ್ತರೊಬ್ಬರು ಸುಳ್ಳು ಪ್ರಕರಣ ದಾಖಲಿಸಿ ಪಡೆದಿದ್ದ 50 ಸಾವಿರ ರೂ.ಪರಿಹಾರವನ್ನ ವಾಪಸ್ ನೀಡಿ ನ್ಯಾಯಾಧೀಶರ ಮುಂದೆ...

The post FAKE CASE: 50 ಸಾವಿರ ರೂ. ಪರಿಹಾರ ಹಿಂದಿರುಗಿಸಿ ಮುಚ್ಚಳಿಕೆ ಬರೆದುಕೊಟ್ಟ RTI ಕಾರ್ಯಕರ್ತ… appeared first on Law Guide Kannada.

]]>
ಕೊಳ್ಳೇಗಾಲ: ಆರ್ ಟಿಐ ಕಾರ್ಯಕರ್ತರೊಬ್ಬರು ಸುಳ್ಳು ಪ್ರಕರಣ ದಾಖಲಿಸಿ ಪಡೆದಿದ್ದ 50 ಸಾವಿರ ರೂ.ಪರಿಹಾರವನ್ನ ವಾಪಸ್ ನೀಡಿ ನ್ಯಾಯಾಧೀಶರ ಮುಂದೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಎಂಬುವವರು ಜಾತಿನಿಂದನೆಯ ಎರಡು ಸುಳ್ಳು ಪ್ರಕರಣ ದಾಖಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ Rs 50 ಸಾವಿರ ಪರಿಹಾರ ಪಡೆದಿದ್ದರು.

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ‘ಜಮೀನಿನ ವಿವಾದ ಸಂಬಂಧ ಕುಣಗಳ್ಳಿ ಗ್ರಾಮದ ಶ್ರೀನಿವಾಸ ಎಂಬುವರು ನನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಗೆಯೇ ‘ಜಮೀನು ವಿವಾದದಲ್ಲಿ ಕುಣಗಳ್ಳಿ ಗ್ರಾಮದ ದೊಡ್ಡಮಾದಶೆಟ್ಟಿ ಎಂಬವರು ನನ್ನನ್ನು ಜಾತಿನಿಂದನೆ ಮಾಡಿದ್ದಾರೆ’ ಎಂದು ಲಿಂಗರಾಜು ಅಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದರು. ಎರಡು ಜಾತಿನಿಂದನೆ ಪ್ರಕರಣಗಳಲ್ಲಿ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ದೆ’ ಅನ್ವಯ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅನುಮೋದನೆ, ಪೊಲೀಸ್‌ ಎಫ್‌ಐಆರ್‌ ಆಧರಿಸಿ, ಎರಡು ಪ್ರಕರಣದಲ್ಲಿ ಪರಿಹಾರದ ಮೊದಲನೇ ಕಂತು ತಲಾ Rs 25 ಸಾವಿರದಂತೆ ಒಟ್ಟು ₹50 ಸಾವಿರ ಮೊತ್ತವನ್ನು ಲಿಂಗರಾಜು ಪಡೆದುಕೊಂಡಿದ್ದರು.

ಡಿವೈಎಸ್ಪಿ ಧರ್ಮೆಂದ್ರ ಎರಡೂ ಪ್ರಕರಣಗಳ ತನಿಖೆ ನಡೆಸಿ ಅವುಗಳು ಸುಳ್ಳು ಎಂದು ಅರಿತು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಿಗೆ ಬಿ-ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ನ್ಯಾಯಾಧೀಶರು ಲಿಂಗರಾಜು ಪರಿಹಾರವಾಗಿ ಪಡೆದ ₹50 ಸಾವಿರವನ್ನು ಸರ್ಕಾರಕ್ಕೆ ಹಿಂತಿರುಗಿಸುವಂತೆ ಆದೇಶಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ಖಾತೆಗೆ ಪಾವತಿಸುವಂತೆ ಸೂಚನೆ ನೀಡಿದ್ದರೂ ಪಾವತಿಸದೆ ವಿಳಂಬ ಮಾಡಿದ್ದರು. ನ್ಯಾಯಾಧೀಶರ ಆದೇಶವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮನಗಂಡ ನ್ಯಾಯಾಧೀಶರು ಲಿಂಗರಾಜು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದರು.

‘ಲಿಂಗರಾಜು ಅವರಿಗೆ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಪ್ರಕರಣ ದಾಖಲಿಸಿಕೊಂಡು ಪಡೆದಿದ್ದ ಪರಿಹಾರ ಧನ ಸರ್ಕಾರಕ್ಕೆ ವಾಪಸ್‌ ಮಾಡಬೇಕು. ಇಲ್ಲವಾದರೆ ಜೈಲಿಗೆ ಕಳುಹಿಸಬೇಕು’ ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ಇದೀಗ ಆರ್ ಟಿಐ ಕಾರ್ಯಕರ್ತ ಲಿಂಗರಾಜು 50 ಸಾವಿರ ರೂ ಹಣವನ್ನು ಸರ್ಕಾರಕ್ಕೆ ವಾಪಸ್ ಜಮಾ ಮಾಡಿ ‘ಇನ್ನು ಮುಂದೆ ಸರ್ಕಾರಿ ಇಲಾಖೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕುವುದಿಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ರಾಜ್ಯ ಹೈಕೋರ್ಟ್‌ ಗೆ ಮುಚ್ಚಳಿಕೆ ಸಲ್ಲಿಸಿದ ಲಿಂಗರಾಜು, ‘ಮಾಹಿತಿ ಹಕ್ಕು ಅರ್ಜಿ ಹಾಗೂ ಸಾಮಾನ್ಯ ಅರ್ಜಿಗಳ ಮೂಲಕ ಅಧಿಕಾರಿಗಳಿಗೆ ಅನಗತ್ಯ ಕಿರುಕುಳವನ್ನು ನೀಡುವುದಿಲ್ಲ. ಒಂದು ವೇಳೆ ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಬಹುದು’ ಎಂದು ಕ್ಷಮೆ ಕೋರಿ ಮುಚ್ಚಳಿಕೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇಬ್ಬರು ವ್ಯಕ್ತಿಗಳ ಶೂರಿಟಿ ಪಡೆದು, ಎಚ್ಚರಿಕೆ ನೀಡಿ ನ್ಯಾಯಾಧೀಶರಾದ ಭಾರತಿ ಅವರು ಆದೇಶಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post FAKE CASE: 50 ಸಾವಿರ ರೂ. ಪರಿಹಾರ ಹಿಂದಿರುಗಿಸಿ ಮುಚ್ಚಳಿಕೆ ಬರೆದುಕೊಟ್ಟ RTI ಕಾರ್ಯಕರ್ತ… appeared first on Law Guide Kannada.

]]>