Indian Penal Code Archives - Law Guide Kannada https://www.lawguidekannada.com/tag/indian-penal-code/ Online Guide Mon, 09 Sep 2024 15:26:59 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Indian Penal Code Archives - Law Guide Kannada https://www.lawguidekannada.com/tag/indian-penal-code/ 32 32 NDPS Act : ಪೊಲೀಸರು ವಶಪಡಿಸಿಕೊಂಡ ವಾಹನ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆಯೇ..? https://www.lawguidekannada.com/ndps-act-does-the-trial-court-have-authority-to-release-the-vehicle-seized-by-the-police/ Mon, 09 Sep 2024 15:26:59 +0000 https://www.lawguidekannada.com/?p=737 ಬೆಂಗಳೂರು: NDPS ಕಾಯಿದೆಯಡಿ ಪೊಲೀಸರು ವಶಪಡಿಸಿಕೊಂಡ ವಾಹನವನ್ನು ಷರತ್ತಿನ ಮೇಲೆ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಕರ್ನಾಟಕ...

The post NDPS Act : ಪೊಲೀಸರು ವಶಪಡಿಸಿಕೊಂಡ ವಾಹನ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆಯೇ..? appeared first on Law Guide Kannada.

]]>
ಬೆಂಗಳೂರು: NDPS ಕಾಯಿದೆಯಡಿ ಪೊಲೀಸರು ವಶಪಡಿಸಿಕೊಂಡ ವಾಹನವನ್ನು ಷರತ್ತಿನ ಮೇಲೆ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಿಂದ ಬಾಧಿತರಾದ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್ ನ ಕಲ್ಬುರ್ಗಿ ವಿಭಾಗೀಯ ಪೀಠದ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ
ಅರ್ಜಿದಾರರು ವೃತ್ತಿಪರ ಗೂಡ್ಸ್ ವಸ್ತುಗಳ ಸಾಗಣೆದಾರರಾಗಿದ್ದು,ಇವರು ದೇಶದ ವಿವಿಧೆಡೆ ಸರಕು ಸರಂಜಾಮುಗಳನ್ನು ಸಾಗಿಸುವ ವಾಣಿಜ್ಯ ಚಟುವಟಿಕೆಯಲ್ಲಿ ಕೆಲಸದಲ್ಲಿ ತೊಡಗಿದ್ದಾರೆ. ಪಂಜಾಬಿನ ಲುಧಿಯಾನದಿಂದ ತ್ರಿಪುರಾ ಹಾಗೂ ತಮಿಳುನಾಡಿನ ಕೊಯಮತ್ತೂರಿಗೆ ಸಿದ್ಧ ಉಡುಪಿ ಹಾಗೂ ಜವಳಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದು, ಇಂಡಿ ತಾಲೂಕಿನ ಚೆಕ್ಪೋಸ್ಟ್ ವೊಂದರಲ್ಲಿ ಈ ವಸ್ತುಗಳನ್ನು ಪರಿಶೀಲಿಸಿದಾಗ, ಗೂಡ್ಸ್ ವಾಹನದಲ್ಲಿ ಇದ್ದ ಮಾಲುಗಳಲ್ಲಿ 10 ಪ್ಯಾಕೆಟ್ ಗಾಂಜಾ ಹಾಗೂ ಮಾದಕ ವಸ್ತುಗಳಿದ್ದು, ಅದನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿತ್ತು. ಅಲ್ಲದೆ ಈ ಬಗ್ಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗಿತ್ತು.

ವಾಹನದ ಚಾಲಕರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ವಾಹನದ ಮಾಲೀಕರು ವಿಶೇಷ ನ್ಯಾಯಾಲಯದಲ್ಲಿ CrPC ಸೆಕ್ಷನ್ 457ರ ಅನ್ವಯ (ಭಾರತೀಯ ನ್ಯಾಯ್ ಸಂಹಿತ ಸೆಕ್ಷನ್ 497 ಮತ್ತು 503) ವಾಹನದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದರು. ಅದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತು. ಆ ಬಳಿಕ ಅರ್ಜಿದಾರರು ಡ್ರಗ್ಸ್ ಡಿಸ್ ಪೋಸಲ್ ಕಮಿಟಿ ಮುಂದೆ ವಾಹನ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದರು. ಅಬಕಾರಿ ಆಯುಕ್ತರ ಟಿಪ್ಪಣಿ ಕೋರಿ ಆ ಸಮಿತಿ ಅರ್ಜಿಯನ್ನು ಹಿಂಬರಹದೊಂದಿಗೆ ವಾಪಸ್ ಮಾಡಿತು. ಇದರಿಂದ ಬಾಧಿತರಾದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, CrPC ಸೆಕ್ಷನ್ 457, ಪ್ರಸಕ್ತ ಚಾಲ್ತಿಯಲ್ಲಿ ಇರುವ ಭಾರತೀಯ ನ್ಯಾಯ್ ಸಂಹಿತ ಸೆಕ್ಷನ್ 497 ಮತ್ತು 503ರ ಪ್ರಕಾರ ವಿಚಾರಣಾ ನ್ಯಾಯಾಲಯಕ್ಕೆ NDPS ಂಛಿಣನಡಿ ವಶಪಡಿಸಿದ ವಾಹನ ಬಿಡುಗಡೆ ಮಾಡಲು ಅಧಿಕಾರವಿದೆ ಎಂದು ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post NDPS Act : ಪೊಲೀಸರು ವಶಪಡಿಸಿಕೊಂಡ ವಾಹನ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆಯೇ..? appeared first on Law Guide Kannada.

]]>