Teachers Punish Students Archives - Law Guide Kannada https://www.lawguidekannada.com/tag/teachers-punish-students/ Online Guide Tue, 28 Oct 2025 11:00:14 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Teachers Punish Students Archives - Law Guide Kannada https://www.lawguidekannada.com/tag/teachers-punish-students/ 32 32 ಮಕ್ಕಳನ್ನು ಶಿಕ್ಷಕರು ದಂಡಿಸಿದ್ರೆ ಅದು ಅಪರಾಧವಲ್ಲ – ಹೈಕೋರ್ಟ್ https://www.lawguidekannada.com/it-is-not-a-crime-if-teachers-punish-children-in-school-kerala-high-court/ Tue, 28 Oct 2025 11:00:14 +0000 http://www.lawguidekannada.com/?p=2632 ತಿರುವನಂತಪುರಂ: ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೇ ಹಾಗೂ ಶಿಸ್ತು ಕಾಪಾಡದ ಮಕ್ಕಳಿಗೆ ಶಿಕ್ಷಕರು ಛಡಿಯೇಟು ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ...

The post ಮಕ್ಕಳನ್ನು ಶಿಕ್ಷಕರು ದಂಡಿಸಿದ್ರೆ ಅದು ಅಪರಾಧವಲ್ಲ – ಹೈಕೋರ್ಟ್ appeared first on Law Guide Kannada.

]]>
ತಿರುವನಂತಪುರಂ: ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೇ ಹಾಗೂ ಶಿಸ್ತು ಕಾಪಾಡದ ಮಕ್ಕಳಿಗೆ ಶಿಕ್ಷಕರು ಛಡಿಯೇಟು ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರಾದವರು ಮಕ್ಕಳಿಗೆ ಶಿಸ್ತುಕಲಿಸಲು ದಂಡನೆಗೊಳಪಡಿಸಿದರೆ ಅದನ್ನ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇದೀಗ ಕೇರಳ ಹೈಕೋರ್ಟ್, ಶಿಸ್ತು ಕಲಿಸುವ ಉದ್ದೇಶದಿಂದ ಮಕ್ಕಳನ್ನು ಶಿಕ್ಷಕರು ದಂಡಿಸಿದ್ರೆ ಅದು ಅಪರಾಧವಲ್ಲ ಎಂದು ತೀರ್ಪು ನೀಡಿದೆ.

ಶಿಸ್ತು ಕಲಿಯದ ಮಕ್ಕಳ ಕಾಲಿಗೆ ಛಡಿಯೇಟು ನೀಡಿದ ಶಿಕ್ಷಕನನ್ನು ಆರೋಪದಿಂದ ಮುಕ್ತಗೊಳಿಸಿರುವ ಕೇರಳ ಹೈಕೋರ್ಟ್, ಮಕ್ಕಳನ್ನು ಶಿಕ್ಷಕರು ದಂಡಿಸುವುದು ಸರಿ ಎಂದು ತೀರ್ಪು ಪ್ರಕಟಿಸಿದೆ. ಕೇರಳ ಹೈಕೋರ್ಟ್ ಶಾಲಾ ಶಿಕ್ಷಕರೊಬ್ಬರು ತನ್ನ ವಿದ್ಯಾರ್ಥಿಗಳನ್ನು ಹೊಡೆದಿದ್ದಕ್ಕಾಗಿ ವಿದ್ಯರ್ಥಿಯ ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಿ ಅವರು ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತು. ನ್ಯಾಯಮೂರ್ತಿ ಸಿ. ಪ್ರತೀಪ್ ಕುಮಾರ್ ವಿವಿಧ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದರು, ಇದು ಶಿಕ್ಷಕನಿಂದ ಮಗುವಿಗೆ ವಿಧಿಸಬಹುದಾದ ದೈಹಿಕ ಶಿಕ್ಷೆಯ ಪ್ರಮಾಣವನ್ನು ಚರ್ಚಿಸಿತು. ಮಗಳು ಜವಾಬ್ದಾರಿಯುತ ಪ್ರಜೆ ಆಗಬೇಕೆಂದರೆ ದಂಡನೆ ಅಗತ್ಯವಾಗಿದೆ, ಶಿಕ್ಷಕರ ಕ್ರಮ ಸರಿ ಇದೆ ಎಂದು ಕೋರ್ಟ್ ತೀರ್ಪು ನೀಡಿದೆ.

ಪಾಲಕ್ಕಾಡ್ ಶಾಲೆಯಲ್ಲಿ 2019 ರಲ್ಲಿ 5 ನೇ ತರಗತಿ ಓದುತ್ತಿದ್ದ ಮಕ್ಕಳ ಕಾಲಿಗೆ ಛಡಿಯೇಟು ನೀಡಿದ ಶಿಕ್ಷಕನ ಕ್ರಮ ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪೋಷಕರು ತಮ್ಮ ಮಕ್ಕಳ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡುತ್ತಾರೆ. ಮಕ್ಕಳನ್ನು ಶಿಕ್ಷಿಸುವ ಅಧಿಕಾರ ಶಿಕ್ಷಕರಿಗೆ ಇರುತ್ತದೆ. ಈ ಪ್ರಕರಣದಲ್ಲಿ ಶಿಸ್ತು ಕಲಿಸುವುದಕ್ಕಾಗಿ ಶಿಕ್ಷೆ ಕೊಟ್ಟರೇ ಹೊರತು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲ ಎಂದು ಕೋರ್ಟ್ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಮಕ್ಕಳನ್ನು ಶಿಕ್ಷಕರು ದಂಡಿಸಿದ್ರೆ ಅದು ಅಪರಾಧವಲ್ಲ – ಹೈಕೋರ್ಟ್ appeared first on Law Guide Kannada.

]]>