23/04/2026

Law Guide Kannada

Online Guide

ನಡೆಯದ ಫಸ್ಟ್ ನೈಟ್: ಪತಿ ನಪುಂಸಕನೆಂದು 2 ಕೋಟಿ ರೂ. ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ ಪತ್ನಿ

ಬೆಂಗಳೂರು: ಮದುವೆಯಾದ ಮೊದಲ ರಾತ್ರಿಯಲ್ಲಿ ಪತಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿಲ್ಲ. ಆತ ನಪುಂಸಕ. ಹೀಗಾಗಿ ತನೆಗೆ 2 ಕೋಟಿ ಜೀವನಾಂಶ ನೀಡಬೇಕೆಂದು ಪತ್ನಿ ಬೇಡಿಕೆಯಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಕಳೆದ 5 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿ ಕೌಟುಂಬಿಕ ಕಲಹದಿಂದಾಗಿ ಬೇರ್ಪಡುವ ಪರಿಸ್ಥಿತಿಗೆ ಬಂದು ತಲುಪಿದ್ದು . ಮದುವೆಯಾಗಿ ತಿಂಗಳುಗಳೇ ಕಳೆದರೂ ಪತಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿಲ್ಲ. ಲೈಂಗಿಕ ಸಂಬಂಧ ಹೊಂದುತ್ತಿಲ್ಲ ಎಂದು ಆರೋಪಿಸಿ ಯುವತಿಯೊಬ್ಬಳು ಬರೊಬ್ಬರಿ 2 ಕೋಟಿ ರೂ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪತ್ನಿಯ ಇಂತಹ ಬೇಡಿಕೆಯಿಂದ ಕಂಗಾಲಾದ ಪತಿ ಪ್ರವೀಣ್ ಹಾಗೂ ಅವರ ಪೋಷಕರು ಗೋವಿಂದರಾಜ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಪತ್ನಿಯ ಗಲಾಟೆಯಿಂದ ಪತಿ ಪ್ರವೀಣ್ ಹಾಗೂ ಆತನ ಪೋಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪ್ರವೀಣ್ ಎಂಬ ಯುವಕ ಮೇ 5ರಂದು ಚಿಕ್ಕಮಗಳೂರು ಜಿಲ್ಲೆಯ ಯುವತಿಯನ್ನು ವಿವಾಹವಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಿವಾಹ ನಡೆದಿತ್ತು. ಮದುವೆಯಾದ ಮೊದಲ ರಾತ್ರಿ ಪತಿ ಪ್ರವೀಣ್, ಪತ್ನಿಯನ್ನು ಮುಟ್ಟಲು ಹಿಂದೇಟು ಹಾಕಿದ್ದಾನೆ ಎಂದು ಪತಿ ಪತ್ನಿ ನಪುಂಸಕ ಎಂದು ಆರೋಪ ಮಾಡಿದ್ದಾಳೆ. ನಂತರ ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಆಕೆಯ ಪೋಷಕರು ಆಗಸ್ಟ್ 17ರಂದು ಪತಿ ಪ್ರವೀಣ್ ಮನೆಗೆ ನುಗ್ಗಿ ಹಲ್ಲೆ ನಡೆಸಿ, ದಾಂಧಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ಗಂಡ ಪ್ರವೀಣ್ನ ಪುರುಷತ್ವದ ಬಗ್ಗೆಯೇ ಪತ್ನಿಗೆಅನುಮಾನ ಶುರುವಾಗಿದ್ದು, ಹೀಗಾಗಿ ಗಂಡನ ಪುರುಷತ್ವದ ಬಗ್ಗೆ ವೈದ್ಯರ ಬಳಿ ಪರೀಕ್ಷೆ ಕೂಡ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಪತಿ ಪ್ರವೀಣ್ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದರಾ. ಆದರೆ, ಮಾನಸಿಕ ಒತ್ತಡದಿಂದ ಸ್ವಲ್ಪ ಹಿಂದೇಟು ಹಾಕಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಆದರೂ ಸಹ ಪತ್ನಿ ತನ್ನ ಗಂಡ ನಪುಂಸಕ . ಹೀಗಾಗಿ 2 ಕೋಟಿ ರೂ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದಾಳೆ. ಎರಡು ಕೋಟಿ ರೂಪಾಯಿ ಕೊಡದ ಹಿನ್ನೆಲೆ, ಆಕೆಉ ಕುಟುಂಬದವರು ಪ್ರವೀಣ್ ಅವರ ಗೋವಿಂದರಾಜ ನಗರದಲ್ಲಿರುವ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪ್ರವೀಣ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.