ಜಾತಿ ನಿoದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್

ನವದೆಹಲಿ: ಜಾತಿ ನಿ0ದನೆಯ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯವಾಗುತ್ತದೆ. ಜಾತಿಯ ಆಧಾರದಲ್ಲಿ ಅವಮಾನ ಮಾಡುವ ಉದ್ದೇಶವಿಲ್ಲದೆ ದೂರುದಾರ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಮಾತ್ರಕ್ಕೆ ಪ್ರಕರಣವನ್ನು ಎಸ್ಸಿ, ಎಸ್ಡಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಾಸಕ ಪಿ.ವಿ.ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಲಯಾಳಂ ಯೂಟ್ಯೂಬ್ ಸುದ್ದಿ ವಾಹಿನಿ ‘ಮರುನಾಡನ್ ಮಲಯಾಳಿ’ ಸಂಪಾದಕ ಶಾಜನ್ ಸ್ಕರಿಯಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಶಾಸಕ ಪಿ.ವಿ. ಶ್ರೀನಿಜನ್ ತಮ್ಮ ಮೇಲೆ ದಾಖಲಿಸಿದ್ದ ಎಸ್ಸಿ ಎಸ್ಡಿ ದೌರ್ಜನ್ಯ ಕಾಯ್ದೆ ದುರುದ್ಧೇಶಪೂರಿತವಾಗಿದೆ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎ0ದು ಯೂಟ್ಯೂಬರ್, ಮರುನಾಡನ್ ಮಲಯಾಳಿ ಸಂಪಾದಕ ಶಾಜನ್ ಸ್ಕಾರಿಯಾ ಈ ಹಿಂದೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಶಾಜನ್ ಸ್ಕಾರಿಯಾ ಜಾಮೀನು ಮಂಜೂರು ಮಾಡಿರುವ ನ್ಯಾಯಪೀಠ, ಜಾತಿಯ ಆಧಾರದಲ್ಲಿ ಅವಮಾನ ಮಾಡುವ ಉದ್ದೇಶ ಇರದೇ ದೂರುದಾರ ಪರಿಶಿಷ್ಟ ಜಾತಿ (ಎಸ್ಸಿ) ಅಥವಾ ಪರಿಶಿಷ್ಟ ಪಂಗಡ (ಎಸ್ಟಿ) ಸದಸ್ಯರನ್ನು ಅವಮಾನಿಸುವುದು ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿಯಲ್ಲಿ ಅಪರಾಧವಲ್ಲ. ಅಸ್ಪೃಶ್ಯತೆ, ಜಾತಿ ತಾರತಮ್ಯ, ಪಾವಿತ್ಯತೆಗಳ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಅವಮಾನವಾಗಿದ್ದಲ್ಲಿ1989ರ ಕಾಯ್ದೆಯಡಿ ಪರಿಗಣಿಸಬಹುದು ಎಂದು ತಿಳಿಸಿದೆ.
ಸೆಕ್ಷನ್ 3 (1) (ಆರ್) ಅಡಿಯಲ್ಲಿ “ಅವಮಾನಿಸುವ ಉದ್ದೇಶ” (ಸಾರ್ವಜನಿಕ ದೃಷ್ಟಿಕೋನದಲ್ಲಿ ಎಸ್ಸಿ / ಎಸ್ಟಿ ಸದಸ್ಯರನ್ನು ಅವಮಾನಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಅಥವಾ ಬೆದರಿಕೆ) ಎಂಬ ಪದಗುಚ್ಛವು ಉದ್ದೇಶಪೂರ್ವಕ ಅವಮಾನ ಅಥವಾ ಬೆದರಿಕೆಗೆ ಒಳಗಾದ ವ್ಯಕ್ತಿಯ ಜಾತಿ ಗುರುತಿನೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ನ್ಯಾಯಾಲಯ ವಿವರಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ