ಸಾರ್ವಜನಿಕ ಟ್ರಸ್ಟ್ ವಿರುದ್ಧ ದಾವೆ ಹೂಡಲು ಅನುಸರಿಸಬೇಕಾದ ಕ್ರಮಗಳೇನು..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಬೆಂಗಳೂರು: ಸಾರ್ವಜನಿಕ ಟ್ರಸ್ಟ್ ಗಳ ವಿರುದ್ದ ದಾವೆಯನ್ನು ಹೂಡುವ ವೇಳೆ ಅನುಸರಿಸಬೇಕಾದ ಕಾರ್ಯವಿಧಾನಗಳನ್ನ ತಿಳಿದುಕೊಳ್ಳಬೇಕು. ಸಾರ್ವಜನಿಕ ದತ್ತಿ ಅಥವಾ ಧಾರ್ಮಿಕ ಟ್ರಸ್ಟ್ ಗಳೊಂದಿಗೆ 1908 ರ ಸಿವಿಲ್ ಪ್ರೊಸೀಜರ್ ಕೋಡ್ (CPC)ನ ಸೆಕ್ಷನ್ 92 ವ್ಯವಹರಿಸುತ್ತದೆ. ಟ್ರಸ್ಟ್ ನಿಯಮಗಳ ಉಲ್ಲಂಘನೆ, ಟ್ರಸ್ಟ್ ನ ಅಡಳಿತ ಅಥವಾ ಟ್ರಸ್ಟ್ ನಿರ್ವಹಣೆಗೆ ಸಂಬಂಧಿಸಿದ ನಿರ್ದೇಶನಗಳಿಗೆ ಸಂಬಂಧಿಸಿದಂತೆ ದಾವೆಗಳನ್ನು ಸಲ್ಲಿಸಲು ವಿಶೇಷ ಕಾರ್ಯವಿಧಾನವನ್ನು ಒದಗಿಸುತ್ತದೆ.
CPC ಯ ಸೆಕ್ಷನ್ 92 ರ ಅಡಿಯಲ್ಲಿ ಟ್ರಸ್ಟ್ ವಿರುದ್ದ ದಾವೆ ಹೂಡಲು ಹಂತ-ಹಂತದ ಕಾರ್ಯವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ
ದಾವೆಯ ಸ್ಮರೂಪ: ವಾದಪತ್ರ ಒಳಗೊಂಡಿರಬೇಕು
ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ರಚಿಸಲಾದ ಸಾರ್ವಜನಿಕ ಟ್ರಸ್ಟ್ ನ ನಿಯಮಗಳ ಉಲ್ಲಂಘನೆ ಅಥವಾ ಅಂತಹ ಟ್ರಸ್ಟ್ ನ ಆಡಳಿತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ನಿರ್ದೇಶನಗಳನ್ನು ಪಡೆಯುವ ವಿಷಯಗಳನ್ನು ವಾದಪತ್ರವು ಒಳಗೊಂಡಿರಬೇಕು. ಅಂತಹ ದಾವೆಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಪರಿಹಾರ ಕೋರಿ ಸಲ್ಲಿಸಲಾಗುತ್ತದೆ. ಟ್ರಸ್ಟಿಗಳ ತೆಗೆದುಹಾಕುವಿಕೆ, ಹೊಸ ಟ್ರಸ್ಟಿಗಳ ನೇಮಕಾತಿ, ಟ್ರಸ್ಟ್ ಗಾಗಿ ಯೋಜನೆಯ ಇತ್ಯರ್ಥ, ಸರಿಯಾದ ಆಡಳಿತಕ್ಕಾಗಿ ನಿರ್ದೇಶನಗಳು
ಕೋರ್ಟ್ ಅನುಮತಿ ಪಡೆಯಬೇಕು.
ಯಾವುದೇ ಟ್ರಸ್ಟ್ ವಿರುದ್ದ ದಾವೆ ಹೂಡಬೇಕಾದರೇ ನ್ಯಾಯಾಲಯದ ಅನುಮತಿ ಪಡೆಯುವುದು ಅವಶ್ಯಕ. ಟ್ರಸ್ಟ್ನ ಹಿತಾಸಕ್ತಿಯನ್ನು ಕಾಪಾಡಲು ದಾವೆಯನ್ನು ಹೂಡಲಾಗಿದೆ ಎಂದು ನ್ಯಾಯಾಲಯವು ತೃಪ್ತಿಪಟ್ಟರೆ. ದಾವೆಗೆ ಅನುಮತಿ ನೀಡುತ್ತದೆ. ಮೂಲ ನ್ಯಾಯವ್ಯಾಪ್ತಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ (ಸಾಮಾನ್ಯವಾಗಿ ಪ್ರಧಾನ ಜಿಲ್ಲಾ ನ್ಯಾಯಾಲಯ) ಅನುಮತಿ ಕೋರಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿಯನ್ನು ಸಂಕೀರ್ಣ ಪ್ರಕರಣ (ಮೀಸಲೇನಿಯಸ್ ಕೇಸ್) ಎಂದು ನೋಂದಾಯಿಸಲಾಗುವುದು.
ಅರ್ಜಿಯು ಈ ಕೆಳಗಿನವುಗಳನ್ನು ನಿರ್ದಿಷ್ಟಪಡಿಸಬೇಕು:
ಟ್ರಸ್ಟ್ನ ನಿಯಮ ಉಲ್ಲಂಘನೆ ಅಥವಾ ನ್ಯಾಯಾಲಯದ ನಿರ್ದೇಶನಗಳ ಅಗತ್ಯತೆ. ಟ್ರಸ್ಟ್ನಲ್ಲಿ ಅರ್ಜಿದಾರರ ಹಿತಾಸಕ್ತಿಯ ಪುರಾವೆಗಳು. ನ್ಯಾಯಾಲಯವು ಟ್ರಸ್ಟಿಗಳಿಗೆ ನೋಟಿಸ್ ನೀಡಬಹುದು ಮತ್ತು ಅನುಮತಿ ನೀಡುವ ಮೊದಲು ಅವರ ವಿಚಾರಣೆಯನ್ನು ನಡೆಸಬಹುದು. ಪ್ರತ್ಯರ್ಜಿದಾರರಿಗೂ ಅವಶ್ಯವಿದ್ದಲ್ಲಿ ನೋಟಿಸು ನೀಡಬಹುದು. ಟ್ರಸ್ಟ್ನ ಹಿತಾಸಕ್ತಿಯನ್ನು ಕಾಪಾಡಲು ದಾವೆಯನ್ನು ಹೂಡಲಾಗಿದೆ ಎಂದು ನ್ಯಾಯಾಲಯವು ತೃಪ್ತಿಪಟ್ಟರೆ. ದಾವೆಗೆ ಅನುಮತಿ ನೀಡಲಾಗುತ್ತದೆ.
ಯಾರು ದಾವೆ ಹೂಡಬಹುದು?
ಟ್ರಸ್ಟ್ನಲ್ಲಿ ಆಸಕ್ತಿ ಹೊಂದಿರುವ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ದಾವೆಯನ್ನು ಹೊಡಬೇಕು. ಇದರರ್ಥ ಫಲಾನುಭವಿಗಳು ಅಥವಾ ಟ್ರಸ್ಟ್ ನಲ್ಲಿ ನಿಜವಾದ ಮತ್ತು ಗಣನೀಯ ಆಸಕ್ತಿ ಹೊಂದಿರುವ ವ್ಯಕ್ತಿಗಳಾಗಿರಬೇಕು, ಅಪರಿಚಿತರಲ್ಲ. ದಾವೆ ಹೂಡುವ ಮೊದಲು ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ. ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಅವಶ್ಯಕತೆ ಮತ್ತು ನ್ಯಾಯಾಲಯದ ಅನುಮತಿಯು ಕ್ಷುಲ್ಲಕ ಅಥವಾ ಅನಗತ್ಯ ದಾವೆಯನ್ನು ತಡೆಗಟ್ಟುವ ಉದ್ದೇಶ ಹೊಂದಿದೆ.
ದಾವೆಯು ನಿಯಮಿತ ಸಿವಿಲ್ ದಾವೆಯಂತೆ ಮುಂದುವರಿಯುತ್ತದೆ ಪ್ರತಿವಾದಿಗಳ ಲಿಖಿತ ಹೇಳಿಕೆ, ವಿವಾದಾಂಶಗಳ ರಚನೆ, ಸಾಕ್ಷಿ ವಿಚಾರಣೆ, ಪುರಾವೆಗಳು, ಉಭಯ ಪಕ್ಷಕಾರರ ವಾದಗಳನ್ನು ಆಲಿಸಿದ ಬಳಿಕ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿ ನ್ಯಾಯಾಲಯವು ತೀರ್ಪು ನೀಡುತ್ತದೆ. ಟ್ರಸ್ಟ್ ಸಾರ್ವಜನಿಕ ಮತ್ತು ಧಾರ್ಮಿಕ ದತ್ತಿ ಆಗಿರಬೇಕು. ನ್ಯಾಯಾಂಗ ಹಸ್ತಕ್ಷೇಪದ ಅವಶ್ಯಕತೆಯಿರಬೇಕು. ನ್ಯಾಯಾಲಯವು ಒಂದು ಯೋಜನೆಯನ್ನು ರೂಪಿಸಬಹುದು. ನಿರ್ವಾಹಕರನ್ನು ನೇಮಿಸಬಹುದು. ಅಥವಾ ಸರಿಯಾದ ಟ್ರಸ್ಟ್ ನಿರ್ವಹಣೆಗೆ ಅಗತ್ಯವಾದ ಯಾವುದೇ ಆದೇಶವನ್ನು ನೀಡಬಹುದು.
ನ್ಯಾಯಾಲಯವು ಅಗತ್ಯ ನಿರ್ದೇಶನಗಳೊಂದಿಗೆ ತೀರ್ಪು ನೀಡುತ್ತದೆ. ತೀರ್ಪು ಉಭಯ ಪಕ್ಷಕಾರರಿಗೆ ಬದ್ದ ಪಡಿಸತಕ್ಕದ್ದಾಗಿದೆ ಮತ್ತು ಜಾರಿಗೊಳಿಸಬಹುದಾಗಿದೆ. ಅನೇಕ ಸಂದರ್ಭಗಳಲ್ಲಿ, ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳ ಜಾರಿಗಾಗಿ ಮೇಲ್ವಿಚಾರಣೆ ಮಾಡಲು ನ್ಯಾಯಾಲಯವು ನ್ಯಾಯವ್ಯಾಪ್ತಿಯನ್ನು ಉಳಿಸಿಕೊಳ್ಳಬಹುದು (ಉದಾ. ಯೋಜನೆಗಳ ಅನುಮೋದನೆ).
ಖಾಸಗಿ ಟ್ರಸ್ಟ್ಗಳು ವೈಯಕ್ತಿಕ ಹಕ್ಕುಗಳಿಗಾಗಿ ಹೂಡಿದ ದಾವೆಗಳು, (ಆಸ್ತಿಯ ಮರುಸ್ಥಾಪನೆ), ಹಾನಿ ಅಥವಾ ಪರಿಹಾರಕ್ಕಾಗಿ ದಾವೆಗಳು, ಒಬ್ಬ ವ್ಯಕ್ತಿಯಿಂದ ಸಲ್ಲಿಸಲಾದ ದಾವೆಗಳು (ಅನುಮತಿ ಇಲ್ಲದೆ)
ಮೂಲ ನ್ಯಾಯವ್ಯಾಪ್ತಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಬೇಕು. ಸಾಮಾನ್ಯವಾಗಿ, ಇದರರ್ಥ ಟ್ರಸ್ಟ್ ಇರುವ ಅಥವಾ ಕಾರ್ಯನಿರ್ವಹಿಸುವ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ದಾವೆಯನ್ನು ಸಲ್ಲಿಸಬೇಕು. ಟ್ರಸ್ಟ್ ಗೆ ಸಂಬಂಧಿತ ದಾವೆಗಳನ್ನು ಹೂಡುವ ಮೊದಲು ಅನುಸರಿಸಬೇಕಾದ ನಿಯಮಗಳನ್ನು ಕರ್ನಾಟಕ ಸಿವಿಲ್ ರೂಲ್ಸ್ ಆಫ್ ಪ್ರಾಕ್ಟಿಸ್ ನ ಅಧ್ಯಾಯ II (ಎ) ನಿಯಮ 16 (ಎ) ಯಲ್ಲಿ ವಿವರಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
