High Court Archives - Law Guide Kannada https://www.lawguidekannada.com/tag/high-court/ Online Guide Thu, 29 Jan 2026 15:02:46 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg High Court Archives - Law Guide Kannada https://www.lawguidekannada.com/tag/high-court/ 32 32 ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…! https://www.lawguidekannada.com/only-the-supreme-court-and-high-courts-have-the-power-to-impose-life-imprisonment-sessions-courts-do-not/ Thu, 29 Jan 2026 15:02:20 +0000 https://www.lawguidekannada.com/?p=3317 ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ...

The post ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…! appeared first on Law Guide Kannada.

]]>
ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೆ ಮಾತ್ರ ಇದೆ ಆದರೆ ಈ ಅಧಿಕಾರ ಸೆಷನ್ಸ್ ಕೋರ್ಟ್ಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿ ಶಿವಮೊಗ್ಗದ ರುದ್ರೇಶ್ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯ ತನಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮತ್ತು ನ್ಯಾ.ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠವು ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗಳಿಗೆ ಇಲ್ಲ ಎಂದು ತೀರ್ಪು ಪ್ರಕಟಿಸಿದೆ. ಆರೋಪಿಗೆ ಅಧೀನ ನ್ಯಾಯಾಲಯ 2017ರ ನ.27ರಂದು ನೀಡಿದ್ದ ಜೀವನ ಪರ್ಯಂತ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್ ನ್ಯಾಯಪೀಠವು, ಜೀವಾವಧಿ ಶಿಕ್ಷೆಯನ್ನು ಮಾತ್ರ ವಿಧಿಸಿದೆ.

2025ರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ‘ಕಿರಣ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದಲ್ಲಿ ಸಿಆರ್ಪಿಸಿ ಸೆಕ್ಷನ್ 428ರ ಪ್ರಕಾರ ಯಾವುದೇ ವಿನಾಯಿತಿ ಇಲ್ಲದೆ ಜೀವಾವಧಿ (ಜೀವನ ಪರ್ಯಂತ ಜೈಲು)ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ನೀಡಲಾಗಿದೆಯೇ ಹೊರತು ಸೆಷನ್ಸ್ ನ್ಯಾಯಾಲಯಗಳಿಗಲ್ಲಎಂದು ಆದೇಶಿಸಿತ್ತು.

ಇದನ್ನು ಆಧರಿಸಿ ಈಗ ಹೈಕೋರ್ಟ್ ನ್ಯಾಯಪೀಠವು, ಸೆಷನ್ಸ್ ಕೋರ್ಟ್ ಗಳಿಗೆ ಅಂತಹ ಅಧಿಕಾರ ಇಲ್ಲವೆಂದು ತೀರ್ಪು ನೀಡಿದ್ದು ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸೆಷನ್ಸ್ ಕೋರ್ಟ್ ಗಳು ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಕೇವಲ ಜೀವಾವಧಿ ಶಿಕ್ಷೆ ವಿಧಿಸಬಹುದೇ ಹೊರತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಲಾಗದು. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಬಹುದು.

ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡಗಳನ್ನು ಅನ್ವಯಿಸಿದರೆ ವಿಚಾರಣಾಧೀನ ನ್ಯಾಯಾಲಯ ಅಪರಾಧಿಗೆ ಯಾವುದೇ ವಿನಾಯಿತಿ ಇಲ್ಲದೆ ಜೀವನ ಪರ್ಯಂತ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಬೇಕಾಗಿದೆ. ಅದರಂತೆ ಆದೇಶ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದೆ.

ಏನಿದು ಪ್ರಕರಣ
ಶಿರಸಿ ಸಮೀಪದ ಅಲವಳ್ಳಿಯವರಾದ ದೂರುದಾರ ಮಹಿಳೆ ಕುಮಾರಸ್ವಾಮಿ ಎಂಬುವರನ್ನು 2011ರಲ್ಲಿವಿವಾಹವಾಗಿದ್ದರು. ಪತಿ ಪುಣೆಯಲ್ಲಿಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಮೂರೂವರೆ ವರ್ಷದ ಸೃಜಯ ಎಂಬ ಪುತ್ರನಿದ್ದನು. ಮಹಿಳೆ ತನ್ನ ತವರು ಮನೆಗೆ ಬಂದಾಗಲೆಲ್ಲಾ ಮೂಲೆಗದ್ಡೆ ಮಠಕ್ಕೆ ಬರುವುದು ವಾಡಿಕೆ. ಅದೇ ರೀತಿ 2017ರ ಏ.8ರಂದು ಆಕೆ ಮಗನೊಡನೆ ಹೊಸ ಸ್ವಾಮೀಜಿಯ ಪೀಠಾರೋಹಣ ಕಾರ್ಯಕ್ರಮದ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದರು. ಅದೇ ಮಠದಲ್ಲಿಆರೋಪಿ ರುದ್ರೇಶ್ ಕೆಲಸ ಮಾಡುತ್ತಿದ್ದನು.

ದೂರುದಾರ ಮಹಿಳೆ ತನ್ನ ತಾಯಿ ಮಗನೊಂದಿಗೆ ಏಪ್ರಿಲ್ 10ರಂದು ರಾತ್ರಿ ಮಠದಲ್ಲಿಯೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಗು ಕಾಣೆಯಾಗಿತ್ತು. ನಂತರ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ತನಿಖೆಯ ವೇಳೆ ಆರೋಪಿ ಹಿಂದಿನ ದಿನ ರಾತ್ರಿ ಸಾಂಬಾರ್ ನಲ್ಲಿ ನಿದ್ರೆ ಮಾತ್ರೆ ಹಾಕಿದ್ದ, ಬಳಿಕ ಗಾಢ ನಿದ್ರೆಯಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿ ಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಎನ್ನಲಾಗಿತ್ತು. ಆರೋಪಿ ಒಡವೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಆ ಕುರಿತು ಮಹಿಳೆ ಬುದ್ಧಿವಾದ ಹೇಳಿದ್ದರಿಂದ ಆಕೆಯ ಬಗ್ಗೆ ಆರೋಪಿ ದ್ವೇಷ ಬೆಳೆಸಿಕೊಂಡು ಈ ಕೃತ್ಯ ಎಸಗಿದ್ದ ಎನ್ನಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…! appeared first on Law Guide Kannada.

]]>
ನ್ಯಾಯಾಲಯದ ವೆಬ್ ಸೈಟ್ ನಲ್ಲಿ ತದ್ವಿರುದ್ಧ ತೀರ್ಪು: ತನಿಖೆ ನಡೆಸಲು ಆದೇಶಿಸಿದ ಹೈಕೋರ್ಟ್ https://www.lawguidekannada.com/contradictory-verdict-on-court-website-high-court-orders-probe/ Tue, 15 Oct 2024 01:03:15 +0000 http://www.lawguidekannada.com/?p=887 ಬೆಂಗಳೂರು: ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಎರಡು ತದ್ವಿರುದ್ಧ ತೀರ್ಪುಗಳು ಪ್ರಕಟವಾಗಿರುವ ಘಟನೆ ಉತ್ತರ...

The post ನ್ಯಾಯಾಲಯದ ವೆಬ್ ಸೈಟ್ ನಲ್ಲಿ ತದ್ವಿರುದ್ಧ ತೀರ್ಪು: ತನಿಖೆ ನಡೆಸಲು ಆದೇಶಿಸಿದ ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಎರಡು ತದ್ವಿರುದ್ಧ ತೀರ್ಪುಗಳು ಪ್ರಕಟವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಈ ಸಂಬಂಧ ತನಿಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಈ ತದ್ವಿರುದ್ಧ ತೀರ್ಪು ಪ್ರಕಟವಾಗಿದೆ. ಕೋರ್ಟ್ ವೆಬ್ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿರುವ ಒಂದು ಆದೇಶದಲ್ಲಿ ನ್ಯಾಯಾಧೀಶರ ಸಹಿ ಇದೆ. ಮತ್ತೊಂದರಲ್ಲಿ ಸಹಿ ಇರಲಿಲ್ಲ.

ಈ ಬಗ್ಗೆ ಪರೂಲ್ ಅಗರ್ವಾಲ್ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾ. ಸೌರಭ್ ಶ್ಯಾಮ್ ಸಂಶೇರಿ ಅವರಿದ್ದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ಅವರ ನಡತೆಗೆ ಸಂಬಂಧಿಸಿದಂತೆ ಅವರು ಹೆಚ್ಚು ಜಾಗರೂಕರಾಗಿರಲಿಲ್ಲ ಎನ್ನುವುದನ್ನು ಗಮನಿಸಿತು.. ಹಾಗೆಯೇ ತದ್ವಿರುದ್ದ ಆದೇಶ ಅಪ್ ಲೋಡ್ ಮಾಡಲಾಗಿದ್ದರೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ದ ಇದುವರೆಗೆ ಯಾವುದೇ ತನಿಖೆ ನಡೆಸಿಲ್ಲ. ಇವರು ಯಾವ ಮ್ಯಾಜಿಸ್ಟ್ರೇಟ್ ಎಂದು ಹೈಕೋರ್ಟ್ ಗೆ ಮಾಹಿತಿ ಇದೆ. ಅವರ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವ್ಯತಿರಿಕ್ತ ಆದೇಶವನ್ನು ನಾನು ನೀಡುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ತಿಳಿಸಿದೆ.

ಈ ಮಧ್ಯೆ ಸಹಿ ಮಾಡದ ಆದೇಶದ ಪ್ರತಿಯಲ್ಲಿ ಮಾನಹಾನಿ ದೂರನ್ನು ರದ್ದು ಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಸಹಿ ಮಾಡಿದ ಆದೇಶದಲ್ಲಿ ಪ್ರತಿವಾದಿಗಳಿಗೆ ಐಪಿಸಿ ಸೆಕ್ಷನ್ 500ರ ಅನ್ವಯ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ನ್ಯಾಯಾಲಯದ ವೆಬ್ ಸೈಟ್ ನಲ್ಲಿ ತದ್ವಿರುದ್ಧ ತೀರ್ಪು: ತನಿಖೆ ನಡೆಸಲು ಆದೇಶಿಸಿದ ಹೈಕೋರ್ಟ್ appeared first on Law Guide Kannada.

]]>
ಜಾಮೀನು ನೀಡುವ ವೇಳೆ ಆರೋಪಿಯ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಿ – ಹೈಕೋರ್ಟ್ ಸೂಚನೆ https://www.lawguidekannada.com/consider-socio-economic-condition-of-the-accused-while-granting-bail-high-court-notice/ Tue, 10 Sep 2024 06:05:01 +0000 https://www.lawguidekannada.com/?p=741 ಅಲಹಾಬಾದ್: ಜಾಮೀನು ಕೋರಿದ ಆರೋಪಿಗಳ ಸಾಮಾಜಿಕ- ಆರ್ಥಿಕ ಸ್ಥಿತಿ ಲೆಕ್ಕಿಸದೆ ಮನಸೋಇಚ್ಛೆ ಜಾಮೀನು ಷರತ್ತುಗಳನ್ನು ವಿಧಿಸಬಾರದು. ಆರೋಪಿಗಳಿಗೆ ಜಾಮೀನು ನೀಡುವ...

The post ಜಾಮೀನು ನೀಡುವ ವೇಳೆ ಆರೋಪಿಯ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಿ – ಹೈಕೋರ್ಟ್ ಸೂಚನೆ appeared first on Law Guide Kannada.

]]>
ಅಲಹಾಬಾದ್: ಜಾಮೀನು ಕೋರಿದ ಆರೋಪಿಗಳ ಸಾಮಾಜಿಕ- ಆರ್ಥಿಕ ಸ್ಥಿತಿ ಲೆಕ್ಕಿಸದೆ ಮನಸೋಇಚ್ಛೆ ಜಾಮೀನು ಷರತ್ತುಗಳನ್ನು ವಿಧಿಸಬಾರದು. ಆರೋಪಿಗಳಿಗೆ ಜಾಮೀನು ನೀಡುವ ವೇಳೆ ಶ್ಯೂರಿಟಿ ನಿಗದಿ ಮಾಡುವ ಮುನ್ನ ಅವರ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲಾಗದ ಪರಿಸ್ಥಿತಿಯಿಂದಾಗಿ ಜೈಲಿನಲ್ಲಿಯೇ ಉಳಿದ್ದ ಆರೋಪಿ ಅರ್ಮಾನ್ ಮತ್ತೊಂದು ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಅಜಯ್ ಭಾನೋತ್ ಅವರಿದ್ದ ಪೀಠ, ಆರೋಪಿಗಳ ಜಾಮೀನು ಶ್ಯೂರಿಟಿ ನಿಗದಿಗೊಳಿಸುವಾಗ ಅವರ ಸಾಮಾಜಿಕ ಆರ್ಥಿಕ ಸ್ಥಿತಿ ಪರಿಗಣಿಸುವ ಸಂಬಂಧ ವಿವೇಚನೆ ಬಳಸುವುದು ವಿಚಾರಣಾ ನ್ಯಾಯಾಲಯಗಳ ಹೊಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಹಾಗೆಯೇ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಅವರಿಗೆ ಜಾಮೀನು ನೀಡುವಂತಿದ್ದರೆ, ಶ್ಯೂರಿಟಿ ವಿಧಿಸುವಾಗ ಎಚ್ಚರಿಕೆಯಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಬೇಕು. ಇಲ್ಲದಿದ್ದರೆ ಜಾಮೀನು ನೀಡಿ ಪ್ರಯೋಜನವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಜೊತೆಗೆ ನ್ಯಾಯಾಲಯಗಳು ಯಾಂತ್ರಿಕವಾಗಿ ಜಾಮೀನು ಷರತ್ತುಗಳನ್ನು ವಿಧಿಸಬಾರದು. ಕಠಿಣ ಷರತ್ತುಗಳನ್ನು ವಿಧಿಸುವುದರಿಂದ ಅರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಸುಪ್ರೀಂ ಕೋರ್ಟ್ ಅರ್ವಿಂದ್ ಸಿಂಗ್ ವರ್ಸಸ್ ಉತ್ತರ ಪ್ರದೇಶ ಪ್ರಕರಣದಲ್ಲಿ ಇಂತಹ ಸಂದರ್ಭಗಳಲ್ಲಿ ಜಾಮೀನು ಷರತ್ತುಗಳನ್ನು ವಿಧಿಸುವ ಕುರಿತಂತೆ ಮಾರ್ಗಸೂಚಿಗಳನ್ನು ಹಾಕಿಕೊಟ್ಟಿದೆ. ನ್ಯಾಯಾಲಯಗಳು ಸುಪ್ರೀಂ ನಿರ್ದೇಶನಗಳನ್ನು ಪಾಲಿಸುವಲ್ಲಿ ಎಚ್ಚರ ತಪ್ಪಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.

ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್, ಆರೋಪಿ ತನಿಖೆಗೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಿದ್ದು ತಪ್ಪಿಸಿಕೊಂಡು ಓಡಿ ಹೋಗುವ ಸಾಧ್ಯತೆಗಳಿಲ್ಲ..ಹೀಗಾಗಿ ಆತನಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಅಗತ್ಯವಿಲ್ಲ, ಆರೋಪಿ/ಅರ್ಜಿದಾರ ಸಾಕ್ಷ್ಯ ನಾಶಪಡಿಸಬಾರದು ಅಥವಾ ಸಾಕ್ಷಿಯ ಮೇಲೆ ಪ್ರಭಾವ ಬೀರಬಾರದು ಮತ್ತು ನಿಗದಿತ ದಿನಾಂಕಗಳನ್ನು ನ್ಯಾಯಾಲಯದ ಒಪ್ಪಿಗೆ ಇಲ್ಲದೇ ಗೈರುಹಾಜರಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.

ಉಳಿದ ಪ್ರಕರಣಗಳಲ್ಲಿ ಆರೋಪಿ ಪಡೆದುಕೊಂಡಿರುವ ಜಾಮೀನು ಆದೇಶಗಳ ಜಾರಿಗೆ ಅಗತ್ಯ ನೆರವು ನೀಡುವಂತೆ ಜಿಲ್ಲಾ ಕಾನೂನು ಸೇವಾ ಸಮಿತಿಗೆ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಜಾಮೀನು ನೀಡುವ ವೇಳೆ ಆರೋಪಿಯ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಿ – ಹೈಕೋರ್ಟ್ ಸೂಚನೆ appeared first on Law Guide Kannada.

]]>
Central Government notifies new Chief Justices for four High Courts. https://www.lawguidekannada.com/central-government-notifies-new-chief-justices-for-four-high-courts/ Fri, 21 Jul 2023 16:55:38 +0000 https://www.lawguidekannada.com/?p=104 On July 5, the Supreme Court Collegium recommended the appointment of the judges as the...

The post Central Government notifies new Chief Justices for four High Courts. appeared first on Law Guide Kannada.

]]>
On July 5, the Supreme Court Collegium recommended the appointment of the judges as the Chief Justices of the respective High Courts. Justices Alok Aradhe, Subhasis Talapatra, Sunita Agarwal, The Central Government has notified the appointment of Chief Justices for four High Courts – Kerala, Orissa, Telangana and Gujarat.

The post Central Government notifies new Chief Justices for four High Courts. appeared first on Law Guide Kannada.

]]>