misusing lawyer stickers Archives - Law Guide Kannada https://www.lawguidekannada.com/tag/misusing-lawyer-stickers/ Online Guide Fri, 05 Dec 2025 17:41:01 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg misusing lawyer stickers Archives - Law Guide Kannada https://www.lawguidekannada.com/tag/misusing-lawyer-stickers/ 32 32 ವಕೀಲರ ಸ್ಟಿಕ್ಕರ್ ದುರ್ಬಳಕೆಗೆ ಹೈಕೋರ್ಟ್ ತೀವ್ರ ಆಕ್ರೋಶ : ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸೂಚನೆ https://www.lawguidekannada.com/high-court-expresses-strong-outrage-over-misuse-of-lawyer-stickers-instructions-to-take-immediate-action/ Fri, 05 Dec 2025 17:41:01 +0000 https://www.lawguidekannada.com/?p=2987 ಚೆನ್ನೈ: ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ಹೀಗೆ...

The post ವಕೀಲರ ಸ್ಟಿಕ್ಕರ್ ದುರ್ಬಳಕೆಗೆ ಹೈಕೋರ್ಟ್ ತೀವ್ರ ಆಕ್ರೋಶ : ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸೂಚನೆ appeared first on Law Guide Kannada.

]]>
ಚೆನ್ನೈ: ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ಹೀಗೆ ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದೆ.

ಕೆಲ ಲಾಯರ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಅಡ್ವಕೇಟ್ ಸ್ಟಿಕ್ಕರ್ ಅಂಟಿಸಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.

ಅರ್ಜಿದಾರರು ವಾದ ಮಂಡಿಸಿದ ವಕೀಲರು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರ ಕ್ರಮದಿಂದ ತಪ್ಪಿಸಿಕೊಳ್ಳಲು ಹಾಗು ಅವರನ್ನು ಬೆದರಿಸಲು ಅಡ್ವಕೇಟ್ ಸ್ಟಿಕ್ಕರ್ ಗಳನ್ನು ಖಾಸಗಿ ವಾಹನಗಳ ಮೇಲೆ ಅಳವಡಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರಿಗೆ ಸ್ಟಿಕ್ಕರ್ ಗಳ ಅವಶ್ಯಕತೆ ಇರುವುದಿಲ್ಲ. ಅದೇ ರೀತಿ, ವಕೀಲರು ನ್ಯಾಯಾಲಯದಿಂದ ಹೊರಗೆ ಬಂದ ನಂತರ ಅವರಿಗೆ ಸ್ಪೀಕರ್ ಅವಶ್ಯಕತೆ ಇರುವುದಿಲ್ಲ ಎಂದು ವಾದಿಸಿದರು.

ವಕೀಲರು ಹಾಗೂ ಕೆಲ ಖಾಸಗಿ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಅಡ್ಡಕೇಟ್ ಸ್ಟಿಕ್ಕರ್’ಗಳನ್ನು ಹಾಕಿಕೊಂಡು ಸಂಚಾರ ಅಪರಾಧಗಳಿಂದ ವಿನಾಯ್ತಿ ಪಡೆಯುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ವಾದ ಆಲಿಸಿದ ನ್ಯಾಯಪೀಠವು, ಸ್ಟಿಕರ್ ಗಳ ದುರ್ಬಳಕೆಯನ್ನು ನಿಯಂತ್ರಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು, ಪೊಲೀಸರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ಕಿವಿಮಾತು ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ವಕೀಲರ ಸ್ಟಿಕ್ಕರ್ ದುರ್ಬಳಕೆಗೆ ಹೈಕೋರ್ಟ್ ತೀವ್ರ ಆಕ್ರೋಶ : ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸೂಚನೆ appeared first on Law Guide Kannada.

]]>