07/03/2026

Law Guide Kannada

Online Guide

ಇದು ವ್ಯಾಪಾರ ಚಟುವಟಿಕೆಯಲ್ಲ: ವಕೀಲರ ಕಚೇರಿಗೆ ವಾಣಿಜ್ಯ ಬಳಕೆಯ ಶುಲ್ಕ ಅನ್ವಯಿಸುವಂತಿಲ್ಲ- ಹೈಕೋರ್ಟ್

ಬೆಂಗಳೂರು: ವಕೀಲರ ವೃತ್ತಿ ಎಂಬುದು ವ್ಯಾಪಾರಿ ಚಟುವಟಿಕೆಯಲ್ಲ. ಹೀಗಾಗಿ ವಕೀಲರ ಕಚೇರಿಗೆ ವಾಣಿಜ್ಯ ವಿದ್ಯುತ್ ಶುಲ್ಕ ಅನ್ವಯಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ನ್ಯಾಯವಾದಿಗಳ ವೃತ್ತಿ ವಾಣಿಜ್ಯ ಚಟುವಟಿಕೆಯಲ್ಲ. ಹಾಗಾಗಿ ವಾಣಿಜ್ಯ ಬಳಕೆಯ ಶುಲ್ಕವನ್ನು ವಕೀಲರ ಕಚೇರಿಗೆ ಅನ್ವಯಿಸುವಂತಿಲ್ಲ ಎಂದು ಸೂಚಿಸಿದೆ.

ವಕೀಲರ ಕಚೇರಿ ವಾಣಿಜ್ಯ ಉದ್ದೇಶಕ್ಕೆ ಅಥವಾ ವ್ಯಾಪಾರದ ಉದ್ದೇಶಕ್ಕೆ ಸ್ಥಾಪಿತವಾಗಿಲ್ಲ. ಇಲ್ಲಿ ವಕೀಲರು ಮತ್ತು ಕಾನೂನು ವೃತ್ತಿಪರರು ಬೌದ್ಧಿಕ ಮತ್ತು ನೈತಿಕ ವೃತ್ತಿಯನ್ನು ನಿಯಂತ್ರಿಸುತ್ತಾರೆ. ವೈಯಕ್ತಿಕ ಕೌಶಲ್ಯಗಳ ಮೇಲೆ ಸ್ಥಾಪಿತವಾದ ನ್ಯಾಯದ ಅಗತ್ಯತೆ ಮತ್ತು ಸಮಗ್ರತೆ ಮತ್ತು ವಿಶ್ವಾಸಾರ್ಹ ಜವಾಬ್ದಾರಿಯನ್ನು ಅವರು ಹೊಂದಿರುತ್ತಾರೆ. ಹೀಗಾಗಿ ವಕೀಲರ ಕಚೇರಿಗೆ ವಾಣಿಜ್ಯ ಬಳಕೆಯ ಶುಲ್ಕ ವಿಧಿಸಬಾರದು ಎಂದು ತೀರ್ಪು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.