Indian Citizen Archives - Law Guide Kannada https://www.lawguidekannada.com/tag/indian-citizen/ Online Guide Wed, 03 Dec 2025 08:29:34 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Indian Citizen Archives - Law Guide Kannada https://www.lawguidekannada.com/tag/indian-citizen/ 32 32 ದೇಶದ ಸಂಪನ್ಮೂಲಗಳ ಮೇಲೆ ಭಾರತದ ನಾಗರೀಕರಿಗೆ ಹಕ್ಕಿದೆ, ಅಕ್ರಮ ವಲಸಿಗರಿಗೆ ಅಲ್ಲ- ಸುಪ್ರೀಂಕೋರ್ಟ್ https://www.lawguidekannada.com/indian-citizens-have-a-right-to-the-countrys-resources-not-illegal-immigrants-supreme-court/ Wed, 03 Dec 2025 08:29:34 +0000 https://www.lawguidekannada.com/?p=2963 ನವದೆಹಲಿ: ದೇಶದ ನಾಗರೀಕರ ಅಗತ್ಯಗಳನ್ನು ಬಲಿಕೊಟ್ಟು ವಲಸಿಗರಿಗೆ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕೇ? ಎಂದು ಖಾರವಾಗಿ ಪ್ರಶ್ನಿಸಿದ ಸುಪ್ರೀಂಕೋರ್ಟ್ ದೇಶದ...

The post ದೇಶದ ಸಂಪನ್ಮೂಲಗಳ ಮೇಲೆ ಭಾರತದ ನಾಗರೀಕರಿಗೆ ಹಕ್ಕಿದೆ, ಅಕ್ರಮ ವಲಸಿಗರಿಗೆ ಅಲ್ಲ- ಸುಪ್ರೀಂಕೋರ್ಟ್ appeared first on Law Guide Kannada.

]]>
ನವದೆಹಲಿ: ದೇಶದ ನಾಗರೀಕರ ಅಗತ್ಯಗಳನ್ನು ಬಲಿಕೊಟ್ಟು ವಲಸಿಗರಿಗೆ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕೇ? ಎಂದು ಖಾರವಾಗಿ ಪ್ರಶ್ನಿಸಿದ ಸುಪ್ರೀಂಕೋರ್ಟ್ ದೇಶದ ಸಂಪನ್ಮೂಲಗಳ ಮೇಲೆ ಭಾರತದ ನಾಗರೀಕರಿಗೆ ಹಕ್ಕಿದೆ, ಅಕ್ರಮ ವಲಸಿಗರಿಗೆ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಐದು ರೋಹಿಂಗ್ಯಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಲಾದ ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯಮಾಲ್ಯ ಬಾಗ್ಚಿ ಅವರು, ಅರ್ಜಿದಾರರ ವಕೀಲರು ರೋಹಿಂಗ್ಯಾಗಳನ್ನು “ಶರಣಾರ್ಥಿಗಳು” ಎಂದು ಉಲ್ಲೇಖಿಸಿದ್ದನ್ನು ತೀವ್ರವಾಗಿ ಖಂಡಿಸಿದರು.

ಈ ಹಿಂದೆ ಅಧಿಕಾರಿಗಳು ಬಂಧಿಸಿದ್ದ ಐದು ರೋಹಿಂಗ್ಯಾ ವಲಸಿಗರ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸುವಾಗ ಕೋರ್ಟ್ ಈ ಪ್ರಶ್ನೆ ಎತ್ತಿ ಹಿಡಿದಿದೆ.

ಭಾರತವು ಸೂಕ್ಷ್ಮ ಗಡಿ ಸಮಸ್ಯೆಗಳನ್ನು ಹೊಂದಿರುವ ದೇಶ. ಭಾರತೀಯ ನಾಗರಿಕರ ಅಗತ್ಯಗಳನ್ನು ಬಲಿಕೊಟ್ಟು ವಲಸಿಗರಿಗೆ ದೇಶದ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕೇ ಎಂದು ಸಿಜೆಐ ಸೂರ್ಯಕಾಂತ್ ಖಾರವಾಗಿ ಪ್ರಶ್ನಿಸಿದರು.

ನಮಗೆ ಉತ್ತರ ಭಾರತದ ಭಾಗದಲ್ಲಿ ಸೂಕ್ಷ್ಮ ಗಡಿ ಇದೆ. ದೇಶದೊಳಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆ ಎಂದು ನಾವು ಭಾವಿಸುತ್ತೇವೆ. ಅಕ್ರಮವಾಗಿ ಪ್ರವೇಶಿಸುವ ವಲಸಿಗರು ಇಲ್ಲಿಯ ಆಹಾರ, ಆಶ್ರಯ, ಮಕ್ಕಳಿಗೆ ಶಿಕ್ಷಣದ ಹಕ್ಕು ಇತ್ಯಾದಿಗಳಿಗೆ ಅರ್ಹರಾಗುತ್ತೀರಿ. ನಾವು ಕಾನೂನನ್ನು ಈ ರೀತಿ ವಿಸ್ತರಿಸಲು ಬಯಸುತ್ತೀರಿಯೇ? ನಮ್ಮ ಬಡ ಮಕ್ಕಳು ಪ್ರಯೋಜನಗಳಿಗೆ ಅರ್ಹರಲ್ಲವೇ? ಹೇಬಿಯಸ್ ಕಾರ್ಪಸ್ ಇತ್ಯಾದಿಗಳನ್ನು ಕೇಳುವುದು ತುಂಬಾ ಕಾಲ್ಪನಿಕವಾಗಿದೆ ಎಂದು ಹೇಳಿದರು.

ಅರ್ಜಿದಾರ ಪರ ವಾದ ಮಂಡಿಸಿದ ವಕೀಲರು, ವಲಸಿಗರ ಬಂಧನದಿಂದ ಕಣ್ಮರೆಯಾಗಿರುವುದನ್ನು ಪ್ರಶ್ನಿಸಲಾಗುತ್ತಿದೆಯೇ ಹೊರತು ಅವರನ್ನು ಭಾರತದಿಂದ ಹೊರಗೆ ಗಡಿಪಾರು ಮಾಡುವ ಸಾಧ್ಯತೆಯಿಲ್ಲ ಎಂದರು. ಇದಕ್ಕೆ ಮರು ಪ್ರಶ್ನೆ ಹಾಕಿ ಸಿಜೆಐ ಈ ವ್ಯಕ್ತಿಗಳು ನಿರಾಶ್ರಿತರು ಎಂದು ತೋರಿಸಲು ಯಾವುದೇ ಆಧಾರವಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

“ಈ ಅಕ್ರಮ ವಲಸಿಗರು ಭಾರತಕ್ಕೆ ಬಂದ ನಂತರ, ಅವರು ಆಹಾರ, ಆಶ್ರಯ ಮತ್ತು ತಮ್ಮ ಮಕ್ಕಳಿಗಾಗಿ ಸಹಾಯ ಕೇಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಅನೇಕ ಬಡವರಿದ್ದಾರೆ. ದೇಶದ ಸಂಪನ್ಮೂಲಗಳ ಮೇಲೆ ಅವರಿಗೆ ಹಕ್ಕಿದೆ, ಅಕ್ರಮ ವಲಸಿಗರಿಗೆ ಅಲ್ಲ. ನಿಜ, ಅಕ್ರಮ ವಲಸಿಗರನ್ನು ಚಿತ್ರಹಿಂಸೆಗೆ ಗುರಿಪಡಿಸಲಾಗುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೆಬಿಯಸ್ ಕಾರ್ಪಸ್ ಅರ್ಜಿಯ ನೆಪದಲ್ಲಿ, ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆಯ ವಿವರಗಳು, ಈ ವಿಷಯದ ಬಗ್ಗೆ ಭಾರತವು ಇತರ ದೇಶಗಳೊಂದಿಗೆ ನಡೆಸಿದ ಮಾತುಕತೆಗಳು ಮತ್ತು ಈ ವಿಷಯದ ಕಡತಗಳ ವಿಷಯಗಳನ್ನು ಬಹಿರಂಗಪಡಿಸಲು ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರೋಹಿಂಗ್ಯಾ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಇತರ ಪ್ರಕರಣಗಳ ವಿಚಾರಣೆಯನ್ನು ಡಿಸೆಂಬರ್ 16 ಕ್ಕೆ ಮುಂದೂಡಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ದೇಶದ ಸಂಪನ್ಮೂಲಗಳ ಮೇಲೆ ಭಾರತದ ನಾಗರೀಕರಿಗೆ ಹಕ್ಕಿದೆ, ಅಕ್ರಮ ವಲಸಿಗರಿಗೆ ಅಲ್ಲ- ಸುಪ್ರೀಂಕೋರ್ಟ್ appeared first on Law Guide Kannada.

]]>