Revenue Department Principal Secretary Rajendra Kumar Kataria Archives - Law Guide Kannada https://www.lawguidekannada.com/tag/revenue-department-principal-secretary-rajendra-kumar-kataria/ Online Guide Sun, 17 Nov 2024 15:52:28 +0000 en-US hourly 1 https://wordpress.org/?v=6.9.4 https://www.lawguidekannada.com/wp-content/uploads/2022/09/cropped-Logo_512-32x32.jpg Revenue Department Principal Secretary Rajendra Kumar Kataria Archives - Law Guide Kannada https://www.lawguidekannada.com/tag/revenue-department-principal-secretary-rajendra-kumar-kataria/ 32 32 ಫೆಬ್ರವರಿಯೊಳಗೆ AC ನ್ಯಾಯಾಲಯಗಳಲ್ಲಿನ ಬಾಕಿಯಿರುವ ಎಲ್ಲ ಪ್ರಕರಣಗಳು ಇತ್ಯರ್ಥ https://www.lawguidekannada.com/all-pending-cases-in-ac-courts-to-be-disposed-of-by-february-2025/ Sun, 17 Nov 2024 15:52:28 +0000 http://www.lawguidekannada.com/?p=1044 ಬೆಂಗಳೂರು: ಎಸಿ ಕಂದಾಯ ನ್ಯಾಯಾಲಯಗಳಲ್ಲಿರುವ ಎಲ್ಲಾ ಬಾಕಿ ಪ್ರಕರಣಗಳು ಫೆಬ್ರವರಿಯೊಳಗೆ ಇತ್ಯರ್ಥವಾಗಲಿವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ವಿಕಾಸಸೌಧದಿಂದ...

The post ಫೆಬ್ರವರಿಯೊಳಗೆ AC ನ್ಯಾಯಾಲಯಗಳಲ್ಲಿನ ಬಾಕಿಯಿರುವ ಎಲ್ಲ ಪ್ರಕರಣಗಳು ಇತ್ಯರ್ಥ appeared first on Law Guide Kannada.

]]>
ಬೆಂಗಳೂರು: ಎಸಿ ಕಂದಾಯ ನ್ಯಾಯಾಲಯಗಳಲ್ಲಿರುವ ಎಲ್ಲಾ ಬಾಕಿ ಪ್ರಕರಣಗಳು ಫೆಬ್ರವರಿಯೊಳಗೆ ಇತ್ಯರ್ಥವಾಗಲಿವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಉಪ ವಿಭಾಗಾಧಿಕಾರಿ (ಎ.ಸಿ) ಕಂದಾಯ ನ್ಯಾಯಾಲಯದಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ ಶೇ.80ರಷ್ಟು ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ. ಬಾಕಿ ಪ್ರಕರಣಗಳ ಇತ್ಯರ್ಥಕ್ಕಾಗಿಯೇ ಸರ್ಕಾರ 18 ಜನ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಕರಾರು ಅರ್ಜಿಗಳ ವಿಲೇವಾರಿಯನ್ನು ಎಲ್ಲಾ ಅಧಿಕಾರಿಗಳೂ ಇದೇ ವೇಗದಲ್ಲಿ ಮುಂದುವರೆಸಿದರೆ ಮುಂದಿನ ಜನವರಿ ಅಥವಾ ಫೆಬ್ರವರಿಯೊಳಗಾಗಿ ಎಲ್ಲಾ ಬಾಕಿ ಪ್ರಕರಣಗಳೂ ಇತ್ಯರ್ಥವಾಗಲಿದೆ. ಅಲ್ಲದೆ, ಉಪ ವಿಭಾಗಾಧಿಕಾರಿಗಳು ವಾರಕ್ಕೆ ನಾಲ್ಕು ಮತ್ತು ವಿಶೇಷ ಉಪ ವಿಭಾಗಾಧಿಕಾರಿಗಳು ಎರಡು ಪ್ರಕರಣವನ್ನು ವಿಲೇಗೊಳಿಸಬೇಕು” ಎಂದು ಅವರು ಸೂಚಿಸಿದರು.

ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿಗದಿಪಡಿಸಿರುವ ಕಾಲಮಿತಿ 6 ತಿಂಗಳು ಮಾತ್ರ. ಆದರೆ ಕಳೆದ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ನ್ಯಾಯಾಲಯಗಳ ಪ್ರಕರಣಗಳ ವಿಳಂಬದ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಪರಿಣಾಮ ರೈತರು ತೀವ್ರ ತೊಂದರೆ ಒಳಗಾಗಬೇಕಾದ ಸ್ಥಿತಿ ಎದುರಾಗಿತ್ತು” ಎಂದು ಹೇಳಿದರು.

“ಎಸಿ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿ ಇದ್ದ 59,339 ಪ್ರಕರಣಗಳ ಪೈಕಿ ಕಳೆದ ಒಂದು ವರ್ಷದಲ್ಲಿ 44,545 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಹಾಲಿ ಬಾಕಿಯನ್ನು 14,794 ಕ್ಕೆ ಇಳಿಸಲಾಗಿದ್ದು, ಶೇ.80ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ” ಎಂದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು.

ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಎಸಿ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ 59,339 ಪ್ರಕರಣಗಳು ವಿಲೇ ಆಗದೆ ಬಾಕಿ ಉಳಿದಿದ್ದವು. ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇ ಈ ರೀತಿಯಾಗಿ ಮಿತಿಮೀರಿ ವಿಳಂಭವಾಗುವುದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ಗಮನಿಸಿದ ನಮ್ಮ ಸರ್ಕಾರ ಇದಕ್ಕೊಂದು ಪರಿಹಾರ ನೀಡಲು ತೀರ್ಮಾನಿಸಿತ್ತು. ಬಾಕಿ ಪ್ರಕರಣಗಳನ್ನು ವಿಲೇ ಮಾಡಬೇಕು ಎಂದು ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಕಳೆದ ಒಂದು ವರ್ಷದಲ್ಲಿ ಬಾಕಿ ಪ್ರಕರಣಗಳ ವಿಲೇವಾರಿಯ್ನು ಅಭಿಯಾನ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ” ಎಂದರು

“1 ರಿಂದ 5ವರ್ಷಗಳ ಅವಧಿಯಲ್ಲಿ ಬಾಕಿ ಉಳಿದಿದ್ದ 26,551 ಪ್ರಕರಣಗಳ ಪೈಕಿ 10,504 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಇನ್ನೂ 5 ವರ್ಷಕ್ಕೂ ಮೇಲ್ಪಟ್ಟ 32,787 ಪ್ರಕರಣಗಳನ್ನು ಈ ಹಿಂದಿನ ಸರ್ಕಾರ ಬಾಕಿ ಉಳಿಸಿಹೋಗಿತ್ತು. ಇದು ಆಡಳಿತ ಯಂತ್ರ ವೈಫಲ್ಯವಲ್ಲದೆ ಮತ್ತೇನು ಅಲ್ಲ. ಆದರೆ, ಈ ಪ್ರಕರಣಗಳನ್ನೂ ಕಳೆದ ಒಂದು ವರ್ಷದ ಅವಧಿಯಲ್ಲಿ 28,497 ಪ್ರಕರಣಗಳಿಗೆ ಮುಕ್ತಿ ನೀಡಲಾಗಿದೆ. ಕೇವಲ 4290 ಪ್ರಕರಣಗಳನ್ನು ಮಾತ್ರ ಉಳಿಸಲಾಗಿದೆ” ಎಂದು ಶ್ಲಾಘಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಫೆಬ್ರವರಿಯೊಳಗೆ AC ನ್ಯಾಯಾಲಯಗಳಲ್ಲಿನ ಬಾಕಿಯಿರುವ ಎಲ್ಲ ಪ್ರಕರಣಗಳು ಇತ್ಯರ್ಥ appeared first on Law Guide Kannada.

]]>