Kerala High Court Bar Association Archives - Law Guide Kannada https://www.lawguidekannada.com/tag/kerala-high-court-bar-association/ Online Guide Tue, 04 Nov 2025 14:00:17 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Kerala High Court Bar Association Archives - Law Guide Kannada https://www.lawguidekannada.com/tag/kerala-high-court-bar-association/ 32 32 ವಕೀಲರಿಗೆ ಅವಾಚ್ಯ ಪದಗಳ ನಿಂದಸಿದ ಪೊಲೀಸ್ ಅಧಿಕಾರಿಗೆ ಜೈಲು ಶಿಕ್ಷೆ ಪ್ರಕಟ https://www.lawguidekannada.com/police-officer-sentenced-to-2-months-in-jail-for-abusing-a-lawyer/ Tue, 04 Nov 2025 14:00:17 +0000 http://www.lawguidekannada.com/?p=2665 ತಿರುವನಂತಪುರ: ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪೊಲೀಸ್ ಅಧಿಕಾರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ಕೇರಳ ಹೈಕೋರ್ಟ್ 2 ತಿಂಗಳ ಜೈಲು...

The post ವಕೀಲರಿಗೆ ಅವಾಚ್ಯ ಪದಗಳ ನಿಂದಸಿದ ಪೊಲೀಸ್ ಅಧಿಕಾರಿಗೆ ಜೈಲು ಶಿಕ್ಷೆ ಪ್ರಕಟ appeared first on Law Guide Kannada.

]]>
ತಿರುವನಂತಪುರ: ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪೊಲೀಸ್ ಅಧಿಕಾರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ಕೇರಳ ಹೈಕೋರ್ಟ್ 2 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಆಲತ್ತೂರಿನಲ್ಲಿ ಎಸ್ ಐ ರಿನೀಶ್ ಅವರು ವಕೀಲರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಕೇರಳ ಹೈಕೋರ್ಟ್ ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ನ್ಯಾಯಪೀಠ ಈ ಶಿಕ್ಷೆ ವಿಧಿಸಿದೆ.

ಅಲತ್ತೂರು ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ವಿ.ಆರ್. ರಿನೀಶ್ ವಕೀಲರೊಬ್ಬರಿಗೆ ನಿಂದಿಸಿದ್ದಾರೆಂ ಆರೋಪದಡಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು, ಪೊಲೀಸ್ ಅಧಿಕಾರಿಗೆ 2 ತಿಂಗಳು ಜೈಲು ಶಿಕ್ಷೆ ಪ್ರಕಟಿಸಿ ‘ಕಾನೂನು ವೃತ್ತಿಪರರನ್ನು ಅಗೌರವಿಸುವ ಪರಿಣಾಮಗಳ ಬಗ್ಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಈ ತೀರ್ಪು ಎಚ್ಚರಿಕೆಯಂತಿರಬೇಕು. ಈ ಪ್ರಕರಣ ಎಲ್ಲರಿಗೂ ಉದಾಹರಣೆಯಾಗಬೇಕು” ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಹಾಗೆಯೇ ಶಿಕ್ಷೆಯನ್ನು ಷರತ್ತಿನ ಮೇಲೆ ಅಮಾನತಿನಲ್ಲಿಟ್ಟಿರುವ ಹೈಕೋರ್ಟ್ ನ್ಯಾಯಪೀಠವು, ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮುಂದಿನ ಒಂದು ವರ್ಷ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಭಾಗಿಯಾದಲ್ಲಿ ಶಿಕ್ಷೆ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಪೊಲೀಸ್ ಅಧಿಕಾರಿ ಎಸ್ ಐ ರಿನೀಶ್ ಅವರು ಈ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆ ಯಾಚಿಸಿದ್ದರು. ಆದರೆ ಕ್ಷಮೆಯಾಚನೆ ಪ್ರಮಾಣಪತ್ರದಲ್ಲಿನ ಅಂಶಗಳು ಸೂಕ್ತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಬೇಷರತ್ ಕ್ಷಮೆ ಯಾಚಿಸುವುದಾಗಿ ಎರಡನೇ ಅಫಿಡವಿಟ್ ಸಲ್ಲಿಸಿದ್ದರು.

ಅದು ಕೂಡ ಸೂಕ್ತ ರೀತಿಯಲ್ಲಿರದ ಕಾರಣ ಮತ್ತು ನ್ಯಾಯಾಲಯಕ್ಕೆ ತೃಪ್ತಿಯಾಗದ ಹಿನ್ನೆಲೆಯಲ್ಲಿ 2 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜತೆಗೆ ಮುಂದಿನ ಒಂದು ವರ್ಷ ಇಂತಹ ಕೃತ್ಯಗಳು ಮರುಕಳಿಸದಂತೆ ಜವಾಬ್ದಾರಿಯುತವಾಗಿ ನಡೆದುಕೊಂಡಲ್ಲಿ ಮಾತ್ರ ಶಿಕ್ಷೆಯಿಂದ ಪಾರಾಗಬಹುದಾಗಿದೆ ಎಂದು ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ವಕೀಲರಿಗೆ ಅವಾಚ್ಯ ಪದಗಳ ನಿಂದಸಿದ ಪೊಲೀಸ್ ಅಧಿಕಾರಿಗೆ ಜೈಲು ಶಿಕ್ಷೆ ಪ್ರಕಟ appeared first on Law Guide Kannada.

]]>