07/03/2026

Law Guide Kannada

Online Guide

ಅಮಲ್ಜಾರಿ ಪ್ರಕ್ರಿಯೆ ವೇಳೆ ಅವಾರ್ಡ್ ದಿನಾಂಕ ಪರಿಗಣಿಸುವಂತಿಲ್ಲ- ಹೈಕೋರ್ಟ್ ತೀರ್ಪು

ಬೆಂಗಳೂರು: ಸಹಕಾರಿ ಕಾಯ್ದೆಯಡಿ ಅಮಲ್ಜಾರಿ ಪ್ರಕ್ರಿಯೆ ನಡೆಸುವಾಗ ಮಧ್ಯಸ್ಥಿಕೆದಾರರ ಅವಾರ್ಡ್ ದಿನಾ0ಕ ಪರಿಗಣಿಸುವಂತಿಲ್ಲ. ಅದಕ್ಕೆ ಬದಲಾಗಿ ರಿಜಿಸ್ಟ್ರಾರ್ ನೀಡುವ ರಿಕವರಿ ಸರ್ಟಿಫಿಕೇಟ್ ನೀಡುವ ದಿನಾಂಕವನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಕರ್ನಾಟಕ ಹೈಕೋರ್ಟ್ನ ನ್ಯಾ. ಸಿ.ಎ0. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಸಹಕಾರಿ ಕಾಯ್ದೆಯಡಿ ಮಧ್ಯಸ್ಥಿಕೆದಾರರು ನೀಡುವ ಡಿಕ್ರಿಯನ್ನು ಪರಿಗಣಿಸಿ ಅಮಲ್ಜಾರಿ ಮಾಡುವಾಗ ಅವಾರ್ಡ್ ದಿನಾಂಕವನ್ನು ಪರಿಗಣಿಸುವಂತಿಲ್ಲ ಎ0ದು ತಿಳಿಸಿದೆ.

ಕರ್ನಾಟಕ ಸಹಕಾರಿ ಕಾಯ್ದೆಯ ಅಡಿಯಲ್ಲಿ ಮಧ್ಯಸ್ತಿಕೆದಾರರು ನೀಡುವ ಅವಾರ್ಡ್ ಅನ್ನು ಡಿಕ್ರಿ ಎಂದು ಪರಿಗಣಿಸಬಹುದು. ಅದನ್ನು ಸಿವಿಲ್ ನ್ಯಾಯಾಲಯದ ಡಿಕ್ರಿಗೆ ಸರಿಸಮನಾಗಿ ಪರಿಗಣಿಸಿ ಜಾರಿ ಮಾಡಬಹುದಾಗಿದೆ. ಅದನ್ನು ಜಾರಿಗೊಳಿಸಲು 12 ವರ್ಷಗಳ ಕಾಲಮಿತಿ ಇದೆ. ಆದರೆ, ಈ ಕಾಲಮಿತಿಯನ್ನು ಪರಿಗಣಿಸುವಾಗ ಮಧ್ಯಸ್ತಿಕೆದಾರರು ನೀಡುವ ಡಿಕ್ರಿಯ ದಿನಾ0ಕಕ್ಕೆ ಬದಲಾಗಿ ಸಹಕಾರಿ ಸಂಘಗಳ ನೋಂದಣಾಧಿಕಾರಿ (ರಿಜಿಸ್ಟ್ರಾರ್) ನೀಡುವ ವಸೂಲಾತಿ ಪ್ರಮಾಣಪತ್ರದ ದಿನಾ0ಕವನ್ನು ಪರಿಗಣಿಸಬೇಕು ಎ0ದು ನ್ಯಾಯಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.