24/04/2026

Law Guide Kannada

Online Guide

ವಿವಾಹಿತ ವ್ಯಕ್ತಿಯೊಂದಿಗೆ ವಯಸ್ಕ ಮಹಿಳೆ ವಾಸಿಸುವುದನ್ನ ತಡೆಯಲು ಕಾನೂನಿನಡಿ ಸಾಧ್ಯವೇ…?

ಭೂಪಾಲ್: ವಿವಾಹಿತ ಪುರುಷನೊಂದಿಗೆ ವಯಸ್ಕ ಮಹಿಳೆ ವಾಸಿಸುವುದನ್ನ ತಡೆಯುವ ಯಾವುದೇ ಕಾನೂನು ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯ ಕಸ್ಟಡಿಗೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಮಹಿಳೆ ಆಕೆಯ ಪೋಷಕರೊಂದಿಗೆ ವಾಸಿಸಬೇಕಾದ ಸಮಯದಲ್ಲಿ ವಿವಾಹಿತ ಪುರುಷನೊಂದಿಗೆ ಆಕೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಪ್ರದೀಪ್ ಮಿತ್ತಲ್ ಅವರ ವಿಭಾಗೀಯ ಪೀಠವು, ವಯಸ್ಕ ಮಹಿಳೆಯು ತಾನು ಯಾರೊಂದಿಗೆ ವಾಸಿಸಬೇಕೆಂದು ನಿರ್ಧರಿಸುವ ಹಕ್ಕನ್ನ ಹೊಂದಿದ್ದಾಳೆಂದು ಹೇಳಿದೆ.

ಆ ವ್ಯಕ್ತಿಯೊಂದಿಗೆ ಅವಳು ವಾಸಿಸುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ. ಮಹಿಳೆ ಆ ಪುರುಷನನ್ನ ಮದುವೆಯಾದರೆ, ಅವನ ಮೊದಲ ಹೆಂಡತಿ ಮಾತ್ರ ದ್ವಿಪತ್ನಿತ್ವ ಪ್ರಕರಣವನ್ನ ದಾಖಲಿಸಬಹುದು” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.