life imprisonment Archives - Law Guide Kannada https://www.lawguidekannada.com/tag/life-imprisonment/ Online Guide Thu, 29 Jan 2026 15:02:46 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg life imprisonment Archives - Law Guide Kannada https://www.lawguidekannada.com/tag/life-imprisonment/ 32 32 ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…! https://www.lawguidekannada.com/only-the-supreme-court-and-high-courts-have-the-power-to-impose-life-imprisonment-sessions-courts-do-not/ Thu, 29 Jan 2026 15:02:20 +0000 https://www.lawguidekannada.com/?p=3317 ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ...

The post ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…! appeared first on Law Guide Kannada.

]]>
ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೆ ಮಾತ್ರ ಇದೆ ಆದರೆ ಈ ಅಧಿಕಾರ ಸೆಷನ್ಸ್ ಕೋರ್ಟ್ಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿ ಶಿವಮೊಗ್ಗದ ರುದ್ರೇಶ್ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯ ತನಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮತ್ತು ನ್ಯಾ.ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠವು ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗಳಿಗೆ ಇಲ್ಲ ಎಂದು ತೀರ್ಪು ಪ್ರಕಟಿಸಿದೆ. ಆರೋಪಿಗೆ ಅಧೀನ ನ್ಯಾಯಾಲಯ 2017ರ ನ.27ರಂದು ನೀಡಿದ್ದ ಜೀವನ ಪರ್ಯಂತ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್ ನ್ಯಾಯಪೀಠವು, ಜೀವಾವಧಿ ಶಿಕ್ಷೆಯನ್ನು ಮಾತ್ರ ವಿಧಿಸಿದೆ.

2025ರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ‘ಕಿರಣ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದಲ್ಲಿ ಸಿಆರ್ಪಿಸಿ ಸೆಕ್ಷನ್ 428ರ ಪ್ರಕಾರ ಯಾವುದೇ ವಿನಾಯಿತಿ ಇಲ್ಲದೆ ಜೀವಾವಧಿ (ಜೀವನ ಪರ್ಯಂತ ಜೈಲು)ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ನೀಡಲಾಗಿದೆಯೇ ಹೊರತು ಸೆಷನ್ಸ್ ನ್ಯಾಯಾಲಯಗಳಿಗಲ್ಲಎಂದು ಆದೇಶಿಸಿತ್ತು.

ಇದನ್ನು ಆಧರಿಸಿ ಈಗ ಹೈಕೋರ್ಟ್ ನ್ಯಾಯಪೀಠವು, ಸೆಷನ್ಸ್ ಕೋರ್ಟ್ ಗಳಿಗೆ ಅಂತಹ ಅಧಿಕಾರ ಇಲ್ಲವೆಂದು ತೀರ್ಪು ನೀಡಿದ್ದು ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸೆಷನ್ಸ್ ಕೋರ್ಟ್ ಗಳು ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಕೇವಲ ಜೀವಾವಧಿ ಶಿಕ್ಷೆ ವಿಧಿಸಬಹುದೇ ಹೊರತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಲಾಗದು. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಬಹುದು.

ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡಗಳನ್ನು ಅನ್ವಯಿಸಿದರೆ ವಿಚಾರಣಾಧೀನ ನ್ಯಾಯಾಲಯ ಅಪರಾಧಿಗೆ ಯಾವುದೇ ವಿನಾಯಿತಿ ಇಲ್ಲದೆ ಜೀವನ ಪರ್ಯಂತ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಬೇಕಾಗಿದೆ. ಅದರಂತೆ ಆದೇಶ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದೆ.

ಏನಿದು ಪ್ರಕರಣ
ಶಿರಸಿ ಸಮೀಪದ ಅಲವಳ್ಳಿಯವರಾದ ದೂರುದಾರ ಮಹಿಳೆ ಕುಮಾರಸ್ವಾಮಿ ಎಂಬುವರನ್ನು 2011ರಲ್ಲಿವಿವಾಹವಾಗಿದ್ದರು. ಪತಿ ಪುಣೆಯಲ್ಲಿಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಮೂರೂವರೆ ವರ್ಷದ ಸೃಜಯ ಎಂಬ ಪುತ್ರನಿದ್ದನು. ಮಹಿಳೆ ತನ್ನ ತವರು ಮನೆಗೆ ಬಂದಾಗಲೆಲ್ಲಾ ಮೂಲೆಗದ್ಡೆ ಮಠಕ್ಕೆ ಬರುವುದು ವಾಡಿಕೆ. ಅದೇ ರೀತಿ 2017ರ ಏ.8ರಂದು ಆಕೆ ಮಗನೊಡನೆ ಹೊಸ ಸ್ವಾಮೀಜಿಯ ಪೀಠಾರೋಹಣ ಕಾರ್ಯಕ್ರಮದ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದರು. ಅದೇ ಮಠದಲ್ಲಿಆರೋಪಿ ರುದ್ರೇಶ್ ಕೆಲಸ ಮಾಡುತ್ತಿದ್ದನು.

ದೂರುದಾರ ಮಹಿಳೆ ತನ್ನ ತಾಯಿ ಮಗನೊಂದಿಗೆ ಏಪ್ರಿಲ್ 10ರಂದು ರಾತ್ರಿ ಮಠದಲ್ಲಿಯೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಗು ಕಾಣೆಯಾಗಿತ್ತು. ನಂತರ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ತನಿಖೆಯ ವೇಳೆ ಆರೋಪಿ ಹಿಂದಿನ ದಿನ ರಾತ್ರಿ ಸಾಂಬಾರ್ ನಲ್ಲಿ ನಿದ್ರೆ ಮಾತ್ರೆ ಹಾಕಿದ್ದ, ಬಳಿಕ ಗಾಢ ನಿದ್ರೆಯಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿ ಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಎನ್ನಲಾಗಿತ್ತು. ಆರೋಪಿ ಒಡವೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಆ ಕುರಿತು ಮಹಿಳೆ ಬುದ್ಧಿವಾದ ಹೇಳಿದ್ದರಿಂದ ಆಕೆಯ ಬಗ್ಗೆ ಆರೋಪಿ ದ್ವೇಷ ಬೆಳೆಸಿಕೊಂಡು ಈ ಕೃತ್ಯ ಎಸಗಿದ್ದ ಎನ್ನಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…! appeared first on Law Guide Kannada.

]]>
ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ ಗಳಿಗಿಲ್ಲ : ಸುಪ್ರೀಂ ಕೋರ್ಟ್ https://www.lawguidekannada.com/sessions-courts-do-not-have-the-power-to-sentence-a-person-to-life-imprisonment-supreme-court/ Fri, 26 Dec 2025 03:59:01 +0000 https://www.lawguidekannada.com/?p=3112 ನವದೆಹಲಿ: ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಅಧಿಕಾರ ವಿಚಾರಣಾ ನ್ಯಾಯಾಲಯಗಳಿಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ...

The post ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ ಗಳಿಗಿಲ್ಲ : ಸುಪ್ರೀಂ ಕೋರ್ಟ್ appeared first on Law Guide Kannada.

]]>
ನವದೆಹಲಿ: ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಅಧಿಕಾರ ವಿಚಾರಣಾ ನ್ಯಾಯಾಲಯಗಳಿಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಲೈಂಗಿಕವಾಗಿ ಸಹಕರಿಸದ ವಿಧವೆಯೊಬ್ಬರಿಗೆ ಬೆಂಕಿ ಇಟ್ಟ ಪ್ರಕರಣದ ಅಪರಾಧಿ ಕಿರಣ್ ಮನವಿಯನ್ನು ನ್ಯಾಯಾಲಯವು ಭಾಗಶಃ ಪರಿಗಣಿಸಿತು. ಘಟನೆ ನಡೆದ 10 ದಿನಗಳ ನಂತರ ಸಂತ್ರಸ್ತೆಯು ಮೃತಪಟ್ಟಿದ್ದರು. ತಪ್ಪಿತಸ್ಥನಿಗೆ ವಿಚಾರಣಾ ನ್ಯಾಯಾಲಯವು ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಸೆಕ್ಷನ್ 428ರ ಅಡಿಯಲ್ಲಿ ಕ್ಷಮೆಯನ್ನೂ ಪಡೆಯುವಂತಿಲ್ಲ ಎಂದು ಸೂಚಿಸಿತ್ತು.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾಹ್ ಮತ್ತು ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು, ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ. ಸೆಷನ್ಸ್ ಕೋರ್ಟ್ಗಳಿಗೆ ಅಂಥ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.

ನ್ಯಾಯಪೀಠವು ಅಪರಾಧಿಯು ತಪ್ಪಿತಸ್ಥ ಎಂಬ ತೀರ್ಪನ್ನು ಎತ್ತಿಹಿಡಿಯಿತು ಮತ್ತು 14 ವರ್ಷಗಳ ಜೀವಾವಧಿ ಶಿಕ್ಷೆಯಾಗಿ ಪರಿಷ್ಕರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ ಗಳಿಗಿಲ್ಲ : ಸುಪ್ರೀಂ ಕೋರ್ಟ್ appeared first on Law Guide Kannada.

]]>
ಕಸ್ಟಡಿ ಸಾವು ಪ್ರಕರಣದಲ್ಲಿ ನಾಲ್ವರು ಪೊಲೀಸರು ದೋಷಿಗಳು: ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಪ್ರಕಟ https://www.lawguidekannada.com/four-policemen-found-guilty-in-custodial-death-case-two-accused-sentenced-to-life-imprisonment/ Sun, 08 Sep 2024 15:46:58 +0000 https://www.lawguidekannada.com/?p=725 ಚಂಡೀಗಢ: ಪೊಲೀಸ್ ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದರ ಪರಿಣಾಮ ಆರೋಪಿ ಸಾವನ್ನಪ್ಪಿದ್ದ ಪ್ರಕರವನ್ನು ಕಸ್ಟಡಿ ಸಾವು ಎಂದು ಪರಿಗಣಿಸಿ, ಉಪ ಪೊಲೀಸ್‌...

The post ಕಸ್ಟಡಿ ಸಾವು ಪ್ರಕರಣದಲ್ಲಿ ನಾಲ್ವರು ಪೊಲೀಸರು ದೋಷಿಗಳು: ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಪ್ರಕಟ appeared first on Law Guide Kannada.

]]>
ಚಂಡೀಗಢ: ಪೊಲೀಸ್ ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದರ ಪರಿಣಾಮ ಆರೋಪಿ ಸಾವನ್ನಪ್ಪಿದ್ದ ಪ್ರಕರವನ್ನು ಕಸ್ಟಡಿ ಸಾವು ಎಂದು ಪರಿಗಣಿಸಿ, ಉಪ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ನಾಲ್ವರು ಪೊಲೀಸರು ತಪ್ಪಿತಸ್ಥರೆಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ನೀಡಿದೆ.

ಅಲ್ಲದೆ ನಾಲ್ವರು ಆರೋಪಿತರ ಪೈಕಿ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಕಡಿಮೆಯಾಗಿದೆ ಮತ್ತು ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿ ಸರ್ಕಾರ ಹಾಗೂ ದೂರುದಾರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುರೇಶ್ವರ್ ಠಾಕೂರ್ ಹಾಗು ನ್ಯಾ. ಸುದೀಪ್ತಿ ಶರ್ಮಾ ಅವರಿದ್ದ ವಿಭಾಗೀಯ ಪೀಠ, ಆರೋಪಿತರು (ಪೊಲೀಸರು) ತೀವ್ರವಾಗಿ ಥಳಿಸಿದ್ದರ ಪರಿಣಾಮವಾಗಿ ಗದ್ದೂ‌ರ್ ಸಿಂಗ್ ಸಾವನ್ನಪ್ಪಿದ್ದಾರೆ. ಈ ವೇಳೆ ಪೊಲೀಸ್‌ ಕಸ್ಟಡಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಬಾಗಲ್ ಸಿಂಗ್ ವ್ಯತಿರಿಕ್ತ ಸಾಕ್ಷ್ಯ ನುಡಿಯುವಂತೆ ಡಿಎಸ್ಪಿ ಒತ್ತಡ ಹೇರಿದ್ದಾರೆ. ಘಟನೆ ವೇಳೆ ಡಿಎಸ್ಪಿ ಪಟ್ಟಣದಲ್ಲಿ ಇರಲಿಲ್ಲ ಎಂದು ಲಾಗ್ ಬುಕ್ ನಲ್ಲಿ ನಮೂದಿಸಿರುವುದು ಅವರ ಪರ ಸಾಕ್ಷ್ಯವಾಗಲಾರದು ಎಂದು ಹೇಳಿದೆ.

ಅಲ್ಲದೇ ಪ್ರಕರಣದ ವಿಚಾರಣೆ ವೇಳೆ ಹಾಜರಿದ್ದ ಇಬ್ಬರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್, ವಿಚಾರಣೆ ವೇಳೆ ಹಾಜರಿರದ ಡಿಎಸ್ಪಿ ಸೇರಿದಂತೆ ಇನ್ನಿಬ್ಬರು ಪೊಲೀಸರಿಗೆ ಶಿಕ್ಷೆ ಪ್ರಮಾಣ ನಿಗದಿ ಮಾಡಲು ಮುಂದಿನ ವಿಚಾರಣೆ ವೇಳೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.

ಪ್ರಕರಣದ ವಿವರ….
1995ರ ನವೆಂಬರ್ 14ರಂದು ಪೊಲೀಸರು ಗದ್ದೂರ್ ಸಿಂಗ್ ಹಾಗೂ ಬಾಗಲ್ ಸಿಂಗ್ ರನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಪೊಲೀಸ್‌ ಪೇದೆ ಕಿರ್ಪಾಲ್ ಸಿಂಗ್ ಇಬ್ಬರಿಗೂ ತೀವ್ರವಾಗಿ ಹಲ್ಲೆ ಮಾಡಿದ್ದ. ಪಕ್ಕೆಲುಬುಗಳ ಭಾಗದಲ್ಲಿ ಮನಬಂದಂತೆ ಥಳಿಸಿದ್ದ ಪರಿಣಾಮ ಗದ್ದೂರ್ ಸಿಂಗ್ ಸ್ಥಿತಿ ಗಂಭೀರವಾಗಿತ್ತು. 9 ದಿನಗಳ ನಂತರ ಪೊಲೀಸರ ವಶದಿಂದ ಹೊರಬಂದ ಗದ್ದೂರ್ ಸಿಂಗ್ ನನ್ನು ಚಂಡೀಗಡದ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದರು. ಶವ ತನಿಖಾ ವರದಿಯಲ್ಲಿ ಪೊಲೀಸರ ಹಲ್ಲೆಯಿಂದ ಗದ್ದೂರ್ ಸಿಂಗ್‌ ಸಾವನ್ನಪ್ಪಿದ್ದು ತಿಳಿದು ಬಂದಿತ್ತು.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 302, 323, 324, 325, 343 ಡಿ/ತಿ 34 ಅಡಿಯಲ್ಲಿ ದೋಷಾರೋಪಣೆ ಸಲ್ಲಿಸಿದ್ದರು.

ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 343 ಅಡಿಯಲ್ಲಿ ಮಾತ್ರ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಮತ್ತು ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಕಸ್ಟಡಿ ಸಾವು ಪ್ರಕರಣದಲ್ಲಿ ನಾಲ್ವರು ಪೊಲೀಸರು ದೋಷಿಗಳು: ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಪ್ರಕಟ appeared first on Law Guide Kannada.

]]>