ಹೆಂಡತಿಗೆ ಪತಿಯ ಮನೆಯಲ್ಲಿ ನೆಲೆಸುವ, ವಾಸಿಸುವ ಹಕ್ಕಿದೆ – ಹೈಕೋರ್ಟ್
ನವದೆಹಲಿ: ಪತ್ನಿಗೆ ‘ಪತಿಯ ಮನೆಯಲ್ಲಿ ನೆಲೆಸುವ, ವಾಸಿಸುವ ಹಕ್ಕಿದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನಮ್ಮ ಮನೆಯಲ್ಲಿ ಸೊಸೆಗೆ ವಾಸ ಮಾಡುವ ಹಕ್ಕಿಲ್ಲ ಎಂದು ಮನವಿ ಮಾಡಿ ಮಹಿಳೆಯೊಬ್ಬರ ಅತ್ತೆ ಮತ್ತು ಮಾವ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ನರೂಲಾ ಅವರಿದ್ದ ಪೀಠ ವಜಾಗೊಳಿಸಿ ಈ ತೀರ್ಪು ನೀಡಿದೆ.
ಮದುವೆಯಾದ ನಂತರ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನೆಲಸುವ ಹಕ್ಕನ್ನು ಪಡೆಯುತ್ತಾಳೆ. ಪತಿಯನ್ನು ಆತನ ಪೋಷಕರು ಮನೆಯಿಂದ ಹೊರಹಾಕಿದರೂ ಸಹ ಸೊಸೆಯು ಅ ಮನೆಯಲ್ಲಿ ಇರುವ ಹಕ್ಕನ್ನು ಹೊಂದಿರುತ್ತಾಳೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ
ಏನಿದು ಪ್ರಕರಣ ?
ಅರ್ಜಿದಾರರ ಮಗನಿಗೆ 2010ರಲ್ಲಿ ವಿವಾಹವಾಗಿತ್ತು. ಬಳಿಕ ದಂಪತಿ ಮತ್ತು ಅರ್ಜಿದಾರರು ಒಂದೇ ಮನೆಯಲ್ಲಿ ವಾಸವಿದ್ದರು. ಒಂದು ವರ್ಷದ ಬಳಿಕ ಸಂಬಂಧ ಹಳಸಿ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಪರಸ್ಪರ ದಾಖಲಿಸಿಕೊಂಡಿದ್ದರು. ಈ ಮಧ್ಯೆ ಅರ್ಜಿದಾರರು, ತಾವು ವಾಸವಿರುವ ನಿವಾಸವು ತಮ್ಮ ಸ್ವಯಾರ್ಜಿತವಾಗಿದ್ದು, ಇದರಲ್ಲಿ ಸೊಸೆಗೆ ವಾಸ ಮಾಡುವ ಹಕ್ಕಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
