Free Legal Aid Archives - Law Guide Kannada https://www.lawguidekannada.com/tag/free-legal-aid/ Online Guide Thu, 24 Oct 2024 06:48:21 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Free Legal Aid Archives - Law Guide Kannada https://www.lawguidekannada.com/tag/free-legal-aid/ 32 32 ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ https://www.lawguidekannada.com/free-legal-aid-is-a-fundamental-right-of-everyone-supreme-court/ Thu, 24 Oct 2024 06:48:21 +0000 http://www.lawguidekannada.com/?p=921 ನವದೆಹಲಿ: ಸಂವಿಧಾನದ ವಿಧಿ 21ರ ಅನ್ವಯ ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರಿಗೆ ಒದಗಿಸುವ ಕಾನೂನು...

The post ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ appeared first on Law Guide Kannada.

]]>
ನವದೆಹಲಿ: ಸಂವಿಧಾನದ ವಿಧಿ 21ರ ಅನ್ವಯ ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರಿಗೆ ಒದಗಿಸುವ ಕಾನೂನು ನೆರವು ಕಳಪೆ ಕಾನೂನು ನೆರವಾಗಿರಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕೈದಿಗೂ ಕೂಡ ಕಾನೂನು ನೆರವು ಪಡೆಯುವ ಮೂಲಭೂತ ಹಕ್ಕಿದೆ. ಬಡವರು ಎಂಬ ಕಾರಣಕ್ಕೆ, ಅವರಿಗೆ ಒದಗಿಸುವ ಕಾನೂನು ನೆರವು ಕಡಿಮೆ ಗುಣಮಟ್ಟದ್ದಾಗಿ ಇರಕೂಡದು. ಈ ಅಂಶವನ್ನು ಸಂವಿಧಾನದ 21ನೇ ವಿಧಿಯಡಿ ಗುರುತಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ಸುಹಾಸ್ ಚಕ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಪೀಠ, ವಿಚಾರಣಾ ಕೈದಿಗಳು ಅಥವಾ ಅಪರಾಧಿಗಳು ಇರಲಿ ಎಲ್ಲ ಕೈದಿಗಳಿಗೆ ಉಚಿತ ಕಾನೂನು ನೆರವು ಸಿಗುವಂತಾಗಬೇಕು ಎಂದ ನ್ಯಾಯಪೀಠ, ವಿಚಾರಣಾಧೀನ ಕೈದಿಗಳು ಅಥವಾ ಅಪರಾಧಿಗಳು ಕಾನೂನು ಸೇವಾ ಪ್ರಾಧಿಕಾರಗಳ ಕಾಯ್ದೆ, 1987ರ ಅಡಿ ಉಚಿತ ಕಾನೂನು ನೆರವು ಪಡೆಯುವುದನ್ನು ಮತ್ತಷ್ಟು ಸಬಲಗೊಳಿಸಲು ತನ್ನ ತೀರ್ಪಿನಲ್ಲಿ ಸರಣಿ ನಿರ್ದೇಶನಗಳನ್ನು ನೀಡಿತು.

ಈ ಕುರಿತಂತೆ ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳು ಪ್ರಾಯೋಜಿಸುವ ಫಲಾನುಭವಿ ಯೋಜನೆಗಳು ದೇಶದ ಪ್ರತಿ ಮೂಲೆಯನ್ನೂ ತಲುಪುವಂತೆ ಮಾಡಬೇಕು. ನಿರ್ದಿಷ್ಟವಾಗಿ ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸಬೇಕು” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸೂಚಿಸಿದೆ.

ವಿವಿಧ ಹಂತಗಳಲ್ಲಿ ಕಾನೂನು ನೆರವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಮುಂದುವರಿಸಬೇಕು. ಪೊಲೀಸ್ ಠಾಣೆಗಳು ಅಂಚೆ ಕಚೇರಿಗಳು ಬಸ್ ಮತ್ತು ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹತ್ತಿರದ ಕಾನೂನು ನೆರವು ಘಟಕ/ಕಚೇರಿಗಳ ವಿಳಾಸ ಸಂಪರ್ಕ ಸಂಖ್ಯೆ ಪ್ರದರ್ಶಿಸಬೇಕು. ಮಾಹಿತಿಯು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ನಲ್ಲಿ ಇರಬೇಕು ಹಾಗೆಯೇ ಕಾನೂನು ನೆರವು ಕುರಿತ ಮಾಹಿತಿ ಒಳಗೊಂಡ ಕಿರುಪುಸ್ತಕಗಳನ್ನು ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ವ್ಯಾಪಕ ಪ್ರಚಾರ ಮಾಡಬೇಕು. ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಸಿಗುವ ಪ್ರಯೋಜನ ಕುರಿತು ದೇಶದಾದ್ಯಂತ ಪ್ರಚಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ appeared first on Law Guide Kannada.

]]>