23/04/2026

Law Guide Kannada

Online Guide

ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಡಿಜಿಟಲ್ ಸಹಿ ಕಡ್ಡಾಯ..

ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಗಮವಾಗಿಸುವುದರ ಜೊತೆಗೆ, ಅಧಿಕಾರಿಗಳ ಹಸ್ತಕ್ಷೇಪವನ್ನು ಕನಿಷ್ಠಗೊಳಿಸಿ ಪಾರದರ್ಶಕತೆಯನ್ನು ಹೆಚ್ಚಿಸುವ ಸಲುವಾಗಿ ರಾಜ್ಯದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟಗಾರರಿಗೆ ಡಿಜಿಟಲ್ ಸಹಿ ಕಡ್ಡಾಯ ಮಾಡಲಾಗಿದೆ.

ಕರ್ನಾಟಕ ಸರ್ಕಾರವು ಆಸ್ತಿ ನೋಂದಣಿ ಕಾಯ್ದೆ (ಕರ್ನಾಟಕ ತಿದ್ದುಪಡಿ) 2025 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದ್ದು, ಇದರನ್ವಯ, ಇನ್ಮುಂದೆ ಎಲ್ಲಾ ಆಸ್ತಿ ನೋಂದಣಿ ದಾಖಲೆಗಳು ಡಿಜಿಟಲ್ ರೂಪದಲ್ಲಿಯೇ ಸಲ್ಲಿಸಬೇಕು. ಕಂಪ್ಯೂಟರ್ ಡಿಜಿಟಲ್ ಸಹಿಯನ್ನು ಕಡ್ಡಾಯಗೊಳಿಸಲಾಗಿದ್ದು, ಈ ಕ್ರಮವು ನಕಲಿ ದಾಖಲೆಗಳು ಮತ್ತು ವಂಚನೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ರಾಜ್ಯದ ನಾಗರಿಕರಿಗೆ ವೇಗವಾದ ಮತ್ತು ನಿಖರವಾದ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಆಸ್ತಿ ನೋಂದಣಿ ಕಾಯ್ದೆ (ಕರ್ನಾಟಕ ತಿದ್ದುಪಡಿ) 2025 ಅಂಗೀಕಾರ ಬಳಿಕ ಆಗುವ ಮುಖ್ಯ ಬದಲಾವಣೆಗಳು ಹೀಗಿದೆ..
ಎಲ್ಲಾ ನೋಂದಣಿ ದಾಖಲೆಗಳು ಸ್ಕ್ಯಾನ್ ಮಾಡಿದ Pಆಈ ಅಥವಾ ಇ-ದಾಖಲೆಗಳ ರೂಪದಲ್ಲಿರಬೇಕು.
ನೋಂದಣಿ ಅಧಿಕಾರಿಗಳು ಈಗ ಮ್ಯಾನುಯಲ್ ಸಹಿ ಬದಲಿಗೆ ಡಿಜಿಟಲ್ ಸಹಿಯನ್ನು ಬಳಸಬೇಕು.
ಆರ್.ಟಿ.ಸಿ. (ಖಖಿಅ) ದಾಖಲೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.
ರೈತರು ಮತ್ತು ಸಾಮಾನ್ಯ ನಾಗರಿಕರು ನೇರವಾಗಿ ಕಚೇರಿಗೆ ಹೋಗದೆ ಡಿಜಿಟಲ್ ಮೂಲಕ ದಾಖಲೆಗಳನ್ನು ಸಲ್ಲಿಸಬಹುದು.

ಇದರ ಅನುಕೂಲಗಳು…
ಡಿಜಿಟಲ್ ದಾಖಲೆಗಳು ಮತ್ತು ಸಹಿಗಳು ವಂಚನೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಿ ಪಾರದರ್ಶಕತೆ ಹೆಚ್ಚಿಸುತ್ತದೆ.

ನೋಂದಣಿ ಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯುವುದರಿಂದ, ನಾಗರಿಕರು ಕಚೇರಿಗಳಿಗೆ ಹೆಚ್ಚು ಸಾರಿ ಹೋಗುವ ಅಗತ್ಯವಿಲ್ಲ. ಇದರಿಂದಾಗಿ ಸಮಯ ಮತ್ತು ಶ್ರಮದ ಉಳಿತಾಯವಾಗಲಿದೆ.

ಡಿಜಿಟಲ್ ಸ್ಟೋರೇಜ್ ವ್ಯವಸ್ಥೆಯಿಂದ ದಾಖಲೆಗಳು ಸುಲಭವಾಗಿ ಕಳೆದುಹೋಗುವ ಅಪಾಯವಿಲ್ಲ. ದಾಖಲೆಗಳು ಸುರಕ್ಷಿತವಾಗಿರುತ್ತವೆ. ಗ್ರಾಮೀಣ ಪ್ರದೇಶದವರು ದೂರದಿಂದಲೇ ದಾಖಲೆಗಳನ್ನು ಸಲ್ಲಿಸಬಹುದಾಗಿದ್ದು ರೈತರಿಗೆ ಸಹಾಯವಾಗಲಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದಂತೆ, “ಈ ತಿದ್ದುಪಡಿಯ ಮೂಲಕ ನಾವು ಆಸ್ತಿ ನೋಂದಣಿ ವ್ಯವಸ್ಥೆಯನ್ನು ಸುಗಮವಾಗಿಸಿದ್ದೇವೆ. ತಂತ್ರಜ್ಞಾನದ ಬಳಕೆಯಿಂದ ಅಧಿಕಾರಿಗಳ ಮಧ್ಯಪ್ರವೇಶವನ್ನು ಕಡಿಮೆ ಮಾಡಲಾಗಿದೆ.”

ಇ-ಸ್ಕೆಚ್ ಅನುಮೋದನೆ: ಹಿಂದೆ ಕಾನೂನುಬದ್ಧವಲ್ಲದಿದ್ದ 11 ಇ-ಸ್ಕೆಚ್ ವ್ಯವಸ್ಥೆಯನ್ನು ಈಗ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ.
ಸೆಕ್ಷನ್ 32 ತಿದ್ದುಪಡಿ: ಈ ವಿಧಿಯಡಿಯಲ್ಲಿ ಡಿಜಿಟಲ್ ದಾಖಲೆಗಳು ಮತ್ತು ಸಹಿಗಳಿಗೆ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ.

ಮುಂದಿನ ಹಂತಗಳು
ಸರ್ಕಾರವು ಇನ್ನು ಹೆಚ್ಚಿನ ಡಿಜಿಟಲ್ ಸೇವೆಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ, ಆನ್ಲೈನ್ ಪಾವತಿ ಮತ್ತು ರಿಯಲ್-ಟೈಮ್ ದಾಖಲೆ ಪರಿಶೀಲನೆ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.