ವಂಶವೃಕ್ಷ ದೃಢೀಕರಣ ಪತ್ರಕ್ಕೆ ಹೊಸ ಮಾರ್ಗಸೂಚಿ: ಸಂಪೂರ್ಣ ವಿವರ ಇಲ್ಲಿದೆ ನೋಡಿ
ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರಿಗೆ ಖಾತೆ ಬದಲಾವಣೆ, ಆಸ್ತಿ ವರ್ಗಾವಣೆ ವಿವಿಧ ಉದ್ದೇಶಗಳಿಗಾಗಿ ಕಡ್ಡಾಯವಾಗಿ ಬೇಕಾಗುವ ವಂಶವೃಕ್ಷ ದೃಢೀಕರಣ ಪತ್ರವನ್ನು ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಹಾಗೂ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಾರ್ವಜನಿಕರಿಗೆ ವಿವಿಧ ಉದ್ದೇಶಗಳಿಗೆ ವಂಶವೃಕ್ಷದ ಅವಶ್ಯಕತೆ ಇರುತ್ತದೆ. ಹೀಗಾಗಿ “ವಂಶವೃಕ್ಷ ದೃಢೀಕರಣ ಪತ್ರವನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ವಾರಸುದಾರಿಕೆ ಪ್ರಕರಣಗಳಲ್ಲಿ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 128 ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳು, 1966 ರ ನಿಯಮ 62 ರಂತೆ ಜಮೀನಿನ ಖಾತೆ ಬದಲಾವಣೆ ಮಾಡಲು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಿಂಚಣಿ ಸಂಬಂಧಿತ ವ್ಯವಹಾರಗಳಲ್ಲಿ ಸೌಲಭ್ಯ ಪಡೆಯಲು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳ ವಾರಸುದಾರಿಕೆ ಖಾತೆ ಬದಲಾವಣೆ ಮಾಡಲು ಹಾಗೂ ಜೀವಿತ ಸದಸ್ಯರ ದೃಢೀಕರಣ ಪತ್ರ ಪಡೆಯಲು ಕೋರುವ ಅರ್ಜಿದಾರನು ತನ್ನ ಕುಟುಂಬದ ವಂಶವೃಕ್ಷ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ವಂಶವೃಕ್ಷವನ್ನು (Family Tree) ನೀಡುವ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡುವ ಸಲುವಾಗಿ, ರಾಜ್ಯಾದ್ಯಂತ online ತಂತ್ರಾಂಶದ ಮುಖಾಂತರ ವಂಶವೃಕ್ಷ ((Family Tree)) ದೃಢೀಕರಣ ಪತ್ರವನ್ನು ನೀಡುವ ಕುರಿತು ಅನುಸರಿಸಬೇಕಾದ ಕ್ರಮ ಹಾಗೂ ಪರಿಶೀಲಿಸಬೇಕಾದ ದಾಖಲೆಗಳ ಬಗೆ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ವಿಷಯ: ವಂಶವೃಕ್ಷ (Family Tree) ದೃಢೀಕರಣ ಪತ್ರ ನೀಡುವ ಕುರಿತು ಮಾರ್ಗಸೂಚಿಗಳು ಈ ಕೆಳಕಂಡಂತಿದೆ
1. ಅರ್ಜಿದಾರರು ಕಡ್ಡಾಯವಾಗಿ ಈ ದಾಖಲಾತಿಗಳನ್ನು ಸಲ್ಲಿಸಬೇಕು
1.1 ವಂಶವೃಕ್ಷ ಪ್ರಮಾಣ ಪತ್ರವನ್ನು ಕೋರುವ ಅರ್ಜಿದಾರನು ರೂ.100/- ಛಾಪಾ ಕಾಗದದಲ್ಲಿ ಈ ಸುತ್ತೋಲೆಯ ಅನುಬಂಧದಲ್ಲಿನ ನಮೂನೆಯಂತೆ ಭರ್ತಿ ಮಾಡಿ ನೋಟರಿಯವರಿಂದ ಪ್ರಮಾಣೀಕರಿಸಿದ ತನ್ನ ವಂಶವೃಕ್ಷದ ಅಫಿಡವಿಟ್ ಅನ್ನು, ಹಾಗೂ ಇದರೊಂದಿಗೆ ಕಡ್ಡಾಯವಾಗಿ ತನ್ನ ಆಧಾರ್ ಕಾರ್ಡ್ ಪ್ರತಿಯನ್ನು ಮತ್ತು ಕುಟುಂಬದ ಇತರ ಎಲ್ಲಾ ಜೀವಂತ ಸದಸ್ಯರ ಆಧಾರ್ ಕಾರ್ಡ್! ಚುನಾವಣೆ ಗುರುತಿನ ಚೀಟಿ/ಪಾಸ್ ರ್ಟ್/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್ /ಜನನ ಪ್ರಮಾಣ ಪತ್ರ/ದೃಢೀಕೃತ ಶಾಲಾ ದಾಖಲಾತಿ ಇವುಗಳಲ್ಲಿ ಒಂದು ದಾಖಲೆಯನ್ನು ಅಫಿಡೆವಿಟ್ ನಲ್ಲಿ ನಮೂದಿಸಿರುವಂತೆ ಸಲ್ಲಿಸುವುದು. ಅಫಿಡವಿಟ್ ನಲ್ಲಿ ಅರ್ಜಿದಾರನು ತನ್ನ ಅಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದು.
1.2 ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಫೋಟೋವನ್ನು ಸಲ್ಲಿಸುವುದು.
1.3 ಕುಟುಂಬದಲ್ಲಿ ಪೌತಿಯಾದವರಿಗೆ ಸಂಬಂದಿಸಿದಂತೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಡಿಜಿಟಲ್ ಮರಣ ಪ್ರಮಾಣ ಪತ್ರವನ್ನು ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರವನ್ನು/ಕಂಡಿಕೆ 3(ಸಿ) ರಲ್ಲಿ ನಮೂದಿಸಿರುವ ಯಾವುದಾದರೂ ಒಂದು ದಾಖಲಾತಿಯನ್ನು ಲಭ್ಯವಿದ್ದಲ್ಲಿ ಸಲ್ಲಿಸುವುದು.
1.4 ಅರ್ಜಿದಾರನು ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ನಾಡ ಕಚೇರಿ/ಗ್ರಾಮ ಒನ್ ಸೇವಾ ಕೇಂದ್ರ/ಕರ್ನಾಟಕ ಒನ್ ಸೇವಾ ಕೇಂದ್ರ/ಬಾಪೂಜಿ ಸೇವಾ ಕೇಂದ್ರ / ಆನ್ ಲೈನ್ ನಾಗರೀಕ ವೋರ್ಟಾಲ್ ನಲ್ಲಿ ಸಲ್ಲಿಸುವುದು.
2. ಅರ್ಜಿದಾರರ ಅಧಾರ್ e-KYC ಕಡ್ಡಾಯವಾಗಿರುತ್ತದೆ.
ಅರ್ಜಿದಾರರ ಆಧಾರ್ e-KYC ಕಡ್ಡಾಯವಾಗಿದ್ದು, ಅರ್ಜಿದಾರನು ಕರ್ನಾಟಕದಲ್ಲಿ ವಿಳಾಸವಿರುವ ಆಧಾರ್ ಸಂಖ್ಯೆಯ ಮೂಲಕ e-kyc ಯನ್ನು ಕಡ್ಡಾಯವಾಗಿ OTP ಅಥವಾ ಬಯೋಮೆಟ್ರಿಕ್ ಮೂಲಕ ಮಾಡುವುದು.
3. ಕುಟುಂಬದ ಎಲ್ಲಾ ಮೃತ ಸದಸ್ಯರ ದಾಖಲಾತಿ ನೀಡುವ ಕುರಿತು.
3(ಎ): ಮೃತ ಸದಸ್ಯರ ವಿವರವನ್ನು ವಂಶವೃಕ್ಷದಲ್ಲಿ ನಮೂದಿಸಲು ಡಿಜಿಟಲ್ ಮರಣ ಪ್ರಮಾಣ ಪತ್ರದಸಂಖ್ಯೆಯನ್ನು ಒದಗಿಸುವುದು.
3(ಬಿ): ಡಿಜಿಟಲ್ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರದ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸಿ, ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರದ Pಆಈ ನ್ನು ಅಪ್ ಲೋಡ್ ಮಾಡುವುದು.
3(ಸಿ): ಒಂದು ವೇಳೆ ಡಿಜಿಟಲ್ ಹಾಗೂ ಭೌತಿಕ ಮರಣ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ, ಈ ಕೆಳಗೆ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ದಾಖಲೆಯನ್ನಾಗಿ ಸಲ್ಲಿಸುವುದು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ಸಮಯದಲ್ಲಿ ಗ್ರಾಮಸ್ಥರಿಂದ ಹೇಳಿಕೆ ಪಡೆದು ವೀಡಿಯೋ/ಕೆ.ಬರವಣಿಗೆ ಮಹಜರ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವುದು.
(ಪಾಸ್ಪೋರ್ಟ್/ ಚಾಲನಾ ಪರವಾನಗಿ/ ಪ್ಯಾನ್ ಕಾರ್ಡ್/ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನೀಡಲಾದ ಐ-ಕಾಡ್ / ವಿದ್ಯಾರ್ಥಿ ಗುರುತಿನ ಚೀಟಿ/ಅಂಕಪಟ್ಟಿ/ಶಾಲಾ ವರ್ಗಾವಣೆ ಪತ್ರ (IC/ ಪಡಿತರ ಚೀಟಿ/ಸಾಮಾಜಿಕ ಭದ್ರತೆ/ಮಾಜಿ ಸೈನಿಕರ ಪಿಂಚಣಿ ಅದೇಶ ದಾಖಲೆಗಳು/ಸ್ವಾತಂತ್ರ ಹೋರಾಟಗಾರರ ಗುರುತಿನ ಚೀಟಿ/ಅಂಗವಿಕಲ ಗುರುತಿನ ಚೀಟಿ/ ಮಾಜಿ ಸೈನಿಕರ ಸಿಎಸ್ ಡಿ ಕ್ಯಾಂಟೀನ್ ಕಾರ್ಡ್/ ಸಂಧ್ಯಾ ಸುರಕ್ಷಾ ಗುರುತಿನ ಚೀಟಿ/ ಎನ್ ಆರ್ ಇಜಿಎ ಉದ್ಯೋಗ ಕಾರ್ಡ್/ಯಶಸ್ಸಿನಿ ಕಾರ್ಡ್/ ಸ್ಥಳೀಯ ಸಂಸ್ಥೆಗಳಿಂದ ನೀಡಲಾದ ಐ ಕಾರ್ಡ್/ ಆರೋಗ್ಯ ವಿಮಾ ಯೋಜನೆಗಳ ಸ್ಮಾರ್ಟ್ ಕಾರ್ಡ್/ ಹಿರಿಯ ನಾಗರಿಕರ ಐಡಿ ಕಾರ್ಡ್/ ಚುನಾವಣೆ ಗುರುತಿನ : ಟಿ/ವಿದ್ಯುತ್ ಮೀಟರ್ ಆರ್ಆರ್ ಸಂಖ್ಯೆ/ ಜನನ ಪ್ರಮಾಣಪತ್ರ/ 10 ವರ್ಷಗಳ ಅಧ್ಯಯನ ಪ್ರರ್ಮಾ ಪತ್ರ/ ಕುಟುಂಬ ಐಡಿ)
3(ಡಿ): ಒಂದು ವೇಳೆ ಕಂಡಿಕೆ 3(ಸಿ) ರಲ್ಲಿ ಸೂಚಿಸಿರುವ ಯಾ ದೇ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ, ಗ್ರಾಮ ಆಡಳಿತ ಅಧಿಕಾರಿಗಳು ಕ್ಷೇತ್ರ ಪಶಿಲನೆ ಸಮಯದಲ್ಲಿ ಗ್ರಾಮಸ್ಥರಿಂದ ಹೇಳಿಕೆ ಪಡೆದು ವೀಡಿಯೋ/ಬರವಣಿಗೆ ಮಹಜರ ವರದಿ ಕಡ್ಡಾಯವಾಗಿ ಸಲ್ಲಿಸುವುದು.
4. ಅರ್ಜಿ ಸಲ್ಲಿಸುವ ಸಮಯದಲ್ಲಿ ಡಾಟಾ ಎಂಟ್ರಿ ಅಪರೇಟರ್ರವರು/ಅರ್ಜಿದಾರರು ತಂತ್ರಾಂಶದಲ್ಲಿ ನಮೂದಿಸಬೇಕಾದ ವಿವರಗಳು:
ಅಫಿಡವಿಟ್ ದಿನಾಂಕ ಮತ್ತು ಇ-ಸಾಂಪ್ ಸಂಖ್ಯೆ ನಮೂದಿಸುವುದು.
ಕುಟುಂಬ ಸದಸ್ಯರ ವಿವರಗಳು (ಹೆಸರುಗಳು, ಸಂಬಂಧ, ವಯಸ್ಸು, ವೈವಾಹಿಕ ಸ್ಥಿತಿ.)
ವಂಶವೃಕ್ಷವನ್ನು ಪಡೆಯುತ್ತಿರುವ ಉದ್ದೇಶ.
ಅರ್ಜಿದಾರನು ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಳಾಸದ ವಿವರ ಹಾಗೂ ವಿಳಾಸದಲ್ಲಿ ವಾಸವಿರುವ ಅರ್ಜಿದಾರರ ಪಾಸ್ಪೋರ್ಟ್ ಫೋಟೋವನ್ನು ಹಾಗೂ ಕಂಡಿಕೆ 1ರಲ್ಲಿ ಸೂಚಿಸಿರುವ ಇತರೆ ದಾಖಲಾತಿಗಳನ್ನು ಅಪ್ ಲೋಡ್ ಮಾಡುವುದು.
5. ಅರ್ಜಿ ಸ್ವೀಕೃತಿಯಾದ ನಂತರ ಗ್ರಾಮ ಆಡಳಿತ ಅಧಿಕಾರಿರವರು ಪರಿಶೀಲಿಸಬೇಕಾದ ಕ್ರಮ.
ಅರ್ಜಿದಾರರಿಂದ ಸ್ವೀಕೃತವಾದ ಅರ್ಜಿ ಹಾಗೂ ದಾಖಲೆಗಳನ್ನು ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿಗೆ ಆನ್ಲೈನ್ ಲಾಗಿನ್(ಸಂಯೋಜನೆ ಅಪ್ಲಿಕೇಶನ್) ಮೂಲಕ ಕಳುಹಿಸಲಾಗುವುದು. ಗ್ರಾಮ ಆಡಳಿತ ಅಧಿಕಾರಿಯು ಅರ್ಜಿಯಲ್ಲಿ ನಮೂದಿಸಿರುವ ವಿಳಾಸದ ಸ್ಥಳಕ್ಕೆ ಖುದ್ದು ಭೇಟಿ ನೀಡಿ. ಅರ್ಜಿಯಲ್ಲಿ ನಮೂದಿಸಿರುವ ಕುಟುಂಬದ ಸದಸ್ಯರ ವಿವರಗಳು ಹಾಗೂ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ಒಂದು ವೇಳೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಅಗತ್ಯವಿರುವ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸದೇ ಇದ್ದಲ್ಲಿ ಸದರಿ ಅವಶ್ಯಕ ದಾಖಲೆಗಳನ್ನು ಅರ್ಜಿದಾರರಿಂದ ಪಡದು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡವುದು ಮತ್ತು ಅಭಿಪ್ರಾಯವನ್ನು ದಾಖಲಿಸುವುದು.
ಮೇಲೆ ಅನುಮೋದನೆ ಅಥವಾ ತಿರಸ್ಕರಣೆ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ ಗ್ರಾಮ ಆಡಳಿತ. ಅಧಿಕಾರಿಯು ರಾಜನೆ ನಿರೀಕ್ಷಕರಿಗೆ ಶಿಫಾರಸು ಮಾಡುವುದು.
ಸೂಚನೆ:- ಹಿಂದಿನ ತಿರಸ್ಕಾರ ಪಕರಣಗಳಲ್ಲಿ Endorsement List ಅನ್ನು VAO ಲಾಗಿನ್ನಲ್ಲಿ ನೀಡಲಾಗಿದ್ದು ಸದರಿ ಲಿಸ್ಟ್ ಅನ್ನು ಕಣನ್ನಿಯವಾಗಿ ಪರಿಶೀಲಿಸಬೇಕು.
6. ಗ್ರಾಮ ಆಡಳಿತ ಅಧಿಕಾರಿಯು ತಂತ್ರಾಂಶದಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು ಸಲ್ಲಿಸಿರುವ ಅಫಿಡವಿಟ್ ನಲ್ಲಿರುವ ಮಾಹಿತಿಗೂ ತಂತ್ರಾಂಶದಲ್ಲಿ ನಮೂದಿಸಿರುವ ಮಾಹಿತಿಗೂ ಈ ಕೆಳಕಂಡ ಅಂಶಗಳ ಕುರಿತು ಯಾವುದಾದರೂ ನ್ಯೂನ್ಯತೆಗಳು ಇದ್ದಲ್ಲಿ ಅಫಿಡವಿಟ್ ನಲ್ಲಿರುವ ಮಾಹಿತಿಯಂತೆ ತಿದ್ದುಪಡಿ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ತಿದ್ದುಪಡಿಮಾಡಿ ಸದರಿ ಸಂಬಂಧಿತ ಹೆಚ್ಚುವರಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ತಮ್ಮ ಷರಾವನ್ನು ನಮೂದಿಸಬೇಕು.
ಇ-ಸ್ಯಾಂಪ್ ದಿನಾಂಕ ಮತ್ತು ಸಂಖ್ಯೆ.
ಕುಟುಂಬ ಸದಸ್ಯರ ವಿವರಗಳು (ಹೆಸರುಗಳು, ಸಂಬಂಧ, ವಯಸ್ಸು, ವ್ಯವಾಹಿಕ ಸ್ಥಿತಿ).
7. ರಾಜ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಯಿಂದ ವರದಿ ಸ್ವೀಕೃತಿಯಾದ ಮೇಲೆ ಅನುಸರಿಸಬೇಕಾದ ಕ್ರಮ.
ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ. ಅಧಿಕಾರಿರವರಿಂದ ಸ್ವೀಕೃತವಾದ ಅಭಿಪ್ರಾಯ/ಶಿಫಾರಸಿ,ನೊಂದಿಗಿನ ವರದಿಯನ್ನು ದಾಖಲೆಗಳ ಅನುಸಾರ ಸಮರ್ಪಕವಾಗಿರುವ ಕುರಿತು ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಖುದು ಸ್ಥಳ ಪರಿಶೀಲನೆ ನಡೆಸಿ, ತಮ್ಮ ಹರಾವನು, ನಮೂದಿಸಿ, ಅನುಮೋದನೆ ಅಥವಾ ತಿರಸ್ಕರಿಸುವ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ -ಉಪತಹಶೀಲ್ದಾರರಿಗೆ ಶಿಫಾರಸ್ಸನ್ನು ಮಾಡುವುದು. ರಾಜಸ್ವ ನಿರೀಕ್ಷಕರು, ಹೆಚ್ಚುವರಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಅವಶ್ಯ ಇದ್ದಲ್ಲಿ ತಮ್ಮ ಲಾಗಿನ್ ಮೂಲಕವೇ ಅಪ್ ಲೋಡ್ ಮಾಡಲು ಕ್ರಮ ವಹಿಸುವುದು.
8. ವಂಶವೃಕ್ಷದ ಕುರಿತಾಗಿ ಅರ್ಜಿದಾರರ ಅರ್ಜಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಉಪತಹಶೀಲ್ದಾರರಿಗೆ ಇರುತ್ತದೆ, ಉಪತಹಶೀಲ್ದಾರರು ಅರ್ಜಿಯ ಕುರಿತು, ಗ್ರಾಮ ಆಡಳಿತ ಅಧಿಕಾರಿ ಮತ್ತು ರಾಜಸ್ಥ ನಿರೀಕ್ಷಕರು ಶಿಫಾರಸ್ಸಿನೊಂದಿಗೆ ಅಪ್ ಲೋಡ್ ಮಾಡಲಾದ ದಾಖಲೆಗಳ ಆಧಾರದ ಮೇಲೆ ಕೂಲಂಕುಷವಾಗಿ ಪರಿಶೀಲಿಸಿ ವಂಶವೃಕ್ಷದಲ್ಲಿನ ಕುಟುಂಬದ ಸದಸ್ಯರ ವಿವರವನ್ನು, ಖಚಿತಪಡಿಸಿಕೊಳ್ಳಬೇಕು. ಅರ್ಜಿಗಳನ್ನು ಜೇಷತೆಯ ಆಧಾರದ ಮೇಲೆ ಅಂಗೀಕರಿಸಬೇಕು ಅಥವಾ ತಿರಸ್ಕರಿಸಬೇಕು. ಉಪತಹಶೀಲ್ದಾರರು ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಕುರಿತು ಅರ್ಜಿಯನ್ನು ಅನುಮೋದನೆಗೊಂಡ ಪ್ರಕರಣಗಳಲ್ಲಿ ದೃಢೀಕರಣ ಪತ್ರವನ್ನು ಅಥವಾ ತಿರಸ್ಕರಿಸುವ ಪ್ರಕರಣಗಳಲ್ಲಿ ಹಿಂಬರಹವನ್ನು ಡಿಜಿಟಲ್ ರೂಪದಲ್ಲಿ ಸೃಜಿಸಲಾಗುತ್ತದೆ ಹಾಗೂ ಅರ್ಜಿದಾರರಿಗೆ SMS/e-mail ಮೂಲಕ ಕಳುಹಿಸಲಾಗುತ್ತದೆ. ಸದರಿ ಅರ್ಜಿಯನ್ನು 14 ದಿನಗಳ ಸಕಾಲ ದಿನಗಳ ಅವಧಿಯೊಳಗೆ ಇತ್ಯರ್ಥಪಡಿಸುವುದು
9. ಮೇಲ್ಮನವಿ ಪ್ರಾಧಿಕಾರದ ಕರ್ತವ್ಯಗಳು:
ಉಪವಿಭಾಗಾಧಿಕಾರಿಗಳು ತಮ್ಮ ಉಪವಿಭಾಗದ ವ್ಯಾಪ್ತಿಯಲ್ಲಿ ಸ್ವೀಕೃತವಾಗುವ ವಂಶವೃಕ್ಷ ಅರ್ಜಿಗಳ ಮೇಲ್ಮನವಿ ಪ್ರಾಧಿಕಾರ ಆಗಿರುತ್ತದೆ. ವಂಚಕ ಅರ್ಜಿಯು ಸಕಲ ಲಾವಧಿಯೊಳಗೆ ವಿಲೇವಾರಿ ಆಗದಿದ್ದಲ್ಲಿ ಮೇಲ್ಮನವಿ ಪ್ರಾಧಿಕಾರಕ್ಕೆ ಸದರಿ ಅರ್ಜಿಯು ರವಾನೆಯಾಗತಕ್ಕದ್ದು ಹಾಗೂ ಸದರಿ ಅರ್ಜಿಯನ್ನು ಇತ್ಯರ್ಥಪಡಿಸಲು 35 ಸಕಾಲ ಕಾಲಾವಧಿ ನಿಗಧಿಪಡಿಸಲಾಗಿರುತ್ತದೆ. ಯಾವುದೇ ವಂಶವೃಕ್ಷ ದೃಢೀಕರಣವು ಸುಳ್ಳು ಅಥವಾ ತಪ್ಪು ಮಾಹಿತಿಗಳ ದಿನಗಳ ಆಧಾರದ ಮೇಲೆ ಅನುಮೋದನೆಯಾಗಿರುವುದು ಸ್ವಯಂ ಪ್ರೇರಿತ ಅಥವಾ ದೂರಿನ ಆಧಾರದ ಮೇಲೆ ದೃಢಪಟ್ಟಲ್ಲಿ ಸಂಬಂಧಪಟ್ಟ ಹೋಬಳಿಯ ಉಪ ತಹಶೀಲ್ದಾರರು ಅಂತಹ ವಂಶವೃಕ್ಷ ದೃಢೀಕರಣ ಪತ್ರವನ್ನು, ಅಸಿಂಧುಗೊಳಿಸಲು ತಂತ್ರಾಂಶದ ಮೂಲಕ ಮೇಲ್ಮನವಿ ಪ್ರಾಧಿಕಾರಕ್ಕೆ, ಪ್ರಸ್ತಾವನ ಸಲ್ಲಿಸುವುದು ಹಾಗೂ ವಂಶವೃಕ್ಷ ಅರ್ಜಿಯು ಸಕಾಲ ಕಾಲಾವಧಿಯೊಳಗೆ ತಿರಸ್ಕೃತಗೊಂಡಲ್ಲಿ ಅಥವಾ ಅನುಮೋದನೆಗೊಂಡಲ್ಲಿ ಹಿತಾಸಕ್ತಯುಳ್ಳ ಬಾಧಿತ ವ್ಯಕ್ತಿಯು ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿರುತ್ತದೆ, ಸದರಿ ಪ್ರಸ್ತಾವನೆಯನ್ನು ಅಥವಾ ಸದರಿ ಮೇಲ್ಮನವಿಯನ್ನು ಉಪವಿಭಾಗಾಧಿಕಾರಿಗಳು 90 ದಿನಗಳ ಒಳಗಾಗಿ ವಿಚಾರಣೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳತಕ್ಕದ್ದು
10. ಒಂದು ವೇಳೆ ಕುಟುಂಬದ ಯಾವುದೇ ಸದಸ್ಯನನ್ನು ದತ್ತು ತೆಗೆದುಕೊಂಡಿದ್ದಲ್ಲಿ ಸದರಿ ಸದಸ್ಯನು ಜೈವಿಕ ಪೋಷಕರ (Biological Parents) ವಿವರದ ವಂಶ ವೃಕ್ಷಕ್ಕೆ ಅರ್ಹನಾಗಿರುವುದಿಲ್ಲ. ಏಕೆಂದರೆ, ಹಿಂದೂ ದತ್ತಕ ಮತ್ತು ಸಂರಕ್ಷಣ ಕಾಯ್ದೆ 1956 ರಸ್ತೆಯ ದತ್ತಕಕೆ, ಪಡೆದ ಮಗುವನ್ನು ದತ್ತು ಪಡೆದ ಪೋಷಕರ ಮಗುವೆಂದೇ ಪರಿಗಣಿಸಬೇಕಾಗುತ್ತದೆ. ಆ ರೀತಿ ದತ್ತು ಕೊಟ್ಟ ಮಗುವು ಆತನ ಜೈವಿಕ ತಂದೆ ತಾಯಿಯಿಂದ ಸಂಪೂರ್ಣವಾಗಿ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡು ಬೇರ್ಪಡುತ್ತಾನೆ.
11. ಕುಟುಂಬದ ಯಾವುದೇ ಸದಸ್ಯನು ಕುಟುಂಬದಲ್ಲಿ ಇಬ್ಬರು ಪತಿ/ಪತ್ನಿ ಇರುವ ಕುರಿತು ಯಾವುದೇ ಸಮರ್ಪಕ ದಾಖಲಾತಿ ಸಾಕ್ಷಿ ಇಲ್ಲದೇ ತಕರಾರನ್ನು ತೆಗೆದಲ್ಲಿ ಸಿವಿಲ್ ನ್ಯಾಯಾಲಯದಿಂದ ಪಡೆದ ಡಿಕ್ರಿಯಿದ್ದಲ್ಲಿ ಮಾತ್ರವೇ ನಂಗ ವ್ಯಕ್ತಕ್ಕೆ ಸೇರ್ಪಡೆಗೊಳಿಸಲು ಕ್ರಮವಹಿಸಬೇಕಾಗಿರುತ್ತದೆ ಮತ್ತು ಈ ಕುರಿತು ಕ್ರಮ ಜರುಗಿಸುವ ಅಥವಾ ತೀರ್ಮಾನಕ್ಕೆ ಬರುವ ಅಧಿಕಾರ ಕಂದಾಯ ಇಲಾಖೆಯ ವ್ಯಾಪ್ತಿಗೆ ಇರುವುದಿಲ್ಲ.
12. ವಂಶವೃಕ್ಷ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಅರ್ಜಿದಾರರು ತಪ್ಪು, ಅಥವಾ ಸುಳ್ಳು, ಮಾಹಿತಿಯನ್ನು ನೀಡಿ ಪ್ರಮಾಣಪತ್ರ (Affidavit) ಸಲ್ಲಿಸಿದಲ್ಲಿ, ಅಂತಹವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ರಸ್ತೆಯ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.
13. ಕಂದಾಯ ಇಲಾಖೆಯಿಂದ ವಿತರಿಸಲಾಗುವ ವಂಶವೃಕ್ಷ ದೃಢೀಕರಣವು, ಸದರಿ ಕುಟುಂಬದಲ್ಲಿ. -ಯಾವುದಾದರು ಜನನ/ಮರಣ ಹೊಂದುವವರೆಗೆ ಅಥವಾ 1 ವರ್ಷ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿ ಇರುತ್ತದೆ.
14. ಈ ಕೆಳಗಿನಂತೆ ಪ್ರಸ್ತಾಪಿಸಿರುವ Disclaimer ಅನ್ನು ಪ್ರಮಾಣ ಪತ್ರದಲ್ಲಿ ಮುದ್ರಿಸುವುದು.
ಅರ್ಜಿದಾರರು ಸಲ್ಲಿಸಿದ ಅಫಿಡವಿಟ್ ಆಧಾರದ ಮೇಲೆ ದೃಢೀಕರಣವು ಈ ವಂಶವೃಕ್ಷ ದೃಢೀಕರಣವನ್ನು ಕರ್ನಾಟಕ ಸರ್ಕಾರದ ಕಂದಾಯ/ಇತರ ಇಲಾಖೆಯ ಉದ್ದೇಶಗಳಿಗೆ ನೀಡಲು ಮಾತ್ರ ಸೀಮಿತಗೊಳಿಸಲಾಗಿದೆ. ಸದರಿ ಪ್ರಮಾಣ ಪತ್ರವನ್ನು ಯಾವುದೇ ಸುಳ್ಳು ಮಾಹಿತಿಯನ್ನು ನೀಡಿ ಪಡೆದಿದ್ದಲ್ಲಿ ಅರ್ಜಿದಾರರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು”.
ಈ ಕಾರ್ಯವಿಧಾನದಲ್ಲಿ ಸೂಚಿಸಿದ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ಯಾವುದೇ ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಯಪಡಿಸಿದೆ. ಈ ಹಿಂದೆ ವಂಶವೃಕ್ಷಕ್ಕೆ ಸಂಬಂಧಿಸಿದಂತೆ ನೀಡಿರುವ ಸುತ್ತೋಲೆಗಳನ್ನು ಹಿಂಪಡೆಯಲಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
