ಒಂದೇ ದಿನದಲ್ಲಿ 50 ತೀರ್ಪು ಪ್ರಕಟ
ಬೆಂಗಳೂರುಃ ರಾಜ್ಯಹೈಕೋರ್ಟ್ನ ನ್ಯಾಯಮೂರ್ತಿಯೊಬ್ಬರು ಒಂದೇ ದಿನ 50 ಪ್ರಕರಣಗಳ ತೀರ್ಪು ನೀಡಿ ದಾಖಲೆ ನಿರ್ಮಿಸಿದ್ದಾರೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಹೀಗೆ ತೀರ್ಪು ನೀಡಿದ್ದಾರೆ. ಒಂದೇ ದಿನದಲ್ಲಿ 50 ಪ್ರಕರಣಗಳ ತೀರ್ಪು ನೀಡಿರುವುದು ಇದೇ ಮೊದಲು. ಇದರಲ್ಲಿ 25 ಪ್ರಕರಣಗಳು ಮುಖ್ಯ ನ್ಯಾಯಾಲಯ ಹಾಗೂ ಉಳಿದ 25 ಪ್ರಕರಣಗಳು ಧಾರವಾಡದ ಹೈಕೋರ್ಟ್ ಪೀಠಕ್ಕೆ ಸೇರಿದೆ.
ಬಿಜೆಪಿಯ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಗಳ ಕುರಿತು ತೀರ್ಪು ಇದರಲ್ಲಿವೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
