POCSO Act Archives - Law Guide Kannada https://www.lawguidekannada.com/tag/pocso-act/ Online Guide Wed, 14 Jan 2026 08:01:29 +0000 en-US hourly 1 https://wordpress.org/?v=6.9.4 https://www.lawguidekannada.com/wp-content/uploads/2022/09/cropped-Logo_512-32x32.jpg POCSO Act Archives - Law Guide Kannada https://www.lawguidekannada.com/tag/pocso-act/ 32 32 ‘ರೋಮಿಯೊ-ಜ್ಯೂಲಿಯೆಟ್’ ನಿಯಮ ಜಾರಿಗೆ ತನ್ನಿ ಎಂದು ಸಲಹೆ ಕೊಟ್ಟ ಸುಪ್ರೀಂ ಕೋರ್ಟ್: ಏನಿದು..? https://www.lawguidekannada.com/supreme-court-suggests-implementing-romeo-juliet-rule-what-is-it/ Wed, 14 Jan 2026 08:01:19 +0000 https://www.lawguidekannada.com/?p=3219 ನವದೆಹಲಿ: ಪೋಕ್ಸೊ ಕಾಯ್ದೆ ದುರ್ಬಳಕೆಯನ್ನು ತಡೆಗಟ್ಟಲು ರೋಮಿಯೊ-ಜ್ಯೂಲಿಯೆಟ್’ ನಿಯಮ ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ಕೊಟ್ಟಿದೆ....

The post ‘ರೋಮಿಯೊ-ಜ್ಯೂಲಿಯೆಟ್’ ನಿಯಮ ಜಾರಿಗೆ ತನ್ನಿ ಎಂದು ಸಲಹೆ ಕೊಟ್ಟ ಸುಪ್ರೀಂ ಕೋರ್ಟ್: ಏನಿದು..? appeared first on Law Guide Kannada.

]]>
ನವದೆಹಲಿ: ಪೋಕ್ಸೊ ಕಾಯ್ದೆ ದುರ್ಬಳಕೆಯನ್ನು ತಡೆಗಟ್ಟಲು ರೋಮಿಯೊ-ಜ್ಯೂಲಿಯೆಟ್’ ನಿಯಮ ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ಕೊಟ್ಟಿದೆ.

ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರವು ಸುಪ್ರೀಂಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿತ್ತು.

ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ನ್ಯಾಯಪೀಠವು, ಪೊಕ್ಸೋ ಕಾಯ್ದೆಯ ದುರುಪಯೋಗಕ್ಕೆ ಅಂತ್ಯ ಹಾಡಲು ಅದರ ಕಠಿಣ ನಿಬಂಧನೆಗಳಿಂದ ನಿಜವಾದ ಹದಿಹರೆಯದ ಸಂಬಂಧಗಳಿಗೆ ವಿನಾಯಿತಿ ನೀಡಲು ‘ರೋಮಿಯೊ-ಜ್ಯೂಲಿಯೆಟ್ ನಿಯಮವನ್ನು ಪರಿಚಯಿಸಿ ಎಂದು ಕಿವಿಮಾತು ಹೇಳಿತು.

ಪೋಕ್ಸೋ ಕಾಯ್ದೆ ದುರುಪಯೋಗವನ್ನು ನ್ಯಾಯಾಂಗವು ಪದೇ ಪದೇ ಗಮನಿಸಿರುವ ಹಿನ್ನೆಲೆಯಲ್ಲಿ ಈ ಪಿಡುಗನ್ನು ತಡೆಯಲು ಸಾಧ್ಯವಿರಬಹುದಾದ ಕ್ರಮವನ್ನು ಕೈಗೊಳ್ಳುವುದು. ನಿಜವಾದ ಹದಿಹರೆಯದ ಸಂಬಂಧಗಳಿಗೆ ಈ ಕಾಯ್ದೆಯ ಹಿಡಿತದಿಂದ ವಿನಾಯಿತಿ ನೀಡಲು ರೋಮಿಯೊ-ಜ್ಯೂಲಿಯೆಟ್ ನಿಯಮವನ್ನು ತರುವುದು. ಈ ಕಾನೂನನ್ನು ಬಳಸಿಕೊಂಡು ಹಳೆಯ ದ್ವೇಷಗಳನ್ನು ತೀರಿಸಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಅನುವು ಮಾಡಿ ಕೊಡುವ ಕಾರ್ಯವಿಧಾನವನ್ನು ಜಾರಿಗೆ ತರುವುದು. ಇತ್ಯಾದಿಗಳನ್ನು ಸರಕಾರವು ಪರಿಗಣಿಸಬಹುದಾಗಿದೆ ಎಂದು ಹೇಳಿದ ನ್ಯಾಯಪೀಠವು, ತೀರ್ಪಿನ ಪ್ರತಿಯನ್ನು ಭಾರತ ಸರಕಾರದ ಕಾನೂನು ಕಾರ್ಯದರ್ಶಿಗೆ ಕಳುಹಿಸುವಂತೆ ಆದೇಶಿಸಿತು.

ಪೊಕ್ಕೊ ಕಾಯ್ದೆಯಡಿ ಪ್ರಕರಣಗಳಲ್ಲಿ ಜಾಮೀನು ಹಂತದಲ್ಲಿ ವೈದ್ಯಕೀಯ ತಪಾಸಣೆಯ ಮೂಲಕ ಸಂತ್ರಸ್ತರ ವಯಸ್ಸಿನ ನಿರ್ಣಯವನ್ನು ಕಡ್ಡಾಯಗೊಳಿಸಿ ಉಚ್ಚ ನ್ಯಾಯಾಲಯಗಳು ಆದೇಶಿಸುವಂತಿಲ್ಲ. ‘ಕಿರು ವಿಚಾರಣೆಗಳನ್ನು’ ನಡೆಸಲು ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ವಿರುದ್ಧವಾದ ಕಡ್ಡಾಯ ತನಿಖಾ ಕಾರ್ಯವಿಧಾನಗಳನ್ನು ಹೊರಡಿಸಲು ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅಧಿಕಾರ ವ್ಯಾಪ್ತಿಯನ್ನು ಬಳಸುವಂತಿಲ್ಲ ಎಂದು ಪೀಠವು ತಿಳಿಸಿತು.

ಹೈಕೋರ್ಟ್ ಒಂದು ಸಾಂವಿಧಾನಿಕ ನ್ಯಾಯಾಲಯ ಎನ್ನುವುದು ಪ್ರಶ್ನಾತೀತವಾಗಿದೆ. ಆದಾಗ್ಯೂ ಈ ಪ್ರಕರಣದಲ್ಲಿ ಶಾಸನಬದ್ಧ ಅಧಿಕಾರವನ್ನು ಚಲಾಯಿಸುವುದರಲ್ಲಿ ಉಚ್ಚ ನ್ಯಾಯಾಲಯದಿಂದ ನ್ಯಾಯವ್ಯಾಪ್ತಿಯ ತಪ್ಪು ನಡೆದಿದೆ, ಸಂವಿಧಾನದ ಅಡಿಯಲ್ಲಿ ಅಲ್ಲ ಎಂದು ನ್ಯಾಯಪೀಠ ತಿಳಿಸಿತು.

ರೋಮಿಯೊ-ಜ್ಯೂಲಿಯೆಟ್ ನಿಯಮ ಅಂದರೆ ಏನು..?
ಇದು ಪರಸ್ಪರರ ವಯಸ್ಸಿನಲ್ಲಿ ಅಲ್ಪ ಅಂತರವಿರುವ ಹದಿಹರೆಯದ ಬಾಲಕ ಮತ್ತು ಬಾಲಕಿ ನಡುವೆ ಪರಸ್ಪರ ಸಮ್ಮತಿಯ ಸಂಬಂಧಗಳಿಗೆ ಕಾನೂನಿನ ರಕ್ಷಣೆಯನ್ನು ನೀಡುವ ಅಥವಾ ದಂಡನೆಯಲ್ಲಿ ಉದಾರತೆಯನ್ನು ತೋರುವ ಕಾನೂನು ತತ್ವವಾಗಿದೆ.

ಭಾರತದಲ್ಲಿ 2012ರ ಪೊಕ್ಸೋ ಕಾಯ್ದೆಯಡಿ ಇಂತಹ ಸಂಬಂಧಗಳಿಗೆ ಸ್ಪಷ್ಟ ವಿನಾಯಿತಿಯಿಲ್ಲ. ಆದರೆ ವಿವಿಧ ನ್ಯಾಯಾಲಯಗಳು ಮತ್ತು ಕಾನೂನು ಆಯೋಗಗಳು ಪರಸ್ಪರ ಸಮ್ಮತಿ, ವಯಸ್ಸಿನ ಕಡಿಮೆ ಅಂತರ ಮತ್ತು ದುರುದ್ದೇಶದ ಅಭಾವ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಇಂತಹ ಪ್ರಕರಣಗಳಲ್ಲಿ ವೈಚಾರಿಕ ಹಾಗೂ ಮಾನವೀಯ ದೃಷ್ಟಿಕೋನ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ‘ರೋಮಿಯೊ-ಜ್ಯೂಲಿಯೆಟ್’ ನಿಯಮ ಜಾರಿಗೆ ತನ್ನಿ ಎಂದು ಸಲಹೆ ಕೊಟ್ಟ ಸುಪ್ರೀಂ ಕೋರ್ಟ್: ಏನಿದು..? appeared first on Law Guide Kannada.

]]>
ಪ್ರೀತಿಗೆ ಇಷ್ಟವಿಲ್ಲ ಎಂದ್ರೂ ಪದೇ ಪದೇ ಬೆನ್ನತ್ತಿ ಹೋಗುವುದು ಲೈಂಗಿಕ ಕಿರುಕುಳ – ಹೈಕೋರ್ಟ್ https://www.lawguidekannada.com/repeatedly-pursuing-a-minor-girl-who-is-not-interested-in-love-is-sexual-harassment-bombay-high-court/ Wed, 12 Nov 2025 03:31:02 +0000 https://www.lawguidekannada.com/?p=2725 ಮುಂಬೈ: 9ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ತನಗೆ ಪ್ರೀತಿಸಲು ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ ಪದೇ ಪದೇ...

The post ಪ್ರೀತಿಗೆ ಇಷ್ಟವಿಲ್ಲ ಎಂದ್ರೂ ಪದೇ ಪದೇ ಬೆನ್ನತ್ತಿ ಹೋಗುವುದು ಲೈಂಗಿಕ ಕಿರುಕುಳ – ಹೈಕೋರ್ಟ್ appeared first on Law Guide Kannada.

]]>
ಮುಂಬೈ: 9ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ತನಗೆ ಪ್ರೀತಿಸಲು ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ ಪದೇ ಪದೇ ಆ ಬಾಲಕಿಯ ಹಿಂದೆ ಬಿದ್ದಿದ್ದ 28 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ 1 ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.

ವಿಶೇಷ ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ವಜಾಗೊಳಿಸುವಂತೆ ಕೋರಿ 28 ವರ್ಷದ ಮಿತುರಾಮ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಅಭಿಪ್ರಾಯ ತಿಳಿಸಿದೆ.

ಫೋಕ್ಸ್ ವಿಶೇಷ ನ್ಯಾಯಾಲಯ ತನಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪು ರದ್ದು ಕೋರಿ ಆರೋಪಿ ಮಿತುರಾಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನನ್ಯಾಯಮೂರ್ತಿ ಜಿ.ಎ. ಸನಪ್ ಅವರಿದ್ದ ನ್ಯಾಯಪೀಠವು, ವಿಶೇಷ ನ್ಯಾಯಾಲಯ ವಿಧಿಸಿದ್ದ 1 ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಪ್ರೀತಿಯಲ್ಲಿ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ ನಂತರವೂ ಅಪ್ರಾಪ್ತಯನ್ನು ಹಿಂಬಾಲಿಸಿ ಹೋಗುವುದು ಒಳ್ಳೆಯ ನಡತೆಯಲ್ಲ ಮತ್ತು ಇಂತಹ ಕೃತ್ಯವು ಪೋಕೋ ಕಾಯ್ದೆಯ ಸೆಕ್ಷನ್ 11 (vi) ಅಡಿಯಲ್ಲಿ ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಂತ್ರಸ್ತ ಬಾಲಕಿ ನಿರಾಸಕ್ತಿ ತೋರಿಸಿದ ನಂತರವೂ ಆರೋಪಿ ಆಕೆಯನ್ನು ಮಾತನಾಡಿಸಲು, ಪುಸಲಾಯಿಸಲು ಪದೇ ಪದೇ ಬೆನ್ನತ್ತಿ ಹೋಗುತ್ತಿದ್ದುದು ಸಾಕ್ಷಗಳಿಂದ ದೃಢಪಟ್ಟಿದೆ.

ಇಂತಹ ಕೃತ್ಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 D (1) (i) ರ ಅಡಿ ಹಾಗೂ ಫೋಸ್ಕೊ ಕಾಯ್ದೆಯ ಸೆಕ್ಷನ್ 11 (vi) ಅಡಿಯಲ್ಲಿ ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ…?
ಆರೋಪಿ ಮಿತುರಾಮ್ 9ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿಕೊಂಡು ಪದೇ ಪದೇ ಬೆನ್ನತ್ತಿ ಹೋಗಿ ಮಾತನಾಡಿಸುತ್ತಿದ್ದ. ಈ ವಿಚಾರವಾಗಿ ಬಾಲಕಿ ತನ್ನ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದಳು. ಹೀಗಿದ್ದರೂ ಸಹ ಮುಂದೊಂದು ದಿನ ಬಾಲಕಿ ತನ್ನ ಪ್ರೀತಿ ಒಪ್ಪಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಆರೋಪಿ ಮತ್ತೆ ಬಾಲಕಿಯ ಬೆನ್ನತ್ತಿ ಹೋಗಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದ.

ಇದೇ ರೀತಿ ಒಂದು ದಿನ ಬಾಲಕಿ ಟ್ಯೂಷನ್ ಗೆ ಹೋಗಿ ಬರುವ ವೇಳೆ ಆರೋಪಿ ಹಿಂದಿನಿಂದ ಹೊಗಿ ಬಾಲಕಿಯ ಕೈಹಿಡಿದು ಎಳೆದು ನಿಲ್ಲಿಸಿ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ ಸಿಟ್ಟಿಗೆದ್ದ ಬಾಲಕಿ ಆತನ ಕಪಾಳಕ್ಕೆ ಹೊಡೆದು ಮನೆಗೆ ಹೋಗಿ, ನಡೆದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು.

ಬಳಿಕ ಫೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಐಪಿಸಿ ಹಾಗೂ ಫೋಕ್ಸೋ ಕಾಯ್ದೆ ಅಡಿ ಆರೋಪಿ ಮಿತುರಾಮ್ ವಿರುದ್ದ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಫೋಕ್ಸ್ ವಿಶೇಷ ನ್ಯಾಯಾಲಯ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಪ್ರೀತಿಗೆ ಇಷ್ಟವಿಲ್ಲ ಎಂದ್ರೂ ಪದೇ ಪದೇ ಬೆನ್ನತ್ತಿ ಹೋಗುವುದು ಲೈಂಗಿಕ ಕಿರುಕುಳ – ಹೈಕೋರ್ಟ್ appeared first on Law Guide Kannada.

]]>
ಪೋಕ್ಸೋ ಕಾಯ್ದೆ ನಿಯಮ ಮತ್ತಷ್ಟು ಬಿಗಿ: ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಅಪರಾಧ – ಸುಪ್ರೀಂ ತೀರ್ಪು https://www.lawguidekannada.com/pocso-act-rules-tightened-further-collection-of-child-pornography-viewing-offence-supreme-court-verdict/ Wed, 25 Sep 2024 10:31:15 +0000 http://www.lawguidekannada.com/?p=808 ನವದೆಹಲಿ: ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಈ ಮಧ್ಯೆ ಇದೀಗ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಸುಪ್ರೀಂ...

The post ಪೋಕ್ಸೋ ಕಾಯ್ದೆ ನಿಯಮ ಮತ್ತಷ್ಟು ಬಿಗಿ: ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಅಪರಾಧ – ಸುಪ್ರೀಂ ತೀರ್ಪು appeared first on Law Guide Kannada.

]]>
ನವದೆಹಲಿ: ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಈ ಮಧ್ಯೆ ಇದೀಗ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಸುಪ್ರೀಂ ಕೋರ್ಟ್ ಮತ್ತಷ್ಟು ಬಿಗಿಗೊಳಿಸಿದೆ. ಮಕ್ಕಳ ಲೈಂಗಿಕ ಚಿತ್ರಗಳನ್ನು ಮತ್ತು ದೃಶ್ಯಗಳ ಸಂಗ್ರಹಣೆ ಮತ್ತು ವೀಕ್ಷಣೆ ಮಾಡುವುದು ಫೋಕೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ. ಬಿ ಪರ್ದಿವಾಲಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಜಸ್ಟ್ ರೈಟ್ ಫೋರ್ ಚಿನ್ ಅಲೈಯನ್ಸ್ ಗಿs ಎಸ್ ಹರೀಶ್ ಮತ್ತಿತರರು ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ಮಕ್ಕಳ ಅಶ್ಲೀಲ ಚಿತ್ರವನ್ನು ಸಂಗ್ರಹಿಸುವುದು ಮತ್ತು ವೀಕ್ಷಿಸುವುದು ಪೋಕ್ಸೋ ಕಾಯ್ದೆ ಅಡಿ ಅಪರಾಧವಾಗುತ್ತದೆ. ಬೇರೆಯವರಿಗೆ ರವಾನಿಸದೇ ಇದ್ದರೂ ಅವುಗಳನ್ನು ಇಟ್ಟುಕೊಳ್ಳುವುದು ಅಪರಾಧ ಎಂದೇ ಪರಿಗಣಿಸಲಾಗುತ್ತದೆ ಎಂದು ಆದೇಶಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಇದರ ಸೆಕ್ಷನ್ 15 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲು ಅಗತ್ಯವಿರುವ ಉದ್ದೇಶದ ತೀವ್ರತೆಯ ಬಗ್ಗೆ ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ. ಮಕ್ಕಳನ್ನು ಒಳಗೊಂಡಿರುವ ಅಶ್ಲೀಲ ಚಿತ್ರಗಳನ್ನು ಹಂಚುವ, ರವಾನಿಸುವ ಉದ್ದೇಶ ಇಟ್ಟುಕೊಂಡು ಅಥವಾ ವಾಣಿಜ್ಯ ಲಾಭ ಗಳಿಸುವ ಉದ್ದೇಶದೊಂದಿಗೆ ಡಿಜಿಟಲ್ ಸಾಧನಗಳಲ್ಲಿ ಅಂತಹ ಚಿತ್ರಗಳನ್ನು ವೀಕ್ಷಿಸುವುದು ಮತ್ತು ಸಂಗ್ರಹಿಸುವುದು ಅಪರಾಧ ಎಂದು ನ್ಯಾಯಪೀಠ ಹೇಳಿದೆ.

ಮಕ್ಕಳ ಲೈಂಗಿಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ನೀಡುವ ಸಲುವಾಗಿ ಇಟ್ಟುಕೊಂಡಿದ್ದರೆ ಮತ್ತು ಅಂತವುಗಳ ಬಗ್ಗೆ ವರದಿ ಮಾಡುವ ಉದ್ದೇಶ ಇದ್ದರೆ ಅಪರಾಧದಿಂದ ವಿನಾಯಿತಿ ಇರುತ್ತದೆ. ಈ ಎರಡು ಪ್ರಸಂಗಗಳನ್ನು ಹೊರತುಪಡಿಸಿ ಯಾವುದೇ ರೂಪದಲ್ಲಿ ದೃಶ್ಯ ಮತ್ತು ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ

ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಅಪರಾಧಕ್ಕೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಪ್ರಮಾಣ ಹೀಗಿದೆ…
ಪೋಕ್ಕೆ ಕಾಯ್ದೆಯ ಸೆಕ್ಷನ್ 15 ಅಡಿಯಲ್ಲಿ ಮಕ್ಕಳ ಲೈಂಗಿಕ ಚಿತ್ರ ದೃಶ್ಯಗಳನ್ನು ಇಟ್ಟುಕೊಳ್ಳುವುದು ಅಪರಾಧ. ಒಂದನೇ ಉಪ ಸೆಕ್ಷನ್ ಪ್ರಕಾರ, ಇಂತಹ ಚಿತ್ರಗಳು ದೃಶ್ಯಗಳನ್ನು ನಾಶಪಡಿಸಲು ವಿಫಲವಾಗಿದ್ದರೆ ಯಾ ಹಂಚಿಕೆ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದರೆ ಅಥವಾ ಇಂತಹ ದೃಶ್ಯ ಇರುವ ಬಗ್ಗೆ ವರದಿ ಮಾಡುವಲ್ಲಿ ವಿಫಲವಾಗಿದ್ದರೆ ಆಗ ಅದು ಅಪರಾಧವಾಗುತ್ತದೆ.

ಪೋಕ್ಸೋ ಕಾಯ್ದೆಯ ಸೆಕ್ಷನ್ 15 ಉಪ ಸೆಕ್ಷನ್ 2ರ ಪ್ರಕಾರ, ಇಂತಹ ಚಿತ್ರಗಳು ದೃಶ್ಯಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯ ನೀಡುವ ಸಲುವಾಗಿ ಅಥವಾ ವರದಿ ಮಾಡುವ ಉದ್ದೇಶಕ್ಕೆ ಹೊರತಾಗಿ ಸಂಗ್ರಹಿಸಿದ್ದರೆ ಅಪರಾಧವಾಗುತ್ತದೆ. ಗರಿಷ್ಟ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಆ ಎರಡನ್ನೂ ವಿಧಿಸಬಹುದಾಗಿದೆ.

ಪೋಕೊ ಕಾಯ್ದೆಯ ಸೆಕ್ಷನ್ 15 ಉಪ ಸೆಕ್ಷನ್ 3ರ ಪ್ರಕಾರ, ಇಂತಹ ಚಿತ್ರಗಳು ದೃಶ್ಯಗಳನ್ನು ವಾಣಿಜ್ಯ ಉದ್ದೇಶಕ್ಕೆ ಇಟ್ಟುಕೊಂಡಿದ್ದರೆ ಇದು ಅಪರಾಧ. ಇಂತಹ ಕೃತ್ಯಕ್ಕೆ ಮೊದಲ ಬಾರಿಯ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಈ ದೃಶ್ಯಗಳನ್ನು ಲಾಭ ಗಳಿಸುವ ಉದ್ದೇಶಕ್ಕೆ ಇಟ್ಟುಕೊಳ್ಳಲಾಗಿತ್ತು ಎಂಬುದನ್ನು ಸೂಚಿಸುವ ಪೂರಕ ಸಂಗತಿಗಳು ಇರಬೇಕಾಗುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಪೋಕ್ಸೋ ಕಾಯ್ದೆ ನಿಯಮ ಮತ್ತಷ್ಟು ಬಿಗಿ: ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ, ವೀಕ್ಷಣೆ ಅಪರಾಧ – ಸುಪ್ರೀಂ ತೀರ್ಪು appeared first on Law Guide Kannada.

]]>
16 ವರ್ಷ ವಯಸ್ಸಿನವರು ಒಪ್ಪಿತ ಲೈಂಗಿಕತೆ ಬಗ್ಗೆ ನಿರ್ಧರಿಸುವಲ್ಲಿ ಸಮರ್ಥರು-ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ತೀರ್ಪು https://www.lawguidekannada.com/16-year-old-capable-to-decide-about-consensual-sex-high-court-quashes-fir/ Fri, 23 Aug 2024 07:27:17 +0000 https://www.lawguidekannada.com/?p=655 ಮೇಘಾಲಯ: 16 ವರ್ಷದ ವಯಸ್ಸಿನವರು ಒಪ್ಪಿತ ಲೈಂಗಿಕತೆ ಬಗ್ಗೆ ನಿರ್ಧರಿಸುವಲ್ಲಿ ಸಮರ್ಥರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇಘಾಲಯ ಹೈಕೋರ್ಟ್, ಅಪ್ರಾಪ್ತ...

The post 16 ವರ್ಷ ವಯಸ್ಸಿನವರು ಒಪ್ಪಿತ ಲೈಂಗಿಕತೆ ಬಗ್ಗೆ ನಿರ್ಧರಿಸುವಲ್ಲಿ ಸಮರ್ಥರು-ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ತೀರ್ಪು appeared first on Law Guide Kannada.

]]>
ಮೇಘಾಲಯ: 16 ವರ್ಷದ ವಯಸ್ಸಿನವರು ಒಪ್ಪಿತ ಲೈಂಗಿಕತೆ ಬಗ್ಗೆ ನಿರ್ಧರಿಸುವಲ್ಲಿ ಸಮರ್ಥರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇಘಾಲಯ ಹೈಕೋರ್ಟ್, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ. 
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ದಾಖಲಿಸಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಡಬ್ಲ್ಯೂ. ಡೈಂಗ್ಡೋಹ್ ಅವರು, 16 ವರ್ಷ ವಯಸ್ಸಿನವರು ಲೈಂಗಿಕ ಸಂಭೋಗದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.

ಅರ್ಜಿದಾರರ ಪರ ವಾದ  ಮಂಡಿಸಿದ ವಕೀಲರು,  ಪ್ರಶ್ನಾರ್ಹ ಘಟನೆಯು ಲೈಂಗಿಕ ದೌರ್ಜನ್ಯದ ಪ್ರಕರಣವಲ್ಲ ಬದಲಿಗೆ ಒಮ್ಮತದ ಕ್ರಿಯೆ. ಅರ್ಜಿದಾರರು ಮತ್ತು ಆಪಾದಿತ ಸಂತ್ರಸ್ತೆ ಪ್ರೀತಿಯ ಸಂಬಂಧದಲ್ಲಿದ್ದರು ಎಂದು ವಾದಿಸಿದರು.

ಅರ್ಜಿದಾರರು ವಿವಿಧ ಮನೆಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಹೀಗಾಗಿ ಅವರು ಆಕೆಗೆ ಪರಿಚಯವಾಗಿ ಅರ್ಜಿದಾರರ ಚಿಕ್ಕಪ್ಪನ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆದಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ತನ್ನ ಹೇಳಿಕೆ ಮತ್ತು ಸಾಕ್ಷ್ಯದಲ್ಲಿ ತಾನು ಅರ್ಜಿದಾರರ ಗೆಳತಿ ಎಂದು ದೃಢಪಡಿಸಿದ್ದರಿಂದ ಮತ್ತು ಯಾವುದೇ ಬಲಪ್ರಯೋಗವಿಲ್ಲದೆ ಕೃತ್ಯಕ್ಕೆ ಒಪ್ಪಿಗೆ ನೀಡಿದ್ದರಿಂದ ಇದು ಲೈಂಗಿಕ ದೌರ್ಜನ್ಯವಲ್ಲ ಎಂದು ಅರ್ಜಿದಾರರು ವಾದಿಸಿದರು.

ಅಪ್ರಾಪ್ತ ವಯಸ್ಕನ ಹೇಳಿಕೆಗಳು ಮತ್ತು ಅರ್ಜಿದಾರರು ಸಲ್ಲಿಸಿದ ಸಲ್ಲಿಕೆಗಳನ್ನು ಪರಿಶೀಲಿಸಿದಾಗ, ಅಪ್ರಾಪ್ತ ವಯಸ್ಕನ ಹೇಳಿಕೆಗಳು ಅರ್ಜಿದಾರರ ಹಕ್ಕುಗಳಿಗೆ ಅನುಕೂಲಕರವಾಗಿದೆ  ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶವು ಒಳಗೊಂಡಿಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ, 16 ವರ್ಷ ವಯಸ್ಸಿನ ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಗಣಿಸಿ, ಲೈಂಗಿಕ ಸಂಭೋಗದಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ಅವರ ಯೋಗಕ್ಷೇಮದ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಸಾಮರ್ಥ್ಯವನ್ನು ಊಹಿಸುವುದು ತಾರ್ಕಿಕವಾಗಿದೆ . ಅಲ್ಲದೆ ಪ್ರಸ್ತುತಪಡಿಸಿದ ಸಾಕ್ಷ್ಯಗಳು ಮತ್ತು ಅಪ್ರಾಪ್ತ ವಯಸ್ಕರ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣವು ಕ್ರಿಮಿನಲ್ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿತು. 
ಈ   ಪರಿಣಾಮವಾಗಿ, ಆಪಾದಿತ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ದಾಖಲಿಸಲಾದ ಎಫ್ ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post 16 ವರ್ಷ ವಯಸ್ಸಿನವರು ಒಪ್ಪಿತ ಲೈಂಗಿಕತೆ ಬಗ್ಗೆ ನಿರ್ಧರಿಸುವಲ್ಲಿ ಸಮರ್ಥರು-ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ತೀರ್ಪು appeared first on Law Guide Kannada.

]]>