ದೈಹಿಕ ಸಂಪರ್ಕದ ವೇಳೆ ವಿವಾಹಿತ ವ್ಯಕ್ತಿ ಸಾವು: ಮಹಿಳೆಗೆ ದಂಡ ವಿಧಿಸಿದ ಕೋರ್ಟ್
ಪಿಂಗ್ನಾನ್ ಕೌಂಟಿ: ಗೆಳತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ವಿವಾಹಿತ ವ್ಯಕ್ತಿ ಆ ವೇಳೆಯೇ ಸಾವನ್ನಪ್ಪಿದ್ದು, ನ್ಯಾಯಾಲಯವು ಮಹಿಳೆಗೆ ದಂಡ ವಿಧಿಸಿದೆ.
ಹೌದು, ಚೀನಾದ ಗುವಾಂಗ್ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದಲ್ಲಿರುವ ಪಿಂಗ್ನಾನ್ ಕೌಂಟಿಯಲ್ಲಿ ಈ ಘಟನೆ ಸಂಭವಿಸಿತ್ತು. ಜುಲೈ 14, 2024 ರಂದು ಪಿಂಗ್ನಾನ್ ಕೌಂಟಿಯಲ್ಲಿ ಝೌ ಎಂಬ 66 ವರ್ಷದ ವ್ಯಕ್ತಿ ದೀರ್ಘಕಾಲದಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಮತ್ತು ಈ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಝೌ ವಿವಾಹಿತ ವ್ಯಕ್ತಿಯಾಗಿದ್ದು ಈ ಮಧ್ಯೆ ತನ್ನ ಮತ್ತೊಬ್ಬ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಸಾವನ್ನಪ್ಪಿದ್ದರು. ಇದೀಗ ನ್ಯಾಯಾಲಯವು ಗೆಳತಿಗೆ ಪರಿಹಾರವನ್ನು ಪಾವತಿಸಲು ಆದೇಶಿಸಿದೆ .
ಮಹಿಳೆಗೆ ತನ್ನ ದಿವಂಗತ ಪ್ರೇಮಿಯ ಕುಟುಂಬಕ್ಕೆ ಪರಿಹಾರವನ್ನು ಪಾವತಿಸಲು ಆದೇಶಿಸಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಝೌ ತನ್ನ ಗೆಳತಿಯೊಂದಿಗೆ ಹೋಟೆಲ್ ಗೆ ಭೇಟಿ ನೀಡಿದ್ದರು. ಇಬ್ಬರೂ ನಿದ್ರಿಸುವ ಮೊದಲು ಆತ್ಮೀಯ ಸಂಬಂಧದಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ಗಂಟೆಗಳ ನಂತರ, ಝುವಾಂಗ್ ಎಚ್ಚರವಾದಾಗ, ಝೌ ಮೃತಪಟ್ಟಿರುವುದು ಗಮನಿಸಿದ್ದಾರೆ.
ಝೌ ಅವರ ಪತ್ನಿ ಮತ್ತು ಮಗ ಝುವಾಂಗ್ ಮತ್ತು ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿ, ವೈದ್ಯಕೀಯ ವೆಚ್ಚಗಳು ಮತ್ತು ಅಂತ್ಯಕ್ರಿಯೆಯ ವೆಚ್ಚಗಳು ಸೇರಿದಂತೆ 550,000 ಯುವಾನ್ (ಸುಮಾರು ₹66 ಲಕ್ಷ) ಪರಿಹಾರವನ್ನು ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಝೌ ಅವರ ಕುಟುಂಬಕ್ಕೆ 62,000 ಯುವಾನ್ (ಸುಮಾರು ₹8.6 ಲಕ್ಷ) ಪರಿಹಾರವನ್ನು ಪಾವತಿಸಲು ಝುವಾಂಗ್ ಅವರಿಗೆ ಆದೇಶ ಹೊರಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
