ಪರಪುರುಷನ ಜೊತೆ ಪತ್ನಿಯ ಅಶ್ಲೀಲ ಚಾಟಿಂಗ್ ಕೃತ್ಯ ಮಾನಸಿಕ ಕ್ರೌರ್ಯಕ್ಕೆ ಸಮ: ಮಧ್ಯಪ್ರದೇಶ ಹೈಕೋರ್ಟ್

ಮಧ್ಯಪ್ರದೇಶ: ಪರ ಪುರುಷನ ಜೊತೆಗೆ ಪತ್ನಿಯು ಅಶ್ಲೀಲ ಚಾಟ್ (ಸಂದೇಶ ಮಾತುಕತೆ) ನಡೆಸುವುದು, ಆಕ್ಷೇಪಣೆಯ ಹೊರತಾಗಿಯೂ ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿಸಿದರೆ ಅದು ಮಾನಸಿಕ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ತನ್ನ ವಿವಾಹ ರದ್ದತಿಯನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್, ಅನ್ಯರ ಜೊತೆ ಅಶ್ಲೀಲ ಚಾಟಿಂಗ್ ಮಾಡುವ ಪತ್ನಿಯ ಕೃತ್ಯ ಮಾನಸಿಕ ಕ್ರೌರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ ವಿಚ್ಚೇದನಕ್ಕೆ ಅನುಮತಿ ನೀಡಿದೆ. ಹೈಕೋರ್ಟ್ ವಿವೇಕ್ ರಸಿಯಾ ಮತ್ತು ಗಜೇಂದ್ರ ಸಿಂಗ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ನ ಇಂದೋರ್ ಪೀಠದಲ್ಲಿ ನ್ಯಾಯಮೂರ್ತಿ ವಿವೇಕ್ ರುಸಿಯಾ ಮತ್ತು ನ್ಯಾಯಮೂರ್ತಿ ಗಜೇಂದ್ರ ಸಿಂಗ್ ಈ ಪ್ರಕರಣದ ವಿಚಾರಣೆ ನಡೆಸಿ, ‘ಯಾವುದೇ ಪತಿ ತನ್ನ ಹೆಂಡತಿ ಬೇರೆಯವರೊಂದಿಗೆ ಮೊಬೈಲ್ ನಲ್ಲಿ ಅಶ್ಲೀಲ ಚಾಟಿಂಗ್ ಮೂಲಕ ಮಾತನಾಡುವುದನ್ನು ಸಹಿಸುವುದಿಲ್ಲ. ಮದುವೆಯ ನಂತರ ಪತಿ ಮತ್ತು ಪತ್ನಿ ಇಬ್ಬರೂ ಸ್ನೇಹಿತರೊಂದಿಗೆ ಮೊಬೈಲ್, ಚಾಟಿಂಗ್ ಮತ್ತು ಇತರ ವಿಧಾನಗಳ ಮೂಲಕ ಸಂಭಾಷಣೆ ನಡೆಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಆದರೆ ಸಂಭಾಷಣೆಯ ಮಟ್ಟವು ಯೋಗ್ಯ ಮತ್ತು ಘನತೆಯಿಂದ ಕೂಡಿರಬೇಕು ಎಂದಿದೆ.
ಪರ ಪುರುಷನ ಜೊತೆಗೆ ಪತ್ನಿಯು ಅಶ್ಲೀಲ ಚಾಟ್ (ಸಂದೇಶ ಮಾತುಕತೆ) ನಡೆಸುವುದು, ಆಕ್ಷೇಪಣೆಯ ಹೊರತಾಗಿಯೂ ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿಸಿದರೆ ಅದು ಮಾನಸಿಕ ಕ್ರೌರ್ಯ. ಹೀಗಾಗಿ ಪತ್ನಿಯ ಕೃತ್ಯವನ್ನು ಪರಿಗಣಿಸಿ ಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಯಾವುದೇ ಪತಿ ತನ್ನ ಪತ್ನಿಯು ಮೊಬೈಲ್ ಮೂಲಕ ಈ ರೀತಿಯ ಅಶ್ಲೀಲ ಸಂದೇಶ ಸಂವಾದದಲ್ಲಿ ತೊಡಗುವುದನ್ನು ಸಹಿಸುವುದಿಲ್ಲ. ಮದುವೆಯ ನಂತರ ಪತಿ ಮತ್ತು ಪತ್ನಿ ಇಬ್ಬರೂ ಸ್ನೇಹಿತರೊಂದಿಗೆ ಮೊಬೈಲ್, ಚಾಟಿಂಗ್ ಮತ್ತು ಇತರ ವಿಧಾನದ ಮೂಲಕ ಸಂಭಾಷಣೆ ನಡೆಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಆದರೆ, ಚಾಟಿಂಗ್ ಸಭ್ಯತೆ ಮತ್ತು ಘನತೆಯಿಂದ ಕೂಡಿರಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ