23/04/2026

Law Guide Kannada

Online Guide

ದ್ವೇಷ ಭಾಷಣ ಒಪ್ಪುವುದಿಲ್ಲ, ಅದು ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್

ನವದೆಹಲಿ: ಯಾವುದೇ ಸಮುದಾಯದ ವಿರುದ್ದ ದ್ವೇಷ ಭಾಷಣ ಮಾಡಿದರೇ ಅದನ್ನು ಒಪ್ಪುವುದಿಲ್ಲ. ದ್ವೇಷ ಭಾಷಣ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದ್ವೇಷ ಭಾಷಣ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಉಜ್ವಲ್ ಭುಯಾನ್ ನೇತೃತ್ವದ ನ್ಯಾಯಪೀಠವು, ಇಂತಹ ಬೆಳವಣಿಗೆಯನ್ನು ‘ಬ್ರಾಹ್ಮಣಫೋಬಿಯಾ’ ಎಂದು ಬಣ್ಣಿಸಿದೆ.

ಮಹಾಲಿಂಗಂ ಬಾಲಾಜಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಕ್ಕೆ ಕೈಗೆತ್ತಿಕೊಂಡಿತು. ವಕೀಲರು ವಾದ ಮಂಡಿಸಲು ಆರಂಭಿಸಿದಾಗಲೇ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಪೀಠವು, ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಬಾರದು. ‘ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವುದನ್ನು ಒಪ್ಪುವುದಿಲ್ಲ. ಇದು ಶಿಕ್ಷಣ, ಬೌದ್ಧಿಕ ಬೆಳವಣಿಗೆ ಹಾಗೂ ಸಹಿಷ್ಣುತೆಯನ್ನು ಒಳಗೊಂಡಿದೆ. ಎಲ್ಲರೂ ಭಾತೃತ್ವವನ್ನು ಪಾಲಿಸಿದರೆ, ಎಲ್ಲಿಯೂ ದ್ವೇಷ ಭಾಷಣ ಇರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ ದ್ವೇಷ ಭಾಷಣದ ಸಮುದಾಯಕ್ಕೆ ಮಾತ್ರ ಏಕೆ ರಕ್ಷಣೆ ಕೋರಲಾಗಿದೆ ಎಂದು ನ್ಯಾಯಪೀಠ ಈ ವೇಳೆ ಅರ್ಜಿದಾರರನ್ನು ಪ್ರಶ್ನಿಸಿತು.
ಅರ್ಜಿದಾರರು ಸ್ವತಃ ಅರ್ಜಿ ಹಿಂಪಡೆಯಲು ಮಾಡಿದ ಮನವಿಗೆ ನ್ಯಾಯಾಲಯವು ಸಮ್ಮತಿ ನೀಡಿತು. ‘ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ಪಡೆಯಲು ಒಪ್ಪಿದ್ದಾರೆ. ಅವರು ಸಲ್ಲಿಕೆಯನ್ನು ದಾಖಲೆಯಲ್ಲಿ ಇರಿಸಲಾಗಿದೆ. ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ, ಅರ್ಜಿ ವಜಾಗೊಳಿಸಲಾಗಿದೆ’ ಎಂದು ನ್ಯಾಯಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.