ಸುಮ್ ಸುಮ್ಮನೆ ಪತಿ ಮನೆಯವರ ವಿರುದ್ಧ ಕೇಸ್ ಹಾಕುವ ಸೊಸೆಯರೇ ಹುಷಾರ್..! ಬಿಸಿ ಮುಟ್ಟಿಸಿದ ಹೈಕೋರ್ಟ್
ಬೆಂಗಳೂರು: ಮದುವೆಯಾದ ನಂತರ ಗಂಡನ ಮನೆಯಲ್ಲಿ ಹೊಂದಾಣಿಕೆ ಇಲ್ಲದಿದ್ದರೇ, ಏನಾದರೂ ಸಣ್ಣಪುಟ್ಟ ಜಗಳವಾದರೆ ಹೆಂಡತಿಯರು ತನ್ನ ಪತಿ ಮತ್ತು ಅತ್ತೆ ಮಾವಂದಿರ ವಿರುದ್ದ ಸುಮ್ ಸುಮ್ನೆ ವರದಕ್ಷಿಣೆ ಕಿರುಕುಳ, ದೌರ್ಜನ್ಯ ಆರೋಪದಡಿ ಪ್ರಕರಣವನ್ನು ದಾಖಲಿಸುತ್ತಾರೆ. ಇಂತಹ ಸುಳ್ಳು ಸುಳ್ಳು ಪ್ರಕರಣ ದಾಖಲಿಸುವ ಸೊಸೆಯಂದಿರಿಗೆ ಕರ್ನಾಟಕ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ಹೌದು ಇನ್ನು ಮುಂದೆ ಹೀಗೆ ನಿರ್ದಿಷ್ಟ ಪ್ರಕರಣವಿಲ್ಲದೆ ಗಂಡನ ಮನೆಯವರ ಮೇಲೆ ಸುಳ್ಳು ಆರೋಪದಡಿ ಪ್ರಕರಣವನ್ನು ದಾಖಲಿಸಿದರೆ ಅಂತಹ ಸೊಸೆಯವರ ಮೇಲೆ ಕ್ರಮವನ್ನು ಕೈಗೊಳ್ಳುವಂತೆ ಹೈಕೋರ್ಟ್ ತಿಳಿಸಿದೆ.
ಪತ್ನಿ ಅಬೇದಾ ಅವರ ಪತಿ ಮೊಹಮ್ಮದ್ ನೂರುದ್ದೀನ್ ಜುಮ್ನಾ ಮತ್ತಿತರ ಐವರ ವಿರುದ್ಧದ ಪ್ರಕರಣ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಿ, ಆ ವಿಚಾರಣೆ ರದ್ದುಗೊಳಿಸುವಾಗ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ (ಕಲಬುರಗಿ), ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಯಾವುದೇ ನಿರ್ದಿಷ್ಟ ಪ್ರಕರಣವಿಲ್ಲದೆ ಅತ್ತೆ-ಮಾವ, ಪತಿ ‘ಪ್ರಚೋದಿಸಿದ್ದಾರೆ’ ಅಥವಾ ನಿಂದನೀಯ ಭಾಷೆ ಬಳಸಿದ್ದಾರೆಂಬ ಕೇವಲ ಹೇಳಿಕೆಯು ಕ್ರಿಮಿನಲ್ ಮೊಕದ್ದಮೆಗೆ ಮೂಲವಾಗಲು ಸಾಧ್ಯವಿಲ್ಲ. ಇದರಿಂದಾಗಿ ಅರ್ಜಿದಾರರು ಅನಗತ್ಯವಾಗಿ ಕ್ರಿಮಿನಲ್ ಮೊಕದ್ದಮೆಯ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಈ ಸನ್ನಿವೇಶದಲ್ಲಿಅರ್ಜಿದಾರರ ವಿರುದ್ಧದ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮನಾಗಿರುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅತ್ತೆ- ಮಾವಂದಿರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತು.
ಕೌಟುಂಬಿಕ ವಿಭಜನೆಯಾಗಿತ್ತು ಎಂದು ದೂರುದಾರರು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಅದರ ಪ್ರಕಾರ, ಮೂರು ಕೊಠಡಿಗಳನ್ನು ಒಳಗೊಂಡ ಪ್ರತ್ಯೇಕ ವಸತಿ ಭಾಗವನ್ನು ನೀಡಲಾಗಿದೆ. ಅಲ್ಲಿಅರ್ಜಿದಾರರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ದೂರುದಾರರೊಂದಿಗೆ ಸಾಮಾನ್ಯ ಮನೆಯಲ್ಲಿ ಹಂಚಿಕೊಂಡು ಬದುಕುತ್ತಿರಲಿಲ್ಲವೆಂದು ಸೂಚಿಸುತ್ತದೆ ಎಂದು ನ್ಯಾಯಪೀಠವು ಹೇಳಿದೆ.
ಅಲ್ಲದೆ, ‘‘ದೂರುದಾರರು ನೂರುದ್ದೀನ್ ಗಲ್ಫ್ ಪ್ರದೇಶದಲ್ಲಿ ದೀರ್ಘಕಾಲ ವಾಸಿಸುತ್ತಿದ್ದುದ್ದನ್ನು ಪದೇಪದೆ ಉಲ್ಲೇಖಿಸಿದ್ದಾರೆ. ಇದು ವೈವಾಹಿಕ ಕಲಹಕ್ಕೆ ಪ್ರಾಥಮಿಕ ಕಾರಣವೆಂದು ತೋರುತ್ತದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಆರೋಪಗಳು ಆಧಾರರಹಿತವಾಗಿದ್ದು, ದಿನಾಂಕ, ಸಮಯ, ಸ್ಥಳ ಅಥವಾ ನಿರ್ದಿಷ್ಟ ಕೃತ್ಯಗಳ ಯಾವುದೇ ವಿವರಗಳಿಲ್ಲ, ಎಂದು ನ್ಯಾಯಪೀಠ ತಿಳಿಸಿದೆ.
ಕಲಬುರಗಿ ನಗರದ ನಿವಾಸಿಗಳಾದ ದಂಪತಿ, ಅವರ ಕುಟುಂಬ ಸದಸ್ಯರೊಂದಿಗೆ ತಮ್ಮ ಸೊಸೆ ತೆಹಸೀನ್ ಬೇಗಂ ಸಲ್ಲಿಸಿದ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಎಫ್ ಐಆರ್ ಮತ್ತು ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಣೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
