Signal Jammer in Jail Archives - Law Guide Kannada https://www.lawguidekannada.com/tag/signal-jammer-in-jail/ Online Guide Sun, 09 Nov 2025 01:41:43 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Signal Jammer in Jail Archives - Law Guide Kannada https://www.lawguidekannada.com/tag/signal-jammer-in-jail/ 32 32 ಜೈಲ್ ನಲ್ಲಿ ಮೊಬೈಲ್ ಜಾಮರ್ ಅಳವಡಿಕೆಯಿಂದ ಕೋರ್ಟ್ ನಲ್ಲಿ ಸಮಸ್ಯೆ-ನ್ಯಾಯಾಲಯದ ಮೆಟ್ಟಿಲೇರಿದ ವಕೀಲರ ಸಂಘ https://www.lawguidekannada.com/mobile-jammer-installation-in-jail-causes-problems-in-court-bar-association-moves-court/ Sun, 09 Nov 2025 01:41:43 +0000 http://www.lawguidekannada.com/?p=2702 ಬೆಂಗಳೂರು: ವಿಚಾರಣಾಧೀನ ಖೈದಿಗಳ ನಿಯಂತ್ರಣಕ್ಕೆ ಜೈಲ್ ನಲ್ಲಿ ಹಾಕಿದ ಮೊಬೈಲ್ ಜಾಮರ್ ನಿಂದಾಗಿ ನ್ಯಾಯಾಲಯದಲ್ಲಿ ಸಿಗ್ನಲ್ ಸಮಸ್ಯೆ ಉಂಟಾಗಿದ್ದು ಜಾಮರ್...

The post ಜೈಲ್ ನಲ್ಲಿ ಮೊಬೈಲ್ ಜಾಮರ್ ಅಳವಡಿಕೆಯಿಂದ ಕೋರ್ಟ್ ನಲ್ಲಿ ಸಮಸ್ಯೆ-ನ್ಯಾಯಾಲಯದ ಮೆಟ್ಟಿಲೇರಿದ ವಕೀಲರ ಸಂಘ appeared first on Law Guide Kannada.

]]>
ಬೆಂಗಳೂರು: ವಿಚಾರಣಾಧೀನ ಖೈದಿಗಳ ನಿಯಂತ್ರಣಕ್ಕೆ ಜೈಲ್ ನಲ್ಲಿ ಹಾಕಿದ ಮೊಬೈಲ್ ಜಾಮರ್ ನಿಂದಾಗಿ ನ್ಯಾಯಾಲಯದಲ್ಲಿ ಸಿಗ್ನಲ್ ಸಮಸ್ಯೆ ಉಂಟಾಗಿದ್ದು ಜಾಮರ್ ಅನ್ನು ತೆರವುಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ವಕೀಲರ ಸಂಘ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.

ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ, ಜೈಲು ಅಧೀಕ್ಷಕರು ಸೇರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರು ವಕೀಲರ ಸಂಘ ಮತ್ತದರ ಅಧ್ಯಕ್ಷ ಎಚ್ ವಿ ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಈ ಅರ್ಜಿ ಸಲ್ಲಿಸಿದ್ದರು.

ಮಂಗಳೂರಿನ ಜಿಲ್ಲಾ ಕಾರಾಗೃಹದ ಸುಮಾರು ಒಂದು ಕಿಲೋ ಮೀರ್ ವ್ಯಾಪ್ತಿಯಲ್ಲಿ ನಾಗರಿಕರೂ ಮೊಬೈಲ್ ಜಾಮರ್ನಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಕೀಲರ ಸಂಘ ಹೈಕೋರ್ಟ ನಲ್ಲಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಜಾಮರ್ ಅಳವಡಿಕೆಯಿಂದ ಮೊಬೈಲ್ ನೆಟ್ ವರ್ಕ್ ನಿಷ್ಕ್ರಿಯಗೊಳ್ಳುತ್ತಿದೆ. ಇದರ ವ್ಯಾಪ್ತಿ ಸುಮಾರು ಒಂದರಿಂದ ಒಂದೂವರೆ ಕಿ.ಮೀ ಇದ್ದು ಈ ವ್ಯಾಪ್ತಿಯೊಳಗೆ ಕೋರ್ಟ್ ಹಾಗೂ ಇತರ ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಕೀರ್ಣಗಳು ಇವೆ. ಮಂಗಳೂರು ವಕೀಲರ ಸಂಘದ ಕಚೇರಿಯೂ ಇದೆ. ಜಾಮರ್ ಗಳ ಅಳವಡಿಕೆಯಿಂದ ಕೋರ್ಟ್ ಹಾಗೂ ಸಂಘದ ಕಾರ್ಯಚಟುವಟಿಕೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ವಕೀಲರ ಸಂಘ ದೂರಿದೆ.

ಕಾರಾಗೃಹದ ಆವರಣದೊಳಗೆ ಮಾತ್ರ ಜಾಮರ್ ಕಾರ್ಯನಿರ್ವಹಿಸಿದರೆ ಸಮಸ್ಯೆ ಇಲ್ಲ. ಆದರೆ, ಸುತ್ತಮುತ್ತಲ ಪ್ರದೇಶದಲ್ಲೂ ಇದರಿಂದ ಸಮಸ್ಯೆ ಎದುರಾಗಿದೆ. ಜಾಮರ್ ಗಳಿಂದಾಗಿ ವಕೀಲರು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ಕಷ್ಟ ಅನುಭವಿಸುತ್ತಿದ್ದಾರೆ. ಮೊಬೈಲ್ ನೆಟ ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದ ಸಂಪರ್ಕಗಳು ಕಡಿತಗೊಂಡು ಪರದಾಡುವಂತಾಗಿದೆ. ಜಾಮರ್ ಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘ ಆರೋಪಿಸಿದೆ

ವಕೀಲರ ಸಂಘದ ವಾದ ಆಲಿಸಿದ ನ್ಯಾಯಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ವಸ್ತುಸ್ಥಿತಿ ನ್ಯಾಯಪೀಠದ ಮುಂದಿಡುವಂತೆ ಸರ್ಕಾರಿ ವಕೀಲರಿಗೆ ಒಂದು ವಾರದ ಗಡುವು ನೀಡಿತು.
ಕಾರಾಗೃಹದ ಆವರಣದೊಳಗಿನ ವಿವಿಧ ಸ್ಥಳಗಳಲ್ಲಿ ಹಾಗೂ ಕಾರಾಗೃಹದಿಂದ ಕೋರ್ಟ್ವರೆಗೆ ಮತ್ತು ನ್ಯಾಯಾಲಯದ ವಿವಿಧ ಸ್ಥಳಗಳಲ್ಲಿ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಖಚಿತಪಡಿಸುವ ತಾಂತ್ರಿಕ ವರದಿ ಸಲ್ಲಿಸಬೇಕು. ಜಾಮರ್ ಗಳಿಂದ ಬರುವ ಜಾಮಿಂಗ್ ಸಿಗ್ನಲ್ ಗಳು ನ್ಯಾಯಾಲಯದಲ್ಲಿ ಮೊಬೈಲ್ ಸಿಗ್ನಲ್ ಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುತ್ತವೆಯೇ ಎಂಬ ಬಗ್ಗೆಯೂ ವರದಿಯಲ್ಲಿ ವಿವರಿಸಿರಬೇಕು ಎಂದು ನಿರ್ದೇಶನ ನೀಡಿ ನ್ಯಾಯಪೀಠ ಮುಂದಿನ ವಿಚಾರಣೆ ನವೆಂಬರ್ 18ಕ್ಕೆ ಮುಂದೂಡಿಕೆ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಜೈಲ್ ನಲ್ಲಿ ಮೊಬೈಲ್ ಜಾಮರ್ ಅಳವಡಿಕೆಯಿಂದ ಕೋರ್ಟ್ ನಲ್ಲಿ ಸಮಸ್ಯೆ-ನ್ಯಾಯಾಲಯದ ಮೆಟ್ಟಿಲೇರಿದ ವಕೀಲರ ಸಂಘ appeared first on Law Guide Kannada.

]]>