lawguidekannada, Author at Law Guide Kannada https://www.lawguidekannada.com/author/lawguidekannada/ Online Guide Wed, 22 Jul 2026 21:38:40 +0000 en-US hourly 1 https://wordpress.org/?v=7.0.2 http://www.lawguidekannada.com/wp-content/uploads/2022/09/cropped-Logo_512-32x32.jpg lawguidekannada, Author at Law Guide Kannada https://www.lawguidekannada.com/author/lawguidekannada/ 32 32 Slot thrills that keep you spinning without the fuss http://www.lawguidekannada.com/slot-thrills-that-keep-you-spinning-without-the-fuss/ Wed, 22 Jul 2026 21:38:40 +0000 https://www.lawguidekannada.com/?p=5866 Smooth interfaces and straightforward gameplay make these slots easy to enjoy, offering engaging spins that fit seamlessly into any gaming session.

The post Slot thrills that keep you spinning without the fuss appeared first on Law Guide Kannada.

]]>
Exploring the Best Online Slots: Where Fun Meets Simplicity

Discovering the Charm Behind the Best Online Slots

Slot games have become a staple for casual fun and entertainment, but what makes the best online slots truly stand out? It’s not just flashy graphics or catchy soundtracks; it’s the seamless blend of engaging gameplay and straightforward mechanics that keep players coming back. Titles from renowned providers like NetEnt and Pragmatic Play have been consistently delivering games with clear rules and rewarding features that don’t overwhelm.

One might wonder why, despite the abundance of complex game options, players often prefer those with simpler setups. Part of the appeal lies in the quick pace and the instant gratification that slots offer — you spin, you watch the reels dance, and you either win or try again. This no-fuss approach is a big part of what keeps the wheels turning and the excitement alive.

How RTP and Volatility Shape Your Slot Experience

Understanding the technical side of slots can help you choose games that fit your style. Return to Player (RTP) is a crucial factor; most top-tier slots hover around an RTP of 96-97%, meaning a fair chance at returns over time. For example, the popular slot Starburst by NetEnt offers an RTP of approximately 96.1%, balancing frequent smaller wins with the occasional larger payout.

Volatility, on the other hand, indicates the risk level: high volatility slots may pay out less often but offer bigger jackpots, while low volatility slots deliver smaller, more frequent wins. This choice heavily influences how long you might stay engaged and how you manage your bankroll. Knowing these qualities ahead of time lets players pick from a wide array of games with confidence.

Tips for Navigating the World of Online Slots

With countless options out there, how does one actually find and enjoy the best online slot experiences without getting lost in the clutter? Here are some practical pointers:

  1. Start with demos or free versions to get a feel for the game mechanics and themes.
  2. Check the RTP and volatility to match your risk tolerance and gameplay preferences.
  3. Look for slots with bonus features like free spins and multipliers that add excitement without complicating the game.
  4. Set a budget and stick to it; it’s easy to get carried away in the thrill of spinning reels.
  5. Read reviews from other players to gauge which titles are reliable and enjoyable.

From my experience, the ability to dip into a game that offers both entertainment and straightforward mechanics is priceless. It’s the reason slots remain a favorite pastime for millions worldwide.

The Role of Technology and Regulation in Online Slots

The best online slots today benefit from advanced technology that ensures fairness and security. Licensed casinos often use SSL encryption to protect player data and rely on Random Number Generators (RNGs) to guarantee unbiased results. Regulatory bodies monitor these aspects closely, providing an added layer of trust.

Payment methods have also evolved, making deposits and withdrawals smoother with options such as bank transfers, e-wallets, or even mobile payment systems. This convenience complements the simple enjoyment of spinning, making the entire experience more accessible and stress-free.

Why Responsible Gaming Enhances Your Enjoyment

While the excitement of slots is undeniable, it’s crucial to approach gaming with responsibility. Setting limits and recognizing when to step back can preserve the fun without the downsides. After all, slots are designed primarily as entertainment, not a way to guarantee financial gain.

Many platforms provide tools to help players manage their time and spending, which I believe is essential. Being mindful ensures that the thrill remains a positive part of leisure rather than a source of stress.

What to Keep in Mind When Choosing Your Next Slot

Finding the ideal slot game is as much about personal taste as it is about smart choices. Some prefer the classic charm of titles like Book of Dead from Play’n GO, while others lean towards innovative features offered by Evolution Gaming’s live slots. The diversity allows for something suited to nearly every mood and preference.

Ultimately, the best online slots are those that blend enjoyable gameplay with accessible design. They keep you spinning without the fuss, offering moments of thrill without complexity. Isn’t that what any good game should do?

The post Slot thrills that keep you spinning without the fuss appeared first on Law Guide Kannada.

]]>
Test Post Created http://www.lawguidekannada.com/test-post-created/ Wed, 22 Jul 2026 21:38:23 +0000 https://www.lawguidekannada.com/?p=5864 Test Post Created

The post Test Post Created appeared first on Law Guide Kannada.

]]>
Test Post Created

The post Test Post Created appeared first on Law Guide Kannada.

]]>
ಪ್ರಾಪ್ತ ವಯಸ್ಕ ಮಗಳ ಶಿಕ್ಷಣದ ವೆಚ್ಚಕ್ಕೂ ಪರಿಹಾರ: ಇದು ತಂದೆಯ ಕಾನೂನುಬದ್ಧ ಕರ್ತವ್ಯ – ಹೈಕೋರ್ಟ್ http://www.lawguidekannada.com/compensation-for-the-education-expenses-of-an-adult-daughter-this-is-the-legal-duty-of-the-father-karnataka-high-court/ Wed, 22 Jul 2026 12:53:54 +0000 https://www.lawguidekannada.com/?p=5860 ಬೆಂಗಳೂರು: ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಪುತ್ರಿಯ ಶಿಕ್ಷಣ ವೆಚ್ಚಕ್ಕೂ ಹಣಕಾಸಿನ ಪರಿಹಾರ ದೊರೆಯುತ್ತದೆ. ಪುತ್ರಿಯು ಪದವಿ ಶಿಕ್ಷಣ...

The post ಪ್ರಾಪ್ತ ವಯಸ್ಕ ಮಗಳ ಶಿಕ್ಷಣದ ವೆಚ್ಚಕ್ಕೂ ಪರಿಹಾರ: ಇದು ತಂದೆಯ ಕಾನೂನುಬದ್ಧ ಕರ್ತವ್ಯ – ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಪುತ್ರಿಯ ಶಿಕ್ಷಣ ವೆಚ್ಚಕ್ಕೂ ಹಣಕಾಸಿನ ಪರಿಹಾರ ದೊರೆಯುತ್ತದೆ. ಪುತ್ರಿಯು ಪದವಿ ಶಿಕ್ಷಣ ಪಡೆಯುತ್ತಿರಲಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರಲಿ. ಆಕೆಯ ಶಿಕ್ಷಣ ವೆಚ್ಚವನ್ನು ಭರಿಸುವುದು ತಂದೆಯ ಕಾನೂನುಬದ್ಧ ಕರ್ತವ್ಯವಾಗಿದೆ.” ಎಂದು ಹೈಕೋರ್ಟ್ ತೀರ್ಪು ನೀಡಿದೆ.

ತಂದೆಯು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು (Criminal Revision Petition) ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. ತನ್ನ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಮೊದಲ ವರ್ಷದ ಶುಲ್ಕ ಹಾಗೂ ಸಂಬಂಧಿತ ಶಿಕ್ಷಣ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ವಿಚಾರಣಾ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯದ ಆದೇಶಗಳನ್ನು ಎತ್ತಿಹಿಡಿದಿದೆ.

ಪುತ್ರಿ ಪ್ರಾಪ್ತವಯಸ್ಕಳಾದಳು ಎಂಬ ಕಾರಣಕ್ಕೆ ತಂದೆ ಶಿಕ್ಷಣ ವೆಚ್ಚ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಗೃಹ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, (Domestic Voilence Act) 2005ರ ಸೆಕ್ಷನ್ 20ರಡಿ ನೀಡಬಹುದಾದ ಹಣಕಾಸಿನ ಪರಿಹಾರ (Monetary Relief)ವು ಪುತ್ರಿಯ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದ ವೆಚ್ಚವನ್ನೂ ಒಳಗೊಂಡಿರುತ್ತದೆ. ಪುತ್ರಿ ಪ್ರಾಪ್ತವಯಸ್ಕಳಾಗಿದ್ದಾಳೆ ಎಂಬ ಕಾರಣಕ್ಕೆ ತಂದೆಯು ಆಕೆಯ ಶಿಕ್ಷಣ ವೆಚ್ಚವನ್ನು ಭರಿಸಲು ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.

ಪ್ರಕರಣದ ವಿವರ
ಪುತ್ರಿಯು ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20(d) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತನ್ನ ಎಂ.ಡಿ. (ಡರ್ಮಟಾಲಜಿ) ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಮೊದಲ ವರ್ಷದ ಶುಲ್ಕ ಮತ್ತು ಇತರ ಶಿಕ್ಷಣ ವೆಚ್ಚಗಳಿಗಾಗಿ ₹16 ಲಕ್ಷ ನೀಡುವಂತೆ ಮನವಿ ಮಾಡಿದ್ದರು.

ಆಕೆ NEET ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ತಂದೆ, ಪುತ್ರಿಯ MBBS ಶಿಕ್ಷಣವನ್ನು ಈಗಾಗಲೇ ತಾನೇ ಪೂರ್ಣಗೊಳಿಸಿದ್ದೇನೆ. ಆಕೆ ಈಗ ಪ್ರಾಪ್ತವಯಸ್ಕಳಾಗಿದ್ದಾಳೆ, ಸ್ನಾತಕೋತ್ತರ ಶಿಕ್ಷಣದ ವೇಳೆ ಸೈಪೆಂಡ್ ಪಡೆಯುತ್ತಿದ್ದಾಳೆ. ಆದ್ದರಿಂದ ಗೃಹ ಹಿಂಸಾಚಾರ ಕಾಯ್ದೆಯಡಿ ಇಂತಹ ಪರಿಹಾರವನ್ನು ಕೇಳಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು ಎಂದು ವಾದ ಮಂಡಿಸಿದ್ದರು.

ಈ ವೇಳೆ ನ್ಯಾಯಪೀಠವು “ಅವಿವಾಹಿತ ಪ್ರಾಪ್ತವಯಸ್ಕ ಪುತ್ರಿಯು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಹಣಕಾಸಿನ ಪರಿಹಾರವನ್ನು ಕೇಳಬಹುದೇ?” ಎಂಬ ಪ್ರಶ್ನೆಯನ್ನು ವಿವಾದಾಂಶವನ್ನಾಗಿ ಪರಿಗಣಿಸಿತು.

ಪುತ್ರಿಯು MBBS ಪೂರ್ಣಗೊಳಿಸಿ, ಅಖಿಲ ಭಾರತ ಶ್ರೇಯಾಂಕ ಪಡೆದು, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಹಾಗೂ ಗಣನೀಯ ಶುಲ್ಕವನ್ನು ಪಾವತಿಸಿರುವ ದಾಖಲೆಗಳನ್ನು ನ್ಯಾಯಾಲಯ ಗಮನಿಸಿತು.

“ಪುತ್ರಿಯು ಸ್ವಂತ ಆದಾಯ ಹೊಂದಿಲ್ಲ. ಆಕೆ ನಿರಂತರವಾಗಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ. ಈ ಸಂಗತಿಯನ್ನು ನ್ಯಾಯಾಲಯ ಪರಿಗಣಿಸಲೇಬೇಕು.” ಎಂದು ಹೇಳಿತು.

“ಪುತ್ರಿಯು ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು” ಎಂಬ ತಂದೆಯ ವಾದವನ್ನು ಹೈಕೋರ್ಟ್ ನ್ಯಾಯಪೀಠವು ತಿರಸ್ಕರಿಸಿತು.

ತಂದೆಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅವರು ವ್ಯವಹಾರ ನಡೆಸುತ್ತಿದ್ದು. ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿದ್ದು, ಸಾಲ ಪಡೆಯುವ ಮತ್ತು ಮರುಪಾವತಿಸುವ ಆರ್ಥಿಕ ಶಕ್ತಿ ಹೊಂದಿದ್ದಾರೆ. ಆದ್ದರಿಂದ, “ಪುತ್ರಿಯು ಪ್ರಾಪ್ತವಯಸ್ಕಳಾದ ನಂತರ ತಂದೆಗೆ ಶಿಕ್ಷಣ ವೆಚ್ಚ ಭರಿಸುವ ಜವಾಬ್ದಾರಿ ಇಲ್ಲ ಎಂಬ ವಾದದಲ್ಲಿ ಯಾವುದೇ ಬಲವಿಲ್ಲ.” ಎಂದು ನ್ಯಾಯಾಲಯ ತೀರ್ಮಾನಿಸಿತು.

ತಂದೆಯ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ , ತಂದೆ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣದ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ಕೆಳಹಂತದ ನ್ಯಾಯಾಲಯಗಳ ಅದೇಶವನ್ನು ಎತ್ತಿಹಿಡಿದಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

The post ಪ್ರಾಪ್ತ ವಯಸ್ಕ ಮಗಳ ಶಿಕ್ಷಣದ ವೆಚ್ಚಕ್ಕೂ ಪರಿಹಾರ: ಇದು ತಂದೆಯ ಕಾನೂನುಬದ್ಧ ಕರ್ತವ್ಯ – ಹೈಕೋರ್ಟ್ appeared first on Law Guide Kannada.

]]>
ವಂಶವೃಕ್ಷ ದೃಢೀಕರಣ ಪತ್ರಕ್ಕೆ ಹೊಸ ಮಾರ್ಗಸೂಚಿ: ಸಂಪೂರ್ಣ ವಿವರ ಇಲ್ಲಿದೆ ನೋಡಿ http://www.lawguidekannada.com/new-guidelines-for-family-tree-certificate/ Tue, 21 Jul 2026 14:12:32 +0000 https://www.lawguidekannada.com/?p=5846 ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರಿಗೆ ಖಾತೆ ಬದಲಾವಣೆ, ಆಸ್ತಿ ವರ್ಗಾವಣೆ ವಿವಿಧ ಉದ್ದೇಶಗಳಿಗಾಗಿ ಕಡ್ಡಾಯವಾಗಿ ಬೇಕಾಗುವ ವಂಶವೃಕ್ಷ ದೃಢೀಕರಣ ಪತ್ರವನ್ನು ನೀಡುವ...

The post ವಂಶವೃಕ್ಷ ದೃಢೀಕರಣ ಪತ್ರಕ್ಕೆ ಹೊಸ ಮಾರ್ಗಸೂಚಿ: ಸಂಪೂರ್ಣ ವಿವರ ಇಲ್ಲಿದೆ ನೋಡಿ appeared first on Law Guide Kannada.

]]>
ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರಿಗೆ ಖಾತೆ ಬದಲಾವಣೆ, ಆಸ್ತಿ ವರ್ಗಾವಣೆ ವಿವಿಧ ಉದ್ದೇಶಗಳಿಗಾಗಿ ಕಡ್ಡಾಯವಾಗಿ ಬೇಕಾಗುವ ವಂಶವೃಕ್ಷ ದೃಢೀಕರಣ ಪತ್ರವನ್ನು ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಹಾಗೂ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸಾರ್ವಜನಿಕರಿಗೆ ವಿವಿಧ ಉದ್ದೇಶಗಳಿಗೆ ವಂಶವೃಕ್ಷದ ಅವಶ್ಯಕತೆ ಇರುತ್ತದೆ. ಹೀಗಾಗಿ “ವಂಶವೃಕ್ಷ ದೃಢೀಕರಣ ಪತ್ರವನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ವಾರಸುದಾರಿಕೆ ಪ್ರಕರಣಗಳಲ್ಲಿ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 128 ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳು, 1966 ರ ನಿಯಮ 62 ರಂತೆ ಜಮೀನಿನ ಖಾತೆ ಬದಲಾವಣೆ ಮಾಡಲು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಿಂಚಣಿ ಸಂಬಂಧಿತ ವ್ಯವಹಾರಗಳಲ್ಲಿ ಸೌಲಭ್ಯ ಪಡೆಯಲು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳ ವಾರಸುದಾರಿಕೆ ಖಾತೆ ಬದಲಾವಣೆ ಮಾಡಲು ಹಾಗೂ ಜೀವಿತ ಸದಸ್ಯರ ದೃಢೀಕರಣ ಪತ್ರ ಪಡೆಯಲು ಕೋರುವ ಅರ್ಜಿದಾರನು ತನ್ನ ಕುಟುಂಬದ ವಂಶವೃಕ್ಷ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ವಂಶವೃಕ್ಷವನ್ನು (Family Tree) ನೀಡುವ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡುವ ಸಲುವಾಗಿ, ರಾಜ್ಯಾದ್ಯಂತ online ತಂತ್ರಾಂಶದ ಮುಖಾಂತರ ವಂಶವೃಕ್ಷ ((Family Tree)) ದೃಢೀಕರಣ ಪತ್ರವನ್ನು ನೀಡುವ ಕುರಿತು ಅನುಸರಿಸಬೇಕಾದ ಕ್ರಮ ಹಾಗೂ ಪರಿಶೀಲಿಸಬೇಕಾದ ದಾಖಲೆಗಳ ಬಗೆ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ವಿಷಯ: ವಂಶವೃಕ್ಷ (Family Tree) ದೃಢೀಕರಣ ಪತ್ರ ನೀಡುವ ಕುರಿತು ಮಾರ್ಗಸೂಚಿಗಳು ಈ ಕೆಳಕಂಡಂತಿದೆ

1. ಅರ್ಜಿದಾರರು ಕಡ್ಡಾಯವಾಗಿ ಈ ದಾಖಲಾತಿಗಳನ್ನು ಸಲ್ಲಿಸಬೇಕು

1.1 ವಂಶವೃಕ್ಷ ಪ್ರಮಾಣ ಪತ್ರವನ್ನು ಕೋರುವ ಅರ್ಜಿದಾರನು ರೂ.100/- ಛಾಪಾ ಕಾಗದದಲ್ಲಿ ಈ ಸುತ್ತೋಲೆಯ ಅನುಬಂಧದಲ್ಲಿನ ನಮೂನೆಯಂತೆ ಭರ್ತಿ ಮಾಡಿ ನೋಟರಿಯವರಿಂದ ಪ್ರಮಾಣೀಕರಿಸಿದ ತನ್ನ ವಂಶವೃಕ್ಷದ ಅಫಿಡವಿಟ್ ಅನ್ನು, ಹಾಗೂ ಇದರೊಂದಿಗೆ ಕಡ್ಡಾಯವಾಗಿ ತನ್ನ ಆಧಾರ್ ಕಾರ್ಡ್ ಪ್ರತಿಯನ್ನು ಮತ್ತು ಕುಟುಂಬದ ಇತರ ಎಲ್ಲಾ ಜೀವಂತ ಸದಸ್ಯರ ಆಧಾರ್ ಕಾರ್ಡ್! ಚುನಾವಣೆ ಗುರುತಿನ ಚೀಟಿ/ಪಾಸ್ ರ್ಟ್/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್ /ಜನನ ಪ್ರಮಾಣ ಪತ್ರ/ದೃಢೀಕೃತ ಶಾಲಾ ದಾಖಲಾತಿ ಇವುಗಳಲ್ಲಿ ಒಂದು ದಾಖಲೆಯನ್ನು ಅಫಿಡೆವಿಟ್ ನಲ್ಲಿ ನಮೂದಿಸಿರುವಂತೆ ಸಲ್ಲಿಸುವುದು. ಅಫಿಡವಿಟ್ ನಲ್ಲಿ ಅರ್ಜಿದಾರನು ತನ್ನ ಅಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದು.

1.2 ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಫೋಟೋವನ್ನು ಸಲ್ಲಿಸುವುದು.

1.3 ಕುಟುಂಬದಲ್ಲಿ ಪೌತಿಯಾದವರಿಗೆ ಸಂಬಂದಿಸಿದಂತೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಡಿಜಿಟಲ್ ಮರಣ ಪ್ರಮಾಣ ಪತ್ರವನ್ನು ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರವನ್ನು/ಕಂಡಿಕೆ 3(ಸಿ) ರಲ್ಲಿ ನಮೂದಿಸಿರುವ ಯಾವುದಾದರೂ ಒಂದು ದಾಖಲಾತಿಯನ್ನು ಲಭ್ಯವಿದ್ದಲ್ಲಿ ಸಲ್ಲಿಸುವುದು.

1.4 ಅರ್ಜಿದಾರನು ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ನಾಡ ಕಚೇರಿ/ಗ್ರಾಮ ಒನ್ ಸೇವಾ ಕೇಂದ್ರ/ಕರ್ನಾಟಕ ಒನ್ ಸೇವಾ ಕೇಂದ್ರ/ಬಾಪೂಜಿ ಸೇವಾ ಕೇಂದ್ರ / ಆನ್ ಲೈನ್ ನಾಗರೀಕ ವೋರ್ಟಾಲ್ ನಲ್ಲಿ ಸಲ್ಲಿಸುವುದು.


2. ಅರ್ಜಿದಾರರ ಅಧಾರ್ e-KYC ಕಡ್ಡಾಯವಾಗಿರುತ್ತದೆ.
ಅರ್ಜಿದಾರರ ಆಧಾರ್ e-KYC ಕಡ್ಡಾಯವಾಗಿದ್ದು, ಅರ್ಜಿದಾರನು ಕರ್ನಾಟಕದಲ್ಲಿ ವಿಳಾಸವಿರುವ ಆಧಾರ್ ಸಂಖ್ಯೆಯ ಮೂಲಕ e-kyc ಯನ್ನು ಕಡ್ಡಾಯವಾಗಿ OTP ಅಥವಾ ಬಯೋಮೆಟ್ರಿಕ್ ಮೂಲಕ ಮಾಡುವುದು.


3. ಕುಟುಂಬದ ಎಲ್ಲಾ ಮೃತ ಸದಸ್ಯರ ದಾಖಲಾತಿ ನೀಡುವ ಕುರಿತು.

3(ಎ): ಮೃತ ಸದಸ್ಯರ ವಿವರವನ್ನು ವಂಶವೃಕ್ಷದಲ್ಲಿ ನಮೂದಿಸಲು ಡಿಜಿಟಲ್ ಮರಣ ಪ್ರಮಾಣ ಪತ್ರದಸಂಖ್ಯೆಯನ್ನು ಒದಗಿಸುವುದು.

3(ಬಿ): ಡಿಜಿಟಲ್ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರದ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸಿ, ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರದ Pಆಈ ನ್ನು ಅಪ್ ಲೋಡ್ ಮಾಡುವುದು.

3(ಸಿ): ಒಂದು ವೇಳೆ ಡಿಜಿಟಲ್ ಹಾಗೂ ಭೌತಿಕ ಮರಣ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ, ಈ ಕೆಳಗೆ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ದಾಖಲೆಯನ್ನಾಗಿ ಸಲ್ಲಿಸುವುದು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ಸಮಯದಲ್ಲಿ ಗ್ರಾಮಸ್ಥರಿಂದ ಹೇಳಿಕೆ ಪಡೆದು ವೀಡಿಯೋ/ಕೆ.ಬರವಣಿಗೆ ಮಹಜರ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವುದು.
(ಪಾಸ್ಪೋರ್ಟ್/ ಚಾಲನಾ ಪರವಾನಗಿ/ ಪ್ಯಾನ್ ಕಾರ್ಡ್/ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನೀಡಲಾದ ಐ-ಕಾಡ್ / ವಿದ್ಯಾರ್ಥಿ ಗುರುತಿನ ಚೀಟಿ/ಅಂಕಪಟ್ಟಿ/ಶಾಲಾ ವರ್ಗಾವಣೆ ಪತ್ರ (IC/ ಪಡಿತರ ಚೀಟಿ/ಸಾಮಾಜಿಕ ಭದ್ರತೆ/ಮಾಜಿ ಸೈನಿಕರ ಪಿಂಚಣಿ ಅದೇಶ ದಾಖಲೆಗಳು/ಸ್ವಾತಂತ್ರ ಹೋರಾಟಗಾರರ ಗುರುತಿನ ಚೀಟಿ/ಅಂಗವಿಕಲ ಗುರುತಿನ ಚೀಟಿ/ ಮಾಜಿ ಸೈನಿಕರ ಸಿಎಸ್ ಡಿ ಕ್ಯಾಂಟೀನ್ ಕಾರ್ಡ್/ ಸಂಧ್ಯಾ ಸುರಕ್ಷಾ ಗುರುತಿನ ಚೀಟಿ/ ಎನ್ ಆರ್ ಇಜಿಎ ಉದ್ಯೋಗ ಕಾರ್ಡ್/ಯಶಸ್ಸಿನಿ ಕಾರ್ಡ್/ ಸ್ಥಳೀಯ ಸಂಸ್ಥೆಗಳಿಂದ ನೀಡಲಾದ ಐ ಕಾರ್ಡ್/ ಆರೋಗ್ಯ ವಿಮಾ ಯೋಜನೆಗಳ ಸ್ಮಾರ್ಟ್ ಕಾರ್ಡ್/ ಹಿರಿಯ ನಾಗರಿಕರ ಐಡಿ ಕಾರ್ಡ್/ ಚುನಾವಣೆ ಗುರುತಿನ : ಟಿ/ವಿದ್ಯುತ್ ಮೀಟರ್ ಆರ್ಆರ್ ಸಂಖ್ಯೆ/ ಜನನ ಪ್ರಮಾಣಪತ್ರ/ 10 ವರ್ಷಗಳ ಅಧ್ಯಯನ ಪ್ರರ್ಮಾ ಪತ್ರ/ ಕುಟುಂಬ ಐಡಿ)

3(ಡಿ): ಒಂದು ವೇಳೆ ಕಂಡಿಕೆ 3(ಸಿ) ರಲ್ಲಿ ಸೂಚಿಸಿರುವ ಯಾ ದೇ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ, ಗ್ರಾಮ ಆಡಳಿತ ಅಧಿಕಾರಿಗಳು ಕ್ಷೇತ್ರ ಪಶಿಲನೆ ಸಮಯದಲ್ಲಿ ಗ್ರಾಮಸ್ಥರಿಂದ ಹೇಳಿಕೆ ಪಡೆದು ವೀಡಿಯೋ/ಬರವಣಿಗೆ ಮಹಜರ ವರದಿ ಕಡ್ಡಾಯವಾಗಿ ಸಲ್ಲಿಸುವುದು.


4. ಅರ್ಜಿ ಸಲ್ಲಿಸುವ ಸಮಯದಲ್ಲಿ ಡಾಟಾ ಎಂಟ್ರಿ ಅಪರೇಟರ್ರವರು/ಅರ್ಜಿದಾರರು ತಂತ್ರಾಂಶದಲ್ಲಿ ನಮೂದಿಸಬೇಕಾದ ವಿವರಗಳು:
ಅಫಿಡವಿಟ್ ದಿನಾಂಕ ಮತ್ತು ಇ-ಸಾಂಪ್ ಸಂಖ್ಯೆ ನಮೂದಿಸುವುದು.
ಕುಟುಂಬ ಸದಸ್ಯರ ವಿವರಗಳು (ಹೆಸರುಗಳು, ಸಂಬಂಧ, ವಯಸ್ಸು, ವೈವಾಹಿಕ ಸ್ಥಿತಿ.)
ವಂಶವೃಕ್ಷವನ್ನು ಪಡೆಯುತ್ತಿರುವ ಉದ್ದೇಶ.
ಅರ್ಜಿದಾರನು ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಳಾಸದ ವಿವರ ಹಾಗೂ ವಿಳಾಸದಲ್ಲಿ ವಾಸವಿರುವ ಅರ್ಜಿದಾರರ ಪಾಸ್ಪೋರ್ಟ್ ಫೋಟೋವನ್ನು ಹಾಗೂ ಕಂಡಿಕೆ 1ರಲ್ಲಿ ಸೂಚಿಸಿರುವ ಇತರೆ ದಾಖಲಾತಿಗಳನ್ನು ಅಪ್ ಲೋಡ್ ಮಾಡುವುದು.


5. ಅರ್ಜಿ ಸ್ವೀಕೃತಿಯಾದ ನಂತರ ಗ್ರಾಮ ಆಡಳಿತ ಅಧಿಕಾರಿರವರು ಪರಿಶೀಲಿಸಬೇಕಾದ ಕ್ರಮ.
ಅರ್ಜಿದಾರರಿಂದ ಸ್ವೀಕೃತವಾದ ಅರ್ಜಿ ಹಾಗೂ ದಾಖಲೆಗಳನ್ನು ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿಗೆ ಆನ್ಲೈನ್ ಲಾಗಿನ್(ಸಂಯೋಜನೆ ಅಪ್ಲಿಕೇಶನ್) ಮೂಲಕ ಕಳುಹಿಸಲಾಗುವುದು. ಗ್ರಾಮ ಆಡಳಿತ ಅಧಿಕಾರಿಯು ಅರ್ಜಿಯಲ್ಲಿ ನಮೂದಿಸಿರುವ ವಿಳಾಸದ ಸ್ಥಳಕ್ಕೆ ಖುದ್ದು ಭೇಟಿ ನೀಡಿ. ಅರ್ಜಿಯಲ್ಲಿ ನಮೂದಿಸಿರುವ ಕುಟುಂಬದ ಸದಸ್ಯರ ವಿವರಗಳು ಹಾಗೂ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ಒಂದು ವೇಳೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಅಗತ್ಯವಿರುವ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸದೇ ಇದ್ದಲ್ಲಿ ಸದರಿ ಅವಶ್ಯಕ ದಾಖಲೆಗಳನ್ನು ಅರ್ಜಿದಾರರಿಂದ ಪಡದು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡವುದು ಮತ್ತು ಅಭಿಪ್ರಾಯವನ್ನು ದಾಖಲಿಸುವುದು.
ಮೇಲೆ ಅನುಮೋದನೆ ಅಥವಾ ತಿರಸ್ಕರಣೆ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ ಗ್ರಾಮ ಆಡಳಿತ. ಅಧಿಕಾರಿಯು ರಾಜನೆ ನಿರೀಕ್ಷಕರಿಗೆ ಶಿಫಾರಸು ಮಾಡುವುದು.
ಸೂಚನೆ:- ಹಿಂದಿನ ತಿರಸ್ಕಾರ ಪಕರಣಗಳಲ್ಲಿ Endorsement List ಅನ್ನು VAO ಲಾಗಿನ್ನಲ್ಲಿ ನೀಡಲಾಗಿದ್ದು ಸದರಿ ಲಿಸ್ಟ್ ಅನ್ನು ಕಣನ್ನಿಯವಾಗಿ ಪರಿಶೀಲಿಸಬೇಕು.


6. ಗ್ರಾಮ ಆಡಳಿತ ಅಧಿಕಾರಿಯು ತಂತ್ರಾಂಶದಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು ಸಲ್ಲಿಸಿರುವ ಅಫಿಡವಿಟ್ ನಲ್ಲಿರುವ ಮಾಹಿತಿಗೂ ತಂತ್ರಾಂಶದಲ್ಲಿ ನಮೂದಿಸಿರುವ ಮಾಹಿತಿಗೂ ಈ ಕೆಳಕಂಡ ಅಂಶಗಳ ಕುರಿತು ಯಾವುದಾದರೂ ನ್ಯೂನ್ಯತೆಗಳು ಇದ್ದಲ್ಲಿ ಅಫಿಡವಿಟ್ ನಲ್ಲಿರುವ ಮಾಹಿತಿಯಂತೆ ತಿದ್ದುಪಡಿ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ತಿದ್ದುಪಡಿಮಾಡಿ ಸದರಿ ಸಂಬಂಧಿತ ಹೆಚ್ಚುವರಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ತಮ್ಮ ಷರಾವನ್ನು ನಮೂದಿಸಬೇಕು.
ಇ-ಸ್ಯಾಂಪ್ ದಿನಾಂಕ ಮತ್ತು ಸಂಖ್ಯೆ.
ಕುಟುಂಬ ಸದಸ್ಯರ ವಿವರಗಳು (ಹೆಸರುಗಳು, ಸಂಬಂಧ, ವಯಸ್ಸು, ವ್ಯವಾಹಿಕ ಸ್ಥಿತಿ).


7. ರಾಜ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಯಿಂದ ವರದಿ ಸ್ವೀಕೃತಿಯಾದ ಮೇಲೆ ಅನುಸರಿಸಬೇಕಾದ ಕ್ರಮ.
ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ. ಅಧಿಕಾರಿರವರಿಂದ ಸ್ವೀಕೃತವಾದ ಅಭಿಪ್ರಾಯ/ಶಿಫಾರಸಿ,ನೊಂದಿಗಿನ ವರದಿಯನ್ನು ದಾಖಲೆಗಳ ಅನುಸಾರ ಸಮರ್ಪಕವಾಗಿರುವ ಕುರಿತು ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಖುದು ಸ್ಥಳ ಪರಿಶೀಲನೆ ನಡೆಸಿ, ತಮ್ಮ ಹರಾವನು, ನಮೂದಿಸಿ, ಅನುಮೋದನೆ ಅಥವಾ ತಿರಸ್ಕರಿಸುವ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ -ಉಪತಹಶೀಲ್ದಾರರಿಗೆ ಶಿಫಾರಸ್ಸನ್ನು ಮಾಡುವುದು. ರಾಜಸ್ವ ನಿರೀಕ್ಷಕರು, ಹೆಚ್ಚುವರಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಅವಶ್ಯ ಇದ್ದಲ್ಲಿ ತಮ್ಮ ಲಾಗಿನ್ ಮೂಲಕವೇ ಅಪ್ ಲೋಡ್ ಮಾಡಲು ಕ್ರಮ ವಹಿಸುವುದು.


8. ವಂಶವೃಕ್ಷದ ಕುರಿತಾಗಿ ಅರ್ಜಿದಾರರ ಅರ್ಜಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಉಪತಹಶೀಲ್ದಾರರಿಗೆ ಇರುತ್ತದೆ, ಉಪತಹಶೀಲ್ದಾರರು ಅರ್ಜಿಯ ಕುರಿತು, ಗ್ರಾಮ ಆಡಳಿತ ಅಧಿಕಾರಿ ಮತ್ತು ರಾಜಸ್ಥ ನಿರೀಕ್ಷಕರು ಶಿಫಾರಸ್ಸಿನೊಂದಿಗೆ ಅಪ್ ಲೋಡ್ ಮಾಡಲಾದ ದಾಖಲೆಗಳ ಆಧಾರದ ಮೇಲೆ ಕೂಲಂಕುಷವಾಗಿ ಪರಿಶೀಲಿಸಿ ವಂಶವೃಕ್ಷದಲ್ಲಿನ ಕುಟುಂಬದ ಸದಸ್ಯರ ವಿವರವನ್ನು, ಖಚಿತಪಡಿಸಿಕೊಳ್ಳಬೇಕು. ಅರ್ಜಿಗಳನ್ನು ಜೇಷತೆಯ ಆಧಾರದ ಮೇಲೆ ಅಂಗೀಕರಿಸಬೇಕು ಅಥವಾ ತಿರಸ್ಕರಿಸಬೇಕು. ಉಪತಹಶೀಲ್ದಾರರು ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಕುರಿತು ಅರ್ಜಿಯನ್ನು ಅನುಮೋದನೆಗೊಂಡ ಪ್ರಕರಣಗಳಲ್ಲಿ ದೃಢೀಕರಣ ಪತ್ರವನ್ನು ಅಥವಾ ತಿರಸ್ಕರಿಸುವ ಪ್ರಕರಣಗಳಲ್ಲಿ ಹಿಂಬರಹವನ್ನು ಡಿಜಿಟಲ್ ರೂಪದಲ್ಲಿ ಸೃಜಿಸಲಾಗುತ್ತದೆ ಹಾಗೂ ಅರ್ಜಿದಾರರಿಗೆ SMS/e-mail ಮೂಲಕ ಕಳುಹಿಸಲಾಗುತ್ತದೆ. ಸದರಿ ಅರ್ಜಿಯನ್ನು 14 ದಿನಗಳ ಸಕಾಲ ದಿನಗಳ ಅವಧಿಯೊಳಗೆ ಇತ್ಯರ್ಥಪಡಿಸುವುದು


9. ಮೇಲ್ಮನವಿ ಪ್ರಾಧಿಕಾರದ ಕರ್ತವ್ಯಗಳು:
ಉಪವಿಭಾಗಾಧಿಕಾರಿಗಳು ತಮ್ಮ ಉಪವಿಭಾಗದ ವ್ಯಾಪ್ತಿಯಲ್ಲಿ ಸ್ವೀಕೃತವಾಗುವ ವಂಶವೃಕ್ಷ ಅರ್ಜಿಗಳ ಮೇಲ್ಮನವಿ ಪ್ರಾಧಿಕಾರ ಆಗಿರುತ್ತದೆ. ವಂಚಕ ಅರ್ಜಿಯು ಸಕಲ ಲಾವಧಿಯೊಳಗೆ ವಿಲೇವಾರಿ ಆಗದಿದ್ದಲ್ಲಿ ಮೇಲ್ಮನವಿ ಪ್ರಾಧಿಕಾರಕ್ಕೆ ಸದರಿ ಅರ್ಜಿಯು ರವಾನೆಯಾಗತಕ್ಕದ್ದು ಹಾಗೂ ಸದರಿ ಅರ್ಜಿಯನ್ನು ಇತ್ಯರ್ಥಪಡಿಸಲು 35 ಸಕಾಲ ಕಾಲಾವಧಿ ನಿಗಧಿಪಡಿಸಲಾಗಿರುತ್ತದೆ. ಯಾವುದೇ ವಂಶವೃಕ್ಷ ದೃಢೀಕರಣವು ಸುಳ್ಳು ಅಥವಾ ತಪ್ಪು ಮಾಹಿತಿಗಳ ದಿನಗಳ ಆಧಾರದ ಮೇಲೆ ಅನುಮೋದನೆಯಾಗಿರುವುದು ಸ್ವಯಂ ಪ್ರೇರಿತ ಅಥವಾ ದೂರಿನ ಆಧಾರದ ಮೇಲೆ ದೃಢಪಟ್ಟಲ್ಲಿ ಸಂಬಂಧಪಟ್ಟ ಹೋಬಳಿಯ ಉಪ ತಹಶೀಲ್ದಾರರು ಅಂತಹ ವಂಶವೃಕ್ಷ ದೃಢೀಕರಣ ಪತ್ರವನ್ನು, ಅಸಿಂಧುಗೊಳಿಸಲು ತಂತ್ರಾಂಶದ ಮೂಲಕ ಮೇಲ್ಮನವಿ ಪ್ರಾಧಿಕಾರಕ್ಕೆ, ಪ್ರಸ್ತಾವನ ಸಲ್ಲಿಸುವುದು ಹಾಗೂ ವಂಶವೃಕ್ಷ ಅರ್ಜಿಯು ಸಕಾಲ ಕಾಲಾವಧಿಯೊಳಗೆ ತಿರಸ್ಕೃತಗೊಂಡಲ್ಲಿ ಅಥವಾ ಅನುಮೋದನೆಗೊಂಡಲ್ಲಿ ಹಿತಾಸಕ್ತಯುಳ್ಳ ಬಾಧಿತ ವ್ಯಕ್ತಿಯು ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿರುತ್ತದೆ, ಸದರಿ ಪ್ರಸ್ತಾವನೆಯನ್ನು ಅಥವಾ ಸದರಿ ಮೇಲ್ಮನವಿಯನ್ನು ಉಪವಿಭಾಗಾಧಿಕಾರಿಗಳು 90 ದಿನಗಳ ಒಳಗಾಗಿ ವಿಚಾರಣೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳತಕ್ಕದ್ದು


10. ಒಂದು ವೇಳೆ ಕುಟುಂಬದ ಯಾವುದೇ ಸದಸ್ಯನನ್ನು ದತ್ತು ತೆಗೆದುಕೊಂಡಿದ್ದಲ್ಲಿ ಸದರಿ ಸದಸ್ಯನು ಜೈವಿಕ ಪೋಷಕರ (Biological Parents) ವಿವರದ ವಂಶ ವೃಕ್ಷಕ್ಕೆ ಅರ್ಹನಾಗಿರುವುದಿಲ್ಲ. ಏಕೆಂದರೆ, ಹಿಂದೂ ದತ್ತಕ ಮತ್ತು ಸಂರಕ್ಷಣ ಕಾಯ್ದೆ 1956 ರಸ್ತೆಯ ದತ್ತಕಕೆ, ಪಡೆದ ಮಗುವನ್ನು ದತ್ತು ಪಡೆದ ಪೋಷಕರ ಮಗುವೆಂದೇ ಪರಿಗಣಿಸಬೇಕಾಗುತ್ತದೆ. ಆ ರೀತಿ ದತ್ತು ಕೊಟ್ಟ ಮಗುವು ಆತನ ಜೈವಿಕ ತಂದೆ ತಾಯಿಯಿಂದ ಸಂಪೂರ್ಣವಾಗಿ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡು ಬೇರ್ಪಡುತ್ತಾನೆ.


11. ಕುಟುಂಬದ ಯಾವುದೇ ಸದಸ್ಯನು ಕುಟುಂಬದಲ್ಲಿ ಇಬ್ಬರು ಪತಿ/ಪತ್ನಿ ಇರುವ ಕುರಿತು ಯಾವುದೇ ಸಮರ್ಪಕ ದಾಖಲಾತಿ ಸಾಕ್ಷಿ ಇಲ್ಲದೇ ತಕರಾರನ್ನು ತೆಗೆದಲ್ಲಿ ಸಿವಿಲ್ ನ್ಯಾಯಾಲಯದಿಂದ ಪಡೆದ ಡಿಕ್ರಿಯಿದ್ದಲ್ಲಿ ಮಾತ್ರವೇ ನಂಗ ವ್ಯಕ್ತಕ್ಕೆ ಸೇರ್ಪಡೆಗೊಳಿಸಲು ಕ್ರಮವಹಿಸಬೇಕಾಗಿರುತ್ತದೆ ಮತ್ತು ಈ ಕುರಿತು ಕ್ರಮ ಜರುಗಿಸುವ ಅಥವಾ ತೀರ್ಮಾನಕ್ಕೆ ಬರುವ ಅಧಿಕಾರ ಕಂದಾಯ ಇಲಾಖೆಯ ವ್ಯಾಪ್ತಿಗೆ ಇರುವುದಿಲ್ಲ.


12. ವಂಶವೃಕ್ಷ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಅರ್ಜಿದಾರರು ತಪ್ಪು, ಅಥವಾ ಸುಳ್ಳು, ಮಾಹಿತಿಯನ್ನು ನೀಡಿ ಪ್ರಮಾಣಪತ್ರ (Affidavit) ಸಲ್ಲಿಸಿದಲ್ಲಿ, ಅಂತಹವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ರಸ್ತೆಯ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.


13. ಕಂದಾಯ ಇಲಾಖೆಯಿಂದ ವಿತರಿಸಲಾಗುವ ವಂಶವೃಕ್ಷ ದೃಢೀಕರಣವು, ಸದರಿ ಕುಟುಂಬದಲ್ಲಿ. -ಯಾವುದಾದರು ಜನನ/ಮರಣ ಹೊಂದುವವರೆಗೆ ಅಥವಾ 1 ವರ್ಷ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿ ಇರುತ್ತದೆ.


14. ಈ ಕೆಳಗಿನಂತೆ ಪ್ರಸ್ತಾಪಿಸಿರುವ Disclaimer ಅನ್ನು ಪ್ರಮಾಣ ಪತ್ರದಲ್ಲಿ ಮುದ್ರಿಸುವುದು.
ಅರ್ಜಿದಾರರು ಸಲ್ಲಿಸಿದ ಅಫಿಡವಿಟ್ ಆಧಾರದ ಮೇಲೆ ದೃಢೀಕರಣವು ಈ ವಂಶವೃಕ್ಷ ದೃಢೀಕರಣವನ್ನು ಕರ್ನಾಟಕ ಸರ್ಕಾರದ ಕಂದಾಯ/ಇತರ ಇಲಾಖೆಯ ಉದ್ದೇಶಗಳಿಗೆ ನೀಡಲು ಮಾತ್ರ ಸೀಮಿತಗೊಳಿಸಲಾಗಿದೆ. ಸದರಿ ಪ್ರಮಾಣ ಪತ್ರವನ್ನು ಯಾವುದೇ ಸುಳ್ಳು ಮಾಹಿತಿಯನ್ನು ನೀಡಿ ಪಡೆದಿದ್ದಲ್ಲಿ ಅರ್ಜಿದಾರರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು”.

ಈ ಕಾರ್ಯವಿಧಾನದಲ್ಲಿ ಸೂಚಿಸಿದ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ಯಾವುದೇ ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಯಪಡಿಸಿದೆ. ಈ ಹಿಂದೆ ವಂಶವೃಕ್ಷಕ್ಕೆ ಸಂಬಂಧಿಸಿದಂತೆ ನೀಡಿರುವ ಸುತ್ತೋಲೆಗಳನ್ನು ಹಿಂಪಡೆಯಲಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

The post ವಂಶವೃಕ್ಷ ದೃಢೀಕರಣ ಪತ್ರಕ್ಕೆ ಹೊಸ ಮಾರ್ಗಸೂಚಿ: ಸಂಪೂರ್ಣ ವಿವರ ಇಲ್ಲಿದೆ ನೋಡಿ appeared first on Law Guide Kannada.

]]>
ಪತ್ನಿ, ಮಗುವಿನ ಪೋಷಣೆ ಪತಿಯ ಆದ್ಯ ಕರ್ತವ್ಯ; ನಿರುದ್ಯೋಗ, ಸಂಬಳ ಕಡಿಮೆ ಎಂಬ ಕಾರಣ ಸಲ್ಲದು – ಹೈಕೋರ್ಟ್ http://www.lawguidekannada.com/husbands-primary-duty-is-to-take-care-of-wife-and-child-unemployment-low-salary-not-valid-high-court/ Tue, 21 Jul 2026 10:04:52 +0000 https://www.lawguidekannada.com/?p=5843 ಬೆಂಗಳೂರು: ಪತ್ನಿ, ಮಗುವಿನ ಪೋಷಣೆ ಮಾಡುವುದು ಪತಿಯ ಆದ್ಯ ಕರ್ತವ್ಯ. ಹೀಗಾಗಿ ನಾನು ನಿರುದ್ಯೋಗಿ, ಸಂಬಳ ಕಡಿಮೆ ಇದೆ ಎಂಬ...

The post ಪತ್ನಿ, ಮಗುವಿನ ಪೋಷಣೆ ಪತಿಯ ಆದ್ಯ ಕರ್ತವ್ಯ; ನಿರುದ್ಯೋಗ, ಸಂಬಳ ಕಡಿಮೆ ಎಂಬ ಕಾರಣ ಸಲ್ಲದು – ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಪತ್ನಿ, ಮಗುವಿನ ಪೋಷಣೆ ಮಾಡುವುದು ಪತಿಯ ಆದ್ಯ ಕರ್ತವ್ಯ. ಹೀಗಾಗಿ ನಾನು ನಿರುದ್ಯೋಗಿ, ಸಂಬಳ ಕಡಿಮೆ ಇದೆ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಕ್ಕೆ ಒಳಪಡಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ದಂಡ ಪ್ರಕ್ರಿಯಾ ಸಂಹಿತೆಯ ಕಲಂ 125ರ ಅಡಿಯಲ್ಲಿ ಪತ್ನಿ ಮತ್ತು ಮಗುವಿಗೆ ತಲಾ ತಿಂಗಳಿಗೆ 28,000ರಂತೆ ಒಟ್ಟು ₹16,000 ನಿರ್ವಹಣಾ ಭತ್ಯೆ ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಮರುಪರಿಶೀಲನಾ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ವಜಾಗೊಳಿಸಿತು. ಪತಿ ನಿರುದ್ಯೋಗಿಯಾಗಿದ್ದರೆ ಉದ್ಯೋಗ ಹುಡುಕಬೇಕು. ಸಂಬಳ ಕಡಿಮೆಯಿದ್ದರೆ ಹೆಚ್ಚಿನ ಸಂಬಳದ ಕೆಲಸ ಹುಡುಕಿ ಪತ್ನಿ ಮತ್ತು ಮಗುವಿನ ಪೋಷಣೆ ಮಾಡಬೇಕು ಎಂದು ತಾಕೀತು ಮಾಡಿತು.

ಪತ್ನಿ ಮತ್ತು ಮಗುವಿನ ಪೋಷಣೆಗಾಗಿ ದೈಹಿಕವಾಗಿ ಸಮರ್ಥನಾಗಿರುವ ಪತಿಯು ಉದ್ಯೋಗವಿಲ್ಲದಿದ್ದರೆ ಉದ್ಯೋಗವನ್ನು ಹುಡುಕುವುದು, ಪ್ರಸ್ತುತ ಉದ್ಯೋಗದಲ್ಲಿ ಸಂಬಳ ಕಡಿಮೆಯಿದ್ದರೆ ಹೆಚ್ಚಿನ ಸಂಬಳದ ಉದ್ಯೋಗವನ್ನು ಹುಡುಕುವುದು ಅವನ ಕಾನೂನುಬದ್ಧ ಕರ್ತವ್ಯವಾಗಿದೆ. ಪತಿಯು ನಿರುದ್ಯೋಗಿ ಅಥವಾ ಕಡಿಮೆ ಸಂಬಳ ಪಡೆಯುತ್ತಿದ್ದಾನೆ ಎಂಬ ಕಾರಣಕ್ಕೆ ಪತ್ನಿ ಮತ್ತು ಮಗುವನ್ನು ನಿರ್ಲಕ್ಷಕ್ಕೆ ಒಳಪಡಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತಾನು ಪ್ರಸ್ತುತ ನಿರುದ್ಯೋಗಿಯಾಗಿರುವುದರಿಂದ ತಿಂಗಳಿಗೆ ₹16,000 ನಿರ್ವಹಣಾ ಭತ್ಯೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ತನ್ನ ಪತ್ನಿ ನೋಂದಾಯಿತ ವಕೀಲೆಯಾಗಿದ್ದು ತನಗಿಂತ ಹೆಚ್ಚು ಆದಾಯ ಹೊಂದಿದ್ದಾಳೆ ಎಂದು ಪತಿ ವಾದ ಮಂಡಿಸಿದರು. ಆದರೆ, ಸ್ವತಃ ನ್ಯಾಯಾಲಯದಲ್ಲಿ ಹಾಜರಾದ ಪತ್ನಿಯು, ತಾನು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಒಂದು ದಿನವೂ ವಕೀಲ ವೃತ್ತಿ ನಡೆಸಲು ಸಾಧ್ಯವಾಗಿಲ್ಲ; ಆದ್ದರಿಂದ ತನಗೆ ಮತ್ತು ಮಗುವಿಗೆ ನೀಡಿರುವ ನಿರ್ವಹಣಾ ಭತ್ಯೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.

ವಿಚಾರಣೆಯ ವೇಳೆ, 2022ರ ಫೆಬ್ರವರಿಯಲ್ಲಿ ನೀಡಿದ್ದ ನಿರ್ವಹಣಾ ಭತ್ಯೆ ಆದೇಶವನ್ನು ಪತಿಯು ಇದುವರೆಗೆ ಪಾಲಿಸದೇ ಇದ್ದು, ಬಾಕಿ ಮೊತ್ತವು ಸುಮಾರು 21 ಲಕ್ಷ ರೂ.ಗೆ ಏರಿಕೆಯಾಗಿದೆ ಎಂಬ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಈ ಹಿನ್ನೆಲೆಯಲ್ಲಿ, ನಾಲ್ಕು ವರ್ಷಗಳ ಹಿಂದೆ ನೀಡಿದ್ದ ನಿರ್ವಹಣಾ ಭತ್ಯೆ ಆದೇಶವನ್ನು ಇಂದಿಗೂ ಅಲ್ಪ ಪ್ರಮಾಣದಲ್ಲಿಯೂ ಪಾಲಿಸದಿರುವುದಕ್ಕೆ “ಪ್ರಸ್ತುತ ಉದ್ಯೋಗವಿಲ್ಲ” ಎಂಬ ಕಾರಣವನ್ನು ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆಯೇ ನ್ಯಾಯಾಲಯದ ಮುಂದೆ ಇತ್ತು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.

ಪತಿಯ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಅಂಜು ಗರ್ಗ್ ವಿರುದ್ಧ ದೀಪಕ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿ, ದೈಹಿಕವಾಗಿ ಸಮರ್ಥನಾಗಿರುವ ಪತಿಯು ತನ್ನ ಪತ್ನಿ ಮತ್ತು ಅಪ್ರಾಪ್ತ ಮಗುವಿನ ಆರ್ಥಿಕ ನಿರ್ವಹಣೆ ಮಾಡುವುದು ಪವಿತ್ರ ಹಾಗೂ ಕಡ್ಡಾಯ ಕರ್ತವ್ಯ ಎಂದು ಪುನರುಚ್ಚರಿಸಿತು.

ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಉಲ್ಲೇಖಿಸಿದ ಹೈಕೋರ್ಟ್ ಹೀಗೆ ಹೇಳಿತು:

”ಪತಿಗೆ ಉದ್ಯೋಗವಿಲ್ಲದಿದ್ದರೆ, ಉದ್ಯೋಗವನ್ನು ಹುಡುಕುವುದು ಅವನ ಜವಾಬ್ದಾರಿ. ಅವನಿಗೆ ಕಡಿಮೆ ಸಂಬಳದ ಉದ್ಯೋಗವಿದ್ದರೆ, ಹೆಚ್ಚಿನ ಸಂಬಳದ ಉದ್ಯೋಗವನ್ನು ಹುಡುಕಿ ಪತ್ನಿ ಮತ್ತು ಮಗುವಿನ ಆರೈಕೆ ಹಾಗೂ ಪೋಷಣೆ ಮಾಡುವುದು ಅವನ ಕರ್ತವ್ಯ. ಪತ್ನಿ ಮತ್ತು ಮಗುವನ್ನು ನಿರ್ಲಕ್ಷಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಅಧೀನ ನ್ಯಾಯಾಲಯಗಳ ಏಕಕಾಲಿಕ ತೀರ್ಪುಗಳಲ್ಲಿ ಯಾವುದೇ ಕಾನೂನು ದೋಷ ಕಂಡುಬರದ ಕಾರಣ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ, ಪತ್ನಿ ಮತ್ತು ಮಗನಿಗೆ ನೀಡಿದ್ದ ನಿರ್ವಹಣಾ ಭತ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

The post ಪತ್ನಿ, ಮಗುವಿನ ಪೋಷಣೆ ಪತಿಯ ಆದ್ಯ ಕರ್ತವ್ಯ; ನಿರುದ್ಯೋಗ, ಸಂಬಳ ಕಡಿಮೆ ಎಂಬ ಕಾರಣ ಸಲ್ಲದು – ಹೈಕೋರ್ಟ್ appeared first on Law Guide Kannada.

]]>
ಎಂದೂ ನಂದದ ನ್ಯಾಯದ ನಂದಾದೀಪ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ – ಪಾಂಡಿತ್ಯ, ಮಾನವೀಯತೆ ಮತ್ತು ಸಂವಿಧಾನದ ಸಮ್ಮಿಲನ http://www.lawguidekannada.com/justice-krishna-s-dixit-a-fusion-of-scholarship-humanity-and-the-constitution/ Tue, 21 Jul 2026 09:51:46 +0000 https://www.lawguidekannada.com/?p=5840 ಕೆಲವು ನ್ಯಾಯಾಧೀಶರು ಕೇವಲ ತೀರ್ಪುಗಳನ್ನು ಬರೆಯುತ್ತಾರೆ. ಆದರೆ ಕೆಲವರು ತಮ್ಮ ತೀರ್ಪುಗಳ ಮೂಲಕ ಸಮಾಜದ ಮನಸ್ಸನ್ನೇ ರೂಪಿಸುತ್ತಾರೆ. ಅಂತಹ ಅಪರೂಪದ...

The post ಎಂದೂ ನಂದದ ನ್ಯಾಯದ ನಂದಾದೀಪ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ – ಪಾಂಡಿತ್ಯ, ಮಾನವೀಯತೆ ಮತ್ತು ಸಂವಿಧಾನದ ಸಮ್ಮಿಲನ appeared first on Law Guide Kannada.

]]>
ಕೆಲವು ನ್ಯಾಯಾಧೀಶರು ಕೇವಲ ತೀರ್ಪುಗಳನ್ನು ಬರೆಯುತ್ತಾರೆ. ಆದರೆ ಕೆಲವರು ತಮ್ಮ ತೀರ್ಪುಗಳ ಮೂಲಕ ಸಮಾಜದ ಮನಸ್ಸನ್ನೇ ರೂಪಿಸುತ್ತಾರೆ. ಅಂತಹ ಅಪರೂಪದ ನ್ಯಾಯಮೂರ್ತಿಗಳ ಸಾಲಿನಲ್ಲಿ ಹೆಮ್ಮೆಯಿಂದ ಉಲ್ಲೇಖವಾಗುವ ಹೆಸರು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್. ಕೃಷ್ಣ ದೀಕ್ಷಿತ್ ಹೆಸರು ಕೇಳಿದಾಗ ಕೇವಲ ನ್ಯಾಯಾಧೀಶರೊಬ್ಬರ ಚಿತ್ರಣ ಮೂಡುವುದಿಲ್ಲ, ಅಪಾರ ಅಧ್ಯಯನಶೀಲ, ಸಂವಿಧಾನದ ಅಚಲ ಕಾವಲುಗಾರ, ಭಾರತೀಯ ಸಂಸ್ಕೃತಿಯ ಆರಾಧಕ, ಸಾಹಿತ್ಯದ ರಸಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಅಪರೂಪದ ಚಿಂತಕರೊಬ್ಬರ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ.

ನ್ಯಾ ಕೃಷ್ಣದೀಕ್ಷಿತ್ ಅವರ ಹಿನ್ನೆಲೆ

ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿದವರು‌ ಕೃಷ್ಣ ದೀಕ್ಷಿತ್. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ 1964ರ ಜುಲೈ 20ರಂದು ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾಸೂರಿನಲ್ಲಿ ಪಡೆದರು. ಕರ್ನಾಟಕ ಕಾಲೇಜ್ ಆಫ್ ಧಾರವಾಡದಲ್ಲಿ 1986ರಲ್ಲಿ ಬಿ.ಎಸ್ಸಿ ಪದವಿ ಪಡೆದರು. 1989ರಲ್ಲಿ ಧಾರವಾಡದ ಯೂನಿವರ್ಸಿಟಿ ಲಾ ಕಾಲೇಜ್’ನಿಂದ ಕಾನೂನು ಪದವೀಧರರಾಗಿ ಎರಡನೇ ರ‌್ಯಾಂಕ್ ಗಳಿಸಿದರು. ನಂತರ ರಾಜ್ಯ ವಕೀಲರ ಪರಿಷತ್‌ನಲ್ಲಿ 1989ರಲ್ಲಿ ನೋಂದಣಿ ಮಾಡಿಸಿದ ಅವರು ಬೆಂಗಳೂರಿನಲ್ಲಿ ಹಿರಿಯ ವಕೀಲ ಸುರೇಶ್ ಎಸ್.ಜೋಶಿ ಅವರ ಬಳಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕರ್ನಾಟಕ ಮತ್ತು ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಿದರು. ಚುನಾವಣೆ, ಸೇವಾ ವಿಷಯಗಳು, ಭೂ ಸುಧಾರಣೆಗಳು ಹಾಗೂ ಬ್ಯಾಂಕಿಂಗ್‌ ಮುಂತಾದ ಕಾನೂನು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದ ಅವರು ನ್ಯಾಯಮೂರ್ತಿಯಾಗಿ ನೇಮಕವಾಗುವ ಮುನ್ನ ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.

ಪ್ರಮುಖ ಹುದ್ದೆಗಳು
1999ರಲ್ಲಿ ಭಾರತೀಯ ಚುನಾವಣಾ ಆಯೋಗದ ಹಿರಿಯ ಸ್ಥಾಯಿ ವಕೀಲರು, 1999ರಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರು ಮತ್ತು 2014ರಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಭಾರತದ ಸಹಾಯಕ ಸಾಲಿಸಿಟ‌ರ್ ಜನರಲ್ ಆಗಿದ್ದರು.
ವಿಶ್ವವಿದ್ಯಾಲಯ ಅನುದಾನ ಆಯೋಗ, ಭಾರತೀಯ ಸ್ಪರ್ಧಾ ಆಯೋಗ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರ, ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ನಂತಹ ಶಾಸನಬದ್ಧ ಸಂಸ್ಥೆಗಳ ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.

ಜ್ಞಾನವೇ ಅವರ ಆಭರಣ
ಜ್ಞಾನಕ್ಕೆ ಪರ್ಯಾಯ ಹೆಸರು ಕೃಷ್ಣ ದೀಕ್ಷಿತ್ ಎನ್ನುವಂತಿದೆ ಇದಕ್ಕೆ ಕಾರಣ ಅವರು ಕಾನೂನಿನ ಪುಸ್ತಕಗಳನ್ನು ಮಾತ್ರವಲ್ಲ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳು, ಕಾಳಿದಾಸ, ಬಸವಣ್ಣ, ಸರ್ವಜ್ಞ, ಶೇಕ್ಸ್‌ಪಿಯರ್ ಸೇರಿದಂತೆ ಭಾರತೀಯ ಮತ್ತು ಪಾಶ್ಚಾತ್ಯ ಸಾಹಿತ್ಯದ ಮೇಲೆ ಅವರು ಹೊಂದಿರುವ ಅಧ್ಯಯನದ ಹಿಡಿತ. ಇದು ನ್ಯಾಯಾಂಗ ವಲಯದಲ್ಲಿ ಅಪರೂಪದಲ್ಲಿ ಅಪರೂಪ ಎನಿಸಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ.

ರಾಮಾಯಣ ಮತ್ತು ಮಹಾಭಾರತದ ಮೌಲ್ಯಗಳ ಪ್ರತಿಧ್ವನಿ
ಅವರ ನ್ಯಾಯ ಲೇಖನಗಳಲ್ಲಿ ರಾಮಾಯಣದ ಧರ್ಮನಿಷ್ಠೆ, ಮಹಾಭಾರತದ ನ್ಯಾಯದ ಅನ್ವೇಷಣೆ ಮತ್ತು ಭಗವದ್ಗೀತೆಯ ಕರ್ತವ್ಯ ಪ್ರಜ್ಞೆಯಂತಹ ಮೌಲ್ಯಗಳ ಪ್ರತಿಧ್ವನಿ ಕೇಳಿಸುತ್ತದೆ. ಅವರು ಈ ಗ್ರಂಥಗಳನ್ನು ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಭಾರತೀಯ ನಾಗರಿಕತೆಯ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಗಳಾಗಿ ಉಲ್ಲೇಖಿಸಿರುವುದು ಗಮನಾರ್ಹ. ಧರ್ಮ, ನ್ಯಾಯ, ಕರ್ತವ್ಯ, ಕ್ಷಮೆ, ಹೊಣೆಗಾರಿಕೆ ಮತ್ತು ಮಾನವ ಘನತೆ ಎಂಬ ಮೌಲ್ಯಗಳನ್ನು ವಿವರಿಸುವ ಸಂದರ್ಭಗಳಲ್ಲಿ ಇಂತಹ ಉಲ್ಲೇಖಗಳು ಅವರ ತೀರ್ಪುಗಳಿಗೆ ವಿಶಿಷ್ಟ ಆಳವನ್ನು ನೀಡಿವೆ. ನ್ಯಾಯಮೂರ್ತಿಯಾಗಿ ಅವರು ನೀಡಿದ ಅನೇಕ ತೀರ್ಪುಗಳು ದೇಶದಾದ್ಯಂತ ಗಮನ ಸೆಳೆದಿವೆ. ಆದರೆ ಆ ಉಲ್ಲೇಖಗಳು ಕೇವಲ ಅಲಂಕಾರಕ್ಕಾಗಿ ಅಲ್ಲ, ನ್ಯಾಯದ ತತ್ವವನ್ನು ಹೆಚ್ಚು ಅರ್ಥಪೂರ್ಣವಾಗಿ ವಿವರಿಸುವ ಚಿಂತನೆಯ ಸಾಧನಗಳಾಗಿ ಬಳಸಲ್ಪಟ್ಟಿವೆ. ಸಂವಿಧಾನದ ಮೌಲ್ಯಗಳು ಮತ್ತು ಭಾರತೀಯ ಜ್ಞಾನ ಪರಂಪರೆಯ ನಡುವೆ ಸಂವಾದ ನಡೆಸುವ ಅಪರೂಪದ ಶೈಲಿಯನ್ನೇ ಅವರು ರೂಪಿಸಿದ್ದಾರೆ. ಕಾನೂನಿನ ಅಕ್ಷರವನ್ನು ಗೌರವಿಸುತ್ತಲೇ ಸಂವಿಧಾನದ ಮೌಲ್ಯಗಳು, ವೈಯಕ್ತಿಕ ಸ್ವಾತಂತ್ರ್ಯ, ಮಾನವ ಘನತೆ ಮತ್ತು ನ್ಯಾಯದ ತತ್ವಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಅವರ ತೀರ್ಪುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳು

ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಒತ್ತು.

ಆಡಳಿತದ ಉತ್ತರದಾಯಿತ್ವವನ್ನು ನೆನಪಿಸುವ ದೃಢ ನಿಲುವು.

ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಘನತೆಯ ರಕ್ಷಣೆ.

ನ್ಯಾಯ ವಿಳಂಬವಾಗಬಾರದು ಎಂಬ ಸ್ಪಷ್ಟ ಸಂದೇಶ.

ಕಾನೂನು ಮತ್ತು ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನ.

ಪ್ರಮುಖ ತೀರ್ಪುಗಳು ಹಿಜಾಬ್, ಆನ್‌ಲೈನ್ ಗೇಮಿಂಗ್, ಟ್ವಿಟರ್, ನಾಡಗೀತೆ ವಿವಾದ, ಕಡ್ಡಾಯ ವೈದ್ಯಕೀಯ ಸೇವೆ, ಆದಾಯ ತೆರಿಗೆ ಮರುಪಾವತಿ, ಸೆಟ್ ಟಾಪ್ ಬಾಕ್ಸ್‌ ಮೇಲಿನ ಜಿಎಸ್‌ಟಿ, ಜಿಎಸ್‌ಟಿಯಿಂದ ವಿಶ್ವವಿದ್ಯಾಲಯಗಳಿಗೆ ವಿನಾಯಿತಿ, ಕಾರ್ಮಿಕರಿಗೆ ಕನಿಷ್ಠ ವೇತನ, ಜಲಾಶಯಗಳ ಸುತ್ತ ಗಣಿಗಾರಿಕೆ ನಿಷೇಧ, ಮೀಸಲು ಅರಣ್ಯಗಳನ್ನು ಮರು ಪಡೆಯುವುದು, ಚುನಾವಣಾ ಪ್ರಕ್ರಿಯೆಯಲ್ಲಿ ರೋಡ್‌ ಶೋ ನಡೆಸುವ ಹಕ್ಕು, ಅಪರಾಧಿಗಳ ಪೆರೋಲ್, ಫರ್ಲೋ, ಬ್ಯಾಂಕ್‌ಗಳನ್ನು ವಂಚಿಸಿ ಸಾಲ ಪಡೆಯುವುದು, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಿಂಪಡೆಯುವುದು, ಭಾರತದ ಸಾಗರೋತ್ತರ ನಾಗರಿಕರ ಶೈಕ್ಷಣಿಕ ಹಕ್ಕುಗಳು, ವಿದೇಶಿಯರಿಗೆ ವೀಸಾ ನಿರಾಕರಿಸುವ ಕೇಂದ್ರ ಸರ್ಕಾರದ ಅಧಿಕಾರ, ಪಕ್ಷಗಾರರಿಗೆ ಮೇಲ್ಮನವಿ ಸಲ್ಲಿಸಬಹುದಾದ ಆದೇಶಗಳನ್ನು ತಿಳಿಸಲು ಅರೆ ನ್ಯಾಯಿಕ ಅಧಿಕಾರಿಗಳ ಕರ್ತವ್ಯ, ಪಿಂಚಣಿದಾರರ ಹಕ್ಕುಗಳು, ರಕ್ಷಣಾ ಸಿಬ್ಬಂದಿ ಸವಲತ್ತುಗಳು, ವಯಸ್ಸಾದ ಪೋಷಕರು, ಹೆಂಡತಿ ಮಕ್ಕಳನ್ನು ನಿರ್ವಹಿಸುವ ಕರ್ತವ್ಯ, ಗೈರುಹಾಜರಿ ಮಾಲೀಕರ ಸಾರ್ವಜನಿಕ ಆಸ್ತಿಗಳು ಮತ್ತು ಆಸ್ತಿಗಳನ್ನು ರಕ್ಷಿಸುವ ನ್ಯಾಯಾಲಯಗಳ ಕರ್ತವ್ಯ, ಹಾಲುಣಿಸುವ ತಾಯಂದಿರ ಸ್ತನ್ಯಪಾನ ಹಕ್ಕುಗಳು, ಹಿಂದೂ ಧಾರ್ಮಿಕ ಸಂಸ್ಥೆಗಳು, ಮಠಗಳು ಇತ್ಯಾದಿಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡದೇ ಇರುವುದು ಸೇರಿ ಹಲವಾರು ಮಹತ್ವದ ತೀರ್ಪುಗಳು.

ಕೃಷ್ಣ ದೀಕ್ಷಿತರ ಕನ್ನಡ ಪ್ರೇಮ – ಐತಿಹಾಸಿಕ ನಿಲುವು

ಮಾನವೀಯ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಅಪಾರ ಅಭಿಮಾನ ಹೊಂದಿದ್ದ ಕೃಷ್ಣದೀಕ್ಷಿತ್ ಅವರು ಕನ್ನಡ ಭಾಷೆಯ ಬಗೆಗಿನ ತಮ್ಮ ಪ್ರೀತಿಯನ್ನು ನ್ಯಾಯಾಂಗದ ವೇದಿಕೆಯಲ್ಲಿಯೂ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದರು.
2024ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ವೇಳೆ ಅವರು ಸಂಪೂರ್ಣವಾಗಿ ಕನ್ನಡದಲ್ಲೇ ಆದೇಶ ಹೊರಡಿಸಿದ್ದು ನ್ಯಾಯಾಂಗದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಉಳಿಯಿತು. ಬಹುಭಾಷೆ, ಬಹುಸಂಸ್ಕೃತಿಗಳ ಭಾರತದಲ್ಲಿ ನ್ಯಾಯದ ಭಾಷೆ ಜನರ ಭಾಷೆಯಾಗಬೇಕು ಎಂಬ ಆಶಯಕ್ಕೆ ಅವರ ಈ ಹೆಜ್ಜೆ ಹೊಸ ಅರ್ಥ ನೀಡಿತು. ನ್ಯಾಯಾಲಯದ ಆದೇಶಗಳು ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬೇಕು, ನ್ಯಾಯವು ಕೇವಲ ವಕೀಲರಿಗಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಗೂ ತಲುಪಬೇಕು ಎಂಬ ಅವರ ಚಿಂತನೆ ಈ ನಿರ್ಧಾರದ ಹಿಂದಿತ್ತು. ಜನರ ನಾಡಿ ಮಿಡಿತವನ್ನು ಅರಿತ ನ್ಯಾಯಮೂರ್ತಿಯಾಗಿ ಅವರು ಕನ್ನಡದಲ್ಲೇ ಆದೇಶ ಹೊರಡಿಸಿದಾಗ ಅದು ಕೇವಲ ಭಾಷೆಯ ಮೇಲಿನ ಪ್ರೀತಿಯಲ್ಲ, ಕನ್ನಡಿಗರ ಆತ್ಮಗೌರವಕ್ಕೂ ನೀಡಿದ ಗೌರವವಾಗಿತ್ತು. ಈ ಕ್ರಮ ರಾಜ್ಯದ ಕೋಟ್ಯಂತರ ಕನ್ನಡಿಗರ ಮನದಲ್ಲಿ ಸಂತಸ ಮೂಡಿಸಿತು. ನ್ಯಾಯದ ಬಾಗಿಲು ಜನರ ಭಾಷೆಯಲ್ಲಿ ತೆರೆಯಬಹುದು ಎಂಬ ವಿಶ್ವಾಸವನ್ನು ಅವರ ನಡೆ ಬಲಪಡಿಸಿತು. ಅವರ ಈ ಐತಿಹಾಸಿಕ ಹೆಜ್ಜೆ ಇತರ ನ್ಯಾಯಾಧೀಶರು ಹಾಗೂ ನ್ಯಾಯಾಲಯಗಳಿಗೂ ಪ್ರೇರಣೆಯಾಯಿತು. ರಾಜ್ಯದ ನ್ಯಾಯಾಂಗದಲ್ಲಿ ಕನ್ನಡದ ಬಳಕೆಯನ್ನು ಇನ್ನಷ್ಟು ವಿಸ್ತರಿಸುವ ಚರ್ಚೆಗೆ ಇದು ನಾಂದಿಯಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಆದೇಶಗಳು ಕನ್ನಡದಲ್ಲೇ ಹೊರಬರಬೇಕು ಎಂಬ ಆಶಯಕ್ಕೆ ಅವರ ನಿರ್ಧಾರ ದಾರಿದೀಪವಾಯಿತು. ಕನ್ನಡವನ್ನು ಕೇವಲ ಮಾತೃಭಾಷೆಯಾಗಿ ಅಲ್ಲ, ನ್ಯಾಯವನ್ನು ಜನರಿಗೆ ತಲುಪಿಸುವ ಶಕ್ತಿಯುತ ಮಾಧ್ಯಮವಾಗಿ ಕಂಡ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಅವರ ಹೆಸರು ಕನ್ನಡ ನ್ಯಾಯಾಂಗದ ಇತಿಹಾಸದಲ್ಲಿ ಸದಾ ಗೌರವದಿಂದ ಸ್ಮರಿಸಲ್ಪಡುತ್ತಿದೆ. ನ್ಯಾಯ, ಜ್ಞಾನ, ಸಂಸ್ಕೃತಿ ಮತ್ತು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿ ಉಳಿದಿದೆ.

ಪುಟ್ಟ ಕಂದಮ್ಮನಿಗಾಗಿ ಮಿಡಿದಿದ್ದ ನ್ಯಾಯಮೂರ್ತಿಗಳು

ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ವೇಳೆ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಅವರು ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದ ಅನೇಕ ತೀರ್ಪುಗಳ ಮೂಲಕ ಜನಮನ ಗೆದ್ದಿದ್ದಾರೆ. ಅಂತಹ ಅತ್ಯಂತ ಗಮನಾರ್ಹ ಪ್ರಕರಣಗಳಲ್ಲಿ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಸುಮಾರು ₹16 ಕೋಟಿ ವೆಚ್ಚವಾಗುತ್ತಿದ್ದ ಪ್ರಕರಣ.
ಆ ಪ್ರಕರಣದಲ್ಲಿ ಮಗುವಿನ ಜೀವ ಉಳಿಸಲು ವಿದೇಶದಿಂದ ತರಬೇಕಾದ ಅತ್ಯಂತ ದುಬಾರಿ ಔಷಧಿಯ ಅಗತ್ಯವಿತ್ತು. ಮಗುವಿನ ಕುಟುಂಬಕ್ಕೆ ಆ ವೆಚ್ಚವನ್ನು ಭರಿಸುವ ಸಾಮರ್ಥ್ಯ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಪ್ರಕರಣದ ವಿಚಾರಣೆ ವೇಳೆ ಕೇವಲ ಕಾನೂನಿನ ತಾಂತ್ರಿಕ ಅಂಶಗಳನ್ನಷ್ಟೇ ನೋಡದೆ, ಸಂವಿಧಾನದ 21ನೇ ವಿಧಿಯಲ್ಲಿರುವ ಜೀವಿಸುವ ಹಕ್ಕು ಎಂಬ ಮೂಲಭೂತ ಹಕ್ಕನ್ನು ಪ್ರಮುಖವಾಗಿ ಪರಿಗಣಿಸಿದರು. ಜೀವ ಉಳಿಸುವ ಚಿಕಿತ್ಸೆ ಹಣದ ಕೊರತೆಯಿಂದ ನಿರಾಕರಿಸಲಾಗಬಾರದು ಎಂಬ ಮಾನವೀಯ ದೃಷ್ಟಿಕೋನವನ್ನು ಅವರು ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಅವರು ರಾಜ್ಯ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮಗುವಿನ ಚಿಕಿತ್ಸೆಗೆ ಅಗತ್ಯವಾದ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸರ್ಕಾರವು ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮಗುವಿನ ಚಿಕಿತ್ಸೆಗೆ ಬೇಕಾದ ಎಲ್ಲ ನೆರವು ಒದಗಿಸಬೇಕು ಎಂದು ಸೂಚಿಸಿದರು. ಇಂತಹ ಪ್ರಕರಣಗಳಲ್ಲಿ ಸರ್ಕಾರವು ತನ್ನ ಕಲ್ಯಾಣ ರಾಜ್ಯದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.
ಈ ಪ್ರಕರಣ ದೇಶಾದ್ಯಂತ ಗಮನ ಸೆಳೆಯಿತು. ನ್ಯಾಯಮೂರ್ತಿ ದೀಕ್ಷಿತ್ ಅವರ ಆದೇಶವು ಕೇವಲ ಒಂದು ಮಗುವಿನ ಚಿಕಿತ್ಸೆಯ ಕುರಿತ ತೀರ್ಪಾಗಿರಲಿಲ್ಲ, ಆರ್ಥಿಕ ಅಸಮಾನತೆಯಿಂದ ಯಾವುದೇ ಮಗುವಿನ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ಸಂದೇಶವನ್ನು ಸಮಾಜ ಮತ್ತು ಸರ್ಕಾರಕ್ಕೆ ನೀಡಿದ ಮಹತ್ವದ ತೀರ್ಪಾಗಿತ್ತು.
ಈ ತೀರ್ಪು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ನ್ಯಾಯದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಅವರ ತೀರ್ಪುಗಳಲ್ಲಿ ಕಾನೂನಿನ ಕಟ್ಟುನಿಟ್ಟಿನ ಜೊತೆಗೆ ಮಾನವೀಯ ಕಾಳಜಿ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆ ಸ್ಪಷ್ಟವಾಗಿ ಕಾಣಿಸುತ್ತವೆ. ಆದ್ದರಿಂದಲೇ ಅವರು ಕೇವಲ ನ್ಯಾಯಾಧೀಶರಾಗಿ ಮಾತ್ರವಲ್ಲ, ಮಾನವೀಯ ನ್ಯಾಯದ ಪ್ರತೀಕ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ನ್ಯಾಯದ ಜೊತೆಗೆ ಮಾನವೀಯತೆಯ ಸ್ಪರ್ಶ
ನ್ಯಾಯವೆಂದರೆ ಕೇವಲ ಕಾನೂನಿನ ಕಠಿಣ ಪದಗಳಲ್ಲ, ಅದರೊಳಗೆ ಮಾನವ ಬದುಕಿನ ನೋವು, ಆಸೆ, ಗೌರವ ಮತ್ತು ಹಕ್ಕುಗಳೂ ಅಡಗಿವೆ ಎಂಬುದನ್ನು ನ್ಯಾಯಮೂರ್ತಿ ದೀಕ್ಷಿತ್ ಅವರ ಹಲವು ತೀರ್ಪುಗಳ ಮೂಲ ನೆನಪಿಸಿದ್ದಾರೆ. ಅವರು ಕಾನೂನನ್ನು ಅಕ್ಷರಶಃ ಅನ್ವಯಿಸುವುದರ ಜೊತೆಗೆ, ಅದರ ಉದ್ದೇಶ ಮತ್ತು ಮಾನವೀಯ ಪರಿಣಾಮವನ್ನೂ ಪರಿಗಣಿಸುವ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಅವರ ತೀರ್ಪುಗಳು ಅನೇಕ ಬಾರಿ ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ನ್ಯಾಯಾಧೀಶರ ಅಧ್ಯಯನಕ್ಕೆ ವಿಷಯವಾಗಿವೆ.

ಸರಳತೆ ಮತ್ತು ಸೌಜನ್ಯದ ಪ್ರತಿರೂಪ
ಅಪಾರ ಪಾಂಡಿತ್ಯ ಹೊಂದಿದ್ದರೂ ಅಹಂಕಾರಕ್ಕೆ ಅವಕಾಶ ನೀಡದ ವ್ಯಕ್ತಿತ್ವ ಅವರದು. ನ್ಯಾಯಾಲಯದಲ್ಲಿ ವಕೀಲರ ವಾದಗಳನ್ನು ತಾಳ್ಮೆಯಿಂದ ಆಲಿಸುವುದು, ಕಿರಿಯ ವಕೀಲರನ್ನೂ ಗೌರವದಿಂದ ನಡೆಸಿಕೊಳ್ಳುವುದು ಮತ್ತು ನ್ಯಾಯಾಲಯದ ಘನತೆಯನ್ನು ಕಾಪಾಡುವುದು ಅವರ ಕಾರ್ಯ ಶೈಲಿಯ ವಿಶೇಷ ಲಕ್ಷಣಗಳಾಗಿವೆ.

ಯುವ ಕಾನೂನು ವಿದ್ಯಾರ್ಥಿಗಳಿಗೆ ಸ್ಫೂರ್ತಿ
ಅವರು ಹೇಳುವ ಪ್ರತಿಯೊಂದು ವಿಚಾರವೂ ಒಂದು ಪಾಠದಂತಿರುತ್ತದೆ. ಕಾನೂನು ಓದುವ ವಿದ್ಯಾರ್ಥಿಗಳು ಕೇವಲ ಕಾನೂನಿನ ಪುಸ್ತಕಗಳಲ್ಲ, ಇತಿಹಾಸ, ಸಾಹಿತ್ಯ, ತತ್ವಶಾಸ್ತ್ರ ಮತ್ತು ಸಮಾಜವನ್ನೂ ಅಧ್ಯಯನ ಮಾಡಬೇಕು ಎಂಬ ಸಂದೇಶವನ್ನು ಅವರ ಬದುಕು ನೀಡುತ್ತದೆ.

ಗೌರವ ಡಾಕ್ಟರೇಟ್ – ಸಮಾಜದ ಗೌರವ
ನ್ಯಾಯಾಂಗ, ಶಿಕ್ಷಣ ಮತ್ತು ಕಾನೂನು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾದ ಶಿಕ್ಷಣ ‘ಓ’ ಅನುಸಂಧಾನ (Sಔಂ) ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಇದು ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ, ಕರ್ನಾಟಕದ ನ್ಯಾಯ ಪರಂಪರೆಗೆ ಸಂದ ಗೌರವವೂ ಆಗಿದೆ.

ನ್ಯಾಯದ ಬೆಳಕು ಎಂದೆಂದಿಗೂ ಬೆಳಗಲಿ
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ನ್ಯಾಯದ ಪರವಾಗಿ ಅಚಲವಾಗಿ ನಿಂತು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ಸಮಾಜಕ್ಕೆ ನ್ಯಾಯದ ಮೇಲಿನ ವಿಶ್ವಾಸವನ್ನು ಬಲಪಡಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಸೇವೆ ಸದಾ ಸ್ಮರಣೀಯ. ಅವರ ಜೀವನಯಾನವು ಕೇವಲ ಒಬ್ಬ ನ್ಯಾಯಾಧೀಶರ ಯಶೋಗಾಥೆಯಲ್ಲ, ಅದು ನ್ಯಾಯ, ಜ್ಞಾನ, ಮಾನವೀಯತೆ ಮತ್ತು ರಾಷ್ಟ್ರಸೇವೆಯ ಆದರ್ಶ ಪಥವಾಗಿದೆ. ಇಂತಹ ಮಹನೀಯರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿ ಬೆಳಗುತ್ತಲೇ ಇರುತ್ತವೆ. ಕಾನೂನು ಜ್ಞಾನದಿಂದ ಬಲಗೊಳ್ಳುತ್ತದೆ, ನ್ಯಾಯ ಮಾನವೀಯತೆಯಿಂದ ಪರಿಪೂರ್ಣಗೊಳ್ಳುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಭಾರತೀಯ ಜ್ಞಾನಪರಂಪರೆಯ ಬೆಳಕನ್ನು ನ್ಯಾಯದ ದಾರಿಯಲ್ಲಿ ಹರಿಸಿದ ಕೃಷ್ಣ ದೀಕ್ಷಿತ್‌ರಂತಹ ನ್ಯಾಯಮೂರ್ತಿಗಳು ನ್ಯಾಯಾಂಗದ ನಿಜವಾದ ಆಸ್ತಿ. ಅವರ ತೀರ್ಪುಗಳು ಕೇವಲ ಕಾನೂನು ದಾಖಲೆಗಳಲ್ಲ, ಅವು ಚಿಂತನೆಗೆ ಆಹ್ವಾನ ನೀಡುವ ಬರಹಗಳು, ಮಾನವೀಯತೆಯನ್ನು ನೆನಪಿಸುವ ಸಂದೇಶಗಳು ಮತ್ತು ನ್ಯಾಯದ ಮೇಲಿನ ವಿಶ್ವಾಸವನ್ನು ಬಲಪಡಿಸುವ ದಾರಿದೀಪಗಳು. ಅವರ ನ್ಯಾಯಸೇವೆ, ಪಾಂಡಿತ್ಯ, ವಿನಯ ಮತ್ತು ಮಾನವೀಯ ಕಳಕಳಿ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕದ ಈ ಮೇರು ನ್ಯಾಯಮೂರ್ತಿಯ ಹೆಸರು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ.

ಇಂದು ಕೃಷ್ಣದೀಕ್ಷಿತ್ ಅವರ ಹುಟ್ಟುಹಬ್ಬ ಜೊತೆಗೆ ಸುಧೀರ್ಘ ನ್ಯಾಯಾಂಗ ಸೇವೆಯಿಂದ ನಿವೃತ್ತರಾಗುವ ಕಾಲಘಟ್ಟ. ಅವರು ಮುಂದಿನ ಜೀವನ ಸುಖಮಯವಾಗಿರಲಿ. ಅವರ ಮಾರ್ಗದರ್ಶನ ಸದಾ ಎಲ್ಲರಿಗೂ ಸಿಗುವಂತಾಗಲಿ. ತಾಯಿ ಚಾಮುಂಡೇಶ್ವರಿ ಅವರಿಗೆ ಆರೋಗ್ಯ ಆಯಸ್ಸು ಕರುಣಿಸಿ ಕಾಪಾಡಲಿ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

The post ಎಂದೂ ನಂದದ ನ್ಯಾಯದ ನಂದಾದೀಪ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ – ಪಾಂಡಿತ್ಯ, ಮಾನವೀಯತೆ ಮತ್ತು ಸಂವಿಧಾನದ ಸಮ್ಮಿಲನ appeared first on Law Guide Kannada.

]]>
ಅಕ್ಟೋಬರ್ ನಿಂದ ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಸಾಧ್ಯತೆ http://www.lawguidekannada.com/high-court-circuit-bench-likely-to-start-functioning-in-the-coast-from-october/ Tue, 21 Jul 2026 09:25:16 +0000 https://www.lawguidekannada.com/?p=5837 ಕರಾವಳಿಯ ಸ್ಥಳೀಯ ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಹಾಗೂ ದೂರದ ಬೆಂಗಳೂರಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಅತ್ಯಂತ ಅಗತ್ಯವಾಗಿರುವ ಹೈಕೋರ್ಟ್ ಸಂಚಾರಿ...

The post ಅಕ್ಟೋಬರ್ ನಿಂದ ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಸಾಧ್ಯತೆ appeared first on Law Guide Kannada.

]]>
ಕರಾವಳಿಯ ಸ್ಥಳೀಯ ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಹಾಗೂ ದೂರದ ಬೆಂಗಳೂರಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಅತ್ಯಂತ ಅಗತ್ಯವಾಗಿರುವ ಹೈಕೋರ್ಟ್ ಸಂಚಾರಿ ಪೀಠ ಅಕ್ಟೋಬರ್ ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಹೌದು, ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ (Circuit Bench) ಸ್ಥಾಪನೆಯಾಗುವುದು ಬಹುತೇಕ ಖಚಿತವಾಗಿದ್ದು, ಇದೇ ಅಕ್ಟೋಬರ್ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರವು ಈ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ನ ಸಂಚಾರಿ ಪೀಠವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಈ ಪೀಠವನ್ನು ಆರಂಭಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಸ್ತುತ 2026ರ ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಕರಾವಳಿ ಭಾಗದ ಜನರಿಗೆ ತ್ವರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕೆಂದು ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ, ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಪತ್ರ ಬರೆದಿದ್ದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಕ್ರು ಅವರು 2026ರ ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ ಇಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಲಿದ್ದರು.

ಪೀಠಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡು ಅಕ್ಟೋಬರ್ 2026 ರ ವೇಳೆಗೆ ಪೀಠವು ಕಾರ್ಯಾರಂಭ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ತಾತ್ಕಾಲಿಕ ಕಟ್ಟಡ.
ಸದ್ಯಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಹಳೆಯ ಜಿಲ್ಲಾಧಿಕಾರಿ (DC) ಕಚೇರಿಯ 50,000 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಪೀಠವನ್ನು ಆರಂಭಿಸಲು ಗುರುತಿಸಲಾಗಿದ್ದು. ಲೋಕೋಪಯೋಗಿ ಇಲಾಖೆ (PWD) ಮೂಲಕ ಇದರ ನವೀಕರಣ ಕಾರ್ಯ ನಡೆಯಲಿದೆ.

ಸಂಚಾರಿ ಪೀಠಕ್ಕೆ ನಿಯೋಜನೆಗೊಳ್ಳಲಿರುವ ಸುಮಾರು 4 ನ್ಯಾಯಾಧೀಶರ ವಸತಿಗಾಗಿ ನಗರದ ಲಾಲ್ಬಾಗ್ ಪ್ರದೇಶದಲ್ಲಿರುವ ಐಎಎಸ್ ಅಧಿಕಾರಿಗಳ ಕ್ಯಾರ್ಟಸ್್ರ ಅವರಣದಲ್ಲಿ ಜಾಗ ಗುರುತಿಸಲಾಗಿದೆ.

ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಹೈಕೋರ್ಟ್ ಸಿಜೆ ಅವರಿಗೆ ಬರೆದಿರುವ ಅಧಿಕೃತ ಪತ್ರದ ಬೆನ್ನಲ್ಲೇ ಈ ಪ್ರಕ್ರಿಯೆಗಳು ತೀವ್ರಗತಿ ಪಡೆದುಕೊಂಡಿದ್ದು. ಈ ವರ್ಷದ ದಸರಾ ಅಥವಾ ಅಕ್ಟೋಬರ್ ವೇಳೆಗೆ ಕರಾವಳಿ ಜನರ ಈ ಬಹುಕಾಲದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ.

ಈ ಸಂಚಾರಿ ಪೀಠದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು
ಮಂಗಳೂರಿನಲ್ಲಿ ಸಂಚಾರಿ ಪೀಠ ಆರಂಭವಾದರೆ ಕರಾವಳಿ ಮತ್ತು ಮಲೆನಾಡು ಭಾಗದ ಒಟ್ಟು 5 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಚಿಕ್ಕಮಗಳೂರು ಕೊಡಗು. ಪ್ರಸ್ತುತ ಈ ಜಿಲ್ಲೆಗಳ ಸಾರ್ವಜನಿಕರು ಮತ್ತು ವಕೀಲರು ಸಣ್ಣ ಹೈಕೋರ್ಟ್ ಕೆಲಸಗಳಿಗೂ ಬೆಂಗಳೂರಿಗೆ ಅಲೆಯಬೇಕಾಗಿದ್ದು, ಆರ್ಥಿಕ ಹಾಗೂ ಸಮಯದ ನಷ್ಟವಾಗುತ್ತಿದೆ. ಸಂಚಾರಿ ಪೀಠದಿಂದಾಗಿ ತ್ವರಿತ ಮತ್ತು ಕೈಗೆಟುಕುವ ನ್ಯಾಯ ಸಿಗಲಿದೆ. ಆದಾಗ್ಯೂ. ಈ ಪೀಠದ ಅಂತಿಮ ವ್ಯಾಪ್ತಿಯ ನಿರ್ಧಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ತೆಗೆದುಕೊಳ್ಳಲಿದ್ದಾರೆ.

ಮುಂದಿನ ದಿನಗಳಲ್ಲಿ ಇದನ್ನು ‘ಶಾಶ್ವತ ಪೀಠವನ್ನಾಗಿ (Permanent Bench) ಪರಿವರ್ತಿಸುವ ಉದ್ದೇಶವಿದ್ದು, ಅದಕ್ಕಾಗಿ ಹಳೆಯ ಜೈಲು ಅವರಣ ಅಥವಾ ಮುಲ್ಕಿ ಬಳಿಯ 100 ಎಕರೆ ಜಾಗವನ್ನು ಬಳಸಿಕೊಳ್ಳುವ ಭವಿಷ್ಯದ ಯೋಜನೆಯೂ ಇದೆ.

AAB ಇಂದ ವಿರೋಧ.
ಬೆಂಗಳೂರು ವಕೀಲರ ಸಂಘವು (Advocates’ Association Bengaluru – AAB) ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸಂಘದ ಪದಾಧಿಕಾರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರಿಗೆ ಅಧಿಕೃತ ಪತ್ರ ಬರೆದು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು ವಕೀಲರ ಸಂಘದ (AAB) ಮುಖ್ಯ ಬೇಡಿಕೆ:

ಬೆಂಗಳೂರು ವಕೀಲರ ಸಂಘವು, ಬೆಂಗಳೂರು, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕಾರವಾರದ ಬಾರ್ ಅಸೋಸಿಯೇಷನ್ಗಳನ್ನು ಒಳಗೊಂಡಂತೆ ಎಲ್ಲಾ ಪಾಲುದಾರರೊಂದಿಗೆ (Stakeholders) ಸಮಾಲೋಚನೆ ನಡೆಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಮತ್ತು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಬಲವಾಗಿ ಒತ್ತಾಯಿಸಿದೆ.

ಬೆಂಗಳೂರು ವಕೀಲರ ಸಂಘದ (AAB) ವಿರೋಧಕ್ಕೆ ಕರಾವಳಿ ಭಾಗದ ವಕೀಲರು ತೀವ್ರ ಪ್ರತ್ಯುತ್ತರ ನೀಡಿದ್ದು, ತಮ್ಮ ಬೇಡಿಕೆಯನ್ನು ನ್ಯಾಯಸಮ್ಮತವಾಗಿ ಮಂಡಿಸಲು ಹೊಸ ಹೋರಾಟದ ಹಾದಿಯನ್ನು ರೂಪಿಸುತ್ತಿದ್ದಾರೆ.

ಮಂಗಳೂರು ಮತ್ತು ಕರಾವಳಿ ಭಾಗದ ವಕೀಲರ ಪ್ರಮುಖ ವಾದಗಳು ಹಾಗೂ ಮುಂದಿನ ನಡೆಗಳ ವಿವರ ಇಲ್ಲಿದೆ:

ಮಂಗಳೂರು ವಕೀಲರ ಸಂಘದ (MBA) ಬಲವಾದ ಪ್ರತ್ಯುತ್ತರ ಹೀಗಿದೆ

ಬೆಂಗಳೂರು ವಕೀಲರ ವಾದಗಳನ್ನು ಕರಾವಳಿ ವಕೀಲರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ಕೆಳಗಿನ ಪ್ರಮುಖ ಕಾರಣಗಳನ್ನು ಮುಂದಿಟ್ಟಿದ್ದಾರೆ:

ಪ್ರಕರಣಗಳ ಸಂಖ್ಯೆ ಹೆಚ್ಚು:

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದಲೇ ಬೆಂಗಳೂರು ಹೈಕೋರ್ಟ್ನಲ್ಲಿ ಸಾವಿರಾರು ಅಪೀಲು ಮತ್ತು ರಿಟ್ ಅರ್ಜಿಗಳು ದಾಖಲಾಗುತ್ತಿವೆ. ಹಾಗಾಗಿ ‘ಅಂಕಿ-ಅಂಶಗಳಿಲ್ಲ’ ಎಂಬ ವಾದ ತಪ್ಪು ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯ ಜನರಿಗೆ ಆರ್ಥಿಕ ಹೊರೆ:

ಕರಾವಳಿಯ ಕಡು ಬಡವರು, ಕಾರ್ಮಿಕರು ಸಣ್ಣ ಕೆಲಸಗಳಿಗೂ ಬೆಂಗಳೂರಿಗೆ ಪ್ರಯಾಣ ಬೆಳೆಸಿ, ಅಲ್ಲಿ ವಾಸವಿದ್ದು ಕೋರ್ಟ್ ವೆಚ್ಚ ಭರಿಸುವುದು ದುಬಾರಿಯಾಗಿದೆ. ಮಂಗಳೂರಿನಲ್ಲಿ ಪೀಠವಾದರೆ ಬಡವರಿಗೆ “ಮನೆಯ ಬಾಗಿಲಿಗೇ ನ್ಯಾಯ” ಸಿಕ್ಕಂತಾಗುತ್ತದೆ ಧಾರವಾಡ, ಕಲಬುರಗಿ ಮಾದರಿ:

ಈ ಹಿಂದೆ ಉತ್ತರ ಕರ್ನಾಟಕದ ಧಾರವಾಡ ಮತ್ತು ಕಲಬುರಗಿಯಲ್ಲಿ ಸಂಚಾರಿ ಪೀಠಗಳನ್ನು ಸ್ಥಾಪಿಸುವಾಗಲೂ ಬೆಂಗಳೂರು ವಕೀಲರು ಇದೇ ರೀತಿ ವಿರೋಧಿಸಿದ್ದರು. ಆದರೆ ಇಂದು ಆ ಪೀಠಗಳು ಯಶಸ್ವಿಯಾಗಿ ನಡೆದು ಆ ಭಾಗದ ಜನರಿಗೆ ಹತ್ತಿರವಾಗಿವೆ. ಅದೇ ಮಾದರಿ ಮಂಗಳೂರಿಗೂ ಅನ್ವಯಿಸಬೇಕು ಎಂಬುದು ಇಲ್ಲಿನವರ ವಾದ. ಒಟ್ಟಾರೆ ಅಂದುಕೊಂಡಂತೆ ಆದರೆ ಅಕ್ಟೋಬರ್ ವೇಳೆಗೆ ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಮಾಡಲಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಅಕ್ಟೋಬರ್ ನಿಂದ ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಸಾಧ್ಯತೆ appeared first on Law Guide Kannada.

]]>
ಕೋರ್ಟ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ತಡೆಗೆ ಕ್ರಮ: ವಕೀಲರ ಸಾಮಾಜಿಕ ಮಾಧ್ಯಮದ ಮೇಲೆ BCI ಕಣ್ಣು http://www.lawguidekannada.com/action-to-prevent-objectionable-posts-against-the-court-eye-on-lawyers-social-media/ Tue, 21 Jul 2026 06:00:49 +0000 https://www.lawguidekannada.com/?p=5833 ನವದೆಹಲಿ: ನ್ಯಾಯಾಲಯ ಅಥವಾ ನ್ಯಾಯಾಧೀಶರ ವಿರುದ್ಧ ವಕೀಲರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾಡದಂತೆ ತಡೆಯುವ ಸಲುವಾಗಿ ಭಾರತೀಯ ಬಾರ್...

The post ಕೋರ್ಟ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ತಡೆಗೆ ಕ್ರಮ: ವಕೀಲರ ಸಾಮಾಜಿಕ ಮಾಧ್ಯಮದ ಮೇಲೆ BCI ಕಣ್ಣು appeared first on Law Guide Kannada.

]]>
ನವದೆಹಲಿ: ನ್ಯಾಯಾಲಯ ಅಥವಾ ನ್ಯಾಯಾಧೀಶರ ವಿರುದ್ಧ ವಕೀಲರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾಡದಂತೆ ತಡೆಯುವ ಸಲುವಾಗಿ ಭಾರತೀಯ ಬಾರ್ ಕೌನ್ಸಿಲ್(ಬಿಸಿಐ) ಹೊಸ ನಿಯಮಗಳನ್ನು ರೂಪಿಸಿದೆ.

ಇತ್ತೀಚೆಗೆ ವಕೀಲಿಕೆಗೆ ಇಂಟರ್ನ್ ಶಿಪ್ ಗೆ ಬಂದ ವಿದ್ಯಾರ್ಥಿಗಳು ಕೋರ್ಟ್ ರೂಮಿನಲ್ಲೇ ರೀಲ್ಸ್ ಮಾಡುವುದು, ವಿಡಿಯೋಗಳನ್ನು ಪೋಸ್ಟ್ ಮಾಡುವುದು ಹಾಗೂ ಇನ್ನಿತರ ಕಾನೂನು ಸಂಬಂಧಿ ಕಂಟೆಂಟ್ಗಳನ್ನು ಅನಾವಶ್ಯಕವಾಗಿ ಹಂಚುತ್ತಿರುವ ವರದಿಗಳಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಬಿಸಿಐ ಈ ಕ್ರಮ ಕೈಗೊಂಡಿದ್ದು, ಈ ನಿಯಮಗಳು ತಕ್ಷಣದಿಂದಲೇ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಎಲ್ಲ ರಾಜ್ಯಗಳ ಬಾರ್ ಕೌನ್ಸಿಲ್ಗಳಿಗೆ ನಿರ್ದೇಶನ ಕೊಟ್ಟಿದೆ.

ಎಲ್ಲ ರಾಜ್ಯ ಬಾರ್ ಕೌನ್ಸಿಲ್ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಈ ಕುರಿತು ಜು.17ರಂದು ಪತ್ರ ಬರೆದಿರುವ ಬಿಸಿಐ, ‘ಈ ಹೊಸ ಮಾರ್ಗಸೂಚಿಗಳನ್ನು ವಕೀಲರು, ಕಾನೂನು ಸಂಸ್ಥೆಗಳು, ಬಾರ್ ಅಸೋಸಿಯೇಷನ್ಗಳು ಮತ್ತು ಕಾನೂನು ಸಂಸ್ಥೆಗಳ ನಡುವೆ ವ್ಯಾಪಕವಾಗಿ ಪ್ರಚಾರ ಮಾಡಬೇಕು ಮತ್ತು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದೆ.

ಅಲ್ಲದೆ ನಿಯಮ ಉಲ್ಲಂಘಿಸುವ ವಕೀಲರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಐ ಎಚ್ಚರಿಕೆಯನ್ನೂ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಕೋರ್ಟ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ತಡೆಗೆ ಕ್ರಮ: ವಕೀಲರ ಸಾಮಾಜಿಕ ಮಾಧ್ಯಮದ ಮೇಲೆ BCI ಕಣ್ಣು appeared first on Law Guide Kannada.

]]>
ಕೇಳದೇ ಇರುವ ಪರಿಹಾರ ನೀಡಲು ನ್ಯಾಯಾಲಯಕ್ಕೂ ಸಾಧ್ಯವಿಲ್ಲ: ಹೈಕೋರ್ಟ್ ತೀರ್ಪು ರದ್ದುಪಡಿಸಿದ ಸುಪ್ರೀಂ http://www.lawguidekannada.com/even-the-court-cannot-grant-relief-that-is-not-sought-supreme-court-quashes-high-court-verdict/ Mon, 20 Jul 2026 10:43:16 +0000 https://www.lawguidekannada.com/?p=5822 ನವದೆಹಲಿ: ಸಿವಿಲ್ ದಾವೆಯಲ್ಲಿ ವಾದಿಯು ಪರಿಹಾರಧನ ಕೋರದಿದ್ದಲ್ಲಿ, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅಂತಹ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

The post ಕೇಳದೇ ಇರುವ ಪರಿಹಾರ ನೀಡಲು ನ್ಯಾಯಾಲಯಕ್ಕೂ ಸಾಧ್ಯವಿಲ್ಲ: ಹೈಕೋರ್ಟ್ ತೀರ್ಪು ರದ್ದುಪಡಿಸಿದ ಸುಪ್ರೀಂ appeared first on Law Guide Kannada.

]]>
ನವದೆಹಲಿ: ಸಿವಿಲ್ ದಾವೆಯಲ್ಲಿ ವಾದಿಯು ಪರಿಹಾರಧನ ಕೋರದಿದ್ದಲ್ಲಿ, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅಂತಹ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ವಿ. ಎನ್. ಭಟ್ಟಿ ಮತ್ತು ಅತುಲ್ ಎಸ್. ಚಂದುರ್ಕರ್ ಅವರಿದ್ದ ಪೀಠವು,, ನಾಗರಿಕ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 100ರ ಅನ್ವಯ ಎರಡನೇ ಮೇಲ್ಮನವಿಗಳನ್ನು ಮರುಪರಿಶೀಲಿಸಲು ಹೈಕೋರ್ಟ್ಗೆ ಹಿಂದಿರುಗಿಸಿತು

ವಾದ ಪತ್ರದಲ್ಲಿ ಕೋರದ ಪರಿಹಾರವನ್ನು ನ್ಯಾಯಾಲಯ ನೀಡಲು ಸಾಧ್ಯವಿಲ್ಲ ಪರಿಹಾರ ಧನಕ್ಕಾಗಿ ಪ್ರಾರ್ಥನೆ ಇಲ್ಲದಿದ್ದರೆ ಪರಿಹಾರಧನ ನೀಡಲಾಗುವುದಿಲ್ಲ ಹೀಗೆ ಮಾಡುವುದು ದಾವೆಯಲ್ಲಿ ಕೋರದ ಹೊಸ ಪರಿಹಾರವನ್ನು ಸೃಷ್ಟಿಸಿದಂತಾಗಿದ್ದು, ಅದು ನ್ಯಾಯದ ವಿಫಲತೆಗೆ ಕಾರಣವಾಗುತ್ತದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.

ವಾದಿಯು ಕೇವಲ ಆಜ್ಞಾಪಕ ಪ್ರತಿ ಬಂಧಕಾಜ್ಞೆ (Mandatory Injunction) ಹಾಗೂ ಶಾಶ್ವತ ಪ್ರತಿಬಂಧಕಾಜ್ಞೆ (Permanent Injunction) ಮಾತ್ರ ಕೋರಿದ್ದನು. ಯಾವುದೇ ಹಂತದಲ್ಲಿಯೂ ಪರಿಹಾರಧನ ಅಥವಾ ನಷ್ಟಪರಿಹಾರವನ್ನು ಕೇಳಿರಲಿಲ್ಲ. ಆದರೂ, ಹೈಕೋರ್ಟ್ ಕಟ್ಟಡ ತೆರವುಗೊಳಿಸುವ ಆದೇಶವನ್ನು ಬದಲಿಸಿ, ವಾದಿಯ ಕಾನೂನುಬದ ವಾರಸುದಾರರಿಗೆ ಪರಿಹಾರಧನವನ್ನು ಮೌಲ್ಯಮಾಪನ ಮಾಡಿ ಪಾವತಿಸುವಂತೆ ನಿರ್ದೇಶಿಸಿತ್ತು.

ಇದನ್ನು ತೀವ್ರವಾಗಿ ಆಕ್ಷೇಪಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, “ವಾದಿಯು ಎಂದಿಗೂ ಪರಿಹಾರಧನವನ್ನು ಕೋರಿರಲಿಲ್ಲ. ಅಂತಹ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ, ನ್ಯಾಯಾಲಯವು ಒಂದು ಪಕ್ಷಕ್ಕೆ ಮತ್ತೊಂದು ಪಕ್ಷದ ವೆಚ್ಚದಲ್ಲಿ ಪರಿಹಾರ ನೀಡುವ ಹೊಸ ಪರಿಹಾರವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅಲ್ಲದೆ, ವಾರಸುದಾರರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಹಣದ ಪರಿಹಾರವನ್ನು ಸ್ವೀಕರಿಸಲು ಬಲವಂತಪಡಿಸಲು ಆಗುವುದಿಲ್ಲ” ಎಂದು ತಿಳಿಸಿತು.

ಏನಿದು ಪ್ರಕರಣ..
ಎರಡು ಪ್ರತ್ಯೇಕ ದಾವೆಗಳನ್ನು ಹೂಡಿದ್ದ ವಾದಿಯು , ಒಂದರಲ್ಲಿ, ತನ್ನ ಮನೆಯ ಸಮೀಪದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಗೋಡೆಯನ್ನು ತೆರವುಗೊಳಿಸುವಂತೆ ಹಾಗೂ ಮುಂದಿನ ನಿರ್ಮಾಣವನ್ನು ತಡೆಯುವ ಶಾಶ್ವತ ನಿರ್ಬಂಧಕಾಜ್ಞೆ ನೀಡುವಂತೆ ಕೋರಿದ್ದರು. ಮತ್ತೊಂದು ದಾವೆಯಲ್ಲಿ, ತನ್ನ ಮನೆಯ ಗೋಡೆಯ ಮೇಲೆ ಶಾಲಾ ಕಟ್ಟಡದ ಲಿಂಟಲ್ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ತೆರವುಗೊಳಿಸುವಂತೆ ಆಜ್ಞಾಪಕ ನಿರ್ಬಂಧಕಾಜ್ಞೆಗೆ ಮನವಿ ಮಾಡಿದ್ದರು.

ವಿಚಾರಣಾ ನ್ಯಾಯಾಲಯವು ಎರಡೂ ದಾವೆಗಳನ್ನು ಅಂಗೀಕರಿಸಿ, ಸಂಬಂಧಿತ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ಮೊದಲ ಮೇಲ್ಮನವಿ ನ್ಯಾಯಾಲಯವೂ ಆ ತೀರ್ಪನ್ನು ದೃಢಪಡಿಸಿತ್ತು.

ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಂತೆ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿದ ನಂತರ, ಅದನ್ನು ಜಾರಿಗೊಳಿಸಲು ಯಾವುದೇ ಡಿಕ್ರಿಯೇ ಉಳಿಯುವುದಿಲ್ಲ. ಆದ್ದರಿಂದ, ಅಮಲ್ದಾರಿ ನ್ಯಾಯಾಲಯಕ್ಕೆ (Executing Court) ಗೋಡೆಯ ಮೌಲ್ಯ ನಿಗದಿಪಡಿಸಿ ಪರಿಹಾರಧನ ನೀಡುವಂತೆ ನಿರ್ದೇಶಿಸುವ ಅಧಿಕಾರವಿಲ್ಲ ಎಂದು ತಿಳಿಸಿತು.

ಇದಲ್ಲದೆ, ಹೈಕೋರ್ಟ್ ಎರಡನೇ ಮೇಲ್ಮನವಿಯನ್ನು ನಿರ್ಧರಿಸುವಾಗ ಸಿಪಿಸಿ ಸೆಕ್ಷನ್ 100 ರ ಪ್ರಕಾರ ಅಗತ್ಯವಿರುವ ಪ್ರಮುಖ ಕಾನೂನು ಪ್ರಶ್ನೆಗಳನ್ನು ಸರಿಯಾಗಿ ರೂಪಿಸದೆ, ಕೆಳಗಿನ ನ್ಯಾಯಾಲಯಗಳ ಏಕರೂಪದ ತೀರ್ಮಾನಗಳನ್ನು ಬದಲಾಯಿಸಿರುವುದನ್ನೂ ಸುಪ್ರೀಂ ಕೋರ್ಟ್ ಗಮನಿಸಿತು.

ಹೈಕೋರ್ಟ್ ವಾದ ಪತ್ರದಲ್ಲಿ ಕೋರದ ಪರಿಹಾರವನ್ನು ಸೃಷ್ಟಿಸಿ, ವಾದಿಯ ವಾರಸುದಾರರನ್ನು ಹಣದ ಪರಿಹಾರ ಸ್ವೀಕರಿಸಲು ಬಲವಂತಪಡಿಸಿರುವುದು ನ್ಯಾಯದ ವಿಫಲತೆಗೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿ, ಹೈಕೋರ್ಟ್ ಸಾಮಾನ್ಯ ತೀರ್ಪನ್ನು ರದ್ದುಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಕೇಳದೇ ಇರುವ ಪರಿಹಾರ ನೀಡಲು ನ್ಯಾಯಾಲಯಕ್ಕೂ ಸಾಧ್ಯವಿಲ್ಲ: ಹೈಕೋರ್ಟ್ ತೀರ್ಪು ರದ್ದುಪಡಿಸಿದ ಸುಪ್ರೀಂ appeared first on Law Guide Kannada.

]]>
ಪಿತೃತ್ಯ ಖಾತ್ರಿಗೆ DNA ಟೆಸ್ಟ್: ಗೌಪ್ಯತೆ ಹಕ್ಕು ಉಲ್ಲಂಘನೆ ಎನ್ನಲಾಗದು- ಹೈಕೋರ್ಟ್ http://www.lawguidekannada.com/dna-test-for-paternity-not-a-violation-of-right-to-privacy-high-court/ Mon, 20 Jul 2026 10:23:01 +0000 https://www.lawguidekannada.com/?p=5819 ಬೆಂಗಳೂರು: ಪಿತೃತ್ಯ ಖಾತ್ರಿಗೆ ಡಿಎನ್ಎ ಪರೀಕ್ಷೆಗೊಳಪಡಿಸುವುದು ಗೌಪ್ಯತೆಯ ಹಕ್ಕಿನ ಮೇಲೆ ದಾಳಿ ಅಥವಾ ಉಲ್ಲಂಘನೆ ಎನ್ನಲು ಸಾಧ್ಯವಿಲ್ಲ ಎಂದು ಕರ್ನಾಟಕ...

The post ಪಿತೃತ್ಯ ಖಾತ್ರಿಗೆ DNA ಟೆಸ್ಟ್: ಗೌಪ್ಯತೆ ಹಕ್ಕು ಉಲ್ಲಂಘನೆ ಎನ್ನಲಾಗದು- ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಪಿತೃತ್ಯ ಖಾತ್ರಿಗೆ ಡಿಎನ್ಎ ಪರೀಕ್ಷೆಗೊಳಪಡಿಸುವುದು ಗೌಪ್ಯತೆಯ ಹಕ್ಕಿನ ಮೇಲೆ ದಾಳಿ ಅಥವಾ ಉಲ್ಲಂಘನೆ ಎನ್ನಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಶಿವಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ಪಿತೃತ್ಯ ಖಾತ್ರಿಗೆ ವೈದ್ಯಕೀಯ ಪರೀಕ್ಷೆ ಮಾಡುವುದರಿಂದ ವ್ಯಕ್ತಿಯ ಗೌಪ್ಯತೆ ಹಕ್ಕು ಉಲ್ಲಂಘನೆ ಆಗಲಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣಾ ನ್ಯಾಯಾಲಯದಲ್ಲಿ ಶಿವಣ್ಣ/ಅರ್ಜಿದಾರ ಪಾಟೀ ಸವಾಲು ಸಂದರ್ಭದಲ್ಲಿ ತಾವೇ ಖುದ್ದಾಗಿ ಡಿಎನ್ಎ ಪರೀಕ್ಷೆಗೆ ಸಿದ್ಧವಿರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಒಮ್ಮೆ ಒಪ್ಪಿಗೆ ನೀಡಿದ ಮೇಲೆ, ಈಗ ಅದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ವಾದಿಸುವುದು ಕಾನೂನುಬಾಹಿರ ಎಂದು ನ್ಯಾಯಪೀಠ ತಿಳಿಸಿದೆ.

”ವೈಜ್ಞಾನಿಕ ವಿಧಾನಗಳಿಂದ ಪಿತೃತ್ವ ಖಾತ್ರಿ ಪಡೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಮಕ್ಕಳು ತಮ್ಮ ಆಸ್ತಿ ವಿಭಜನೆಗಾಗಿ ಪ್ರಕರಣ ಸಲ್ಲಿಸಲು ತನ್ನ ಮೂಲ ತಿಳಿಯುವ ಪ್ರಯತ್ನದಲ್ಲಿ ಡಿಎನ್ಎ ಪರೀಕ್ಷೆಗೊಳಪಡಿಸುವುದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಲಾರದು. ಈ ಪ್ರಕರಣದಲ್ಲಿ ಅರ್ಜಿದಾರರ ಹೆಸರು ಎಚ್.ಸಿ.ಶಿವಣ್ಣ ಎಂಬುದಾಗಿದೆ. ಆದರೆ, ಶಿವಣ್ಣ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅರ್ಜಿದಾರರು ಮತ್ತು ಪ್ರತಿ ವಾದಿಗಳ ನಡುವಿನ ಜೈವಿಕ ಸಂಬಂಧ ಖಚಿತಪಡಿಸಿಕೊಳ್ಳಲು ಸಲ್ಲಿಸಲಾದ ಪುರಾವೆ ಗಳು ಸಾಕಾಗುವುದಿಲ್ಲ ಎಂಬುದು ಸ್ಪಷ್ಟ ವಾಗಿದೆ.

ಡಿಎನ್ಎ ಪರೀಕ್ಷೆ ಮಾಡುವಂತೆ ಅರ್ಜಿದಾರರೇ ಸ್ವತಃ ಕೋರುತ್ತಾರೆ ಎಂಬುದನ್ನು ಗಮನಿಸಬೇಕು. ಆದ್ದರಿಂದ, ಗೌಪ್ಯತೆ ಆಕ್ರಮಣ ಅಥವಾ ನ್ಯಾಯಸಮ್ಮತತೆಗೆ ಕಳಂಕ ತರುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಶಿವಣ್ಣ ತಮ್ಮ ತಂದೆಯಾಗಿದ್ದು, ತಮಗೆ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕೋರಿ ಎಚ್.ಎಸ್. ಮಂಜುಳಾ ಮತ್ತು ಎಚ್.ಎಸ್.ಸೋಮೇಶ್ ಎಂಬುವರು 2013ರಲ್ಲಿ ನಂಜನಗೂಡಿನ ನ್ಯಾಯಾಲಯ ದಲ್ಲಿ ವಿಭಾಗದ ಸಿವಿಲ್ ದಾವೆ ಹೂಡಿದ್ದರು. ಆದರೆ, ಶಿವಣ್ಣ ಈ ಇಬ್ಬರು ಮಕ್ಕಳು ತನಗೆ ಜನಿಸಿದವರಲ್ಲ. ಇವರು ಮಹದೇವಮ್ಮ ಮತ್ತು ಎಚ್.ಸಿ.ಶಿವಣ್ಣ ಎಂಬ ಬೇರೆ ವ್ಯಕ್ತಿಗೆ ಜನಿಸಿದವರು ಎಂದು ವಾದಿಸಿ ಪಿತೃತ್ವವನ್ನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳು ಡಿಎನ್ಎ ಪರೀಕ್ಷೆ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ಪುರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಜಿದಾರ ಶಿವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಪಿತೃತ್ಯ ಖಾತ್ರಿಗೆ DNA ಟೆಸ್ಟ್: ಗೌಪ್ಯತೆ ಹಕ್ಕು ಉಲ್ಲಂಘನೆ ಎನ್ನಲಾಗದು- ಹೈಕೋರ್ಟ್ appeared first on Law Guide Kannada.

]]>