24/04/2026

Law Guide Kannada

Online Guide

ಕರ್ನಾಟಕ ಬಾಡಿಗೆ ಕಾಯ್ದೆ: ದಾವಾ ಆಸ್ತಿ ಮಾಲಕ ಎಂದು ಸಾಬೀತುಪಡಿಸಿದ್ರೆ ವಿವರ ವಿಚಾರಣೆ ಅಗತ್ಯವಿಲ್ಲ – ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ಬಾಡಿಗೆ ಕಾಯ್ದೆ ಸೆಕ್ಷನ್ 3(e)ಅಡಿಯಲ್ಲಿ ದಾವಾ ಆಸ್ತಿ ಮಾಲಕ ಎಂದು ಸಾಬೀತುಪಡಿಸಿದರೇ ಸಾಕು ವಿವರವಾದ ವಿಚಾರಣೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಚ್.ಎಸ್ ಪುಟ್ಟಶಂಕರ ವಿರುದ್ದ ಯಶೋಧಮ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜೆ.ಕೆ. ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಕರ್ನಾಟಕ ಬಾಡಿಗೆ ಕಾಯ್ದೆಯಡಿ ಸ್ವಾಧೀನ ಕೋರಿ ಸಲ್ಲಿಸಿದ ಪ್ರಕರಣದಲ್ಲಿ ಕಟ್ಟಡದ ಮಾಲಕ ಹಾಗೂ ಬಾಡಿಗೆದಾರರ ಸಂಬಂಧವನ್ನು ನಿರೂಪಿಸಲು ಬಾಡಿಗೆ ಚೀಟಿಯನ್ನು ಹಾಜರುಪಡಿಸಿದರೆ ಸಾಕು. ಕಟ್ಟಡದ ಒಡೆತನದ ಕುರಿತು ವಿವರವಾದ ವಿಚಾರಣೆಯ ಅಗತ್ಯವಿಲ್ಲ

ಕರ್ನಾಟಕ ಬಾಡಿಗೆ ಕಾಯ್ದೆಯ ಸೆಕ್ಷನ್ 3(e)ಅಡಿಯಲ್ಲಿ ತಾನೊಬ್ಬ ಭೂಮಾಲೀಕ ಎಂಬುದನ್ನು ಸಾಬೀತುಪಡಿಸಲು ಬಾಡಿಗೆ ಚೀಟಿ ಅಥವಾ ತತ್ಸಂಬಂಧಿ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ ಸಾಕು. ಒಮ್ಮೆ ಆತ ದಾವಾ ಆಸ್ತಿಗೆ ಮಾಲಕ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದರೆ ಸಾಕು ಎಂದು ನ್ಯಾಯಪೀಠ

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.