Judges (Trial) Act 1968 Archives - Law Guide Kannada https://www.lawguidekannada.com/tag/judges-trial-act-1968/ Online Guide Mon, 12 Jan 2026 09:20:22 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Judges (Trial) Act 1968 Archives - Law Guide Kannada https://www.lawguidekannada.com/tag/judges-trial-act-1968/ 32 32 ಸಭಾಪತಿ ಕೆಲಸ ಉಪಸಭಾಪತಿ ನಿರ್ವಹಿಸಬಾರದೇಕೆ? ಸುಪ್ರೀಂ ಕೋರ್ಟ್ https://www.lawguidekannada.com/why-should-the-deputy-chairman-not-perform-the-duties-of-the-chairman-supreme-court/ Mon, 12 Jan 2026 09:20:22 +0000 https://www.lawguidekannada.com/?p=3212 ನವದೆಹಲಿ: ರಾಜ್ಯಸಭೆಯ ಉಪಸಭಾಪತಿಯು, ಸಭಾಪತಿಯ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಯಾಕೆ ನಿರ್ವಹಿಸಬಾರದು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ...

The post ಸಭಾಪತಿ ಕೆಲಸ ಉಪಸಭಾಪತಿ ನಿರ್ವಹಿಸಬಾರದೇಕೆ? ಸುಪ್ರೀಂ ಕೋರ್ಟ್ appeared first on Law Guide Kannada.

]]>
ನವದೆಹಲಿ: ರಾಜ್ಯಸಭೆಯ ಉಪಸಭಾಪತಿಯು, ಸಭಾಪತಿಯ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಯಾಕೆ ನಿರ್ವಹಿಸಬಾರದು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಾಂಕರ್ ದತ್ತಾ, ಎಸ್. ಸಿ ಶರ್ಮಾ ನೇತೃತ್ವದ ನ್ಯಾಯಪೀಠವು, 1968 ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯಡಿ ರಾಜ್ಯಸಭೆಯ ಉಪ ಸಭಾಪತಿಗೆ ನಿಲುವಳಿ ತಿರಸ್ಕರಿಸುವ ಅಧಿಕಾರ ಇಲ್ಲ, ಕೇವಲ ಸ್ಪೀಕರ್ ಮತ್ತು ಸಭಾಪತಿಗೆ ಮಾತ್ರ ನಿಲುವಳಿ ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಇದೆ ಎಂಬ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಪರವಾಗಿ ಮಾಡಿದ ಸಲ್ಲಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿತು.

ರಾಷ್ಟ್ರಪತಿಯ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪ ರಾಷ್ಟ್ರಪತಿಯವರು ನಿರ್ವಹಿಸಬಹುದಾದರೆ, ರಾಜ್ಯಸಭೆಯ ಉಪಸಭಾಪತಿಯು, ಸಭಾಪತಿಯ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ನಿರ್ವಹಿಸಬಾರದೇಕೇ ಎಂದು ಪ್ರಶ್ನಿಸಿತು.

ನ್ಯಾ.ಯಶವಂತ್ ವರ್ಮಾ ಅವರ ನವದೆಹಲಿಯಲ್ಲಿನ ಅಧಿಕೃತ ನಿವಾಸದಲ್ಲಿ ಕಳೆದ ವರ್ಷ ಮಾರ್ಚ್ 14ರಂದು ಬೆಂಕಿ ಅವಘಡ ನಡೆದು ಆ ವೇಳೆ ಸುಟ್ಟ ನೋಟಿನ ಚೂರುಗಳು ಪತ್ತೆಯಾಗಿದ್ದವು. ಅದರ ಬೆನ್ನಲ್ಲೇ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ಬದಲಿಸಲಾಗಿತ್ತು. ಈ ಸುದ್ದಿ ದೇಶದಲ್ಲೇ ಬಾರಿ ಚರ್ಚೆಯಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಸಭಾಪತಿ ಕೆಲಸ ಉಪಸಭಾಪತಿ ನಿರ್ವಹಿಸಬಾರದೇಕೆ? ಸುಪ್ರೀಂ ಕೋರ್ಟ್ appeared first on Law Guide Kannada.

]]>